ಜಡ್ಜಸ್ ಅಂದ್ರೆ ನಾಯಿ ಎಂದಿದ್ಯಾಕೆ ರಕ್ಷಿತಾ ಶೆಟ್ಟಿ? – ತಪ್ಪು ತಪ್ಪು ಮಾತಾಡುವುದೇ ಕಾಮಿಡಿನಾ?

ಬಿಗ್‌ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ತಮ್ಮ ಅರೆಬರೆ ಕನ್ನಡದಿಂದ ಸಖತ್ ಫೇಮಸ್ ಆಗಿದ್ದಾರೆ. ಇದೀಗ ರಕ್ಷಿತಾ ಶೆಟ್ಟಿ ಮತ್ತೊಂದು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಕ್ವಾಟ್ಲೆ ಕಿಚನ್-2 ಶೋನಲ್ಲಿ ರಕ್ಷಿತಾ ಶೆಟ್ಟಿ ಕೂಡಾ ಇದೇ ಥರಾ ಮಾತಾಡಿ ಮತ್ತೆ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:ಭಾಗ್ಯಲಕ್ಷ್ಮೀ ಧಾರಾವಾಹಿ ಮುಕ್ತಾಯ – ಎಲ್ಲವೂ ಸುಖಾಂತ್ಯ, ತಾಂಡವ್ ಅಡ್ರೆಸ್ ಇಲ್ವೇ ಇಲ್ಲ..!
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಮಾತಿನಿಂದಲೇ ಫೇಮಸ್ ಆದವರು. ಅರೆಬರೆ ಕನ್ನಡ ಮಾತನಾಡಿ ಬಿಗ್‌ಬಾಸ್ ವೀಕ್ಷಕರ ಮನೆಗೆದ್ದಿದ್ದರು. ಇದೀಗ ರಕ್ಷಿತಾ ಶೆಟ್ಟಿ ಮತ್ತೊಂದು ರಿಯಾಲಿಟಿ ಶೋ ಕ್ವಾಟ್ಲೆ ಕಿಚನ್-02ನಲ್ಲಿ ಭಾಗವಹಿಸಿದ್ದಾರೆ. ಈಕೆಯ ಡೈಲಾಗ್ ಜೊತೆಗೆ ಅಡುಗೆ ಎಕ್ಸ್ಪರ್ಟ್ ಎನ್ನುವ ಕಾರಣಕ್ಕೆ ಇಲ್ಲಿ ಅವಕಾಶ ಸಿಕ್ಕಿದೆ. ಇದೀಗ ಅಡುಗೆ ಮಾಡುವಾಗ, ಸೂರಜ್, ಮಟನ್ ಗ್ರೇವಿಗೆ ಒಂದು ಚಿತ್ರ ಬಿಡಿಸಿ ಅದೇನು ಎಂದು ರಕ್ಷಿತಾರನ್ನು ಕೇಳಿದ್ದಾರೆ. ಅದಕ್ಕೆ ರಕ್ಷಿತಾ ಶೆಟ್ಟಿ ನಾಯಿ ಎಂದಿದ್ದಾರೆ. ಆಗ ಇದು ನಾಯಿನಾ ಎಂದು ಕೇಳಿದಾಗ, ರಕ್ಷಿತಾ ನಾನು ಮಾಡುವ ಅಡುಗೆ ನಾಯಿ, ನಾಯಿ ಅಂದ್ರೆ ನನ್ನ ಅಡುಗೆ, ನಾಯಿ ಅಂದ್ರೆ ಇಲ್ಲಿರುವ ಜಡ್ಜ್‌ಗಳು ಎಂದು ಹೇಳಿದ್ದಾರೆ. ರಕ್ಷಿತಾ ನಾಯಿ ಅನ್ನೋ ಪದ ಎಲ್ಲಾ ವಿಚಾರಕ್ಕೂ ಬಳಸಿದಾಗ ತೀರ್ಪುಗಾರರಾಗಿರುವ ನಟಿ ಮೇಘನಾ ರಾಜ್ ಶಾಕ್ ಆಗಿದ್ದಾರೆ. ಬಳಿಕ ಸುಷ್ಮಾ ಅವರು ಅಡುಗೆಯಾದ್ರೂ ಚೆನ್ನಾಗಿ ಮಾಡ್ತೀಯಾ ಎಂದು ಕೇಳಿದ್ದಾರೆ. ಆಗ ರಕ್ಷಿತಾ ಮತ್ತೊಮ್ಮೆ ಏನೇನೋ ಹೇಳುತ್ತಾ ಹೋಗುತ್ತಾರೆ. ಪಾಪ.. ಸೂರಜ್ ಸ್ಥಿತಿ. ರಕ್ಷಿತಾರ ಕನ್ನಡ ಸ್ವಲ್ಪವೂ ಅವರಿಗೆ ಅರ್ಥವಾಗುವುದಿಲ್ಲ.
ಅಂತೂ ರಕ್ಷಿತಾ ನ್ಯಾಯ ಅನ್ನೋ ಪದ ಬಳಸುವಾಗ ಎಲ್ಲರಿಗೆ ಅದು ನಾಯಿ ಅನ್ನೋ ರೀತಿ ಕೇಳಿಸಿದೆ. ರಕ್ಷಿತಾಳ ಮಾತಿಗೆ ಸೂರಜ್ ಗಲಿಬಿಲಿಯಾಗುವುದು ಮಾತ್ರವಲ್ಲ, ಜಡ್ಜ್‌ಗಳು ಕೂಡಾ ಸಿಕ್ಕಾಪಟ್ಟೆ ಕನ್‌ಫ್ಯೂಸ್ ಆಗ್ತಿದ್ದಾರೆ. ಒಟ್ನಲ್ಲಿ ಮಾತಿನ ಮಲ್ಲಿ ರಕ್ಷಿತಾಳ ಸಹವಾಸದಿಂದ ಮಾತಿನ ಮಲ್ಲ ಸೂರಜ್ ಸ್ಥಿತಿ ಅಯ್ಯೋ ಪಾಪ ಅನ್ನೋ ಹಾಗಾಗಿದೆ.

ನೋಡಿರಿ

