38 ರನ್ ಗಳಿಸಿ ವೈಭವ್ ಸೂರ್ಯವಂಶಿ ಔಟ್ – 4 ಪಂದ್ಯ, ಅರ್ಧಶತಕವಿಲ್ಲದೇ ಬಾಸ್ ಬೇಬಿ ಪರದಾಟ

38 ರನ್ ಗಳಿಸಿ ವೈಭವ್ ಸೂರ್ಯವಂಶಿ ಔಟ್ –  4 ಪಂದ್ಯ, ಅರ್ಧಶತಕವಿಲ್ಲದೇ ಬಾಸ್ ಬೇಬಿ ಪರದಾಟ

ಭಾರತ ಎ ತಂಡದ ಆಟಗಾರರಿಗೆ ಇವತ್ತಿನ ಪಂದ್ಯ ನಿರ್ಣಾಯಕವಾಗಿದೆ. ಇವತ್ತು ಬೆಳಗ್ಗೆ (ಬುಧವಾರ)ಭಾರತ ಎ ತಂಡ ಅಫ್ಘಾನಿಸ್ತಾನ್ ಎ ತಂಡದ ವಿರುದ್ಧ ಕಣಕ್ಕಿಳಿದಿದ್ದು, ಭಾರತ ಬ್ಯಾಟಿಂಗ್ ಆರಂಭಿಸಿದೆ. ಟೀಮ್ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ ಎದುರಾಗಿದ್ದು, ವೈಭವ್ ಸೂರ್ಯವಂಶಿ ಔಟಾಗಿದ್ದಾರೆ.

ಇದನ್ನೂ ಓದಿ:ಕುಗ್ಗಿಸಿದಷ್ಟೂ ಹಿಗ್ಗುವ KL – SLOT ಬದಲಾದ್ರೂ ಸೂಪರ್ ಶೋ! – ಬೆಸ್ಟ್ ಇದ್ರೂ T-20Iಗೆ ಯಾಕಿಲ್ಲ?

ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ 5ನೇ ಪಂದ್ಯದಲ್ಲೂ ಭಾರತ ಎ ತಂಡ ಆರಂಭಿಕ ಆಘಾತ ಎದುರಿಸಿದೆ. ಈ ಪಂದ್ಯದಲ್ಲೂ ಓಪನರ್ ಆಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಮೊದಲ ಎಸೆತದಲ್ಲೇ ಜೀವದಾನ ಪಡೆದುಕೊಂಡರು. ಇನ್ನಿಂಗ್ಸ್‌ನ ಆರಂಭದಲ್ಲೇ ಕಟ್ ಶಾಟ್ ಹೊಡೆಯಲು ಹೋಗಿ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ವೈಭವ್ ಸೂರ್ಯವಂಶಿ ಕ್ಯಾಚ್ ನೀಡಿದ್ದರು. ಆನ್-ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರೂ, ಥರ್ಡ್ ಅಂಪೈರ್ ಮರುಪರಿಶೀಲಿಸಿದಾಗ ಫೀಲ್ಡರ್ ಚೆಂಡನ್ನು ನೆಲಕ್ಕೆ ಮುಟ್ಟಿಸಿರುವುದು ಕಂಡು ಬಂತು. ಇದರಿಂದಾಗಿ ವೈಭವ್​ಗೆ ಆರಂಭದಲ್ಲೇ  ಜೀವದಾನ ಸಿಕ್ಕಿತ್ತು ನಂತರ ಬಿರುಸಿನ ಬ್ಯಾಟಿಂಗ್ ಗೆ ಒತ್ತು ನೀಡಿದ ವೈಭವ್, 27 ಎಸೆತಗಳಲ್ಲಿ 38 ರನ್ ಬಾರಿಸಿದ್ದರು. ಆದರೆ 28ನೇ ಎಸೆತದಲ್ಲಿ ಕ್ಯಾಚ್ ಔಟಾದರು.

ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಇಂದಿನ ಪಂದ್ಯದಲ್ಲಿ ಗೆದ್ದರೆ ಮಾತ್ರ ಭಾರತ ತಂಡ ಫೈನಲ್​ ರೇಸ್​ನಲ್ಲಿ ಉಳಿಯಬಹುದು. ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎ ವಿರುದ್ಧ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದ್ದ ಭಾರತ ಎ ತಂಡವು, ಆ ನಂತರದ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಜೂನ್ 11 ರಂದು ನಡೆದ ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಮುಖಾಮುಖಿಯಲ್ಲಿ ಭಾರತ 349 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದರೂ, ಮಳೆಯ ಕಾರಣದಿಂದಾಗಿ DLS ನಿಯಮದನ್ವಯ ಕೇವಲ 4 ರನ್‌ಗಳಿಂದ ಸೋಲೊಪ್ಪಿಕೊಂಡಿತ್ತು. ಪ್ರಸ್ತುತ ಲೀಗ್ ಹಂತದಲ್ಲಿ ಭಾರತ 3 ಪಂದ್ಯಗಳಿಂದ ಕೇವಲ 2 ಅಂಕಗಳನ್ನು ಹೊಂದಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಒಂದು ವೇಳೆ ಇಂದು ಭಾರತ ಸೋತರೆ, ಕೇವಲ 2 ಅಂಕಗಳೊಂದಿಗೆ ಟೂರ್ನಿಯಿಂದ ಹೊರಬೀಳಲಿದೆ.

Sulekha

Leave a Reply

Your email address will not be published. Required fields are marked *