ಮಗಳ ಶವ ಕಾರಲ್ಲಿದ್ದರೂ ಪ್ರೇಮಿ ಜೊತೆ ಬರ್ತ್ ಡೇ ಸೆಲೆಬ್ರೇಷನ್ – 12 ಗಂಟೆ ಹೆತ್ತ ಮಗಳ ಶವದ ಜೊತೆ ತಾಯಿಯ ಜಾಲಿ ರೈಡ್
ಇಂಥಾ ತಾಯಿ ಈ ಪ್ರಪಂಚಕ್ಕೆ ಬೇಕಾ?

ಮಕ್ಕಳಿಗೆ ಸಣ್ಣ ನೋವಾದರೂ ತಾಯಿ ಚಡಪಡಿಸುತ್ತಾಳೆ. ಮಗುವಿಗಾಗಿಯೇ ತಾಯಿ ಹೃದಯ ಮಿಡಿಯುತ್ತಿರುತ್ತದೆ. ಆದರೆ, ಇಲ್ಲೊಬ್ಬಳು ತಾಯಿಯಿದ್ದಾಳೆ. ಈಕೆ ಒಂಥರಾ ಸ್ತ್ರೀ ಕುಲಕ್ಕೆ ಅಪಮಾನ. ತನ್ನ ಮಗಳನ್ನು ಪ್ರೇಮಿ ಕೊಂದಿದ್ದು ಗೊತ್ತಾದರೂ ಕೂಡಾ ಆತನ ಜೊತೆ ಮಗಳ ಶವದ ಜೊತೆ ಸುತ್ತಾಟ ನಡೆಸಿದ್ದಾಳೆ. ಅಷ್ಟೇ ಯಾಕೆ ಕರುಳ ಬಳ್ಳಿಯ ಶವ ಕಾರಲ್ಲಿಯೇ ಇಟ್ಟುಕೊಂಡು ಪ್ರೇಮಿ ಜೊತೆ ಜಾಲಿ ರೈಡ್ ಹೋಗಿದ್ದಾಳೆ.
ಇದನ್ನೂ ಓದಿ:ಅಮ್ಮನ ಮಡಿಲಲ್ಲಿ ಮಲಗಿದ್ದ ಕಂದನ ಮೇಲೆ ಬಿದ್ದ ತೆಂಗಿನಕಾಯಿ – ಪುಟ್ಟ ಮಗುವಿನ ದುರಂತ ಸಾವು
ಬೆಂಗಳೂರಲ್ಲಿ ನಡೆದ ವೆನ್ನಿಲಾ ಮರ್ಡರ್ ಕೇಸ್ ರಹಸ್ಯ ಬೆಚ್ಚಿ ಬೀಳಿಸುವಂತಿದೆ. ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಈ ನಿಗೂಢ ಕೊಲೆ ಪ್ರಕರಣದ ಬಗ್ಗೆ ಆರೋಪಿಯೇ ವಿಚಾರ ಬಾಯಿಬಿಟ್ಟಿದ್ದಾನೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆಂದು ಪ್ರಿಯಕರ ಮತ್ತು ತಾಯಿ ತಮ್ಮ ಸ್ವಂತ ಮಗಳನ್ನೇ ಕೊಲೆ ಮಾಡಿದ್ದರು. ಹೆತ್ತ ಮಗಳು ಕೊಲೆಯಾಗಿದ್ದಾಳೆ ಎಂದು ಗೊತ್ತಾದರೂ ಮಗಳ ಶವವನ್ನು ಕಾರಿನಲ್ಲೇ ಇಟ್ಟುಕೊಂಡು, ಪ್ರಿಯಕರನೊಂದಿಗೆ ಸೇರಿ ತಾಯಿ ಬರ್ತ್ ಡೇ ಆಚರಿಸಿಕೊಂಡಿದ್ದಾಳೆ. ಅಂದು ಪ್ರಿಯಾಂಕ ಮತ್ತು ಆಕೆಯ ಪ್ರೇಮಿ ಮೋಹನ್ ಹೊರಗಡೆ ಶಾಪಿಂಗ್‌ಗೆ ಹೋಗಿದ್ದರಂತೆ. 24ನೇ ತಾರೀಖು ಸಂಜೆ 7.30ರ ಸುಮಾರಿಗೆ ವಿಲ್ಲಾದಿಂದ ಹೊರ ಬಂದಿದ್ದ ಪ್ರಿಯಾಂಕ ಹಾಗೂ ಮೋಹನ್ ಇಂದಿರಾನಗರದಲ್ಲಿ ರಾತ್ರಿ ಶಾಪಿಂಗ್ ಮಾಡಿದ್ದಾರೆ. ಪ್ರಿಯಾಂಕ ಶಾಪಿಂಗ್ ಗೆ ಹೋಗಿದ್ರೆ, ಇತ್ತ ಕಾರಿನಲ್ಲಿ ಮಗುವಿನ ಜೊತೆ ಮೋಹನ್ ಇದ್ದ. ಮಗುವಿಗೆ ಬಾಸ್ಕಿನ್ ರಾಬಿನ್ಸ್ ಎಂಬ ಐಸ್‌ಕ್ರೀಂ ಪಾರ್ಲರ್ನಲ್ಲಿ ಐಸ್ ಕ್ರೀಂ ಕೊಡಿಸಿದ್ದನಂತೆ. 8.30ಕ್ಕೆ ಬಿಲ್ ಮಾಡಿಸಿರೋದು ಪತ್ತೆಯಾಗಿದೆ. ಬಳಿಕ ಕಾರಿನಲ್ಲಿ ಮಗುವನ್ನ ಮರ್ಡರ್ ಮಾಡಿರೋದು ತನಿಖೆ ವೇಳೆ ಬಯಲಾಗಿದೆ.
ಮೊದಲು ಮಗುವನ್ನ ಕೈಯಿಂದ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದ ಆಗದಿದ್ದಾಗ ಕಾರಿನಲ್ಲಿದ್ದ ದಿಂಬು ಬಳಸಿ ಕೊಲೆ ಮಾಡಿರುವುದಾಗಿ ಆರೋಪಿಯೇ ಬಾಯ್ಬಿಟ್ಟಿದ್ದಾನೆ. ಮರಣೋತ್ತರ ಪರೀಕ್ಷೆ ರಿಪೋರ್ಟ್ ನಲ್ಲಿ ಮಗುವಿನ ಹೊಟ್ಟೆಯಲ್ಲಿ ಐಸ್ ಕ್ರೀಂ ಅಂಶಗಳು ಇರೋದು ಪತ್ತೆಯಾಗಿದೆ. ಇದಕ್ಕಿಂತಲೂ ಬೆಚ್ಚಿ ಬೀಳುವ ವಿಚಾರ ಏನು ಗೊತ್ತಾ?. ಸ್ವಂತ ಮಗಳು, ತನ್ನದೇ ಕರುಳ ಬಳ್ಳಿಯನ್ನ ಪಾಪಿ ಪ್ರೇಮಿ ಕೊಂದು ಹಾಕಿದ್ದಾನೆ. ಈ ವಿಚಾರ ಶಾಪಿಂಗ್ ಮುಗಿಸಿ ವಾಪಸ್ ಬಂದ ಪ್ರಿಯಾಂಕಗೂ ಗೊತ್ತಾಗಿದೆಯಂತೆ. ಆದರೂ ಕೂಡಾ ಈಕೆಗೆ ಏನೂ ಅನ್ನಿಸಿಲ್ಲ. ಪ್ರಿಯಕರನ ಕೃತ್ಯಕ್ಕೆ ಒಂದು ಮಾತೂ ಕೂಡಾ ಆಡಿಲ್ಲವಂತೆ. ಆತನ ಜೊತೆ ಮಗಳ ಶವವಿದ್ದ ಅದೇ ಕಾರಲ್ಲಿ ಬರ್ತ್ ಡೇ ಸೆಲೆಬ್ರೇಷನ್ ಗೆ ಹೋಗಿದ್ದಳಂತೆ ಈ ಕಟುಕ ತಾಯಿ. 9 ಗಂಟೆ ಸುಮಾರಿಗೆ ಇಂದಿರಾನಗರದಿಂದ ಕೋಲಾರಕ್ಕೆ ಕಡೆ ಹೊರಟಿದ್ದ ಮೋಹನ್- ಪ್ರಿಯಾಂಕ, ಅಲ್ಲೇ ಕಾಫಿ ಡೇ ನಲ್ಲಿ ಬರ್ತ್ ಡೇ ಪಾರ್ಟಿ ಮಾಡಿದ್ದಾರೆ. ಕಾರಿನಲ್ಲಿ ಮಗಳ ಶವ ಇಟ್ಟುಕೊಂಡು ಬರ್ತ್ ಡೇ ಆಚರಿಸಿಕೊಂಡಿದ್ದ ಪಾಪಿ ತಾಯಿ, ರಾತ್ರಿ 1ರ ವರೆಗೂ ಸೆಲೆಬ್ರೇಷನ್ ಮುಗಿಸಿ ಅಲ್ಲಿಂದ ವಿಲ್ಲಾಗೆ ವಾಪಸ್ ಆಗಿದ್ದಾಳೆ ಎಂದು ತನಿಖೆಯಿಂದ ತಿಳಿದು ಬಂದಿದೆ. 2.30ರ ಸುಮಾರಿಗೆ ವಿಲ್ಲಾಗೆ ವಾಪಸ್ ಆಗಿದ್ದ ಪ್ರಿಯಾಂಕ ಹಾಗೂ ಮೋಹನ್, ಬೆಳಗ್ಗೆ 9 ಗಂಟೆ ವರೆಗೂ ಶವ ಇಟ್ಟುಕೊಂಡಿದ್ರು. ಬೆಳಗ್ಗೆ 9 ಗಂಟೆಗೆ ಖಾಸಗಿ ಆಸ್ಪತ್ರೆಗೆ ಮಗುವನ್ನ ತೆಗೆದುಕೊಂಡು ಹೋಗಿ ಏನೂ ಗೊತ್ತಿಲ್ಲದಂತೆ ಕುಟುಂಬಸ್ಥರಿಗೆ ವಿಚಾರ ಮುಟ್ಟಿಸಿದ್ದಾರಂತೆ.
ಪ್ರಿಯಕರ ಮಗುವನ್ನು ಕೊಂದರೆ, ಆತನ ಜೊತೆ ಸೇರಿ ಪಾಪಿ ತಾಯಿ ಜಾಲಿ ರೈಡ್ ಹೋಗಿದ್ದಾಳೆ. ಈ ಎಲ್ಲಾ ವಿಚಾರಗಳು ಈಗ ಬಯಲಾಗಿದ್ದು, ಹೆತ್ತ ತಾಯಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ನೋಡಿರಿ

