ಫಾರಿನ್ ಬೆಕ್ಕು, ಮಲೆನಾಡಿನ ಬೆಕ್ಕು ಫೈಟಿಂಗ್ – 20 ಮಂದಿ ಮೇಲೆ ಪೊಲೀಸ್ ಕೇಸ್

ಫಾರಿನ್ ಬೆಕ್ಕು, ಮಲೆನಾಡಿನ ಬೆಕ್ಕು ಫೈಟಿಂಗ್ – 20 ಮಂದಿ ಮೇಲೆ ಪೊಲೀಸ್ ಕೇಸ್
funny playful cats fighting in garden jumping up in the air

ಆಸ್ತಿಗಾಗಿ ಹೊಡೆದಾಡುವುದು ನೋಡಿದ್ದೇವೆ, ಹುಡುಗಿಗಾಗಿ ಕಿತ್ತಾಟ ನೋಡಿದ್ದೇವೆ, ಇದೀಗ ಬೆಕ್ಕುಗಳ ನಡುವಿನ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಜೊತೆಗೆ 20 ಮಂದಿ ಮೇಲೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ:ಹೆಚ್‌ಡಿ ದೇವೇಗೌಡರಿಗೆ ಕೈಕೊಟ್ಟ ಎನ್‌ಡಿಎ – ಪ್ರೊ ಎಂ ನಾಗರಾಜಗೆ ರಾಜ್ಯಸಭೆ ಟಿಕೆಟ್

ವಿದೇಶಿ ಬೆಕ್ಕು ಹಾಗೂ ಸ್ವದೇಶಿ ಬೆಕ್ಕಗಳು ಕಾದಾಟದ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ನಡುವೆ ಹೊಡೆದಾಟ ನಡೆದಿರುವ ವಿಚಿತ್ರ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ನಡೆದಿದೆ. ನಾಗಪಾತ್ರಿ ರಾಜಶೇಖರ್ ಎಂಬುವವರ ಮನೆಯಲ್ಲಿ ವಿದೇಶಿ ಬೆಕ್ಕು ಇತ್ತು. ಅದೇ ಪಕ್ಕದ ಮನೆಯ ನಿವಾಸಿ ನಾಗರಾಜ್ ಎಂಬುವರ ಬಳಿ ಊರಿನ (ದೇಸಿ) ಬೆಕ್ಕು ಇತ್ತು. ರಾಜಶೇಖರ್ ಮನೆಯ ವಿದೇಶಿ ಬೆಕ್ಕಿಗೆ, ನಾಗರಾಜ್ ಮನೆಯ ಊರಿನ ಬೆಕ್ಕು ಕಚ್ಚಿದ್ಯಂತೆ. ಇದೇ ವಿಚಾರಕ್ಕೆ ನಾಗಪಾತ್ರಿ ರಾಜಶೇಖರ್ ಹಾಗೂ ನಾಗರಾಜ್ ಮನೆಯವರ ನಡುವೆ ಗಲಾಟೆ ನಡೆದಿದೆ. ತಮ್ಮ ತಮ್ಮ ಬೆಕ್ಕುಗಳ ಪರ ಎರಡೂ ಮನೆಯವರು ಜಗಳ ಮಾಡಿದ್ದಾರೆ. ಗಲಾಟೆ ಮಿತಿಮೀರಿ, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ಗಲಾಟೆಯಲ್ಲಿ ಇಬ್ಬರಿಗೆ ಗಾಯವಾಗಿದೆ. ಈ ಸಂಬಂಧ ಇಬ್ಬರು ಗಾಯಾಳುಗಳನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರ ನಂತರ ಆಗುಂಬೆ ಪೊಲೀಸ್ ಠಾಣೆಯಲ್ಲಿ ನಾಗಪಾತ್ರಿ ರಾಜಶೇಖರ್ ಹಾಗೂ ನಾಗರಾಜ್ ಕುಟುಂಬಸ್ಥರು ದೂರು, ಪ್ರತಿ ದೂರು ದಾಖಲಿಸಿದ್ದಾರೆ. ಸದ್ಯ ಈ ಎರಡೂ ಮನೆಯವರ ದೂರಿನ ಅನ್ವಯ 20 ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದೆ.

Sulekha

Leave a Reply

Your email address will not be published. Required fields are marked *