ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ತಮ್ಮನ ಆರ್ಭಟ – ಅಣ್ಣನಂತೆ ಸೆಂಚುರಿ ಸಿಡಿಸಿದ ತಮ್ಮ ಆಶೀರ್ವಾದ

ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ತಮ್ಮನ ಆರ್ಭಟ – ಅಣ್ಣನಂತೆ ಸೆಂಚುರಿ ಸಿಡಿಸಿದ ತಮ್ಮ ಆಶೀರ್ವಾದ

ಒಂದ್ಕಡೆ ಅಣ್ಣ ವೈಭವ್ ಸೂರ್ಯವಂಶಿ ಕ್ರಿಕೆಟ್‌ನಲ್ಲಿ ಮಿಂಚು ಹರಿಸುತ್ತಿದ್ದರೇ, ಮತ್ತೊಂದ್ಕಡೆ ತಮ್ಮ  10 ವರ್ಷದ ಆಶೀರ್ವಾದ ಸೂರ್ಯವಂಶಿ ಸಮಷ್ಟಿಪುರದಲ್ಲಿ ನಡೆದ ಸ್ಥಳೀಯ ಅಭ್ಯಾಸ ಪಂದ್ಯದಲ್ಲಿ ಕ್ರಿಕೆಟ್ ಅಕಾಡೆಮಿಯಲ್ಲಿ ಮಿಂಚು ಹರಿಸಿದ್ದಾರೆ.

ಇದನ್ನೂ ಓದಿ: ಕೊಹ್ಲಿ SLOTನಲ್ಲಿ ಇಶಾನ್ ಕಿಶನ್ – ವಿಕೆಟ್ ಕೀಪಿಂಗ್ KLಗೆ ಸಿಗಲ್ವಾ?

ಅಣ್ಣ ವೈಭವ್ ಸೂರ್ಯವಂಶಿ ಎಡಗೈ ಬ್ಯಾಟಿಂಗ್‌ನಿಂದ ಗಮನ ಸೆಳೆದರೆ, ತಮ್ಮ ಆಶೀರ್ವಾದ ಬಲಗೈ ಬ್ಯಾಟಿಂಗ್‌ನಿಂದ ಎಲ್ಲರ ಚಿತ್ತ ಕದ್ದಿದ್ದಾರೆ. ಸಮಷ್ಟಿಪುರದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಅಣ್ಣ ವೈಭವ್ ರೀತಿ ಬ್ಯಾಟ್ ಮಾಡಿದ ಆಶೀರ್ವಾದ್ ಅಬ್ಬರಿಸಿದ್ದಾರೆ. ತಾಜ್‌ಪುರ ಪರ ಆಡುವಾಗ 87 ಎಸೆತಗಳಲ್ಲಿ 103 ರನ್‌ಗಳ ಅದ್ಭುತ ಶತಕ ಗಳಿಸುವ ಮೂಲಕ ಸುದ್ದಿಯಾಗಿದ್ದಾರೆ. ಇವರ ಕ್ಲಾಸಿಕ್ ಆಟದಲ್ಲಿ 20 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದಾರೆ.

ಇದನ್ನೂ ಓದಿ: ಈ ವಸ್ತು ಟಾಯ್ಲೆಟ್‌ಗಿಂತಲೂ ಕೊಳಕು! – ಅಡುಗೆ ಮನೆಯಲ್ಲೇ ಇದೆ ಬ್ಯಾಕ್ಟೀರಿಯಾದ ತಾಣ!
ಆಶೀರ್ವಾದ್ ಸೂರ್ಯವಂಶಿ ಅಣ್ಣನ ರೀತಿ ಸ್ಫೋಟಕ ಆಟವಾಡದೇ ಇದ್ದರೂ, 120 ಸ್ಟ್ರೈಕ್ ರೇಟ್ ನಲ್ಲಿ ರನ್‌ ಕಲೆ ಹಾಕಿದ್ದಾರೆ. ವೈಭವ್ ಅವರ ಅಣ್ಣ ಉಜ್ವಲ್ ಸೂರ್ಯವಂಶಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಆಶೀರ್ವಾದ್ ಅವರ ಅದ್ಭುತ ಇನ್ನಿಂಗ್ಸ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ತಂದೆ ಸಂಜೀವ್ ಸೂರ್ಯವಂಶಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಕಿರಿಯ ಮಗ ಅಭ್ಯಾಸ ಪಂದ್ಯದಲ್ಲಿ ತಮ್ಮ ಮೊದಲ ಶತಕ ಬಾರಿಸಿದ್ದಾರೆ. ಆಶೀರ್ವಾದ್‌ಗೆ ನಿಮ್ಮ ಎಲ್ಲರ ಪ್ರೀತಿ ಹಾಗೂ ಆಶೀರ್ವಾದ ನೀಡಬೇಕು ಎಂದು ವಿನಂತಿಸಿಕೊಳ್ಳುವೆ ಎಂದು ಬರೆದುಕೊಂಡಿದ್ದಾರೆ.

Kishor KV