ಮಳೆಗೆ IND VS AFG ಮ್ಯಾಚ್ ರದ್ದು-ಅಣ್ಣನಂತೆ ಅಬ್ಬರಿಸಿದ ವೈಭವ್ ತಮ್ಮ
ಕೇನ್ ನಿವೃತ್ತಿಗೆ ಕೊಹ್ಲಿ ಕಣ್ಣೀರ ಪತ್ರ

ಕ್ರಿಕೆಟ್ ಲೋಕದಲ್ಲಿ ಇಂಟ್ರೆಸ್ಟಿಂಗ್ ಸುದ್ದಿ ನಿಮಗೆ ಒಂದೇ ಕಡೆ ಸಿಗಲಿದೆ. ಕ್ರಿಕೆಟ್ ಜಗತ್ತಿನ 10 ಇಂಟ್ರೆಸ್ಟಿಂಗ್ ಸ್ಟೋರಿಯನ್ನ ಈಗಲೇ ಓದಿ.
ಇದನ್ನೂ ಓದಿ: ಶ್ರೇಯಸ್ ಗೆ ಮೊದಲ ಸರಣಿಯೇ ರದ್ದು? – ಐರ್ಲೆಂಡ್ ವಿರುದ್ಧ ಆಡಲ್ವಾ ಭಾರತ?
ಇಂದಿನಿಂದ ಮಹಿಳಾ ಟಿ-20 ವಿಶ್ವಕಪ್ ಆರಂಭಗಲಿದ್ದು, ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ 12 ತಂಡಗಳು ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ. ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿಯಾಗಿ ಆಯೋಜಿಸಿರುವ ಈ ಸ್ಪರ್ಧೆಯು ಜೂನ್ ಇಂದಿನಿಂದ ಜುಲೈ 5 ರವರೆಗೆ ನಡೆಯಲಿದ್ದು, 33 ಪಂದ್ಯಗಳು ಇರಲಿದೆ. ಬಹುನಿರೀಕ್ಷಿತ ಭಾರತ- ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ಜೂನ್ 14 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿದೆ
ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ಉದ್ಘಾಟನಾ ಪಂದ್ಯದಲ್ಲೇ ಆತಿಥೇಯ ಇಂಗ್ಲೆಂಡ್ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ 219 ರನ್ ಚಚ್ಚುವ ಮೂಲಕ ಇಂಗ್ಲೆಂಡ್ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಪೇರಿಸಿದ ಹೊಚ್ಚ ಹೊಸ ವಿಶ್ವ ದಾಖಲೆ ಬರೆದಿದೆ. 220 ರನ್‌ಗಳ ದೈತ್ಯ ಗುರಿ ಬೆನ್ನಟ್ಟಿದ ಶ್ರೀಲಂಕಾ ಮಹಿಳಾ ತಂಡ ಇಂಗ್ಲೆಂಡ್‌ನ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಲಂಕಾ ಪಡೆ, ಅಂತಿಮವಾಗಿ ಕೇವಲ 132 ರನ್‌ಗಳಿಗೆ ಆಲೌಟ್ ಆಯಿತು.
ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಮೊದಲ ಪಂದ್ಯಕ್ಕೆ ವಿಘ್ನ ಎದುರಾಗಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಧರ್ಮಶಾಲಾದಲ್ಲಿ ನಿನ್ನೆಯಿಂದಲೇ ಭಾರೀ ಮಳೆಯಾಗುತ್ತಿದ್ದು,ಇಂದು ನಡೆಯಬೇಕಿದ್ದ ಪಂದ್ಯಕ್ಕೂ ಮಳೆ ಬಿಟ್ಟು ಬಿಡದೇ ಕಾಟ ಕೊಟ್ಟಿದೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಕುಟುಂಬದೊಂದಿಗೆ ಖಾಸಗಿ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಆಡಿದ ಮಿನಿ ಕ್ರಿಕೆಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೈದಾನದಿಂದ ದೂರವಿದ್ದರೂ, ಕ್ರಿಕೆಟ್ ಅವರ ಜೀವನದ ಅವಿಭಾಜ್ಯ ಅಂಗ ಎಂಬುದನ್ನು ಸಚಿನ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮಗಳ, ಸೊಸೆ ಜೊತೆ ಸಚಿನ್ ವಿಮಾನದಲ್ಲಿ ಕ್ರಿಕೆಟ್ ಆಡಿ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಗ್‌ನಲ್ಲಿದೆ.
ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಬಗ್ಗೆ ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪತ್ರ ಹಂಚಿಕೊಂಡಿದ್ದು, ಈಗ ಎಲ್ಲರ ಗಮನ ಸೆಳೆದಿದೆ. ವರ್ಷಗಳ ಪಯಣದಲ್ಲಿ ಒಬ್ಬ ಕಠಿಣ ಎದುರಾಳಿಯಿಂದ ಅತ್ಯಾಪ್ತ ಗೆಳೆಯನಾಗಿ ಬದಲಾದ ಕಥೆ ನಮ್ಮದು. ಕೇನ್, ಇಷ್ಟು ವರ್ಷಗಳ ಕಾಲ ನಿನ್ನ ಅದ್ಭುತ ಬ್ಯಾಟಿಂಗ್ ನೋಡುವುದು ಮತ್ತು ನಿನ್ನ ವಿರುದ್ಧ ಸ್ಪರ್ಧಿಸುವುದು ನನಗೆ ಸಿಕ್ಕ ದೊಡ್ಡ ಹೆಮ್ಮೆ. ನೀನು ನಿನ್ನ ಪಾಲಿನ ಕರ್ತವ್ಯವನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದೀಯಾ, ಈಗ ವಿಶ್ರಾಂತಿ ಪಡೆಯುವ ಸಮಯ. ಜೀವನ ಈಗಷ್ಟೇ ಆರಂಭವಾಗಿದೆ ಗೆಳೆಯ, ವೆಲ್ ಡನ್ ಎಂದು ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಸದ್ಯದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ನಿಮಿತ್ತ ರಿಷಭ್ ಪಂತ್‌ಗೆ ರಾಷ್ಟ್ರೀಯ ತಂಡದ ಬಾಗಿಲನ್ನು ಈಗಲೇ ಬಂದ್ ಮಾಡಬೇಡಿ ಎಂದು ಅವರು ಬಿಸಿಸಿಐಗೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಗಳು ಹಾಗೂ ಅವುಗಳನ್ನು ಸುಗಮವಾಗಿ ಆಯೋಜಿಸಲು ಅಗತ್ಯವಾದ ಭದ್ರತಾ ನಿಯಮಾವಳಿಗಳ ಕುರಿತು ಚರ್ಚಿಸಲು KACA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ KSCA ಅಧಿಕಾರಿಗಳು ಗೃಹಸಚಿವ ಪ್ರಿಯಾಂಕ್ ಖರ್ಗೆಯನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ರು.
ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ಆಟಗಾರ ಅವಿನಾಶ್ ವೈದ್ಯಅವರು ಐರ್ಲೆಂಟ್ ಮತ್ತು ಇಂಗ್ಲೆಂಡ್ ದೇಶಗಳ ಎದುರಿನ ಟಿ20 ಸರಣಿಗೆ ಆಡುವ ಭಾರತ ತಂಡದ ಮ್ಯಾನೇಜರ್ ಆಗಿ ಆಯ್ಕೆ ಆಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ತಂಡಗಳ ಆಡಳಿತ ಮಂಡಳಿಗಳಲ್ಲಿ ಕಾರ್ಯನಿರ್ವಹಿಸಿದ್ದರು. 59 ವರ್ಷದ ಅವಿನಾಶ್ ಪ್ರಸ್ತುತ ಅವರು ಕರ್ನಾಟಕ ಕ್ರಿಕೆಟ್ ಸಂಸ್ಧೆಯ ಆಡಳಿತ ಸಮಿತಿಯ ಸದ್ಯಸರೂ ಆಗಿದ್ದಾರೆ.
ವೈಭವ್ ಸೂರ್ಯವಂಶಿ ಅವರ 10 ವರ್ಷದ ತಮ್ಮ ಆಶೀರ್ವಾದ್ ಸೂರ್ಯವಂಶಿ ಸ್ಥಳೀಯ ದೇಶಿ ಕ್ರಿಕೆಟ್ ಪಂದ್ಯವೊಂದರಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಇತ್ತೀಚೆಗೆ ನಡೆದ ದೇಶಿ ಅಭ್ಯಾಸ ಪಂದ್ಯವೊಂದರಲ್ಲಿ ಕೇವಲ 87 ಎಸೆತಗಳಲ್ಲಿ 103 ರನ್ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 20 ಬೌಂಡರಿ ಹಾಗೂ 1 ಅಮೋಘ ಸಿಕ್ಸರ್ ಒಳಗೊಂಡಿದ್ದು, 118.39 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.
ವೈಭವ್ ಸೂರ್ಯವಂಶಿ ಅವರನ್ನು ದಕ್ಷಿಣ ಆಫ್ರಿಕಾ ಮಾಜಿ ವೇಗಿ ಡೇಲ್ ಸ್ಟೇನ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರಿಗಿಂತಲೂ ವೈಭವ್ ಸೂರ್ಯವಂಶಿ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆಂದು ಆಫ್ರಿಕಾ ದಿಗ್ಗಜ ವೇಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟಿಗ ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಮತ್ತೆ ಒಂದಾಗಿದ್ದಾರೆ ಅನ್ನೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವರಲ್ ಆಗುತ್ತಿದೆ. ಡಿವೋರ್ಸ್ ಬಳಿಕ ಮತ್ತೆ ಒಂದಾಗಿದ್ದಾರೆಯೇ ಎಂಬ ಪ್ರಶ್ನೆಯನ್ನು ಅಭಿಮಾನಿಗಳಲ್ಲಿ ಹುಟ್ಟುಹಾಕಿದೆ. ಆದರೆ, ಈ ಕುರಿತು ಚಹಲ್ ಅಥವಾ ಧನಶ್ರೀ ಅವರಿಂದ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಈ ವಿಡಿಯೋ ಪರಿಶೀಲನೆ ನಡೆಸಿದಾಗ ಇದು ನಿಜವಾದ ವಿಡಿಯೋ ಅಲ್ಲ, ಎಐ ವಿಡಿಯೋ ಅನ್ನೋದು ಗೊತ್ತಾಗಿದೆ.

ನೋಡಿರಿ

