ಗಿಲ್ ಗೆ ODI ವಿಶ್ವಕಪ್ ಸವಾಲ್ – ಟ್ರೋಫಿ ಗೆದ್ರಷ್ಟೇ ಗಂಭೀರ್ ಸೇಫ್?
RO-KO ಆಡೋದು ಎಷ್ಟು ಮುಖ್ಯ?

ಅಫ್ಘಾನಿಸ್ತಾನ ವಿರುದ್ಧ ಮೊದಲ ಏಕದಿನ ಪಂದ್ಯ ಮುಗಿಸಿರೋ ಭಾರತ ಎರಡನೇ ಪಂದ್ಯಕ್ಕೆ ಸಿದ್ಧವಾಗ್ತಿದೆ. ಈ ಸರಣಿ ಗೆಲುವಿನೊಂದಿಗೆ 2027ರ ಏಕದಿನ ವಿಶ್ವಕಪ್ ಗೆಲುವಿನ ಟಾರ್ಗೆಟ್ನಲ್ಲಿ ಮುನ್ನುಗ್ಗಬೇಕಿದೆ. ಆದ್ರೆ ಕೋಚ್ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ಶುಭ್ಮನ್ ಗಿಲ್ಗೆ ಈ ಜರ್ನಿ ಅಷ್ಟು ಸುಲಭ ಇಲ್ಲ.
ಇದನ್ನೂ ಓದಿ : TESTಗೆ ಮಾತ್ರ ಮೊಹಮ್ಮದ್ ಸಿರಾಜ್ ಸೀಮಿತ – ಬುಮ್ರಾ ಆಡದಿದ್ರಷ್ಟೇ T-20I & ODI
2027ರ ಏಕದಿನ ವಿಶ್ವಕಪ್ಗೆ ದಿನಾಂಕ ಘೋಷಣೆ ಆಗಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯದಲ್ಲಿ 2027ರ ಅಕ್ಟೋಬರ್ 4 ರಿಂದ ಟೂರ್ನಿ ಆರಂಭ ಆಗಲಿದ್ದು ನವೆಂಬರ್ 21 ರಂದು ಫೈನಲ್ ಫೈಟ್ ನಡೆಯಲಿದೆ. ಕಳೆದ ಆವೃತ್ತಿಯಲ್ಲಿ ಜಸ್ಟ್ ಮಿಸ್ ಆಗಿರೋ ಟ್ರೋಫಿಯನ್ನ ಈ ಸಲ ಶತಾಯ ಗತಾಯ ಗೆಲ್ಲಲೇಬೇಕು. ಹೊಸ ಕ್ಯಾಪ್ಟನ್, ಹೊಸ ಕೋಚ್ ಜೊತೆ ನುಗ್ಗುತ್ತಿರೋ ಭಾರತಕ್ಕೆ ವಿಶ್ವಕಪ್ ಗೆಲ್ಲೋಕೆ ಅಡ್ವಾಂಟೇಜಸ್ & ಡಿಸ್ ಅಡ್ವಾಂಟೇಜಸ್ ಎರಡೂ ಇದೆ.
ವಿಶ್ವಕಪ್ ಗೆಲ್ಲುತ್ತಾ ಭಾರತ?
ಬ್ಯಾಕ್ ಟು ಬ್ಯಾಕ್ ಟಿ-20 ವಿಶ್ವಕಪ್ ಗಳನ್ನ ಗೆದ್ದಿರೋ ತಂಡ
2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರೋದ್ರಿಂದ ಕಾನ್ಫಿಡೆನ್ಸ್
ಬ್ಯಾಟಿಂಗ್ ಲೈನಪ್ ಮತ್ತು ಬೌಲಿಂಗ್ ಲೈನಪ್ ಕೂಡ ತುಂಬಾ ಸ್ಟ್ರಾಂಗ್
ನಾಯಕ ಶುಭ್ ಮನ್ ಗಿಲ್ ಗೆ ಮೊದಲ ಐಸಿಸಿ ಟೂರ್ನಿಯಾಗಲಿದೆ
ಕೋಚ್ ಗೌತಮ್ ಗಂಭೀರ್ ಪಾಲಿಗೂ ಏಕದಿನ ಮಾದರಿ ಸವಾಲು
ಟಿ-20 ಫಾರ್ಮೆಟ್ ಗೆದ್ರೂ ಟೆಸ್ಟ್ ಫಾರ್ಮೆಟ್ ನಲ್ಲಿ ಭಾರತ ಫೇಲ್
ಸೀನಿಯರ್ಸ್ ಮತ್ತು ಜೂನಿಯರ್ಸ್ ಜೊತೆ ಹೊಂದಾಣಿಕೆ
ವಿಶ್ವಕ್ರಿಕೆಟ್ ನಲ್ಲಿ ಎಲ್ಲಾ ತಂಡಗಳ ಪಾಲಿಗೆ ಪ್ರತಿಷ್ಠೆಯಾಗಿರೋ ಏಕದಿನ ವಿಶ್ವಕಪ್ ಗೆಲ್ಲೋಕೆ ಎಲ್ರೂ ಕಾಯ್ತಾ ಇರ್ತಾರೆ. ಈ ಲಿಸ್ಟ್ ನಲ್ಲಿ ಭಾರತ ಬಲಿಷ್ಠ ತಂಡವಾಗಿದೆ. ವೈಟ್ ಬಾಲ್ ಕ್ರಿಕೆಟ್ ನಲ್ಲಿ ಡಾಮಿನೇಟ್ ಮಾಡ್ತಿರೋ ಭಾರತ ಏಕದಿನ ವಿಶ್ವಕಪ್ ಗೆದ್ದು ಮತ್ತೊಮ್ಮೆ ಕ್ರಿಕೆಟ್ ಲೋಕದ ದೊರೆಯಾಗ್ಬೇಕಿದೆ.

ನೋಡಿರಿ

