ಸೂರ್ಯಾಂಶು ಕೆಣಕಿದ ಲಂಕಾ ಆಟಗಾರರು – ಸಹಾಯಕ್ಕೆ ಓಡಿ ಬಂದು ಲಂಕಾ ಆಟಗಾರನ ತಳ್ಳಿದ ಸೂರ್ಯವಂಶಿ

ಟೀಮ್ ಇಂಡಿಯಾ ಎ ತಂಡ ಸೂಪರ್ ಓವರ್‌ನಲ್ಲಿ ಸೋಲು ಕಂಡಿದೆ. ಇದರಿಂದ ಶ್ರೀಲಂಕಾ ಎ ತಂಡದ ಆಟಗಾರರ ಸಂಭ್ರಮ ವಿಪರೀತಕ್ಕೆ ಹೋಗಿತ್ತು. ಜೊತೆಗೆ ಗೆದ್ದ ಲಂಕನ್ನರು ಭಾರತದ ತಂಡವನ್ನು ಕೆಣಕಲು ಶುರುಮಾಡಿದರು. ಇದರಿಂದ ಸಿಟ್ಟಿಗೆದ್ದ ವೈಭವ್ ಸೂರ್ಯವಂಶಿ ಲಂಕಾ ಆಟಗಾರನನ್ನು ತಳ್ಳಿದ್ದಾರೆ. ಪಾಪದ ಹುಡುಗ ಈಗ ವಿವಾದದ ವಸ್ತುವಾಗಿ ಹೋಗಿದ್ದಾನೆ.
ಇದನ್ನೂ ಓದಿ:14.. 44.. 11.. ವೈಭವ್ ಸೈಲೆಂಟ್ – ODIನಲ್ಲಿ ಸೂರ್ಯವಂಶಿಗೆ ಫೇಲ್ಯೂರ್ ಪಟ್ಟ
ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ತ್ರೀಕೋನ ಸರಣಿ 4ನೇ ಪಂದ್ಯ ರಣರೋಚಕ ಕಾದಾಟಕ್ಕೆ ಸಾಕ್ಷಿಯಾಗಿದೆ. ಸೂಪರ್ ಓವರ್‌ನಲ್ಲಿ ಹಂತಕ್ಕೆ ಹೋದ ಈ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಈ ಪಂದ್ಯ ಸೂಪರ್ ಓವರ್‌ಗೆ ಹೋದಾಗ ರೋಚಕತೆ ಸೃಷ್ಟಿಸಿದರೆ, ನಂತರ ಈ ಎರಡು ತಂಡಗಳ ಆಟಗಾರರು ಪರಸ್ಪರ ಕಾದಾಡಿದ್ದಾರೆ. ಸೂಪರ್ ಓವರ್‌ನಲ್ಲಿ ಟೀಮ್ ಇಂಡಿಯಾದ ಸೋಲುತ್ತಿದ್ದಂತೆ ಶ್ರೀಲಂಕಾ ಆಟಗಾರರ ಸೆಲೆಬ್ರೇಷನ್ ಅತಿರೇಕಕ್ಕೆ ಹೋಗಿದೆ. ಶ್ರೀಲಂಕಾ ಎ ತಂಡ ಸೂಪರ್ ಓವರ್ ಗೆದ್ದ ನಂತರ ಸಂಭ್ರಮಾಚರಣೆ ಮಾಡುತ್ತಿದ್ದರು. ಈ ವೇಳೆ ಪೆವಿಲಿಯನ್ ಕಡೆಗೆ ಬರುತ್ತಿದ್ದಾಗ ಶ್ರೀಲಂಕಾ ತಂಡದ ಕೆಲವು ಆಟಗಾರರು ಚಪ್ಪಾಳೆ ತಟ್ಟುತ್ತಾ ಸೂರ್ಯಾಂಶ್ ಶೆಡ್ಗೆಯನ್ನ ರೇಗಿಸಿದ್ದಾರೆ. ಮೊದಲೇ ಮಂದ ಬೆಳಕಿನಲ್ಲಿ ಆಡಲು ಭಾರತದ ಆಟಗಾರರಿಗೆ ಕಷ್ಟವಾಗಿತ್ತು. ಇದರ ನಡುವೆ ಸೂಪರ್ ಓವರ್ ನಡೆಸಿದ್ದಕ್ಕೆ ಅಸಮಾಧಾನಗೊಂಡಿದ್ದರು ವೈಭವ್ ಸೂರ್ಯವಂಶಿ. ಇದಾದ ನಂತರ ಲಂಕಾ ಆಟಗಾರರು ಅತಿರೇಕದ ಸಂಭ್ರಮದಲ್ಲಿ ಸೂರ್ಯಾಂಶ್ ಶೆಡ್ಗೆಯನ್ನು ಕೆಣಕಲು ಶುರುಮಾಡಿದರು. ಆಗ ವೈಭವ್ ಸೂರ್ಯವಂಶಿ, ಸೂರ್ಯಾಂಶ್ರನ್ನ ಕೆಣಕಿದ ಶ್ರೀಲಂಕಾದ ಕ್ರಿಕೆಟರ್ ವಿಶೇನ್ ಹತ್ತಿರ ಬಂದು ವಾಗ್ವಾದ ನಡೆಸಿದ್ದಾರೆ. ಮಾತಿನ ಚಕಮಕಿ ಇಬ್ಬರ ಕೈ ಕೈ ಮಿಲಾಸುವ ಮಟ್ಟಿಗೆ ಹೋಗಿದೆ. ವೈಭವ್ ಸೂರ್ಯವಂಶಿ ವಿಶೇನ್ ಹಾಲಂಬಗೆಯನ್ನ ತಳ್ಳಿದ್ದಾರೆ. ಆತ ಕೂಡ ವೈಭವ್ರನ್ನ ತಳ್ಳಿದ್ದಾನೆ. ಪರಿಸ್ಥಿತಿ ಬಿಗಡಾಯಿಸುವುದನ್ನು ನೋಡಿದ ಸೀನಿಯರ್ ಆಟಗಾರ ಡಿಕ್ವೆಲ್ಲಾ ಹಾಗೂ ಇತರ ಶ್ರೀಲಂಕಾದ ಆಟಗಾರರು ತಕ್ಷಣ ಮಧ್ಯಪ್ರವೇಶಿಸಿ ಇಬ್ಬರನ್ನ ಬೇರ್ಪಡಿಸಿದ್ದಾರೆ.
ಪಂದ್ಯದ ಕೊನೆಯ ಕ್ಷಣಗಳಲ್ಲಿ ಕಳಪೆ ಬೆಳಕಿನ ಬಗ್ಗೆ ನಾಯಕ ತಿಲಕ್ ವರ್ಮಾ ಮತ್ತು ಅಂಪೈರ್‌ಗಳ ನಡುವೆ ನಡೆದ ದೀರ್ಘ ವಾದ ಮೈದಾನದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿತ್ತು. ಸೂಪರ್ ಓವರ್‌ನಲ್ಲಿ ಭಾರತ ಶ್ರೀಲಂಕಾದ 17 ರನ್‌ಗಳ ಗುರಿಯನ್ನು ತಲುಪಲು ವಿಫಲವಾದಾಗ, ಈ ಉದ್ವಿಗ್ನತೆ ಆಟಗಾರರ ನಡುವಿನ ಜಗಳಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಆದರೆ, ಕ್ರಿಕೆಟ್ ಮೈದಾನದಲ್ಲಿನ ಈ ಕಹಿ ಭಾವನೆ ಹೆಚ್ಚು ಕಾಲ ಉಳಿಯಲಿಲ್ಲ. ಪಂದ್ಯ ಮುಗಿದ ತಕ್ಷಣ ಎರಡೂ ತಂಡಗಳ ಆಟಗಾರರು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದರು ಮತ್ತು ಉತ್ಸಾಹದಿಂದ ಕೈಕುಲುಕಿದರು. ತ್ರಿಕೋನ ಸರಣಿಯಲ್ಲಿ ಭಾರತ ತಂಡ ಸತತ ಎರಡನೇ ಬಾರಿಗೆ ಸೋಲು ಕಂಡಿದೆ. ಟೀಮ್ ಇಂಡಿಯಾ ಹಿಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ವಿರುದ್ಧ 4 ರನ್ಗಳಿಂದ ಸೋಲು ಕಂಡಿತ್ತು. ಪ್ಲೇ ಆಫ್ ರೇಸ್ನಲ್ಲಿ ಉಳಿಯಲು ಭಾರತ ತಂಡ ಅಫ್ಘಾನ್ ವಿರುದ್ಧ ಗೆಲ್ಲಲೇಬೇಕಿದೆ.

ನೋಡಿರಿ

