ODIನಲ್ಲಿ ಸೂರ್ಯವಂಶಿ ಫ್ಲಾಪ್ -ಲಂಕಾದಲ್ಲಿ ಗಾಯಕ್ವಾಡ್ ಸೆಂಚುರಿ
BCCIಗೆ ಸೂರ್ಯ ವಾರ್ನಿಂಗ್!

ODIನಲ್ಲಿ ಸೂರ್ಯವಂಶಿ ಫ್ಲಾಪ್  -ಲಂಕಾದಲ್ಲಿ ಗಾಯಕ್ವಾಡ್ ಸೆಂಚುರಿBCCIಗೆ ಸೂರ್ಯ ವಾರ್ನಿಂಗ್!

ಐಪಿಎಲ್ ಟೂರ್ನಿ ಈಗ ರೋಚಕ ಘಟ್ಟ ತಲುಪಿದೆ. ಈ ಟೂರ್ನಿಯ ಅಂಗಳದಲ್ಲಿ ನಡೆಯುತ್ತಿರುವ ಕೆಲ ಸ್ವಾರಸ್ಯಕರ ಘಟನೆಗಳ ಸಂಕ್ಷಿಪ್ತ ಸುದ್ದಿ ಇಲ್ಲಿದೆ.

ಇದನ್ನೂ ಓದಿ: T-20Iನಿಂದ ರಜತ್ ಬಿಟ್ಟಿದ್ದೇ ಸರಿ – CSK ಮಾಜಿ ಪ್ಲೇಯರ್​ ಗ್ಯಾಕೆ ಉರಿ?

ವೈಭವ್ ಸೂರ್ಯವಂಶಿ ಭಾರತ A ತಂಡದ ಪರ ಚೊಚ್ಚಲ ಏಕದಿನ ಪಂದ್ಯದಲ್ಲಿ 14 ರನ್‌ಗಳಿಗೆ ಔಟ್ ಆಗಿದ್ದಾರೆ. ಶ್ರೀಲಂಕಾ A ವಿರುದ್ಧದ ತ್ರಿಕೋನ ಏಕದಿನ ಸರಣಿಯಲ್ಲಿ  ಭಾರತ A ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿತು. ವೈಭವ್ ಓಪನರ್ 12 ಎಸೆತಗಳಲ್ಲಿ ಆಗಿ ಕಣಕ್ಕಿಳಿದು 3 ಬೌಂಡರಿ ಸಹಿತ 14 ರನ್ ಸಿಡಿಸಿ ಔಟ್ ಆದ್ರು.

ಶ್ರೀಲಂಕಾದ ಡಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ  ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ A ಪರ  ರುತುರಾಜ್ ಗಾಯಕ್ವಾಡ್ ಭರ್ಜರಿ ಶತಕ ಸಿಡಿಸಿದ್ದಾರೆ.  114 ಎಸೆತಗಳನ್ನ ಎದುರಿಸಿದ ಗಾಯಕ್ವಾಡ್  6 ಬೌಂಡರಿ 3 ಸಿಕ್ಸರ್ ಬಾರಿಸಿ ಸೆಂಚುರಿ ಸಿಡಿಸಿದ್ದಾರೆ. 2025ರ ಡಿಸೆಂಬರ್‌ನಲ್ಲಿ ಟೀ ಇಂಡಿಯಾ ಪರ ಗಾಯಕ್ವಾಡ್ ODIನಲ್ಲಿ ಸೆಂಚುರಿ ಸಿಡಿಸಿದ್ರು. ಆದ್ರೆ ಈ ಸಲ ಐಪಿಎಲ್‌ನಲ್ಲಿ ಸಿಎಸ್‌ಕೆ ನಾಯಕನಾಗಿ ಗಾಯಕ್ವಾಡ್‌ ಹೆಚ್ಚು ಮಿಂಚಲಿಲ್ಲ, ಆದ್ರೆ ಟೀಂ ಇಂಡಿಯಾ A ಪರ ಇವತ್ತು ಸೆಂಚುರಿ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

ಮುಂಬೈ ಟಿ20 ಲೀಗ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಲಿಂಗ್​ನಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಅರ್ಜುನ್ ತೆಂಡೂಲ್ಕರ್ 3 ಓವರ್​ಗಳಲ್ಲಿ ಕೇವಲ 11 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಬ್ಯಾಟಿಂಗ್​ನಲ್ಲಿ 34 ಎಸೆತಗಳನ್ನು ಎದುರಿಸಿದ ಅರ್ಜುನ್, 5 ಭರ್ಜರಿ ಸಿಕ್ಸರ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 66 ರನ್ ಬಾರಿಸಿದ್ದರು. ಈ ಭರ್ಜರಿ ಆಲ್​ರೌಂಡರ್ ಪ್ರದರ್ಶನಕ್ಕೆ ಅರ್ಜುನ್ ತೆಂಡೂಲ್ಕರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಟಿ20I ಯಲ್ಲಿ ಸ್ಥಾನ ಕಳೆದುಕೊಂಡ ಸೂರ್ಯಕುಮಾರ್ ಬಿಸಿಸಿಐಗೆ ತಮ್ಮ ಬ್ಯಾಟ್ ಮೂಲಕ ಉತ್ತರವನ್ನ ನೀಡಿದ್ದಾರೆ. ಟಿ20 ಮುಂಬೈ ಲೀಗ್‌ ಟೂರ್ನಿಯ ಪಂದ್ಯವೊಂದರಲ್ಲಿ ಕೇವಲ 36 ಎಸೆತಗಳಲ್ಲಿ 72 ರನ್‌ ಸಿಡಿಸಿದ್ದಾರೆ.  ಸೂರ್ಯಕುಮಾರ್‌ ಯಾದವ್‌ ಅವರ ಅಬ್ಬರದ ಬ್ಯಾಟಿಂಗ್‌ ಬಲದಿಂದ ಟ್ರಯಾಂಫ್‌ ನೈಟ್‌ ನಾರ್ಥ್‌ ಈಸ್ಟ್‌ ಮುಂಬೈ ತಂಡ, 153 ರನ್‌ಗಳ ಗುರಿಯನ್ನು ಇನ್ನೂ ನಾಲ್ಕು ಓವರ್‌ಗಳು ಬಾಕಿ ಇರುವಾಗಲೇ ಸುಲಭವಾಗಿ ಚೇಸ್‌ ಮಾಡಿ ಗೆದ್ದಿದೆ. 

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುಬ್ರಮಣ್ಯಂ ಬದ್ರೀನಾಥ್  ಆರ್‌ಸಿಬಿ ನಾಯಕ ರಜತ್ ಪಾಟಿದಾರ್‌ಗೆ ಟೀಂ ಇಂಡಿಯಾ ಟಿ20I ತಂಡದಲ್ಲಿ ಚಾನ್ಸ್ ನೀಡದೆ ಇರುವುದು ಒಳ್ಳೆಯ ನಿರ್ಧಾರ ಅಂತ ಹೇಳಿದ್ದಾರೆ. ಒಂದು ವೇಳೆ ಪಾಟಿದಾರ್‌ಗೆ ಅವಕಾಶ ನೀಡಬೇಕೆಂದರೆ ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ ಅಥವಾ ಇಶಾನ್ ಕಿಶನ್ ಅವರಲ್ಲಿ ಒಬ್ಬರನ್ನು ಕೈಬಿಡಬೇಕಾಗುತ್ತದೆ. ಆದರೆ ಪ್ರಸ್ತುತ ಫಾರ್ಮ್ ಆಧಾರದ ಮೇಲೆ ಅದು ಸಾಧ್ಯವಿಲ್ಲ. ಹೀಗಾಗಿ ಸದ್ಯಕ್ಕೆ ಭಾರತ ತಂಡದಲ್ಲಿ ರಜತ್ ಪಾಟಿದಾರ್​ ಅವರಿಗೆ ಯಾವುದೇ ಜಾಗ ಖಾಲಿ ಇಲ್ಲ  ಎಂದು ಬದ್ರೀನಾಥ್ ಹೇಳಿದ್ದಾರೆ.

ಟೀಮ್ ಇಂಡಿಯಾದ ನೂತನ ಟಿ20 ನಾಯಕರಾಗಿ ಶ್ರೇಯಸ್ ಅಯ್ಯರ್ ನೇಮಕವಾಗುತ್ತಿದ್ದಂತೆ, ಅವರ ತಂದೆ ಸಂತೋಷ್ ಅಯ್ಯರ್ ಅವರು ನೃತ್ಯದ ಮೂಲಕ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದೆ. ಸಂತೋಷ್ ಅಯ್ಯರ್ ಅವರು ತಮ್ಮ ನಿವಾಸದಲ್ಲಿ ಸ್ನೇಹಿತರ ಜೊತೆ  ಟೀಮ್ ಇಂಡಿಯಾ ಘೋಷಣೆಗಾಗಿ ಕಾಯುತ್ತಿದ್ದರು. ಇತ್ತ ನಾಯಕನಾಗಿ ಶ್ರೇಯಸ್ ಅಯ್ಯರ್ ಹೆಸರು ಘೋಷಿಸಿದ ಬೆನ್ನಲ್ಲೇ ಸ್ನೇಹಿತರೊಂದಿಗೆ ಸೇರಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

ಮಾನವ್ ಸುತಾರ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದು ರೋಹಿತ್ ಶರ್ಮಾ ಸೇರಿದಂತೆ ಭಾರತದ ಇತಿಹಾಸದ ಶ್ರೇಷ್ಠ ಆಟಗಾರರ ಎಲೈಟ್ ಕ್ಲಬ್‌ಗೆ ಸೇರಿದ್ದಾರೆ. ಚೊಚ್ಚಲ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ 9ನೇ ಭಾರತೀಯ ಹಾಗೂ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ 10ನೇ ಬೌಲರ್ ಎಂಬ ಹೆಗ್ಗಳಿಕೆಗೆ ಸುತಾರ್ ಪಾತ್ರರಾಗಿದ್ದಾರೆ.

ಮುಲ್ಲನ್‌ಪುರದಲ್ಲಿ ನಡೆದ ಅಫ್ಫಾನ್‌ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಗೆದ್ದರು ಯಾವುದೇ ಪ್ರಯೋಜನವಾಗಿಲ್ಲ. ಏಕೆಂದರೆ ಈ ಪಂದ್ಯವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ   ಭಾಗವಾಗಿರಲಿಲ್ಲ. ಹೀಗಾಗಿ ಭಾರತ 300 ರನ್​ಗಳಿಂದ ಗೆದ್ದರೂ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

ಜುಲೈ 1 ರಿಂದ ನಡೆಯಲಿರುವ ಭಾರತ vs ಇಂಗ್ಲೆಂಡ್ ಟಿ20 ಪಂದ್ಯಗಳ ಸಮಯದಲ್ಲಿ ದಿಢೀರ್ ಬದಲಾವಣೆ ಮಾಡಲಾಗಿದೆ. ಎರಡನೇ ಟಿ20 ಹೊರತುಪಡಿಸಿ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 11:00 ಗಂಟೆಗೆಪ್ರಾರಂಭವಾಗಬೇಕಿತ್ತು. ಆದಾಗ್ಯೂ, ಭಾರತದಲ್ಲಿ ವೀಕ್ಷಕರಿಗೆ ಅನುಕೂಲವಾಗುವಂತೆ ಒಂದು ಗಂಟೆ ಮುಂಚಿತವಾಗಿ ಪಂದ್ಯ ಪ್ರಾರಂಭಿಸಲು ಇಸಿಬಿ ನಿರ್ಧರಿಸಿದೆ. ಪರಿಣಾಮವಾಗಿ, ಈ ಪಂದ್ಯಗಳು ಈಗ ಭಾರತೀಯ ಕಾಲಮಾನ ರಾತ್ರಿ 10:00 ಗಂಟೆಗೆ ಪ್ರಾರಂಭವಾಗಲಿವೆ.

ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆದ್ದ ಬಳಿಕ ತಂಡದ ಶಿಷ್ಟಾಚಾರ ನಿಯಮಗಳನ್ನು ಉಲ್ಲಂಘಿಸಿ ನೈಟ್‌ಕ್ಲಬ್‌ಗೆ ಭೇಟಿ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ವೇಗಿ ಗಸ್ ಕೂಡ ಸ್ಟೋಕ್ಸ್ ಜೊತೆಗೆ ಭಾಗಿಯಾಗಿರುವುದರಿಂದ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ  ಈ ಇಬ್ಬರ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದೆ. ಈ ಘಟನೆಯಿಂದಾಗಿ ಸ್ಟೋಕ್ಸ್ ಅವರನ್ನು ನಾಯಕತ್ವದಿಂದ ತೆಗೆದುಹಾಕುವ ಸಾಧ್ಯತೆಯಿದೆ ಎಂದು ಚರ್ಚೆ ಆಗ್ತಿದೆ.

Kishor KV

Leave a Reply

Your email address will not be published. Required fields are marked *