PAK ಸದ್ದಡಗಿಸಲು IND ಸಿದ್ಧ – T-20 ವಿಶ್ವಕಪ್ ಬೇಟೆಗಿಳಿದ ಸಿಂಹಿಣಿಯರು!
SUPER SUNDAY ಸಕ್ಸಸ್ ಯಾರಿಗೆ?

PAK ಸದ್ದಡಗಿಸಲು IND ಸಿದ್ಧ – T-20 ವಿಶ್ವಕಪ್ ಬೇಟೆಗಿಳಿದ ಸಿಂಹಿಣಿಯರು!SUPER SUNDAY ಸಕ್ಸಸ್ ಯಾರಿಗೆ?

ವಿಶ್ವಕ್ರಿಕೆಟ್​ನಲ್ಲಿ ಮಹಿಳಾ ಟಿ-20 ವಿಶ್ವಕಪ್ ಫೀವರ್ ಸ್ಟಾರ್ಸ್ ಆಗಿದೆ. ಜೂನ್ 12ರಿಂದ ಟೂರ್ನಿ ಆರಂಭವಾಗಿದೆ. ಇಂಗ್ಲೆಂಡ್​ನಲ್ಲಿ ನಡೆಯುತ್ತಿರೋ ಮಹಿಳಾಮಣಿಗಳ ಕಾಳಗದಲ್ಲಿ ಭಾರತ ಚೊಚ್ಚಲ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ. ಹಾಗೇ ಇವತ್ತು ಬದ್ಧವೈರಿ ಪಾಕಿಸ್ತಾನ ವಿರುದ್ಧ ಅಖಾಡಕ್ಕಿಳಿಯೋ ಮೂಲಕ ಅಭಿಯಾನ ಆರಂಭಿಸಲಿದೆ. ಪಾಕ್ ವಿರುದ್ಧ ಡಾಮಿನೇಷನ್ ಮಾಡಿರೋ ಭಾರತ ಈ ಪಂದ್ಯವನ್ನೂ ಗೆದ್ದು ಶುಭಾರಂಭದ ಪ್ಲ್ಯಾನ್​ನಲ್ಲಿದೆ.

ಇದನ್ನೂ ಓದಿ : ಒಲಿಂಪಿಕ್ಸ್‌ಗೆ ಕೊಹ್ಲಿ-ವೈಭವ್ ಓಪನರ್ಸ್? ಸೋತರು ಮನಗೆದ್ದ ಟೀಂ IND ರಿಚಾ!

ಇಂಗ್ಲೆಂಡ್​ ಹೋಸ್ಟ್ ಮಾಡ್ತಿರೋ ಟಿ-20 ಮಹಿಳಾ ವಿಶ್ವಕಪ್​ನ 10ನೇ ಆವೃತ್ತಿ ಇದು. ಟೂರ್ನಿಯ ಹೈವೋಲ್ಟೇಜ್ ಪಂದ್ಯವಾಗಿರೋ ಭಾರತ & ಪಾಕಿಸ್ತಾನ ಬ್ಯಾಟಲ್​ ಇವತ್ತು ನಡೆಯಲಿದೆ. ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಸೂಪರ್ ಸಂಡೇಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯೊಂದಿಗೆ ಟೂರ್ನಿಯಲ್ಲಿ ಮೊದಲ ಪಂದ್ಯ ಆಡಲಿವೆ. ಪಾಕಿಸ್ತಾನ, ನೆದರ್‌ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ತಂಡಗಳ ಜೊತೆಗೆ ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಚೊಚ್ಚಲ ಟ್ರೋಫಿಗಾಗಿ ಉಭಯ ತಂಡಗಳ ಫೈಟ್!

ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಅಂತಾ ಬಂದಾಗ ಒಮ್ಮೆಯೂ ಕೂಡ ದ್ವಿಪಕ್ಷೀಯ ಸರಣಿಗಳನ್ನ ಆಡಿಲ್ಲ. ಆದ್ರೆ ಏಷ್ಯಾಕಪ್, ಏಷ್ಯನ್ ಗೇಮ್ಸ್, ಐಸಿಸಿ ವಿಶ್ವಕಪ್​ಗಳಲ್ಲಿ ಮಾತ್ರವೇ ಮುಖಾಮುಖಿ ಆಗ್ತಿರುವಂಥದ್ದು.   ಇಲ್ಲಿಯವರೆಗೆ, ಈ ಎರಡೂ ತಂಡಗಳು ಒಟ್ಟಾರೆ 16 ಪಂದ್ಯಗಳನ್ನು ಆಡಿದ್ದು, ಇವುಗಳಲ್ಲಿ ಭಾರತ 13 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 3 ಪಂದ್ಯಗಳನ್ನಷ್ಟೇ ಗೆದ್ದಿದೆ. ಸೋ ಇಲ್ಲೇ ಗೊತ್ತಾಗ್ತಿದೆ ಭಾರತದ ಪಾರುಪತ್ಯ ಎಷ್ಟರ ಮಟ್ಟಿಗೆ ಇದೆ ಅನ್ನೋದು. ಇನ್ನು ಟಿ-20 ವಿಶ್ವಕಪ್​ನ ಜರ್ನಿ ನೋಡೋದಾದ್ರೆ ಉಭಯ ತಂಡಗಳ ನಡುವೆ 8 ಪಂದ್ಯಗಳು ನಡೆದಿವೆ. ಈ ಪೈಕಿ 6 ಪಂದ್ಯಗಳಲ್ಲಿ ಭಾರತಪಾಕಿಸ್ತಾನವನ್ನು ಸೋಲಿಸಿದೆ. ಪಾಕಿಸ್ತಾನ ಕೇವಲ ಎರಡು ಪಂದ್ಯಗಳನ್ನು ಗೆದ್ದಿದೆ. ಈಗ, ಈ ಎರಡೂ ತಂಡಗಳು ಒಂಬತ್ತನೇ ಬಾರಿಗೆ ಮುಖಾಮುಖಿಯಾಗಲಿವೆ. ಕೊನೆಯ ಬಾರಿಗೆ ಎರಡೂ ತಂಡಗಳು 2024 ರ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು. ಹೀಗಾಗಿ ಈ ಪಂದ್ಯವನ್ನೂ ಭಾರತವೇ ಗೆಲ್ಲುವಂಥ ಫೇವರೆಟ್ ಟೀಂ ಆಗಿದೆ.

ಇನ್ನು ಟಿ-20 ವಿಶ್ವಕಪ್ ಇತಿಹಾಸವನ್ನ ಕೆದಕಿದ್ರೆ ಎರಡೂ ತಂಡಗಳೂ ಒಮ್ಮೆಯೂ ಚಾಂಪಿಯನ್ ಪಟ್ಟಕ್ಕೇರಿಲ್ಲ.  ಭಾರತ ಸಾಕಷ್ಟು ಸಲ ಬಾರಿ ನಾಕೌಟ್ ಸುತ್ತಿಗೆ ತಲುಪಿದ್ರೂ ಪಾಕಿಸ್ತಾನ ಗುಂಪು ಹಂತವನ್ನು ಮೀರಿ ಮುನ್ನಡೆಯಲು ಹೆಣಗಾಡಿದೆ. ಭಾರತ ತಂಡವು 2020 ರಲ್ಲಿ ಪ್ರಶಸ್ತಿಗೆ ಹತ್ತಿರವಾಗಿದ್ದು, ರನ್ನರ್ ಅಪ್ ಸ್ಥಾನ ಪಡೆದಿತ್ತು. ಕಳೆದ ವಿಶ್ವಕಪ್‌ನಲ್ಲಿ ಎರಡೂ ತಂಡಗಳ ಪ್ರಯಾಣ ಗುಂಪು ಹಂತದಲ್ಲಿಯೇ ಕೊನೆಗೊಂಡಿತು. ಹೀಗಾಗಿ ಈ ಆವೃತ್ತಿಯಲ್ಲಾದ್ರೂ ಕಪ್ ಗೆಲ್ಲಬೇಕು ಅನ್ನೋ ಟಾರ್ಗೆಟ್​ನಲ್ಲಿ ಕಣಕ್ಕಿಳೀತಿದ್ದಾರೆ. ಇನ್ನು ಟೂರ್ನಿಯಲ್ಲಿ ಟೋಟಲ್ ಆಗಿ 12 ತಂಡಗಳಿದ್ದು ತಲಾ 6 ತಂಡಗಳನ್ನ ಒಂದೊಂದು ಗುಂಪುಗಳಾಗಿ ಡಿವೈಡ್ ಮಾಡಲಾಗಿದೆ.

ಭಾರತದ ಪಂದ್ಯಗಳು!

ದಿನಾಂಕ                             ಎದುರಾಳಿ                    ಸ್ಥಳ

ಜೂನ್ 14                           ಪಾಕಿಸ್ತಾನ             ಎಡ್ಜ್‌ ಬಾಸ್ಟನ್ (ಬರ್ಮಿಂಗ್ಹ್ಯಾಮ್) –

ಜೂನ್ 17                         ನೆದರ್‌ಲ್ಯಾಂಡ್ಸ್             ಹೆಡಿಂಗ್ಲಿ (ಲೀಡ್ಸ್) –

ಜೂನ್ 21                       ದಕ್ಷಿಣ ಆಫ್ರಿಕಾ              ಓಲ್ಡ್ ಟ್ರಾಫರ್ಡ್ (ಮ್ಯಾಂಚೆಸ್ಟರ್) –

ಜೂನ್ 25                         ಬಾಂಗ್ಲಾದೇಶ              ಓಲ್ಡ್ ಟ್ರಾಫರ್ಡ್ (ಮ್ಯಾಂಚೆಸ್ಟರ್) –

ಜೂನ್ 28                       ಆಸ್ಟ್ರೇಲಿಯಾ                  ಲಾರ್ಡ್ಸ್ (ಲಂಡನ್)

Shantha Kumari

Leave a Reply

Your email address will not be published. Required fields are marked *