TESTಗೆ ಮಾತ್ರ ಮೊಹಮ್ಮದ್ ಸಿರಾಜ್ ಸೀಮಿತ – ಬುಮ್ರಾ ಆಡದಿದ್ರಷ್ಟೇ T-20I & ODI
ವೈಟ್ ಬಾಲ್ ಅಂದ್ರೆ REST ನೆಪನಾ?

TESTಗೆ ಮಾತ್ರ ಮೊಹಮ್ಮದ್ ಸಿರಾಜ್ ಸೀಮಿತ – ಬುಮ್ರಾ ಆಡದಿದ್ರಷ್ಟೇ T-20I & ODIವೈಟ್ ಬಾಲ್ ಅಂದ್ರೆ REST ನೆಪನಾ?

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಗಳಿಗೆ ಅನೌನ್ಸ್ ಆಗಿದ್ದ ಭಾರತ ತಂಡದಲ್ಲಿ ಮೊಹಮ್ಮದ್ ಸಿರಾಜ್​ಗೂ ಚಾನ್ಸ್ ಸಿಕ್ಕಿತ್ತು. ಆದ್ರೆ ಇದಾಗಿ ವಾರದಲ್ಲೇ ದಿಢೀರ್ ಅಂತಾ ಸಿರಾಜ್​ಗೆ ಗಾಯದ ಕಾರಣಗಳನ್ನ ನೀಡಿ ತಂಡದಿಂದ ಹೊರಗಿಟ್ಟು ಪ್ರಸಿದ್ಧ್ ಕೃಷ್ಣಗೆ ಅವಕಾಶ ನೀಡಲಾಯ್ತು. ಪ್ರಸಿದ್ಧ್ ಕೃಷ್ಣ ಜಾಯ್ನ್ ಆಗಿದ್ರಲ್ಲಿ ಯಾವುದೇ ತಕರಾರಿಲ್ಲ. ಆದ್ರೆ ಸಿರಾಜ್​ ವಿಚಾರದಲ್ಲಿ ರೆಸ್ಟ್ ನೆಪ ಹೇಳ್ತಿದ್ದಾರಾ ಅನ್ನೋ ಚರ್ಚೆ ಶುರುವಾಗಿದೆ. ಟೆಸ್ಟ್ ಮ್ಯಾಚಸ್ ಅಂದಾಗ ಫಸ್ಟ್ ಪ್ರಿಯಾರಿಟಿ ಬೌಲರ್ ಆಗಿರೋ ಸಿರಾಜ್ ವೈಟ್ ಬಾಲ್ ಫಾರ್ಮೆಟ್ ಅಂದಾಗ ಬೇಕಂತಲೇ ಹೊರಗಿಡ್ತಿದ್ದಾರಾ ಅನ್ನೋ ಪ್ರಶ್ನೆಗಳು ಮೂಡಿವೆ.

ಇದನ್ನೂ ಓದಿ : ಫರ್ಹಾನ್ ಗೆ ಪಟ್ಟ ಕಟ್ಟಿದ PAK – AK 47* ಸೆಲೆಬ್ರೇಷನ್ ಗೆ ಕ್ಯಾಪ್ಟನ್ಸಿ ಗಿಫ್ಟ್?

ಭಾರತ ತಂಡದಲ್ಲಿ ಟೆಸ್ಟ್ ಮ್ಯಾಚಸ್ ಅಂತಾ ಬಂದಾಗ ಮುಂಚೂಣಿಯಲ್ಲಿರೋ ಮೊಹಮ್ಮದ್ ಸಿರಾಜ್ ವೈಟ್ ಬಾಲ್ ಕ್ರಿಕೆಟ್​ನಲ್ಲಿ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ತಾರೆ. ಹಾಗಂತ ಅವ್ರಲ್ಲಿ ಸ್ಕಿಲ್ ಇಲ್ಲ ಅಂತಲ್ಲ ಆದ್ರೂ ಬಿಸಿಸಿಐ ಸಿರಾಜ್​ರನ್ನ ರೆಡ್ ಬಾಲ್ ಫಾರ್ಮೆಟ್​ನಲ್ಲಿ ಮಾತ್ರವೇ ಕಂಟಿನ್ಯುಯಸ್ ಆಗಿ ಬಳಸಿಕೊಳ್ತಿದೆ. ಸೀಮಿತ ಓವರ್​ಗಳಿಂದ ಹೊರಗಿಡ್ತಿದ್ದಾರೆ. ಕಳೆದ ಎರಡ್ಮೂರು ವರ್ಷಗಳ ರೆಕಾರ್ಡ್ಸ್ ನೋಡಿದ್ರೂ ಇದು ಕ್ಲಿಯರ್ ಆಗಿ ಗೊತ್ತಾಗ್ತಿದೆ.

ಟೆಸ್ಟ್ ಗಷ್ಟೇ ಸೀಮಿತ ಸಿರಾಜ್!

2024ರಲ್ಲಿ ಟಿ-20 ವಿಶ್ವಕಪ್ ಗೆದ್ದ ನಂತರ ಒಂದು ದ್ವಿಪಕ್ಷೀಯ ಟಿ20ಐ ಸರಣಿ

2026 ರ ಟಿ 20 ವಿಶ್ವಕಪ್‌ನಲ್ಲಿ ಯುಎಸ್ಎ ವಿರುದ್ಧ ಒಂದು ಪಂದ್ಯ ಮಾತ್ರ

2023 ರ ವಿಶ್ವಕಪ್ ನಂತರ ಭಾರತ 23 ಏಕದಿನ ಪಂದ್ಯ, ಸಿರಾಜ್ 9 ಪಂದ್ಯ

ಆಸ್ಟ್ರೇಲಿಯಾ ಸರಣಿ ಮತ್ತು ಜನವರಿಯಲ್ಲಿ ನಡೆದ ನ್ಯೂಜಿಲೆಂಡ್ ಏಕದಿನ ಸರಣಿ

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಾಗಿ ಬುಮ್ರಾ ಕಂ ಬ್ಯಾಕ್ ಮಾಡಿದಾಗ ಸಿರಾಜ್ ಔಟ್

ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20 ಪಂದ್ಯಗಳಿಗೆ ಸೆಲೆಕ್ಟ್ ಆಗಿ ಮತ್ತೆ ರೆಸ್ಟ್

2023ರ ಜನವರಿಯಿಂದ ಏಕದಿನ, ಟಿ20 ಮತ್ತು ಐಪಿಎಲ್‌ ನಲ್ಲಿ ಒಟ್ಟು 1,231 ಓವರ್‌

ಟಿ-20ಐನಲ್ಲಿ ಕೇವಲ ಒಂಬತ್ತು ಪಂದ್ಯಗಳು ಮತ್ತು 30 ಓವರ್‌ಗಳನ್ನು ಮಾತ್ರ

30 ಟೆಸ್ಟ್ ಪಂದ್ಯಗಳಲ್ಲಿ 744 ಓವರ್‌ಗಳು – ಪ್ರತಿ ಟೆಸ್ಟ್‌ಗೆ ಸುಮಾರು 25

2023ರಿಂದ 33 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಸಿರಾಜ್ 30 ಟೆಸ್ಟ್ ಪಂದ್ಯಗಳಲ್ಲಿ ಭಾಗಿ

2025ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದಾಗ ಐದು ಪಂದ್ಯ ಆಡಿದ ಸೀಮ್ ಬೌಲರ್

185 ಓವರ್‌ಗಳನ್ನು ಬೌಲಿಂಗ್ ಮಾಡಿ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್

Shantha Kumari

Leave a Reply

Your email address will not be published. Required fields are marked *