ಟಿ20 ಮಹಿಳಾ ವಿಶ್ವಕಪ್‌ನಲ್ಲಿಂದು ಭಾರತ Vs ಪಾಕ್ ಫೈಟ್ – ಗೆಲ್ಲೋಫೇವರಿಟ್ ಟೀಂ ಯಾವುದು ಗೊತ್ತಾ?

ಟಿ20 ಮಹಿಳಾ ವಿಶ್ವಕಪ್‌ನಲ್ಲಿಂದು ಭಾರತ Vs ಪಾಕ್ ಫೈಟ್ – ಗೆಲ್ಲೋಫೇವರಿಟ್ ಟೀಂ ಯಾವುದು ಗೊತ್ತಾ?

ಮಹಿಳಾ ಟಿ20I ವಿಶ್ವಕಪ್ ಶುರುವಾಗಿದ್ದು, ಇಂದು ಹೈವೋಲ್ಟೇಜ್ ಕದನ ನಡೆಯಲಿದೆ.  ಭಾರತ ಹಾಗೂ ಪಾಕಿಸ್ತಾನದ ನಡುವೆ  ಇಂದು ( ಜೂನ್ 14) ಬಿಗ್ ಫೈಟ್ ನಡೆಯಲಿದೆ. ಇದು ಸಂಜೆ 7 ಗಂಟೆ ಈ ಪಂದ್ಯ ನಡೆಯಲಿದ್ದು, ಉಭಯ ತಂಡಗಳು ಸಕಲ ತಯಾರಿ ಮಾಡಿಕೊಂಡಿವೆ. ಈ ಲೀಗ್​ನಲ್ಲಿ ಉಭಯ ತಂಡಗಳಿಗೆ ಇದು ಮೊದಲ ಪಂದ್ಯವಾಗಿದೆ. ಹೀಗಾಗಿ ಎರಡೂ ತಂಡಗಳು ಗೆಲುವಿನೊಂದಿಗೆ ಪಂದ್ಯಾವಳಿಯನ್ನು ಆರಂಭಿಸೋಕೆ ಮೈದಾನದಲ್ಲಿ ಸೆಣಸಾಟ ನಡೆಸಲಿವೆ. ಪಾಕಿಸ್ತಾನ ತಂಡ ವೀಕ್ ಆಗಿದ್ದು,  ಈ ಪಂದ್ಯದಲ್ಲಿ ಭಾರತವೇ ಗೆಲುವಿನ ಫೇವರೇಟ್ ಎನಿಸಿಕೊಂಡಿದೆ.

ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳ ಮುಖಾಮುಖಿಯಲ್ಲಿ ಭಾರತ ತಂಡ ಪ್ರಾಬಲ್ಯ ಸಾಧಿಸಿದೆ. ಆದಾಗ್ಯೂ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಎಂದಿಗೂ ಟಿ20 ಸರಣಿಯನ್ನು ಆಡಿಲ್ಲ. ಆದರೆ ಈ ಎರಡೂ ತಂಡಗಳು ಐಸಿಸಿ ಟೂರ್ನಿಗಳು, ಏಷ್ಯಾಕಪ್ ಮತ್ತು ಏಷ್ಯನ್ ಗೇಮ್ಸ್ ಅಥವಾ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಇಲ್ಲಿಯವರೆಗೆ, ಈ ಎರಡೂ ತಂಡಗಳು 16 ಪಂದ್ಯಗಳನ್ನು ಆಡಿದ್ದು, ಇವುಗಳಲ್ಲಿ ಭಾರತ 13 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 3 ಪಂದ್ಯಗಳನ್ನು ಗೆದ್ದಿದೆ.

 ಇಲ್ಲಿಯವರೆಗೆ, ಟಿ20 ವಿಶ್ವಕಪ್‌ನಲ್ಲಿ ಈ ಎರಡೂ ತಂಡಗಳ ನಡುವೆ 8 ಪಂದ್ಯಗಳು ನಡೆದಿವೆ. ಈ ಪೈಕಿ 6 ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ, ಪಾಕಿಸ್ತಾನ ಕೇವಲ ಎರಡು ಪಂದ್ಯಗಳನ್ನು ಗೆದ್ದಿದೆ. ಈಗ, ಈ ಎರಡೂ ತಂಡಗಳು ಒಂಬತ್ತನೇ ಬಾರಿಗೆ ಮುಖಾಮುಖಿಯಾಗಲಿವೆ. ಕೊನೆಯ ಬಾರಿಗೆ ಎರಡೂ ತಂಡಗಳು 2024 ರ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು.

ಭಾರತ ಮಹಿಳಾ ಟಿ20 ವಿಶ್ವಕಪ್ ತಂಡ:

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ನಂದನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್.

Kishor KV

Leave a Reply

Your email address will not be published. Required fields are marked *