ಲಂಕಾ ನೆಲದಲ್ಲಿ ವೈಭವ್ ಬ್ಯಾಟ್‌ನಿಂದ ಫೋರ್‌ಗಳ ಸುರಿಮಳೆ – 6 ರನ್‌ಗಳಿಂದ ಸೂರ್ಯವಂಶಿ ಆಫ್‌ ಸೆಂಚುರಿ ಮಿಸ್

ಲಂಕಾ ನೆಲದಲ್ಲಿ ವೈಭವ್ ಬ್ಯಾಟ್‌ನಿಂದ ಫೋರ್‌ಗಳ  ಸುರಿಮಳೆ – 6 ರನ್‌ಗಳಿಂದ ಸೂರ್ಯವಂಶಿ ಆಫ್‌ ಸೆಂಚುರಿ ಮಿಸ್

ಶ್ರೀಲಂಕಾದಲ್ಲಿ ನಡೆಯುತ್ತಿರುವ ಎ ತಂಡಗಳ ನಡುವಣ ತ್ರಿಕೋನ ಸರಣಿಯಲ್ಲಿ ನಡೆಯುತ್ತಿರೋ  ಅಫ್ಘಾನಿಸ್ತಾನ್ ಎ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ್ ಎ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಹೊಡಿಬಡಿ ಆಟಕ್ಕೆ ಮುಂದಾದ್ರು. ಈ ಪಂದ್ಯದಲ್ಲಿ ಟಾಸ್  ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಎ ಪರ ವೈಭವ್ ಸೂರ್ಯವಂಶಿ ಹಾಗೂ ಪ್ರಭ್​ಸಿಮ್ರಾನ್ ಸಿಂಗ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.

ಇದನ್ನೂ ಓದಿ: ಅಮ್ಮನ ಮಡಿಲಲ್ಲಿ ಮಲಗಿದ್ದ ಕಂದನ ಮೇಲೆ ಬಿದ್ದ ತೆಂಗಿನಕಾಯಿ – ಪುಟ್ಟ ಮಗುವಿನ ದುರಂತ ಸಾವು

ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಒತ್ತು ನೀಡಿದ ವೈಭವ್ ಸೂರ್ಯವಂಶಿ ಬ್ಯಾಕ್ ಟು ಬ್ಯಾಕ್ ಫೋರ್​ಗಳನ್ನು ಬಾರಿಸುವ ಮೂಲಕ ಗಮನ ಸೆಳೆದರು. ಯುವ ದಾಂಡಿಗನ ಈ ಅಬ್ಬರದೊಂದಿಗೆ ಟೀಮ್ ಇಂಡಿಯಾ ಮೊದಲ 7 ಓವರ್​ಗಳಲ್ಲಿ 74 ರನ್​ ಕಲೆಹಾಕಿತು. ಈ ಪಂದ್ಯದಲ್ಲಿ 22 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ 200ರ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್ ಬೀಸಿ 44 ರನ್ ಕಲೆಹಾಕಿದರು. ಇದರ ನಡುವೆ 9 ಭರ್ಜರಿ ಫೋರ್​ಗಳನ್ನು ಬಾರಿಸಿದ್ದರು. ಆದರೆ ಅರ್ಧಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಕೇವಲ 6 ರನ್​ಗಳಿಂದ ಭಾರತ ಎ ಪರ ಚೊಚ್ಚಲ ಅರ್ಧಶತಕ ಬಾರಿಸುವ ಅವಕಾಶವನ್ನು ಕೈ ಚೆಲ್ಲಿಕೊಂಡರು.

ಆದರೆ 8ನೇ ಓವರ್​ನ ಮೊದಲ ಎಸೆತವನ್ನು ಅಪ್ಪರ್ ಕಟ್ ಮಾಡಿ ಮೈದಾನದ ಹೊರಗೆ ಅಟ್ಟುಲು ಯತ್ನಿಸಿದ ವೈಭವ್ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು. ಇದರೊಂದಿಗೆ ವೈಭವ್ ಸೂರ್ಯವಂಶಿಯ ಸ್ಫೋಟಕ ಇನಿಂಗ್ಸ್ ಅಂತ್ಯಗೊಂಡಿದೆ. ಇನ್ನೂ  ಇನ್ನು ವೈಭವ್ ಸೂರ್ಯವಂಶಿ ಔಟಾದ ಬಳಿಕ ಬಂದ ಪ್ರಿಯಾಂಶ್ ಆರ್ಯ ಕೇವಲ 8 ರನ್​ಗಳಿಸಿ ಔಟಾಗಿದ್ದಾರೆ. ಇದೀಗ ಪ್ರಭ್​ಸಿಮ್ರಾನ್ ಸಿಂಗ್ 84 ರನ್‌ಗೆ ವಿಕೆಟ್‌ ಒಪ್ಪಿಸಿದ್ರು.

 

Kishor KV

Leave a Reply

Your email address will not be published. Required fields are marked *