MIನಲ್ಲಿ ಸೂರ್ಯ Vs ಪಾಂಡ್ಯ ಜಗಳ!? ODIನಿಂದ ಸಿರಾಜ್ OUT, ಪ್ರಸಿದ್ಧ್ IN
ಬ್ಯಾಟ್ ಲಾಕ್‌.. ಪ್ರಿಯಾಂಶ್ RUNOUT   

MIನಲ್ಲಿ ಸೂರ್ಯ Vs ಪಾಂಡ್ಯ ಜಗಳ!?  ODIನಿಂದ ಸಿರಾಜ್ OUT, ಪ್ರಸಿದ್ಧ್ INಬ್ಯಾಟ್ ಲಾಕ್‌.. ಪ್ರಿಯಾಂಶ್ RUNOUT   

ಐಪಿಎಲ್ ಟೂರ್ನಿ ಈಗ ರೋಚಕ ಘಟ್ಟ ತಲುಪಿದೆ. ಈ ಟೂರ್ನಿಯ ಅಂಗಳದಲ್ಲಿ ನಡೆಯುತ್ತಿರುವ ಕೆಲ ಸ್ವಾರಸ್ಯಕರ ಘಟನೆಗಳ ಸಂಕ್ಷಿಪ್ತ ಸುದ್ದಿ ಇಲ್ಲಿದೆ.

ಇದನ್ನೂ ಓದಿ: ಸೋಲಿನ ಸುಳಿಯಲ್ಲಿ ಸೊಕ್ಕಿನ AUS – ಕಾಂಗರೂಗಳ ಕಾಲು ಮುರಿದ ಬಾಂಗ್ಲಾ

 

ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡ ರೋಚಕ ಜಯ ಸಾಧಿಸಿದೆ. ಭಾರತ ಎ ತಂಡವು 50 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 277 ರನ್​ ಕಲೆಹಾಕಿತು. 278 ರನ್​ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅಂತಿಮ 12 ಎಸೆತಗಳಲ್ಲಿ ಶ್ರೀಲಂಕಾ ತಂಡದ ಗೆಲುವಿಗೆ ಬೇಕಿದದ್ದು ಕೇವಲ 9 ರನ್​ಗಳು ಮಾತ್ರ. ಈ ಹಂತದಲ್ಲಿ ಭಾರತದ ಪರ ದಾಳಿಗಿಳಿದ ಎಡಗೈ ವೇಗಿ ಅರ್ಷದ್ ಖಾನ್ ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಪಡೆದರು. ಮತ್ತೊಂದೆಡೆ ವಿಜಯಕಾಂತ್ ರನೌಟ್ ಆದರು. ಪರಿಣಾಮ 48.5 ಓವರ್​ಗಳಲ್ಲಿ 269 ರನ್​ಗಳಿಸಿ ಶ್ರೀಲಂಕಾ ಎ ತಂಡವು ಆಲೌಟ್ ಆಯಿತು.

ಶ್ರೀಲಂಕಾ ‘ಎ’ ವಿರುದ್ಧದ ಪಂದ್ಯದಲ್ಲಿ ಭಾರತ ‘ಎ’ ತಂಡದ ಯುವ ಬ್ಯಾಟರ್ ಪ್ರಿಯಾಂಶ್ ಆರ್ಯ ಔಟ್ ಆದ ರೀತಿ ಇದೀಗ ಚರ್ಚೆಗೆ ಕಾರಣವಾಗಿದೆ. ಗೊಂದಲದಿಂದ ಬ್ಯಾಟರ್‌ ರುತುರಾಜ್ ಗಾಯಕ್ವಾಡ್  ಮತ್ತೆ ಪ್ರಿಯಾಂಶ್ ಆರ್ಯ ನಾನ್‌ಸ್ಟೈಕ್‌ನಂತ ಓಡಿ ಬಂದಿದ್ದಾರೆ. ಈ ವೇಳೆ  ಸ್ಟ್ರೈಕರ್ ಎಂಡ್​ನಲ್ಲಿದ್ದ ಪ್ರಿಯಾಂಶ್ ಆರ್ಯ ತಿರುಗಿ ನಿಂತು ಕ್ರೀಸ್​ಗೆ ಬ್ಯಾಟ್ ನೀಡಲು ಮುಂದಾದಾಗ, ಚೆಂಡನ್ನು ಹಿಡಿಯಲು ನಿಂತಿದ್ದ ಶ್ರೀಲಂಕಾದ ವಿಕೆಟ್ ಕೀಪರ್ ನಿರೋಶನ್ ಕಾಲಿನಲ್ಲಿ ಬ್ಯಾಟ್ ಅನ್ನು ಲಾಕ್ ಮಾಡಿದರು. ಇಬ್ಬರೂ ಬ್ಯಾಟರ್‌ಗಳು ಒಂದೇ ಕ್ರೀಸ್‌ನತ್ತ ಓಡಿ ಬಂದಾಗ ಗಾಯಕ್ವಾಡ್ ಮೊದಲು ಗೆರೆ ದಾಟಿದ್ರಿಂದ, ಪ್ರಿಯಾಂಶ್ ಆರ್ಯ  ಔಟ್ ಆಗಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರು ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿರುವ ಪ್ರಸಿದ್ಧ ಪ್ರೈಮಾ ಡಯಾಗ್ನೋಸ್ಟಿಕ್ಸ್ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ಯಾವುದೇ ಮುನ್ಸೂಚನೆ ಇಲ್ಲದೆ ತನ್ನ ಗೆಳತಿ ಮಹಿಕಾ ಜೊತೆ ರಾತ್ರೋರಾತ್ರಿ ಈ ಕೇಂದ್ರಕ್ಕೆ ಬಂದಿಳಿದಿರುವುದು ಈಗ ಹಲವು ಪ್ರಶ್ನೆಗಳನ್ನು ಹಾಗೂ ಕುತೂಹಲವನ್ನು ಹುಟ್ಟುಹಾಕಿದೆ. ಹಾರ್ದಿಕ್‌ ಮತ್ತೊಮ್ಮೆ ಅಪ್ಪನಾಗ್ತಿದ್ದಾರಾ ಅನ್ನೋ ಚರ್ಚೆಯೂ ಶುರುವಾಗಿದೆ.

ಹಾರ್ದಿಕ್ ಪಾಂಡ್ಯ ತಮ್ಮ ಐಷಾರಾಮಿ ಫೆರಾರಿ ಕಾರಿನಲ್ಲಿ ಯಲಹಂಕಕ್ಕೆ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ, ಸ್ಥಳದಲ್ಲಿ ನೂರಾರು ಅಭಿಮಾನಿಗಳು ಜಮಾಯಿಸಿದ್ರು. ತಮ್ಮ ನೆಚ್ಚಿನ ಕ್ರಿಕೆಟಿಗ ಹಾಗೂ ಅವರ ಗೆಳತಿಯನ್ನು ಹತ್ತಿರದಿಂದ ನೋಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಕ್ಷಣಾರ್ಧದಲ್ಲೇ ಇಡೀ ಡಯಾಗ್ನೋಸ್ಟಿಕ್ಸ್ ಕೇಂದ್ರದ ಆವರಣ ಸಾರ್ವಜನಿಕರು ಹಾಗೂ ಅಭಿಮಾನಿಗಳಿಂದ ತುಂಬಿಹೋಗಿತ್ತು. ಅಭಿಮಾನಿಗಳ ಅತಿರೇಕದ ವರ್ತನೆಯಿಂದಾಗಿ ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ ತೀವ್ರ ಪರದಾಡುವಂತಾಯಿತು. ನಂತ್ರ ಫ್ಯಾನ್ಸ್‌ ಫೆರಾರಿ ಕಾರಿಗೆ ಸುತ್ತುವರಿದು ಮುತ್ತಿಗೆ ಹಾಕಿದ್ರು.

ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಹಿನ್ನಡೆಯಾಗಿದ್ದು, ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಕಾರಣದಿಂದ ಸರಣಿಯಿಂದ ಹೊರಬಿದ್ದಿದ್ದಾರೆ. ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದರೂ, ಕಾಲಿನ ಉಳುಕಿನಿಂದ ಬಳಲುತ್ತಿರುವ ಪಾಂಡ್ಯ, ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯ ಸಲಹೆಯಂತೆ ವಿಶ್ರಾಂತಿ ಪಡೆಯಲಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಯುವ ಮತ್ತು ಆಕ್ರಮಣಕಾರಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್, ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಸರಣಿಯಿಂದ ಹೊರಗುಳಿದಿದ್ದಾರೆ. ಬಿಸಿಸಿಐ ಈ ಕುರಿತು ಅಧಿಕೃತ ಪ್ರಕಟಣೆ ನೀಡಿದ್ದು, ಸಿರಾಜ್ ಬದಲಿಗೆ ಯುವ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.  ನಿರಂತರವಾಗಿ ಬೌಲಿಂಗ್ ಮಾಡುವುದರಿಂದ ಉಂಟಾಗುವ ಆಯಾಸ ಮತ್ತು ಗಾಯದ ಸಮಸ್ಯೆಗಳನ್ನು ತಡೆಗಟ್ಟಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

IPL2026ರಲ್ಲಿ ಆಡಲು ಸೂಕ್ತ ಅವಕಾಶ ಸಿಗದ ಅರ್ಜುನ್ ತೆಂಡೂಲ್ಕರ್ ಇದೀಗ ಮುಂಬೈ ಟಿ20 ಲೀಗ್ ನಲ್ಲಿ ಮಿಂಚುತ್ತಿದ್ದು, ಇವರ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗ್ತಿದ್ದು ಫ್ಯಾನ್ಸ್ ಫಿದಾ ಆಗಿದ್ದಾರೆ. ತೆಂಡೂಲ್ಕರ್ ಹೊಡೆದ ಒಂದು ಸಿಕ್ಸರ್, ಕ್ರೀಡಾಂಗಣದಲ್ಲಿದ್ದ ಯುವ ಅಭಿಮಾನಿಯೊಬ್ಬರಿಗೆ ಬಡಿದು ಗಾಯಗೊಂಡರು. ಪಂದ್ಯದ ನಂತರ, ಅರ್ಜುನ್‌ ಅಭಿಮಾನಿಯನ್ನು ಭೇಟಿಯಾಗಿ ಸಹಿ ಮಾಡಿದ ಚೆಂಡನ್ನು ಉಡುಗೊರೆಯಾಗಿ ನೀಡಿದರು. ಅರ್ಜುನ್ ಅವರ ಈ ನಡೆಯು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿರೋ ಭಿನ್ನಾಭಿಪ್ರಾಯಗಳು ಒಂದೊಂದಾಗಿಯೇ ಬಹಿರಂಗವಾಗುತ್ತಿವೆ. ತಂಡದ ಆಟಗಾರರು ಒಬ್ಬರನ್ನೊಬ್ಬರು ಅನ್‌ಫಾಲೋ-ರೀಫಾಲೋ ಮಾಡುತ್ತಿರುವುದು ಅಭಿಮಾನಿಗಳನ್ನ ಗೊಂದಲಕ್ಕೀಡು ಮಾಡುತ್ತಿವೆ.  ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಇನ್ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಹಾಗಾಗಿ ಈ ಇಬ್ಬರು ಆಟಗಾರರ ನಡುವೆ ವಿವಾದವಿರಬಹುದು ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಸೆಪ್ಟೆಂಬರ್ 19 ರಂದು ಆರಂಭವಾಗಲಿರುವ ಮುಂಬರುವ ಏಷ್ಯನ್ ಕ್ರೀಡಾಕೂಟಕ್ಕಾಗಿ ಪಾಕಿಸ್ತಾನ 15 ಆಟಗಾರರ ತಂಡವನ್ನು ಪ್ರಕಟಿಸಿದೆ. 2026ರ ಟಿ 20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾಹಿಬ್‌ಜಾದಾ ಫರ್ಹಾನ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಅಬ್ದುಲ್ ಸಮದ್ ಉಪನಾಯಕನಾಗಿ ಆಡಲಿದ್ದಾರೆ. ಹಿರಿಯ ಆಟಗಾರರಾದ ಬಾಬರ್ ಅಜಮ್, ಶಾಹೀನ್ ಶಾ ಆಫ್ರಿದಿ, ಸಲ್ಮಾನ್ ಅಲಿ ಅಘಾ  ಸೇರಿದಂತೆ ಹಲವು ಆಟಗಾರರನ್ನು ಕೈಬಿಡಲಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಂತರ ನೈಟ್‌ಕ್ಲಬ್‌ ಹೋಗಿ ವಿವಾದ ಆದ ಬೆನ್ನಲ್ಲೇ ಬೆನ್‌ ಸ್ಟೋಕ್ಸ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ . ಶಿಷ್ಟಾಚಾರಗಳ ಉಲ್ಲಂಘನೆಯಾದ ಬಗ್ಗೆ ಇಸಿಬಿ ಪ್ರಸ್ತುತ ತನಿಖೆ ಆರಂಭಿಸಿದಂತೆ, 35 ವರ್ಷದ ನಾಯಕ ಬೆನ್‌ ಸ್ಟೋಕ್ಸ್‌ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಶಾಶ್ವತವಾಗಿ ಹಿಂದೆ ಸರಿಯುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ.

Kishor KV

Leave a Reply

Your email address will not be published. Required fields are marked *