PAK ಸೊಕ್ಕು ಮುರಿದ ಸಿಂಹಿಣಿಯರು – ದೀಪ್ತಿ 5-FERಗೆ ಬ್ಯಾಟರ್ಸ್ ಧೂಳೀಪಟ
T-20 ವಿಶ್ವಕಪ್ ನಲ್ಲಿ ಸೂಪರ್ ಸ್ಟಾರ್ಟ್!

ಭಾರತ ಮತ್ತು ಪಾಕಿಸ್ತಾನ ನಡುವಿನ ಮ್ಯಾಚ್ ಎಂದಾಗ ಅಲ್ಲಿ ಭಾರತವೇ ಡೊಮಿನೇಷನ್ ಮಾಡೋದು ನಿಮಗೆಲ್ಲ ಗೊತ್ತೇ ಇದೇ. ಟಿ 20 ವಿಶ್ವಕಪ್ ನಲ್ಲೂ ಭಾರತ ಮಹಿಳಾ ತಂಡವೆ ವಿನ್ ಆಯ್ತು. ಬಟ್ ಈ ಮ್ಯಾಚ್ ನಲ್ಲೂ ನೋ ಶೇಕ್ ಹ್ಯಾಂಡ್ ಪಾಲಿಸಿ ಕಂಟಿನ್ಯೂ ಆಯ್ತು. ಹತ್ತನೇ ಅವ್ರುತ್ತಿಯ ಟಿ 20 ವಿಶ್ವಕಪ್ ನಲ್ಲಿ ಭಾರತ ಹಾಗೆ ಪಾಕ್ ತಂಡಗಳು ತಮ್ಮ ಮೊದಲ ಪಂದ್ಯದಲ್ಲೇ ಮುಖಮುಖಿ ಆಗಿದ್ವು. ಈ ಮ್ಯಾಚ್ ಟೂರ್ನಿಯ ಶುಭಾರಂಭ ಯಾರಿಗೆ ಅನ್ನೋದಕ್ಕಿಂತ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಆದ್ರೆ ಪಾಕ್ ವಿರುದ್ಧದ ಮ್ಯಾಚ್ ಅಂತಾ ಬಂದಾಗ ಭಾರತವೇ boss ಅನ್ನೋದು ಮತ್ತೊಮ್ಮೆ ಪ್ರೂವ್ ಆಯ್ತು.
ಇದನ್ನೂ ಓದಿ : ದೀಪ್ತಿ, ಸ್ಮೃತಿ ದಾಳಿಗೆ ಕಂಗೆಟ್ಟ ಪಾಕಿಸ್ತಾನ – ಪಾಕ್ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ
ಸ್ಮೃತಿ & ದೀಪ್ತಿ ಅದ್ಬುತ ಆಟಕ್ಕೆ ಪಾಕಿಸ್ತಾನ ಪಂಚರ್!
ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಮ್ಯಾಚ್ಗೂ ಮುನ್ನ ಟಾಸ್ ಗೆದ್ದ ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ಮಾಡ್ತಿವಿ ಅಂತಾ ಸೆಲೆಕ್ಟ್ ಮಾಡಿಕೊಂಡ್ರು. ಆದ್ರೆ ಆರಂಭದಲ್ಲೇ ಅಘಾತ ಎದುರಾಗಿತ್ತು. ಶಫಾಲಿ 6 ರನ್ಸ್, ಜೆಮಿಮಾ ರೊಡ್ರಿಗಸ್ 1 ರನ್ಗೆ ಔಟ್ ಆದ್ರು. ಈ ವೇಳೆ ಸ್ಮೃತಿ ಮತ್ತು ಕೌರ್ ಪಾಟ್ನರ್ಶಿಪ್ ವರ್ಕೌಟ್ ಆಯ್ತು. ಸ್ಮೃತಿ 68 ರನ್ ಕಲೆ ಹಾಕಿದ್ರೆ ಕೌರ್ 36 ರನ್ ಗಳಿಸಿದ್ರು. ಕೊನೆಯಲ್ಲಿ ರಿಚಾ ಘೋಷ್ 17 ಬಾಲಲ್ಲೇ 34 ರನ್ ಚಚ್ಚಿದ್ರು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 170 ರನ್ ಕಲೆಹಾಕಿತು. ಈ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಪವರ್ ಪ್ಲೇನಲ್ಲಿ ಚೆನ್ನಾಗೇ ಆರಂಭ ಮಾಡಿದ್ರು. ಆದ್ರೆ ಫಸ್ಟ್ ವಿಕೆಟ್ ಬಿದ್ಮೇಲೆ ಅಲ್ಲಿಂದ ರಿಕವರ್ ಆಗ್ಲೇ ಇಲ್ಲ. ದೀಪ್ತಿ ಶರ್ಮಾ ಹಾಗೇ ಶ್ರೀಚರಣಿ ಅಟ್ಯಾಕ್ನಿಂದ 20 ಓವರ್ಗಳನ್ನು ಆಡಲು ಸಾಧ್ಯವಾಗದೆ 106 ರನ್ಗಳಿಗೆ ಆಲೌಟ್ ಆದ್ರು. ಈ ಮೂಲಕ ಭಾರತ 64 ರನ್ಗಳ ಬಿಗ್ ಮಾರ್ಜಿನ್ನಿಂದ ಗೆದ್ದು ಶುಭಾರಂಭ ಮಾಡಿತು.
ಭಾರತದ ಗೆಲುವಿಗೆ ಕಾರಣಗಳು!
ಫಸ್ಟ್ ಬ್ಯಾಟಿಂಗ್ ಮಾಡಿ ಉತ್ತಮ ಟಾರ್ಗೆಟ್ ಸೆಟ್
ಬೌಲಿಂಗ್ ನಲ್ಲಿ ಪವರ್ ಪ್ಲೇ ದುಬಾರಿಯಾದ್ರು ಕಮ್ ಬ್ಯಾಕ್
ಫೀಲ್ಡಿಂಗ್ ನಲ್ಲಿ ಉತ್ತಮ ಕ್ಯಾಚ್ ಗಳನ್ನು ಹಿಡಿದ್ರು
ದೀಪ್ತಿ ಶರ್ಮ 5 ವಿಕೆಟ್, ಶ್ರೀ ಚರಣಿ ಮೂರು ವಿಕೆಟ್
ಪಾಕ್ ಪರ ಬ್ಯಾಟಿಂಗ್ ನಲ್ಲಿ ಕಂಪ್ಲಿಟ್ ಫೇಲ್ಯೂರ್

ನೋಡಿರಿ

