ಅಭಿಷೇಕ್ Vs ಸಂಜು Vs ಕಿಶನ್ – ವೈಭವ್ ಸೂರ್ಯವಂಶಿಗಾಗಿ ಯಾರಿಗೆ ಬೆಂಚ್?
T-20Iನಲ್ಲಿ BCCI ಹೊಸ ಫಾರ್ಮುಲಾ!

ವೈಭವ್ ಸೂರ್ಯವಂಶಿ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿದ್ದು ಇನ್ನೇನಿದ್ರೂ ಡೆಬ್ಯೂ ಮಾಡೋದಷ್ಟೇ ಬಾಕಿ. ಐಪಿಎಲ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಬಾಸ್ ಬೇಬಿ ಭಾರತದ ಪರವು ಅಂಥದ್ದೇ ಪ್ರದರ್ಶನ ನೀಡ್ತಾರಾ ಅಂತಾ ಎಲ್ರೂ ಕಾಯ್ತಿದ್ದಾರೆ. ಆದರೆ ಈಗ ಇರೋ ಪ್ರಶ್ನೆ ಅಂದ್ರೆ ಸೂರ್ಯವಂಶಿಗೆ ಸ್ಲಾಟ್ ಕೊಡೋಕೆ ಯಾರು ಬೆಂಚ್ ಕಾಯ್ತಾರೆ ಅನ್ನೋದು. ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಈಗ ವೈಭವ್ ಸೂರ್ಯವಂಶಿ.
ಇದನ್ನೂ ಓದಿ : RCB ಪರ ಆಡಲ್ವಾ AUS ಪ್ಲೇಯರ್ಸ್? – PAK, BAN ಸರಣಿ ಸೋಲಿಗೆ ಶಿಕ್ಷೆ?
15 ನೇ ವಯಸ್ಸಿನಲ್ಲಿ ವೈಭವ್ ಸೂರ್ಯವಂಶಿ ಭಾರತಕ್ಕಾಗಿ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಜೂನ್ 6 ರಂದು ಬಿಸಿಸಿಐ ಐರ್ಲೆಂಡ್, ಇಂಗ್ಲೆಂಡ್ ಮತ್ತು ಏಷ್ಯನ್ ಕ್ರೀಡಾಕೂಟದ T20I ಪ್ರವಾಸಗಳಿಗೆ ಅನೌನ್ಸ್ ಆದ ತಂಡದಲ್ಲಿ ವೈಭವ್ ಹೆಸರೂ ಕೂಡ ಇದೆ. ಐಪಿಎಲ್ ಮತ್ತು U-19 ವಿಶ್ವಕಪ್‌ನಲ್ಲಿ ಸುನಾಮಿ ಎಬ್ಬಿಸಿರೋ ವೈಭವ್ ಈಗ ಸೀನಿಯರ್ಸ್ ಜೊತೆ ಅಖಾಡಕ್ಕಿಳಿಯೋಕೆ ಸಿದ್ಧರಾಗಿದ್ದಾರೆ. ಆದ್ರೆ ಇಲ್ಲಿ ಇರೋ ಪ್ರಶ್ನೆ ಅಂದ್ರೆ ವೈಭವ್ ಸೂರ್ಯವಂಶಿ ಅಖಾಡಕ್ಕಿಳಿಯರು ಯಾರು ದಾರಿ ಬಿಡ್ತಾರೆ ಅನ್ನೋದು. ಅದೂ ಅಲ್ದೇ ಹಂಡ್ರೆಡ್ ಪರ್ಸೆಂಟ್ ವೈಭವ್ರನ್ನ ಓಪನರ್ ಆಗಿಯೇ ಆಡಿಸ್ತಾರೆ. ಅದ್ರಲ್ಲಿ ಡೌಟೇ ಇಲ್ಲ. ಆದ್ರೆ ಟಾಪ್-3ನಲ್ಲಿ ಯಾರು ಸ್ಲಾಟ್ ಬಿಟ್ಟುಕೊಡ್ತಾರೆ ಅನ್ನೋದೇ ಈಗಿರೋ ಪ್ರಶ್ನೆ. ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಈ ಮೂವರ ಮೇಲೆ ತೂಗುಗತ್ತಿ ನೇತಾಡುತ್ತಿದೆ.
ನಂಬರ್ 1
ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ!
ಟಿ-20 ಫಾರ್ಮೆಟ್ನಲ್ಲಿ ವೈಭವ್ ಸೂರ್ಯವಂಶಿಗೂ ಮೊದಲೂ ಸ್ಫೋಟಕ ಹಿಟ್ಟರ್ ಅಂತಾ ಕರೆಸಿಕೊಂಡವರು ಅಭಿಷೇಕ್ ಶರ್ಮಾ. 2024ರಲ್ಲಿ ಟಿ-20 ವಿಶ್ವಕಪ್ ಬಳಿಕ ಭಾರತದ ಪರ ಅಖಾಡಕ್ಕಿಳಿದ ಅಭಿಷೇಕ್ ಓಪನರ್ ಆಗಿ ಧೂಳೆಬ್ಬಿಸ್ತಿದ್ದಾರೆ. ಅವ್ರ ಅಗ್ರೆಸ್ಸಿವ್ ಬ್ಯಾಟಿಂಗ್ ಇಂಟೆಂಟ್ ಕ್ರಿಕೆಟ್ ಜಗತ್ತಿನಲ್ಲಿ ಸದ್ದು ಮಾಡ್ತಾನೇ ಇರುತ್ತೆ. ಏಷ್ಯಾಕಪ್ ಸೇರಿದಂತೆ ಬಿಗ್ ಈವೆಂಟ್ಗಳಲ್ಲಿ ಭಾರತದ ಪರ ಮ್ಯಾಚ್ ವಿನ್ನರ್ ಆಗಿದ್ದಾರೆ. ಹೀಗಾಗಿ ಅಭಿಷೇಕ್ರನ್ನ ತಂಡದಿಂದ ಹೊರಗಿರೋದು ಕಷ್ಟವಾಗುತ್ತೆ.
ನಂಬರ್ 2
ಟಿ-20 ವಿಶ್ವಕಪ್ ಗೆಲುವಿನ ಹೀರೋ ಸಂಜು ಸ್ಯಾಮ್ಸನ್!
ಇನ್ನು ಸಂಜು ಸ್ಯಾಮ್ಸನ್ ಕೂಡ ಭಾರತ ಟಿ-20ಐ ತಂಡದ ಒನ್ ಆಫ್ ದಿ ಬೆಸ್ಟ್ ಬ್ಯಾಟರ್. ಌಂಡ್ ವಿಕೆಟ್ ಕೀಪರ್ ಬ್ಯಾಟರ್. ಕಳೆದ 2 ವರ್ಷಗಳಿಂದ ತಂಡದಲ್ಲಿ ಸಾಕಷ್ಟು ಅಪ್ಸ್ ಌಂಡ್ ಡೌನ್ಸ್ ಕಂಡಿದ್ರೂ ಸ್ಟೇಬಲ್ ಆಗಿ ನಿಂತಿರೋ ಸಂಜು ಅವಕಾಶಗಳನ್ನ ತಾವೇ ಹುಡುಕಿಕೊಳ್ತಿದ್ದಾರೆ. ಕಳೆದ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿ ಅಷ್ಟೇನು ಚೆನ್ನಾಗಿ ಆಗಿರಲಿಲ್ಲ. ಆ ನಂತ್ರ 2026ರ ಟಿ-20 ವಿಶ್ವಕಪ್‌ನಲ್ಲಿ ಕೆಲ ಪಂದ್ಯಗಳಲ್ಲಿ ಬೆಂಚ್ ಕಾದಿದ್ರು. ಆದ್ರೆ ಸೂಪರ್ 8 ಮತ್ತು ನಂತರದಲ್ಲಿ ಮ್ಯಾಚ್ ವಿನ್ನರ್ ಆಗಿದ್ದೇ ಸಂಜು. ಹ್ಯಾಟ್ರಿಕ್ ಅರ್ಧಶತಕದ ಮೂಲಕ ಭಾರತ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ರು. ಅವ್ರಿಗಿರೋ ಎಕ್ಪೀರಿಯನ್ಸ್ ಗೆ ತಂಡದಲ್ಲಿ ಅವಕಾಶ ನೀಡೋದು ಕೂಡ ಅಷ್ಟೇ ಮುಖ್ಯವಾಗುತ್ತೆ.
ನಂಬರ್ 3
ಕಿಚ್ಚಿನ ಜೊತೆಗೇ ಕಂ ಬ್ಯಾಕ್ ಮಾಡಿರುವ ಇಶಾನ್ ಕಿಶನ್
ಇನ್ನು ಪಾಕೆಟ್ ಡೈನಮೋ ಅಂತಾನೇ ಕರೆಸಿಕೊಳ್ಳೋ ಇಶಾನ್ ಕಿಶನ್ ಕೂಡ ಇತ್ತೀಚಿಗೆ ಟಿ-20ಐನಲ್ಲಿ ತನ್ನದೇ ಆದ ಹೆಜ್ಜೆಗುರುತು ಮೂಡಿಸಿದ್ದಾರೆ. 2 ವರ್ಷಗಳಿಂದ ಭಾರತ ತಂಡದಿಂದ ಹೊರಗಿದ್ದ ಕಿಶನ್ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿ ಮೂಲಕ ಕಂ ಬ್ಯಾಕ್ ಮಾಡಿದ್ರು. ಸರಣಿಯಲ್ಲಿ ಅದ್ಭುತ ಪ್ರದರ್ಶನ ಕೂಡ ನೀಡಿದ್ರು. ಹಾಗೇ ಟಿ-20 ವಿಶ್ವಕಪ್ನಲ್ಲೂ ಸಾಲಿಡ್ ಪ್ರದರ್ಶನ ನೀಡಿ ಭಾರತ ಕಪ್ ಗೆಲ್ಲುವಲ್ಲಿ ಇವ್ರ ರೋಲ್ ಕೂಡ ತುಂಬಾ ದೊಡ್ಡದಿತ್ತು. ಇನ್ನು ಈ ಬಾರಿಯ ಐಪಿಎಲ್ನಲ್ಲೂ ಒಳ್ಳೆ ಪ್ರದರ್ಶನ ನೀಡಿದ್ದಾರೆ. ವಿಕೆಟ್ ಕೀಪರ್ ಕಂ ಬ್ಯಾಟರ್ ಆಗಿರೋ ಇಶಾನ್ ಕಿಶನ್ ಪ್ರಸೆನ್ಸ್ ಕೂಡ ತಂಡಕ್ಕೆ ಒಳ್ಳೇದೇ.
ಹೀಗೆ ಈ ಮೂವರಲ್ಲಿ ಒಬ್ಬರು ಸ್ಲಾಟ್ ಕೊಡ್ಬೇಕಾಗುತ್ತೆ. ಯಾಕಂದ್ರೆ ನಾಲ್ಕನೇ ಸ್ಲಾಟ್ ಶ್ರೇಯಸ್ ಅಯ್ಯರ್ಗೆ ಫಿಕ್ಸ್ ಇನ್ನು ವೈಸ್ ಕ್ಯಾಪ್ಟನ್ ತಿಲಕ್ ವರ್ಮಾ 5ನೇ ಕ್ರಮಾಂಕದಲ್ಲಿ ಬರ್ಬೋದು. ಸೋ ಅಲ್ಲಿಗೆ ಟಾಪ್5 ಫಿಕ್ಸ್ ಆದಂತೆ ಇದೆ. ಹೀಗಾಗಿ ಓಪನಿಂಗ್ ಪೇರ್ ಯಾರನ್ನ ಚೇಂಜ್ ಮಾಡ್ತಾರೆ, ನಂಬರ್ 3ನಲ್ಲಿ ಯಾರನ್ನ ಆಡಿಸ್ತಾರೆ ಅಥವಾ ವೈಭವ್ ಸೂರ್ಯವಂಶಿಗೆ ಒಂದಷ್ಟು ಪಂದ್ಯಗಳಲ್ಲಿ ಬೆಂಚ್ ಕಾಯಿಸ್ತಾರಾ ಹೀಗೆ ಸಾಕಷ್ಟು ಪ್ರಶ್ನೆಗಳಿವೆ.

ನೋಡಿರಿ

