ಅಮ್ಮನ ಮಡಿಲಲ್ಲಿ ಮಲಗಿದ್ದ ಕಂದನ ಮೇಲೆ ಬಿದ್ದ ತೆಂಗಿನಕಾಯಿ – ಪುಟ್ಟ ಮಗುವಿನ ದುರಂತ ಸಾವು

ಅಮ್ಮನ ಮಡಿಲಲ್ಲಿ ಮಲಗಿದ್ದ ಕಂದನ ಮೇಲೆ ಬಿದ್ದ ತೆಂಗಿನಕಾಯಿ – ಪುಟ್ಟ ಮಗುವಿನ ದುರಂತ ಸಾವು

ಆ ಮಗು ಅಮ್ಮನ ಮಡಿಲಲ್ಲಿ ಹಾಯಾಗಿ ಮಲಗಿತ್ತು. ತಾಯಿ ಕೂಡಾ ಮಗುವನ್ನು ಮನೆಯಂಗಳದಲ್ಲಿ ಮಲಗಿಸಿಕೊಂಡು ಕೂತಿದ್ದರು. ಆಗಲೇ ಕಣ್ಮುಂದೆ ಅನಾಹುತವೊಂದು ನಡೆದೇಬಿಟ್ಟಿತ್ತು. ತಾಯಿಯ ಮಡಿಲಲ್ಲಿ ಹಾಯಾಗಿ ಮಲಗಿದ್ದ ಕಂದನ ತಲೆಯ ಮೇಲೆಯೇ ತೆಂಗಿನಕಾಯಿ ಬಿದ್ದಿದ್ದು. ನಂತರ ನಡೆದದ್ದು ಘೋರ ದುರಂತ.

ಇದನ್ನೂ ಓದಿ:ಮಲೆನಾಡಿನ ಮೀನುಗಾರರಿಗೆ ಶಾಕ್ ಕೊಟ್ಟ ಸರ್ಕಾರ – ಚಿಕ್ಕಮಗಳೂರಲ್ಲಿ ಮಳೆಗಾಲದಲ್ಲಿ ಮೀನುಗಾರಿಕೆಗೆ ನಿಷೇಧ

ವಿಧಿಯಾಟ ಬಲ್ಲವರಾರು. ಕೆಲವೊಮ್ಮೆ ಸಾವು ತಾಯಿಯ ಮಡಿಲಲ್ಲಿ ಮಲಗಿದ್ದರೂ ಬರುತ್ತದೆ. ಇದಕ್ಕೆ ಸಾಕ್ಷಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಹೆರಂಜಾಲು ಗ್ರಾಮದಲ್ಲಿ ನಡೆದ ಘಟನೆ. ತಾಯಿ ಸುಚಿತ್ರಾ ತಮ್ಮ ಒಂದುವರೆ ವರ್ಷದ ಗಂಡು ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ಮನೆಯ ಬಳಿ ಇದ್ದರು. ಆ ಸಮಯದಲ್ಲಿ ಆವರಣದಲ್ಲಿದ್ದ ತೆಂಗಿನ ಮರದಿಂದ ​ ಒಂದು ತೆಂಗಿನಕಾಯಿ ಬಿದ್ದಿದೆ. ಆ ತೆಂಗಿನಕಾಯಿ ನೇರವಾಗಿ ಮಗುವಿನ ತಲೆಯ ಮೇಲೆಯೇ ಬಿದ್ದಿದೆ. ಘಟನೆ ನಡೆದ ಕೂಡಲೇ ಮನೆಯವರುತಕ್ಷಣ ಮಗುವನ್ನು ಮಣಿಪಾಲ್​ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಮಗುವಿನ ತಲೆಗೆ ತೀವ್ರ ಗಾಯವಾಗಿರುವುದನ್ನು ಗಮನಿಸಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಮಗುವಿನ ಪ್ರಾಣ ಉಳಿಸಲು ಆಸ್ಪತ್ರೆ ಸಿಬ್ಬಂದಿ ಬಹಳ ಪ್ರಯತ್ನಪಟ್ಟರೂ, ಚಿಕಿತ್ಸೆಗೆ ಸ್ಪಂದಿಸದೆ ಪುಟ್ಟ ಜೀವ ಸಾವನ್ನಪ್ಪಿದೆ.

ಒಂದುವರೆ ವರ್ಷದ ಈ ಪುಟ್ಟ ಮಗುವಿನ ಸಾವು ನೋಡಿ ಪ್ರಶಾಂತ್ – ಸುಚಿತ್ರಾ ದಂಪತಿಯ ಆಕ್ರಂದನ ಮುಗಿಲು ಮುಟ್ಟಿತ್ತು. ತಾಯಿಯ ಮಡಿಲಲ್ಲೇ ಇದ್ದ ಮಗುವಿಗೆ ಈ ರೀತಿ ದಾರುಣ ಸಾವು ಬಂದಿರುವುದು ವಿಧಿಯಾಟ ಅಲ್ಲದೇ ಇನ್ನೇನು.

Sulekha

Leave a Reply

Your email address will not be published. Required fields are marked *