ನೀರಾನೆ ರೋಹಿತ್ ಶರ್ಮಾ.. ಟ್ರೋಲ್ – ಗುರ್ಬಾಝ್ ಶತಕಕ್ಕೆ ಗಂಭೀರ್ ಬಲ
ಕರುಣ್ ನಾಯರ್‌ಗೆ ಕ್ಯಾಪ್ಟನ್ ಪಟ್ಟ

ಕ್ರಿಕೆಟ್ ಜಗತ್ತಿನ ಇಂಟ್ರೆಸ್ಟಿಂಗ್ ಸುದ್ದಿಗಳು ಕ್ವಿಕ್ ಆಗಿ ಓದಿ.
ಇದನ್ನೂ ಓದಿ: ಮದುವೆಯಾಗಿ 10 ವರ್ಷದ ನಂತರ ಮತ್ತೊಬ್ಬಳ ಮೇಲೆ ಆಸೆ – ಗುಟ್ಟಾಗಿ ತಾಳಿ ಕಟ್ಟಿ, ಪ್ರೇಯಸಿಯನ್ನೇ ಕೊಂದ ಪಾಪಿ
ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ಎ ಸರಣಿಯ 4ನೇ ಪಂದ್ಯದಲ್ಲೂ ಟೀಮ್ ಇಂಡಿಯಾದ ಯುವ ದಾಂಡಿಗ ವೈಭವ್ ಸೂರ್ಯವಂಶಿ ನಿರಾಶೆ ಮೂಡಿಸಿದ್ದಾರೆ. ಶ್ರೀಲಂಕಾ ನಾಯಕ ಸಹನ್ ಅರಾಚ್ಚಿ ಎಸೆದ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿ ಕ್ಯಾಚ್ ನೀಡಿ ಹೊರ ನಡೆದರು. ಇದರೊಂದಿಗೆ 14 ಎಸೆತಗಳಲ್ಲಿ 1 ಸಿಕ್ಸ್, 3 ಫೋರ್ನೊಂದಿಗೆ 21 ರನ್ ಬಾರಿಸಿದ ವೈಭವ್ ಸೂರ್ಯವಂಶಿ ಇನಿಂಗ್ಸ್ ಅಂತ್ಯಗೊಂಡಿತು. ಟಿ20Iನಲ್ಲಿ ಅಬ್ಬರಿಸಿದ ವೈಭವ್ ODIನಲ್ಲಿ ಡಲ್ ಆಗಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 2026 ರ ಮಹಿಳಾ T20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ಪಾಕಿಸ್ತಾನವನ್ನು 64 ರನ್‌ಗಳಿಂದ ಭರ್ಜರಿಯಾಗಿ ಸೋಲಿಸಿತು. ಸ್ಮೃತಿ ಮಂಧಾನ ಅವರ ಅರ್ಧಶತಕದ ನೆರವಿನಿಂದ ಭಾರತ 170 ರನ್ ಗಳಿಸಿತು. ಈ ಗೆಲುವಿನೊಂದಿಗೆ ಭಾರತವು T20 ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದ್ದು, ಪಾಕಿಸ್ತಾನದ ವಿರುದ್ಧ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.
ಭಾರತದ ಸ್ಟಾರ್ ಆಲ್-ರೌಂಡರ್ ದೀಪ್ತಿ ಶರ್ಮಾ ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ದೀಪ್ತಿ 4 ಓವರ್‌ಗಳಲ್ಲಿ ಕೇವಲ 10 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದು ಮಿಂಚಿದರು. ಈ ಮೂಲಕ ದೀಪ್ತಿ ಶರ್ಮಾ ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್ ಹಿಡಿದ ಅದ್ಭುತ ಡೈವಿಂಗ್ ಕ್ಯಾಚ್ ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಐಸಿಸಿ ಕೂ ಈ ವಿಡಿಯೊ ಹಂಚಿಕೊಂಡಿದ್ದು ‘ಭಾರತಕ್ಕೆ ಮತ್ತೊಂದು ವಿಕೆಟ್ ತರಲು ಶ್ರೇಯಂಕಾ ಪಾಟೀಲ್ ವಾಯುಯಾನಕ್ಕೆ ಇಳಿದಿದ್ದಾರೆ ಎಂದು ಬರದುಕೊಂಡಿದೆ. ಪಾಕ್‌ನ ರಮೀನ್ ಶಮೀಮ್ ಹೊಡೆದ ಬಾಲ್‌ನ್ನ ಶ್ರೇಯಾಂಕ ಡೈವಿಂಗ್ ಮೂಲಕ ಕ್ಯಾಚ್ ಹಿಡಿದ್ದಾರೆ.
ನಮ್ಮ ಕ್ರಿಕೆಟ್ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಪುರುಷರ ತಂಡ, ಮಹಿಳಾ ತಂಡ ಮತ್ತು ತಂಡ ಹೀಗೆ ಯಾವುದೇ ಹಂತದಲ್ಲೂ ನಾವು ಭಾರತವನ್ನು ಸೋಲಿಸಲು ಸಾಧ್ಯವಾಗುತ್ತಿಲ್ಲ. ಇದು ನಮಗೆ ತುಂಬಾ ನಾಚಿಕೆಗೇಡಿನ ವಿಷಯ. ನಮಗೆ ಎಷ್ಟು ಮುಜುಗರ ಮತ್ತು ಭಯವಾಗುತ್ತಿದೆ ಎಂದರೆ, ಕಾಮೆಂಟರಿ ಬಾಕ್ಸ್‌ನಲ್ಲಿ ಕೂರಲು ಕೂಡ ಆಗುತ್ತಿಲ್ಲ. ನಾವು ಭಾರತಕ್ಕಿಂತ ಸಾವಿರ ಪಟ್ಟು ಹಿಂದೆ ಬಿದ್ದಿದ್ದೇವೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದ ನಂತ್ರದ ನಡೆದ ಸುದ್ದಿಘೋಷ್ಠಿಯಲ್ಲಿ ಭಾರತದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೆ ಅಮ್ಮ ಕರೆ ಮಾಡಿದ್ದಾರೆ. ಈ ವೇಳೆ ನಿತೀಶ್ ಕುಮಾರ್ ಮುಗುಳ್ನಕ್ಕು, ಮಾಧ್ಯಮಗಳಿಗೆ ಕ್ಷಮೆಯಾಚಿಸಿ, ಕರೆಯನ್ನು ಸ್ವೀಕರಿಸಿದರು. ತಮ್ಮ ಮಾತೃಭಾಷೆಯಾದ ತೆಲುಗಿನಲ್ಲಿ ಅತ್ಯಂತ ಪ್ರೀತಿಯಿಂದ ಉತ್ತರಿಸಿದ ಅವರು ಅಮ್ಮ, ನಾನು ಐದು ನಿಮಿಷಗಳಲ್ಲಿ ಮತ್ತೆ ಕರೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ರನೌಟ್ ಆಗಿದ್ದು, ಸಖತ್ ಟ್ರೋಲ್ ಆಗ್ತಿದೆ. ಈ ರನ್‌ಔಟ್‌ಗೆ ಮೊದ್ಲು ಗಿಲ್ ಕಾರಣ ಅಂತ ರೋಹಿತ್ ಸಿಟ್ಟಾಗಿದ್ರು. ಆದ್ರೆ ಇದ್ದಕ್ಕೆ ಗಿಲ್ ಕಾರಣವಲ್ಲ, ರೋಹಿತ್ ಶರ್ಮಾನೇ ಕಾರಣ ಅಂತ ಆಮೇಲೆ ಗೊತ್ತಾಗಿದ್ದು, ಈ ಬಗ್ಗ ಸಖತ್ ಟ್ರೋಲ್ ಆಗ್ತಿದೆ. ಅಲ್ಲದೇ ನೀರಾನೆ ಬ್ಯಾಟ್ ಹಿಡಿದ್ದಂತೆ ರೋಹಿತ್ ಶರ್ಮಾರನ್ನ ಫೋಟೋ ಎಡಿಟ್ ಮಾಡಿ ಟ್ರೋಲ್ ಮಾಡಲಾಗ್ತಿದೆ.
ಟೀಮ್ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡದ ಆರಂಭಿಕ ದಾಂಡಿಗ ರಹಮಾನುಲ್ಲಾ ಗುರ್ಬಾಝ್ ಸ್ಫೋಟಕ ಶತಕ ಸಿಡಿಸಿದ್ದರು. ಈ ಶತಕದ ಬೆನ್ನಲ್ಲೇ, ಈ ಸಾಧನೆಯ ಹಿಂದೆ ಗೌತಮ್ ಗಂಭೀರ್ ಇದ್ದಾರೆ ಅನ್ನೋದು ಗೊತ್ತಾಗಿದೆ. ಈ ಬಗ್ಗೆ ಮಾತನಾಡಿದ ಗುರ್ಬಾಝ್, ಟೆಸ್ಟ್ ಪಂದ್ಯ ಮುಗಿದ ಬಳಿಕ ನಾನು ಗೌತಮ್ ಗಂಭೀರ್ ಸರ್ ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದೆ. ಅವರು ನೀಡಿದ ಸಲಹೆಗಳನ್ನ ನಾನು ನೆಟ್ಸ್ ಅಭ್ಯಾಸದ ವೇಳೆ ಅಳವಡಿಸಿಕೊಂಡೆ ಎಂದಿದ್ದಾರೆ.
ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಮಹಾರಾಜ ಟ್ರೋಫಿ ಟಿ20 ಟೂರ್ನಿ 5ನೇ ಆವೃತ್ತಿಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕನಾಗಿ ಕರುಣ್ ನಾಯರ್ ಅವರನ್ನು ಘೋಷಿಸಲಾಗಿದೆ. ಟೂರ್ನಿಯಲ್ಲಿ ತನ್ನ ಮೊದಲ ಸರಣಿಗೆ ಸಜ್ಜಾಗುತ್ತಿರುವ ಮಂಗಳೂರು ಫ್ರಾಂಚೈಸಿಯು ತಂಡದ ಅಧಿಕೃತ ಜೆರ್ಸಿ ಹಾಗೂ ಥೀಮ್ ಸಾಂಗ್‌ಗಳನ್ನ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿತು.
ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವಣ ಮೂರು ಪಂದ್ಯಗಳ ಟಿ20 ಸರಣಿಯು ಮುಕ್ತಾಯಗೊಂಡಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಗೆದ್ದರೆ, ದ್ವಿತೀಯ ಪಂದ್ಯದಲ್ಲಿ ಶ್ರೀಲಂಕಾ ತಂಡ ಜಯ ಸಾಧಿಸಿತ್ತು. ಇದೀಗ ಮೂರನೇ ಮ್ಯಾಚ್ನಲ್ಲಿ ಜಯ ಸಾಧಿಸಿ ವೆಸ್ಟ್ ಇಂಡೀಸ್ 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ. 3ನೇ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಕೇವಲ 5 ಎಸೆತ ಎದುರಿಸಿ 3 ಭರ್ಜರಿ ಸಿಕ್ಸರ್ಗಳೊಂದಿಗೆ 21 ರನ್ ಬಾರಿಸಿದ್ದರು. ಬರೋಬ್ಬರಿ 420 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ ವೆಸ್ಟ್ ಇಂಡೀಸ್‌ಗೆ ಗೆಲುವು ತಂದುಕೊಟ್ಟರು.

ನೋಡಿರಿ

