ಭಾರತಕ್ಕಿಲ್ಲ ALL-FORMAT ಅಸ್ತ್ರ – 2 ದಶಕದ ಸಕ್ಸಸ್ ಮಂತ್ರ ಬಿಟ್ಟಿದ್ದೇಕೆ?
ಗಿಲ್ & ಶ್ರೇಯಸ್ ಗೆ ಪ್ಲಸ್ ಆಯ್ತಾ?

ಟೀಂ ಇಂಡಿಯಾದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನ ಗಮನಿಸಿದಾಗ ಆಲ್ ಫಾರ್ಮೆಟ್ ಪ್ಲೇಯರ್ ಌಂಡ್ ಆಲ್ ಫಾರ್ಮೆಟ್ ಕ್ಯಾಪ್ಟನ್ ಅನ್ನೋ ಕಾನ್ಸೆಪ್ಟೇ ಇಲ್ಲ. ಒಬ್ರೋ ಇಬ್ರೋ ಬೌಲರ್ಸ್ ಮಾತ್ರ ಎಲ್ಲಾ ಫಾರ್ಮೆಟ್ಗೂ ಸೆಲೆಕ್ಟ್ ಆಗ್ತಿದ್ದಾರೆ ಅನ್ನೋದನ್ನ ಬಿಟ್ರೆ ಬ್ಯಾಟಿಂಗ್ ಅಂತಾ ಬಂದಾಗ ಮೂರೂ ಮಾದರಿಯಲ್ಲಿ ಯಾರೂ ಆಡ್ತಿಲ್ಲ.
ಇದನ್ನೂ ಓದಿ : ಮೂರನೇ ಪಂದ್ಯದಲ್ಲೂ ವೈಭವ್ ಸೂರ್ಯವಂಶಿ ಫೇಲ್ – ಬಾಸ್ ಬೇಬಿ ಮತ್ತೆ ಸೈಲೆಂಟ್..!
ಕಳೆದ ಎರಡು ದಶಕಗಳಿಂದ ಟೀಂ ಇಂಡಿಯಾದಲ್ಲಿ ಆಲ್ ಫಾರ್ಮೆಟ್ ಕ್ಯಾಪ್ಟನ್ ಪದ್ಧತಿಯೇ ಇತ್ತು,. ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೀಗೆ.. ಮೂರೂ ಮಾದರಿಯಲ್ಲಿ ಆಟಗಾರರಾಗಿ, ನಾಯಕರಾಗಿ ಯಶಸ್ವಿಯಾಗಿ ತಂಡವನ್ನ ಲೀಡ್ ಮಾಡಿದ್ರು. ತಾವೂ ಕೂಡ ಬ್ಯಾಟಿಂಗ್ನಲ್ಲಿ ಅಬ್ಬರಿಸ್ತಿದ್ರು. ಆದ್ರೆ 2024ರ ಬಳಿಕ ಪರಿಸ್ಥಿತಿ ಬೇರೆನೇ ಇದೆ. ರೋಹಿತ್ ಶರ್ಮಾ ಟಿ20ಐಗೆ ನಿವೃತ್ತಿ ಘೋಷಣೆ ಮಾಡ್ದಾಗ ಭಾರತ ತಂಡಕ್ಕೆ ಸೂರ್ಯಕುಮಾರ್ ಕ್ಯಾಪ್ಟನ್ ಆಗಿ ಬರ್ತಾರೆ. ರೋಹಿತ್ ಶರ್ಮಾರೇ ಏಕದಿನ ಮತ್ತು ಟೆಸ್ಟ್ ಕ್ಯಾಪ್ಟನ್ ಆಗ್ತಾರೆ. ಬಟ್ ಲಾಸ್ಟ್ ಇಯರ್ ಸಡನ್ ಆಗಿ ರೋಹಿತ್ ಟೆಸ್ಟ್ ಫಾರ್ಮೆಟ್ಗೆ ಗುಡ್ ಬೈ ಹೇಳ್ದಾಗ ಶುಭ್ಮನ್ ಗಿಲ್ಗೆ ನಾಯಕತ್ವ ನೀಡಿದ್ರು. ಌಂಡ್ ಏಕದಿನ ಮಾದರಿಯಲ್ಲಿ ರೋಹಿತ್ ಆಡ್ತಿದ್ರೂ ಶುಭ್ಮನ್ ಗಿಲ್ಗೆ ಕ್ಯಾಪ್ಟನ್ಸಿ ಕಟ್ಟಿದ್ರು. ಇನ್ನು ಸೂರ್ಯನ ಬಳಿಕ ಗಿಲ್ರನ್ನೇ ಟಿ-20 ಕ್ಯಾಪ್ಟನ್ನೂ ಮಾಡೋಣ ಅಂತಾ ನೋಡಿದ್ರು. ಬಟ್ ಅದು ಸಾಧ್ಯ ಆಗ್ಲಿಲ್ಲ. ಕೊನೆಗೆ ತಂಡದಿಂದಲೇ ಕೈಬಿಟ್ರು. ಸೋ ಅಲ್ಲಿಗೆ ಮಲ್ಟಿ ಕ್ಯಾಪ್ಟನ್ಸ್ ಎರಾ ಸ್ಟಾರ್ಟ್ ಆಗಿದೆ.
ಸೂರ್ಯನ ಬಳಿಕ ಗಿಲ್ ಕಡೆ ನೋಡದ ಬಿಸಿಸಿಐ!
ಟಿ-20ಐನಿಂದ ಸೂರ್ಯನನ್ನ ಹೊರಗಿಡೋಕೆ ಬಿಸಿಸಿಐ ನಿರ್ಧಾರ ಮಾಡಿದ ಮೇಲೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಶುಭಮನ್ ಗಿಲ್ ಅವರ ಕಡೆಗೆ ತಿರುಗಬಹುದಿತ್ತು. ಈಗಾಗಲೇ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಗುಜರಾತ್ ಟೈಟಾನ್ಸ್‌ನೊಂದಿಗೆ ನಾಯಕ ಮತ್ತು ಬ್ಯಾಟ್ಸ್‌ಮನ್ ಆಗಿ ಐಪಿಎಲ್ 2026 ರಲ್ಲಿ ಬಲವಾದ ಪ್ರದರ್ಶನ ನೀಡಿದ್ದಾರೆ. ಆದ್ರೆ ಬಿಸಿಸಿಐ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿತು. ಆ ನಿರ್ಧಾರವು ಮಂಡಳಿಯು ಎಲ್ಲಾ ಮಾದರಿಗಳಲ್ಲಿ ಒಂದೇ ನಾಯಕನಿಗೆ ಜೋತು ಬೀಳಲು ನೋಡ್ತಿಲ್ಲ ಅನ್ನೋದು ಗೊತ್ತಾಗುತ್ತೆ. ಅದಕ್ಕಿಂತ ಮುಖ್ಯವಾಗಿ ಶುಭ್ಮನ್ ಗಿಲ್ ಈ ಮಾದರಿಯಲ್ಲಿ ಕ್ಲಿಕ್ ಆಗ್ತಿಲ್ಲ ಅನ್ನೋ ಕಾರಣವೂ ಇದೆ.
ಕ್ಯಾಪ್ಟನ್ಸಿ ವಿಭಜನೆಯ ಲಾಭ!
ಮೂರೂ ಮಾದರಿ ಕ್ಯಾಪ್ಟನ್ಸ್ ಆದ್ರೆ ವರ್ಕ್ ಲೋಡ್ ಹೆಚ್ಚಬಹುದು
ಅರ್ಹ ಆಟಗಾರರಿಗೆ ತಂಡದಲ್ಲಿ ಸ್ಥಾನದ ಜೊತೆ ಕ್ಯಾಪ್ಟನ್ಸಿಯೂ ಸಿಗುತ್ತೆ
ಟಿ-20ಐನಲ್ಲಿ ಅಬ್ಬರಿಸಿದವ್ರು ಏಕದಿನ, ಟೆಸ್ಟ್ ನಲ್ಲಿ ಡಲ್ ಆದಾಗ ಔಟ್
ಹೆಚ್ಚೆಚ್ಚು ಆಟಗಾರರಿಗೆ ತಂಡದಲ್ಲಿ ಸ್ಥಾನ, ಬದಲಾವಣೆಗಳಿಗೂ ಅನುಕೂಲ
ನಾಯಕರ ಕಳಪೆ ಫಾರ್ಮ್ ಇದ್ದಾಗ ತಂಡಕ್ಕೆ ಹೆಚ್ಚಿನ ಹೊರೆ ಬೀಳಲ್ಲ
ಹೀಗೆ ಬಿಸಿಸಿಐ ಮಲ್ಟಿ ಕ್ಯಾಪ್ಟನ್ಸ್ ಎರಾ ಹಿಂದೆ ಸಾಕಷ್ಟು ಪ್ಲ್ಯಾನ್ ಮಾಡಿಯೇ ಈ ನಿರ್ಧಾರಗಳನ್ನ ಮಾಡಿದೆ. ಆದ್ರೆ ಕಳೆದ ಎರಡು ದಶಕಗಳಲ್ಲಿ ಮೂರೂ ಮಾದರಿಯ ನಾಯಕರಾಗಿ ಮೂವರು ಲೆಜೆಂಡರ್ಸ್ ಮಾಡಿದ ಸಾಧನೆ ಅಷ್ಟಿಷ್ಟಲ್ಲ. ಧೋನಿ ನೇತೃತ್ವದಲ್ಲಿ ಭಾರತ 2007 ರ ಟಿ 20 ವಿಶ್ವಕಪ್, 2011 ರ ಏಕದಿನ ವಿಶ್ವಕಪ್ ಮತ್ತು 2013 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಕೊಹ್ಲಿ ಅವರ ಅಧಿಕಾರಾವಧಿಯು ಆಸ್ಟ್ರೇಲಿಯಾದಲ್ಲಿ ಸತತ ಸರಣಿ ಗೆಲುವುಗಳು ಸೇರಿದಂತೆ ಭಾರತದ ಟೆಸ್ಟ್ ಪ್ರಾಬಲ್ಯಕ್ಕಾಗಿ ಸ್ಮರಣೀಯವಾಗಿದೆ. ರೋಹಿತ್ ಶರ್ಮಾ ಅವರ ನೇತೃತ್ವದಲ್ಲಿ 2024 ರ ಟಿ 20 ವಿಶ್ವಕಪ್ ಮತ್ತು 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಈಗ ಸೂರ್ಯನ ನಾಯಕತ್ವದಲ್ಲಿ ಮತ್ತೆ ಟಿ-20 ವಿಶ್ವಕಪ್ ಗೆದ್ದಿದೆ. ಪ್ರಸ್ತುತ ಶ್ರೇಯಸ್ ಅಯ್ಯರ್ ಮತ್ತು ಶುಭ್ಮನ್ ಗಿಲ್ ಮುಂದಿನ ಜರ್ನಿಯ ಹೊಣೆ ಹೊತ್ತಿದ್ದಾರೆ. ಇಬ್ಬರು ಯಂಗ್ ಸ್ಟರ್ಸ್ ಹೇಗೆ ನಿಭಾಯಿಸ್ತಾರೆ ನೋಡ್ಬೇಕು.

ನೋಡಿರಿ

