ಕೆಣಕಿದ ಲಂಕಾ ಆಟಗಾರನ ತಳ್ಳಿದ ವೈಭವ್ – ಸೂರ್ಯವಂಶಿಗೆ ಎದುರಾಗಿದೆ ಬ್ಯಾನ್ ಭೀತಿ

ಶ್ರೀಲಂಕಾ ಎ ಮತ್ತು ಭಾರತ ಎ ತಂಡಗಳ ನಡುವಿನ ಪಂದ್ಯ ದೊಡ್ಡ ಹೈಡ್ರಾಮಕ್ಕೆ ಸಾಕ್ಷಿಯಾಗಿದೆ. ಭಾರತ ತಂಡದ ಆಟಗಾರರು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಸಂಭವ ಹೆಚ್ಚಾಗಿದೆ. ಅದರಲ್ಲೂ ಬಾಸ್ ಬೇಬಿ ಸೂರ್ಯವಂಶಿಗೆ ಅಶಿಸ್ತಿನ ವಿಚಾರದಲ್ಲಿ ಶಿಕ್ಷೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ:ಸೂರ್ಯಾಂಶು ಕೆಣಕಿದ ಲಂಕಾ ಆಟಗಾರರು – ಸಹಾಯಕ್ಕೆ ಓಡಿ ಬಂದು ಲಂಕಾ ಆಟಗಾರನ ತಳ್ಳಿದ ಸೂರ್ಯವಂಶಿ
ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವಣ ಪಂದ್ಯದ ಬಳಿಕ ನಡೆದ ಜಗಳವನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದೆ. ಸೂಪರ್ ಓವರ್ ಸೋಲಿನ ನಂತರ ಸೂರ್ಯವಂಶಿ ಮತ್ತು ಲಂಕಾ ಆಟಗಾರರ ನಡುವೆ ನೂಕಾಟ, ತಳ್ಳಾಟ ನಡೆದಿದೆ. ಅದರಲ್ಲೂ ಶ್ರೀಲಂಕಾ ಆಟಗಾರ ವಿಶೇನ್ ಹಾಲಂಬಾ ಹಾಗೂ ವೈಭವ್ ಸೂರ್ಯವಂಶಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದದ ನಡುವೆ ವೈಭವ್ ಸೂರ್ಯವಂಶಿ ವಿಶೇನ್ ಹಾಲಂಬಾ ಅವರನ್ನು ಕೈಯಿಂದ ತಳ್ಳುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಹಿನ್ನಲೆಯಲ್ಲಿ ಐಸಿಸಿ ವೈಭವ್ ಸೂರ್ಯವಂಶಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಐಸಿಸಿ ಕ್ರಿಕೆಟ್ ನಿಯಮಾವಳಿಗಳ ಪ್ರಕಾರ ಮೈದಾನದಲ್ಲಿ ಎದುರಾಳಿ ಆಟಗಾರರ ಮೇಲೆ ದೈಹಿಕವಾಗಿ ಕೈಮಾಡುವುದು ಅಥವಾ ತಳ್ಳುವುದು ಶಿಸ್ತು ಉಲ್ಲಂಘನೆಯಾಗಿದೆ. ಅದು ಕೂಡಾ “ಲೆವೆಲ್-2” ಅಥವಾ “ಲೆವೆಲ್-3” ಮಾದರಿಯ ಗಂಭೀರ ಶಿಸ್ತು ಉಲ್ಲಂಘನೆಯಾಗಿದೆ. ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಗಾಶ್ ಅವರು ಈ ಇಡೀ ಘಟನೆಯ ವಿಡಿಯೋ ಸಾಕ್ಷ್ಯಗಳು ಮತ್ತು ಆನ್-ಫೀಲ್ಡ್ ಅಂಪೈರ್ಗಳ ವರದಿಯನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ಐಸಿಸಿ ನೀತಿ ಸಂಹಿತೆಯ ಅಡಿಯಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ, ವೈಭವ್ ಸೂರ್ಯವಂಶಿ ಅವರಿಗೆ ಪಂದ್ಯ ಶುಲ್ಕದ 100% ವರೆಗೆ ದಂಡ ವಿಧಿಸಬಹುದು. ಮ್ಯಾಚ್ ರೆಫರಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದರೆ ವೈಭವ್ ಸೂರ್ಯವಂಶಿ ಅವರನ್ನು ಕೆಲವು ಪಂದ್ಯಗಳಿಂದ ನಿಷೇಧಿಸಬಹುದು. ಇದೀಗ ಮೈದಾನದಲ್ಲಿ ಅಶಿಸ್ತು ತೋರಿದ ಶ್ರೀಲಂಕಾದ ವಿಶೇನ್ ಹಾಲಂಬಾ ಹಾಗೂ ವೈಭವ್ ಸೂರ್ಯವಂಶಿ ವಿರುದ್ಧ ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಗಾಶ್ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದುನೋಡಬೇಕು.

ನೋಡಿರಿ

