ಮೂರನೇ ಪಂದ್ಯದಲ್ಲೂ ವೈಭವ್ ಸೂರ್ಯವಂಶಿ ಫೇಲ್ – ಬಾಸ್ ಬೇಬಿ ಮತ್ತೆ ಸೈಲೆಂಟ್..!

ಶ್ರೀಲಂಕಾ ಎ ತಂಡದ ವಿರುದ್ಧ ಭಾರತ ಎ ತಂಡ ಕಣಕ್ಕಿಳಿದಿದೆ. ಭಾರತೀಯರ ಕಣ್ಣು ವೈಭವ್ ಸೂರ್ಯವಂಶಿಯ ಮೇಲಿತ್ತು ಅನ್ನೋದು ಕೂಡಾ ಸತ್ಯ. ಆದರೆ, ಯಾಕೋ ವಂಡರ್ ಕಿಡ್ ಮ್ಯಾಜಿಕ್ ಡಲ್ ಆಗಿದೆ. ಸತತ ಮೂರನೇ ಪಂದ್ಯದಲ್ಲೂ ಬಾಸ್ ಬೇಬಿ ಬ್ಯಾಟ್ ಸೈಲೆಂಟ್ ಆಗಿದೆ.
ಇದನ್ನೂ ಓದಿ:ದೀಪ್ತಿ, ಸ್ಮೃತಿ ದಾಳಿಗೆ ಕಂಗೆಟ್ಟ ಪಾಕಿಸ್ತಾನ – ಪಾಕ್ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ
ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವೆ ಪಂದ್ಯ ಆರಂಭವಾಗಿದೆ. ಟಾಸ್ ಗೆದ್ದಿರುವ ಲಂಕಾ ಪಡೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಮ್ ಇಂಡಿಯಾದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲೂ ಬೇಗನೇ ಪೆವಿಲಿಯನ್ ಸೇರಿದ್ದಾರೆ. ಟೀಮ್ ಇಂಡಿಯಾ ಮತ್ತದೇ ಆರಂಭಿಕ ಆಘಾತಕ್ಕೆ ಒಳಗಾಗಿದೆ. ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಮತ್ತದೇ ಹೊಡಿಬಡಿ ಆಟಕ್ಕೆ ಮುಂದಾದರು. ಮೊದಲ ಓವರ್ನಲ್ಲಿ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ ವೈಭವ್, ಏಕದಿನ ಸರಣಿಗೆ ಹೊಂದಿಕೊಂಡು ಆಡುತ್ತಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಎರಡನೇ ಓವರ್ನಲ್ಲಿ ಫೋರ್ ಹಾಗೂ ಸಿಕ್ಸ್ಗಳನ್ನು ಬಾರಿಸಿದರು. ಅಲ್ಲದೆ ಮೂರನೇ ಹಾಗೂ ನಾಲ್ಕನೇ ಓವರ್ಗಳಲ್ಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಶ್ರೀಲಂಕಾ ನಾಯಕ ಸಹನ್ ಅರಾಚ್ಚಿ ಬಾಲ್ ಗೆ ಕ್ಯಾಚ್ ಔಟಾದರು. 14 ಎಸೆತಗಳಲ್ಲಿ 1 ಸಿಕ್ಸ್, 3 ಫೋರ್ನೊಂದಿಗೆ 21 ರನ್ ಮಾತ್ರ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ನಿಂದ ಬಂದಿದೆ.
ವೈಭವ್ ಸೂರ್ಯವಂಶಿ ಏಕದಿನ ಸರಣಿಗೆ ಇನ್ನೂ ಹೊಂದಿಕೊಳ್ಳಬೇಕಿದೆ. ಈಗಾಗಲೇ ಎರಡು ಪಂದ್ಯ ಆಡಿರುವ ವೈಭವ್ ಸೂರ್ಯವಂಶಿ ಅರ್ಧಶತಕ ಗಳಿಸುವಲ್ಲಿ ವಿಫಲರಾಗಿದ್ದಾರೆ. ಶ್ರೀಲಂಕಾ ಎ ಎದುರು ಮೊದಲ ಪಂದ್ಯ ಆಡಿರುವ ವೈಬವ್, 12 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 14 ರನ್ ಗಳಿಸಿದ್ದರು. ಎರಡನೇ ಪಂದ್ಯ ಅಫ್ಘಾನಿಸ್ತಾನ್ ಎ ತಂಡದ ಎದುರು ಕಣಕ್ಕಿಳಿದ ವೈಭವ್, 22 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 44 ರನ್ ಬಾರಿಸಿದ್ದರು. ಇದೀಗ ಮೂರನೇ ಪಂದ್ಯದಲ್ಲೂ ಕೇವಲ 21 ರನ್ ಗಳಿಸಿ ಔಟ್ ಆಗಿದ್ದಾರೆ.

ನೋಡಿರಿ

