ಬೆಂಗಳೂರಿಗೆ ಬಂದ ಹಾರ್ದಿಕ್ ಪಾಂಡ್ಯಗೆ ಮುತ್ತಿಗೆ ಹಾಕಿದ ಫ್ಯಾನ್ಸ್ – ಗೆಳತಿ ಮಹಿಕಾ ಜೊತೆ ಪಾಂಡ್ಯ ಪರದಾಟ
ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಅಪ್ಪ ಆಗ್ತಿದ್ದಾರಾ?

ಐಪಿಎಲ್ ಟೂರ್ನಿ ಮುಗಿದ ಮೇಲೆ ಮುಂಬೈ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಸದ್ಯ ರಿಲಾಕ್ಸ್ ಆಗಿದ್ದಾರೆ. ಮಂಗಳವಾರ ಹಾರ್ದಿಕ್ ಪಾಂಡ್ಯ ಗೆಳತಿ ಮಹಿಕಾ ಶರ್ಮಾ ಜೊತೆ ಬೆಂಗಳೂರಿಗೆ ವಿಸಿಟ್ ಕೊಟ್ಟಿದ್ದರು. ಆದರೆ, ಇವರಿಗೆ ಫ್ಯಾನ್ಸ್ ಕೊಟ್ಟ ಕಾಟ ಅಷ್ಟಿಷ್ಟಲ್ಲ.
ಇದನ್ನೂ ಓದಿ:ಲಂಕಾದಲ್ಲಿ ಭಾರತ A ತಂಡಕ್ಕೆ ರೋಚಕ ಗೆಲುವು- 8 ರನ್‌ಗಳಿಂದ ಸೋತ ಶ್ರೀಲಂಕಾ
ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಗರ್ಲ್ಫ್ರೆಂಡ್ ಮಹಿಕಾ ಶರ್ಮಾ ಜೊತೆ ಬೆಂಗಳೂರಿಗೆ ಬಂದಿದ್ದಾರೆ. ಯಲಹಂಕ ನ್ಯೂ ಟೌನ್‌ನಲ್ಲಿರುವ ಪ್ರೈಮಾ ಡಯಾಗ್ನೋಸ್ಟಿಕ್ಸ್ಗೆ ಹಾರ್ದಿಕ್ ಪಾಂಡ್ಯ ಮತ್ತು ಗರ್ಲ್ ಫ್ರೆಂಡ್ ಮಹಿಕಾ ಶರ್ಮಾ ಆಗಮಿಸಿದ್ದರು. ಐಷಾರಾಮಿ ಫೆರಾರಿ ಕಾರ್ನಲ್ಲಿ ಬಂದಿದ್ದ ಹಾರ್ದಿಕ್ ಪಾಂಡ್ಯರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಹಾರ್ದಿಕ್ ಪಾಂಡ್ಯ ಬೆಂಗಳೂರಿಗೆ ಬಂದ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಪಾಂಡ್ಯರನ್ನು ನೋಡಲು ಮುಗಿಬಿದ್ದಿದ್ದಾರೆ. ಡಯಾಗ್ನೋಸ್ಟಿಕ್ಸ್ ಕಟ್ಟಡ ಮತ್ತು ಫೆರಾರಿ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಫ್ಯಾನ್ಸ್ಗಳ ತಳ್ಳಾಟ ಮತ್ತು ನೂಕಾಟದಿಂದ ಹಾರ್ದಿಕ್ ಪಾಂಡ್ಯ, ಹೊರಗಡೆ ಬರಲಾಗದೇ ಪರದಾಟ ಅನುಭವಿಸಿದರು. ಕೊನೆಗೆ ಪೊಲೀಸರ ಭದ್ರತೆ ನಡುವೆ ಹಾರ್ದಿಕ್ ಪಾಂಡ್ಯ ಹಾಗೂ ಗೆಳತಿ ಮಹಿಕಾ ಶರ್ಮಾ ಹೊರ ಬಂದರು. ಹಾರ್ದಿಕ್ ಪಾಂಡ್ಯ, ಇತ್ತೀಚಿಗಷ್ಟೇ ಫೆರಾರಿ 12 ಸಿಲಿಂಡ್ರಿ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಬೆಲೆ ಸುಮಾರು 12 ಕೋಟಿ ರೂಪಾಯಿ. ಇದೇ ಕಾರಿನಲ್ಲಿ ಹಾರ್ದಿಕ್ ಪಾಂಡ್ಯ ಬೆಂಗಳೂರು ರೌಂಡ್ಸ್ ಹಾಕಿದ್ದಾರೆ. ಆದರೆ, ಅಭಿಮಾನಿಗಳು ಫೆರಾರಿ ಕಾರಿಗೆ ಮುತ್ತಿಗೆ ಹಾಕಿ ಹಾರ್ದಿಕ್ ಪಾಂಡ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಕೊನೆಗೂ ಫ್ಯಾನ್ಸ್ ಮುತ್ತಿಗೆಯಿಂದ ಹಾರ್ದಿಕ್ ಪಾಂಡ್ಯ ಹೊರಬರುವುದರೊಳಗೆ ಸಾಕು ಸಾಕಾಗಿ ಹೋಗಿದ್ದರು.
ಹಾರ್ದಿಕ್ ಪಾಂಡ್ಯ ಯಲಹಂಕ ನ್ಯೂ ಟೌನ್‌ನಲ್ಲಿರುವ ಪ್ರಸಿದ್ಧ ಪ್ರೈಮಾ ಡಯಾಗ್ನೋಸ್ಟಿಕ್ಸ್ (Prima Diagnostics) ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿರುವುದು ಕೂಡಾ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಾತ್ರೋರಾತ್ರಿ ಈ ಡಯಾಗ್ನೋಸ್ಟಿಕ್ಸ್ ಕೇಂದ್ರಕ್ಕೆ ಬಂದಿಳಿದಿರುವುದು, ಅದು ಕೂಡಾ ಗೆಳತಿ ಜೊತೆ ಬಂದಿರುವುದು ನೋಡಿ, ಹಾರ್ದಿಕ್ ಮತ್ತೊಮ್ಮೆ ಅಪ್ಪ ಆಗ್ತಿದ್ದಾರಾ ಅನ್ನೋ ಚರ್ಚೆಯೂ ಶುರುವಾಗಿದೆ.

ನೋಡಿರಿ

