14.. 44.. 11.. ವೈಭವ್ ಸೈಲೆಂಟ್ – ODIನಲ್ಲಿ ಸೂರ್ಯವಂಶಿಗೆ ಫೇಲ್ಯೂರ್ ಪಟ್ಟ
BOSS BABY ಸೀಕ್ರೆಟ್ ಗೊತ್ತಾಯ್ತಾ?

14.. 44.. 11.. ವೈಭವ್ ಸೈಲೆಂಟ್ – ODIನಲ್ಲಿ ಸೂರ್ಯವಂಶಿಗೆ ಫೇಲ್ಯೂರ್ ಪಟ್ಟBOSS BABY ಸೀಕ್ರೆಟ್ ಗೊತ್ತಾಯ್ತಾ?

ಕ್ರಿಕೆಟ್​ನಲ್ಲಿ ಕೆಲವ್ರು ಎಷ್ಟೇ ರನ್ಸ್ ಹೊಡೆದ್ರೂ ಅಥವಾ ಫೇಲ್ಯೂರ್ ಆದ್ರೂ ದೊಡ್ಡ ಮಟ್ಟದ ಡಿಸ್ಕಷನ್ಸ್ ಇರಲ್ಲ. ಬಟ್ ಕೆಲವೊಂದಷ್ಟು ಆಟಗಾರರ ಸಣ್ಣ ಫೇಲ್ಯೂರ್ ಕೂಡ ದೊಟ್ಟ ಮಟ್ಟದಲ್ಲಿ ಸದ್ದು ಮಾಡುತ್ತೆ. ಈಗ ವಂಡರ್ ಕಿಡ್ ವೈಭವ್ ಸೂರ್ಯವಂಶಿ ವಿಚಾರದಲ್ಲಿ ಆಗ್ತಿರೋದೂ ಅದೇ. ಸೂರ್ಯವಂಶಿ ಸೆಟ್ ಮಾಡಿರೋ ಟ್ರೆಂಡೇ ಹಂಗಿದೆ. ಈಗ ಕಳೆದ ಮೂರು ಪಂದ್ಯಗಳಲ್ಲಿ ಆರ್ಭಟ ತೋರಿಲ್ಲ ಅಂತಾ ಆಲ್ರೆಡಿ ಫೇಲ್ಯೂರ್ ಪಟ್ಟ ಕಟ್ತಿದ್ದಾರೆ. ಮತ್ತೊಂದ್ಕಡೆ ವೈಭವ್ ಸೂರ್ಯವಂಶಿ ಸೇಮ್ ಪ್ಯಾಟ್ರನ್ ಔಟ್ ಆಗ್ತಿರೋದೂ ಚರ್ಚೆಯಾಗ್ತಿದೆ.

ಇದನ್ನೂ ಓದಿ : PAK ಸೊಕ್ಕು ಮುರಿದ ಸಿಂಹಿಣಿಯರು – ದೀಪ್ತಿ 5-FERಗೆ ಬ್ಯಾಟರ್ಸ್ ಧೂಳೀಪಟ

ಕ್ರಿಕೆಟ್ ಜಗತ್ತಿನ ಕಣ್ಣಿಗೆ ವಂಡರ್ ಕಿಡ್ ಆಗಿರೋ ವೈಭವ್ ಸೂರ್ಯವಂಶಿ ಆಲ್ರೆಡಿ ತಮ್ಮ ಕ್ರಿಕೆಟ್ ಕೆರಿಯರ್​ಗೆ ಭದ್ರ ಬುನಾದಿಯನ್ನೇ ಹಾಕಿಕೊಂಡಿದ್ದಾರೆ. ದಶಕಗಳ ಕಾಲ ಕ್ರಿಕೆಟ್​ನ ಆಳಿ ದಂತಕತೆಯಾಗಿರೋ ಆಟಗಾರರೇ ವೈಭವ್ ಆಟವನ್ನ ಬಾಯ್ತುಂಬಾ ಹೊಗಳ್ತಿದ್ದಾರೆ. ಇನ್ನೇನು ಟೀಂ ಇಂಡಿಯಾಗೆ ಡೆಬ್ಯೂ ಮಾಡಿ ಚರಿತ್ರೆ ಬರೆಯೋ  ಹೊತ್ತಲ್ಲಿ ಬ್ಯಾಟ್ ಸೈಲೆಂಟ್ ಆಗಿದೆ. ಭಾರತ, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಏಕದಿನ ತ್ರಿಕೋನ ಸರಣಿಯ ಎ ತಂಡದಲ್ಲಿರೋ ವೈಭವ್ ಕಳೆದ ಮೂರು ಪಂದ್ಯಗಳಲ್ಲಿ ಸಿಡಿಲಬ್ಬರ ನೀಡದೇ ಇರೋದೇ ಈಗ ಬಾರೀ ಚರ್ಚೆಯಾಗ್ತಿದೆ.

3 ಪಂದ್ಯ.. 79 ರನ್ಸ್.. ಸೈಲೆಂಟ್ ಆದ ಸೂರ್ಯವಂಶಿ!

ಭಾರತ ತಂಡದಲ್ಲಿ ಲೆಜೆಂಡರಿ ಪ್ಲೇಯರ್​ಗಳೇ ಇದ್ದಾರೆ. ಎ ಸರಣಿ ನಡೀತಿದೆ. ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಯೂ ಆಗ್ತಿದೆ. ಆದ್ರೆ ಬೇರೆಲ್ಲಾ ಆಟಗಾರರಿಗಿಂತ ಸೂರ್ಯವಂಶಿ ಆಟದ ಬಗ್ಗೆಯೇ ಬಾರೀ ಚರ್ಚೆಯಾಗ್ತಿದೆ. ಭಾರತ ಎ ತಂಡದ ಪರ ತ್ರಿಕೋನ ಸರಣಿ ಆಡ್ತಿರೋ ಸೂರ್ಯವಂಶಿ ಇದುವರೆಗೆ ಮೂರು ಪಂದ್ಯಗಳನ್ನಾಡಿದ್ದಾರೆ. ಮೊದಲಿಗೆ ಶ್ರೀಲಂಕಾ ಎ ತಂಡದ ವಿರುದ್ದ 12 ಎಸೆತಗಳಲ್ಲಿ 14 ರನ್ ಬಾರಿಸಿದ್ದರು. ಎರಡನೇ ಪಂದ್ಯದಲ್ಲಿ ಆಫ್ಘಾನಿಸ್ತಾನ ಎ ತಂಡದ ವಿರುದ್ದ 22 ಎಸೆತಗಳಲ್ಲಿ 44 ರನ್ ಬಾರಿಸಿದ್ದರು. ಮೂರನೇ ಮ್ಯಾಚಲ್ಲಿ ಶ್ರೀಲಂಕಾ ಎ ತಂಡದ ಎದುರು 14 ಎಸೆತಗಳಲ್ಲಿ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಮೂರು ಪಂದ್ಯಗಳಿಂದ ವೈಭವ್ ಸೂರ್ಯವಂಶಿ 79 ರನ್ ಗಳಿಸಿದ್ದಾರೆ. ಈ ಪ್ರದರ್ಶನಕ್ಕೆ ಕೆಲವರು ಟೀಸ್ ಮಾಡ್ತಿದ್ದಾರೆ. ಟಿ-20ಐಗಷ್ಟೇ ಸೂಟ್ ಆಗೋದು. ಏಕದಿನ ಮಾದರಿಯಲ್ಲಿ ಸ್ವಲ್ಪ ಪೇಷನ್ಸ್ ಬೇಕು. ಸೂರ್ಯವಂಶಿಗೆ ಪೇಷನ್ಸ್ ಇಲ್ಲ. ಪ್ರತೀ ಬಾಲ್​ನೂ ಹೊಡಿಬಡಿ ಅಂತಾನೇ ನೋಡ್ತಾರೆ. ಇದೇ ಕಾರಣಕ್ಕೆ ಔಟ್ ಆಗ್ತಿರೋದು ಅಂತೆಲ್ಲಾ ಲೇವಡಿ ಮಾಡ್ತಿದ್ದಾರೆ. ಇದೆಲ್ಲದ್ರ ನಡುವೆ ಸೂರ್ಯವಂಶಿ ಔಟ್ ಆಗ್ತಿರೋ ವಿಧಾನವೂ ಚರ್ಚೆಯಾಗ್ತಿದೆ. ಅವ್ರ ಬ್ಯಾಟಿಂಗ್ ಸೀಕ್ರೆಟ್ ಎದುರಾಳಿಗಳಿಗೆ ಗೊತ್ತಾಯ್ತಾ ಅನ್ನೋ ಮಾತುಗಳು ಕೇಳಿ ಬರ್ತಿವೆ. ಅದಕ್ಕೆ ಕಾರಣವೂ ಇದೆ.

ಬೌನ್ಸರ್ & ಶಾರ್ಟ್ ಬಾಲ್ ಗೆ ಔಟ್ ಆಗ್ತಿದ್ದಾರಾ ವೈಭವ್?

ಐಪಿಎಲ್​ನಲ್ಲಿ ವರ್ಲ್ಡ್ ಕ್ಲಾಸ್ ಬೌಲರ್​ಗಳನ್ನೇ ಚೆಂಡಾಡಿರೋ ವೈಭವ್ ಸೂರ್ಯವಂಶಿ ಈಗ ಅಫ್ಘನ್ ಮತ್ತು ಲಂಕಾ ವಿರುದ್ಧ ಅದೂ ಎ ಟೀಂ ವಿರುದ್ಧ ಬೇಗ ಔಟ್ ಆಗ್ತಿರೋದ್ರ ಬಗ್ಗೆ ಚರ್ಚೆಯಾಗ್ತಿದೆ. ಅದಕ್ಕೆ ಕಾರಣವೂ ಇದೆ. ವೈಭವ್ ಸೂರ್ಯವಂಶಿ ಹೇಳಿ ಕೇಳಿ ಪವರ್ ಹಿಟ್ಟರ್. ಅವ್ರ ಬ್ಯಾಟಿಂಗ್ ಸ್ಟೈಲೇ ಅಗ್ರೆಸ್ಸಿವ್.  ಪವರ್‌ಪ್ಲೇ ಓವರ್‌ಗಳನ್ನು ಸಮರ್ಥವಾಗಿ ಬಳಸಿಕೊಂಡು ಸಿಕ್ಸ್, ಫೋರ್​ಗಳಲ್ಲೇ ಡೀಲ್ ಮಾಡ್ತಾರೆ. ಆದರೆ, ಶಾರ್ಟ್ ಪಿಚ್ ಎಸೆತಗಳು ಮತ್ತು ಆಫ್-ಸ್ಟಂಪ್ ಹೊರಗಿನ ಚೆಂಡುಗಳನ್ನು ಆಡುವಾಗ ಅವರು ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ. ಐಪಿಎಲ್​ನಲ್ಲಿ ಬೌನ್ಸರ್​ಗಳಿಗೆ ಜಾಸ್ತಿ ವಿಕೆಟ್ ಒಪ್ಪಿಸಿದ್ರು. ಈಗ ಸೂರ್ಯವಂಶಿ ವೀಕ್​ನೆಸ್​ನ ಎದುರಾಳಿ ತಂಡಗಳು ತಿಳ್ಕೊಂಡ್ರಾ ಅನ್ನೋ ಪ್ರಶ್ನೆ ಮೂಡಿದೆ. ಇದೇ ಕಾರಣಕ್ಕೆ  ಕಳೆದ ಮೂರು ಪಂದ್ಯಗಳಲ್ಲಿ ವೈಭವ್ ಬೇಗನೆ ಔಟಾಗಿದ್ದಾರೆ ಎಂಬುದು ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯ.

ಸೂರ್ಯವಂಶಿ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿರೋದೇ ಆತನಲ್ಲಿರೋ ಸ್ಕಿಲ್ ಇಂದ. ಐಪಿಎಲ್​ನಲ್ಲಿ ಸೂಪರ್ ಡೂಪರ್ ಪ್ರದರ್ಶನ ನೀಡಿದ್ದಾರೆ. ಅದಕ್ಕೂ ಮುನ್ನ ಭಾರತದ ಪರ ಅಂಡರ್ 19ನಲ್ಲೂ ಅಬ್ಬರಿಸಿದ್ರು. 2026ರ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿ 776 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ರು. ಇದೇ ಕಾರಣಕ್ಕೆ ಟೀಂ ಇಂಡಿಯಾ ಬಾಗಿಲು ಓಪನ್ ಆಗಿದೆ. ಇನ್ನೇನು ಅಧಿಕೃತವಾಗಿ ಮೆನ್ ಇನ್ ಬ್ಲ್ಯೂ ಜರ್ಸಿಯಲ್ಲಿ ಸೀನಿಯರ್ಸ್ ಜೊತೆ ಕಣಕ್ಕಿಳಿಬೇಕು ಅನ್ನೋ ಹೊತ್ತಲ್ಲಿ ಕಳೆದ ಮೂರು ಪಂದ್ಯಗಳ ರನ್ಸ್ ಮುನ್ನಲೆಗೆ ಬಂದಿದೆ. ಇದನ್ನೇ ಇಟ್ಕೊಂಡು ವೈಭವ್ ಆಡಲ್ಲ ಅಂತೆಲ್ಲಾ ತಗಾದೆ ತೆಗೀತಿದ್ದಾರೆ. ಆದ್ರೆ ವೈಭವ್ ಕೆರಿಯರ್ ಈಗಷ್ಟೇ ಸ್ಟಾರ್ಟ್ ಆಗ್ತಿದೆ.. ಪ್ರತೀ ಪಂದ್ಯದಲ್ಲೂ ಅರ್ಧಶತಕ ಅಥವಾ ಶತಕ ಹೊಡಿಬೇಕು ಅಂದ್ರೆ ಯಾರಿಂದಲೂ ಆಗಲ್ಲ. ವೈಭವ್ ವಿಚಾರದಲ್ಲೂ ಇದು ಸತ್ಯ. ಆದ್ರೆ ಆತನ ಮೇಲೆ ಹೈ ಎಕ್ಸ್​ಪೆಕ್ಟೇಷನ್ಸ್ ಇಟ್ಟಿರೋದೇ ಇದಕ್ಕೆಲ್ಲಾ ಕಾರಣ ಅಷ್ಟೇ.

Shantha Kumari

Leave a Reply

Your email address will not be published. Required fields are marked *