ಸೋಲಿನ ಸುಳಿಯಲ್ಲಿ ಸೊಕ್ಕಿನ AUS – ಕಾಂಗರೂಗಳ ಕಾಲು ಮುರಿದ ಬಾಂಗ್ಲಾ
ಬಲಿಷ್ಠ ಆಸ್ಟ್ರೇಲಿಯಾ ಬಲಹೀನವಾಗಿದ್ದೇಗೆ?

ವಿಶ್ವಕ್ರಿಕೆಟ್ನ ಇತಿಹಾಸವನ್ನ ಕೆದಕಿದ್ರೆ ಅಲ್ಲಿ ಆಸ್ಟ್ರೇಲಿಯಾ ಅತ್ಯಂತ ಬಲಿಷ್ಠ ತಂಡ. ಐಸಿಸಿ ನಡೆಸುವ ನಾಲ್ಕೂ ಮಾದರಿಯ ವಿಶ್ವಕಪ್ಗಳನ್ನ ಗೆದ್ದಿರೋ ಮೊದಲ ತಂಡ. ಅಷ್ಟೇ ಯಾಕೆ ಮೆನ್ಸ್ ಕ್ರಿಕೆಟ್ನಲ್ಲಿ ಒಟ್ಟು 10 ಐಸಿಸಿ ಟ್ರೋಫಿಗಳನ್ನು ಗೆದ್ದು ಬೀಗಿದ್ದಾರೆ. ಏಕದಿನ ಮಾದರಿಯಲ್ಲಿ ಹಾಲಿ ಚಾಂಪಿಯನ್ ಆಗಿರೋದ್ರ ಜೊತೆಗೆ ವಿಶ್ವದಾಖಲೆಯ 6 ಬಾರಿ ಒಡಿಐ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ. ಆದ್ರೆ 2023ರಲ್ಲಿ ಏಕದಿನ ಟ್ರೋಫಿ ಗೆದ್ದು ಟ್ರೋಫಿ ಮೇಲೆ ಕಾಲಿಟ್ಟಿದ್ದೇ ಇಟ್ಟಿದ್ದು ಆವತ್ತಿನ ಆಸೀಸ್ನ ಅಧಃಪತನ ಸ್ಟಾರ್ಟ್ ಆಗಿದೆ. ಕಳೆದ ವಾರವಷ್ಟೇ ಪಾಕಿಸ್ತಾನ ವಿರುದ್ಧ ಸರಣಿ ಸೋತಿದ್ದ ಆಸ್ಟ್ರೇಲಿಯಾ ಈಗ ಬಾಂಗ್ಲಾ ವಿರುದ್ಧವೂ ಸೋತು ಸುಣ್ಣವಾಗಿದೆ.
ಇದನ್ನೂ ಓದಿ : ಲಂಕಾದಲ್ಲಿ ಭಾರತ A ತಂಡಕ್ಕೆ ರೋಚಕ ಗೆಲುವು- 8 ರನ್ಗಳಿಂದ ಸೋತ ಶ್ರೀಲಂಕಾ
ಆಸ್ಟ್ರೇಲಿಯಾ ಅಂದ್ರೆ ಬಲಿಷ್ಠ ತಂಡ. ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ದಿ ಬೆಸ್ಟ್ ಎನ್ನುವಂಥ ಟೀಂ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಆಸ್ಟ್ರೇಲಿಯಾ ಪವರ್ ಲೆಸ್ ಆಗಿದೆ. ಅದ್ರಲ್ಲೂ ಏಕದಿನ ಮಾದರಿಯಲ್ಲಂತೂ ತೀರಾ ಡಮ್ಮಿ ಟೀಂ ಅನ್ನೋ ಥರ ಪರ್ಫಾಮ್ ಮಾಡ್ತಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ಸರಣಿ ಸೋತಿದ್ದ ಆಸ್ಟ್ರೇಲಿಯಾ ಈಗ ಬಾಂಗ್ಲಾದೇಶದ ವಿರುದ್ಧವೂ ಪಂದ್ಯವನ್ನ ಸೋತಿದ್ದಾರೆ.
21 ವರ್ಷಗಳ ಬಳಿಕ ಆಸ್ಟ್ರೇಲಿಯಾ ಬಗ್ಗು ಬಡಿದ ಬಾಂಗ್ಲಾ!
ಆಸ್ಟ್ರೇಲಿಯಾ ಮತ್ತು ಬಾಂಗ್ಲಾ ನಡುವಿನ ಏಕದಿನ ಪಂದ್ಯ ಅಂತಾ ಬಂದಾಗ ಸಣ್ಣ ಮಕ್ಕಳು ಕೂಡ ಆಸ್ಟ್ರೇಲಿಯಾನೇ ವಿನ್ ಅಂದುಬಿಡ್ತಾರೆ. ಯಾಕಂದ್ರೆ ರೆಕಾರ್ಡ್ಸ್ ಕೂಡ ಅದನ್ನೇ ಹೇಳುತ್ತೆ. ಆದ್ರೆ ಅದೇ ಆಸೀಸ್ ವಿರುದ್ಧ ಬಾಂಗ್ಲಾ ಪಡೆ ಗೆದ್ದು ಬೀಗಿದೆ. ಕಳೆದ ಎರಡು ದಶಕಗಳಿಂದ ಬಾಂಗ್ಲಾ ಪಾಲಿಗೆ ಮರೀಚಿಕೆಯಾಗಿದ್ದ ಆಸೀಸ್ ವಿರುದ್ಧದ ಗೆಲುವು ಕೊನೆಗೂ ದಕ್ಕಿದೆ.
ಕಾಂಗರೂಗಳ ಕಾಲು ಕಟ್!
ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯ
ಬಾಂಗ್ಲಾದೇಶ್ ತಂಡವು 20 ಓವರ್, 8 ವಿಕೆಟ್ ಕಳೆದುಕೊಂಡು 284 ರನ್
285 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ 191 ರನ್ ಕಲೆಹಾಕಲಷ್ಟೇ ಸಾಧ್ಯ
ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 86 ರನ್ಗಳ ಭರ್ಜರಿ ಗೆಲುವು
2005 ರ ಬಳಿಕ ಒಮ್ಮೆಯೂ ಕಾಂಗರೂ ಪಡೆಯನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ
ಉಭಯ ತಂಡಗಳು 36 ವರ್ಷಗಳಿಂದ ಮುಖಾಮುಖಿಯಾಗುತ್ತಿದ್ದು 2ನೇ ಗೆಲುವು
ಬಾಂಗ್ಲಾ ವಿರುದ್ಧ ಏಕದಿನ ಪಂದ್ಯವನ್ನು ಸೋಲದ ಏಕೈಕ ತಂಡ ಎಂಬ ದಾಖಲೆ
2006 ರ ನಂತರ ಉಭಯ ತಂಡಗಳು ಒಟ್ಟು 6 ಏಕದಿನ ಪಂದ್ಯಗಳನ್ನು ಆಡಿದ್ದವು
ಎರಡೂ ದ್ವಿಪಕ್ಷೀಯ ಸರಣಿಗಳನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು
ಬಾಂಗ್ಲಾದೇಶದ ವಿರುದ್ಧ ಅವರದ್ದೇ ನೆಲದಲ್ಲಿ ಕನಿಷ್ಠ ಒಂದು ಪಂದ್ಯವನ್ನಾದರೂ ಸೋಲು
ಇನ್ನು ಆಸ್ಟ್ರೇಲಿಯಾದ ಸೋಲಿನ ಸುಳಿ ಹೊಸದೇನಲ್ಲ. 2023ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಗೆದ್ದಿದ್ದ ಆಸ್ಟ್ರೇಲಿಯಾ ಅತಿರೇಕವಾಗಿ ವರ್ತಿಸಿತ್ತು. ಆಸ್ಟ್ರೇಲಿಯಾ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟಿರುವ ಫೋಟೋವನ್ನು ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ರು. ಸಾಕಷ್ಟು ಟೀಕೆಗಳು ವ್ಯಕ್ತವಾದ್ರೂ ಸಮರ್ಥನೆ ಮಾಡಿಕೊಂಡಿದ್ರು. ಆದ್ರೆ ಆಸೀಸ್ನ ಡೌನ್ಫಾಲ್ ಅಲ್ಲಿಂದಲೇ ಆರಂಭ ಕೂಡ ಆಗಿದ್ದು. ಇದಾದ ಮೇಲೆ ಸಾಲು ಸಾಲು ಸರಣಿಗಳನ್ನ ಸೋತಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ವಿರುದ್ಧವೂ ಸರಣಿ ಸೋತಿದ್ರು. ಐಸಿಸಿ ಟೂರ್ನಿಗಳಲ್ಲೂ ಗೆಲ್ಲೋಕೆ ಆಗಿಲ್ಲ. ಕಳೆದ ಮಾರ್ಚ್ನಲ್ಲಿ ಟಿ-20 ವಿಶ್ವಕಪ್ನಲ್ಲೂ ಲೀಗ್ ಸ್ಟೇಜ್ನಲ್ಲೇ ಹೊರಬಿದ್ದಿದ್ರು. ಒಟ್ನಲ್ಲಿ ಹಿಂದೆಲ್ಲಾ ಆಸ್ಟ್ರೇಲಿಯಾ ಅಂದ್ರೆ ಸೋಲಿಲ್ಲದ ಸರದಾರರು ಅನ್ನೋ ಥರ ಇದ್ರು. ಆದ್ರೀಗ ಐತಿಹಾಸಿಕ ಸೋಲುಗಳದ್ದೇ ಬಿದ್ದು ಒದ್ದಾಡ್ತಿದ್ದಾರೆ.

ನೋಡಿರಿ

