ಲಂಕಾದಲ್ಲಿ ಭಾರತ A ತಂಡಕ್ಕೆ ರೋಚಕ ಗೆಲುವು- 8 ರನ್‌ಗಳಿಂದ ಸೋತ ಶ್ರೀಲಂಕಾ

ಲಂಕಾದಲ್ಲಿ ಭಾರತ A ತಂಡಕ್ಕೆ ರೋಚಕ ಗೆಲುವು-  8 ರನ್‌ಗಳಿಂದ ಸೋತ ಶ್ರೀಲಂಕಾ

ಶ್ರೀಲಂಕಾ ವಿರುದ್ಧ ಭಾರತ A ತಂಡ ರೋಚಕ ಗೆಲುವು ದಾಖಲಿಸಿದೆೆ. ಲಂಕಾ ಒಂದು ಹಂತದಲ್ಲಿ 47 ಓವರ್‌ಗಳಲ್ಲಿ 6 ವಿಕೆಟ್‌ಗೆ 261 ರನ್‌ ಸೇರಿಸಿ ಸುಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಲಂಕಾ 18 ಎಸೆತಗಳಲ್ಲಿ 16 ರನ್‌ ಕಲೆ ಹಾಕಬೇಕಿತ್ತು. 49ನೇ ಓವರ್‌ ಬೌಲ್‌ ಮಾಡಿದ ಅರ್ಷದ್ ಖಾನ್‌ ಬಿಗುವಿನ ದಾಳಿ ನಡೆಸಿದರು. ಈ ಓವರ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಪಡೆದ ಅರ್ಷದ್ ಖಾನ್‌ ಲಂಕಾ ಗೆಲುವಿನ ಆಸೆಗೆ ಕೊಳ್ಳಿ ಇಟ್ಟರು.

ಭಾರತ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 277 ರನ್‌ ಸೇರಿಸಿತು. ಟೀಂ ಇಂಡಿಯಾ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ನಿರೋಶನ್ ಡಿಕ್ವೆಲ್ಲಾ, ಅವಿಷ್ಕಾ ಫರ್ನಾಂಡೋ ಜೋಡಿ ಮೊದಲ ವಿಕೆಟ್‌ಗೆ 16.3 ಓವರ್‌ಗಳಲ್ಲಿ 93 ರನ್‌ ಸೇರಿಸಿತು. ಅವಿಷ್ಕಾ ಫರ್ನಾಂಡೋ 7 ಬೌಂಡರಿ ನೆರವಿನಿಂದ 45 ರನ್‌ ಸಿಡಿಸಿದರು. ಇನ್ನೊಬ್ಬ ಆರಂಭಿಕ ಆಟಗಾರ ನಿರೋಶನ್ ಡಿಕ್ವೆಲ್ಲಾ 6 ಬೌಂಡರಿ ಸಹಿತ 47 ರನ್‌ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಭರ್ಜರಿ ಜೊತೆಯಾಟ 4ನೇ ವಿಕೆಟ್‌ಗೆ ಸದೀರ ಸಮರವಿಕ್ರಮ ಹಾಗೂ ಸಹನ್ ಅರಚ್ಚಿಗೆ ಜೋಡಿ 74 ಎಸೆತಗಳಲ್ಲಿ 78 ರನ್‌ ಸೇರಿಸಿತು. ಸದೀರ ಸಮರವಿಕ್ರಮ 4 ಬೌಂಡರಿ ಸಹಾಯದಿಂದ 46 ರನ್‌ ಬಾರಿಸಿದರೆ, ನಾಯಕ ಸಹನ್ ಅರಚ್ಚಿಗೆ 72 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 74 ರನ್‌ ಬಾರಿಸಿ ಔಟ್ ಆದರು. ಉಳಿದಂತೆ ವನುಜಾ ಸಹನ್ 23 ರನ್‌ ಸಿಡಿಸಿದರು. ಶ್ರೀಲಂಕಾ ಎ ತಂಡ 48.5 ಓವರ್‌ಗಳಲ್ಲಿ 269 ರನ್‌ ಸೇರಿಸಿ ಆಲೌಟ್ ಆಯಿತು.

ಇದನ್ನೂ ಓದಿ: ODIನಲ್ಲಿ ಸೂರ್ಯವಂಶಿ ಫ್ಲಾಪ್ -ಲಂಕಾದಲ್ಲಿ ಗಾಯಕ್ವಾಡ್ ಸೆಂಚುರಿ

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತದ ಆರಂಭ ಕಳಪೆಯಾಗಿತ್ತು. ಯುವ ಆಟಗಾರ ವೈಭವ್ ಸೂರ್ಯವಂಶಿ 4 ಬೌಂಡರಿ ಸಹಿತ 14 ರನ್ ಬಾರಿಸಿ ಔಟ್ ಆದರು. ವಿಕೆಟ್‌ ಕೀಪರ್ ಬ್ಯಾಟರ್‌ ಪ್ರಭ್‌ಸಿಮ್ರನ್‌ ಸಿಂಗ್ ಸಹ ಬೇಗನೆ ವಿಕೆಟ್‌ ಒಪ್ಪಿಸಿದರು. ಪ್ರಿಯಾಂಶ್ ಆರ್ಯ ಅವರ ಆಟ 32 ರನ್‌ಗಳಿಗೆ ಕೊನೆಯಾಯಿತು.

Kishor KV

Leave a Reply

Your email address will not be published. Required fields are marked *