PAKನಲ್ಲಿ ಪ್ಲೇಯರ್ಸ್ ಸುತ್ತ GU*N – ಪಾಪಿಗಳ ಕರಾಳತೆ ಬಿಚ್ಚಿಟ್ಟ ದಾಸ್
ಭಾರತಕ್ಕೆ ಬರಲು ಕಾಯ್ತಿದ್ಯಾ ಬಾಂಗ್ಲಾ?

2026ರ ಟಿ-20 ವಿಶ್ವಕಪ್ ಮುಗ್ದು ಮೂರು ತಿಂಗಳಾಯ್ತು. ಆದ್ರೆ ಬಾಂಗ್ಲಾದೇಶದ ಆಟಗಾರರಿಗೆ ಮಾತ್ರ ಈ ಟೂರ್ನಿ ತುಂಬಾನೇ ಕಾಡ್ತಿದೆ. ಯಾಕಂದ್ರೆ ಭಾರತಕ್ಕೆ ಬಂದು ಪಂದ್ಯಗಳನ್ನ ಆಡಲ್ಲ ಅಂತಾ ಕ್ಯಾತೆ ತೆಗೆದಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಟೂರ್ನಿಯಿಂದಲೇ ಹಿಂದೆ ಸರೀದಿತ್ತು. ಭದ್ರತೆಯ ಕಾರಣ ನೀಡಿ ಹೊರನಡೆದಿದ್ರು. ಆದ್ರೆ ಅಸಲಿಗೆ ಭದ್ರತೆಯ ಭಯ ಇರೋದು ಎಲ್ಲಿ ಅನ್ನೋದನ್ನ ಸ್ವತಃ ಬಾಂಗ್ಲಾ ಆಟಗಾರನೇ ಬಾಯಿಬಿಟ್ಟಿದ್ದಾರೆ. ಜೊತೆಗೆ ಭಾರತಕ್ಕೆ ಬಂದು ಪಂದ್ಯಗಳನ್ನ ಆಡೋಕೆ ಬಾಂಗ್ಲಾ ಪ್ಲೇಯರ್ಸ್ ಕಾಯ್ತಾ ಇದ್ದಾರೆ ಅನ್ನೋದು ಕೂಡ ಸಾಬೀತಾಗಿದೆ.
ಇದನ್ನೂ ಓದಿ : ಚೊಚ್ಚಲ ಪಂದ್ಯದಲ್ಲೇ ನಿರಾಸೆ ಮೂಡಿಸಿದ ವೈಭವ್ ಸೂರ್ಯವಂಶಿ – ಭರ್ಜರಿ ಶತಕ ಸಿಡಿಸಿದ ರುತುರಾಜ್ ಗಾಯಕ್ವಾಡ್
ಟಿ-20 ವಿಶ್ವಕಪ್ ಆರಂಭಕ್ಕೂ ಮುನ್ನ ಓ ಗೆಳೆಯ ಜೀವದ್ ಗೆಳೆಯ ನೀವ್ ಟೂರ್ನಿ ಆಡಿಲ್ಲ ಅಂದ್ರೆ ನಾವೂ ಆಡಲ್ಲ. ನಿಮ್ಮ ಜೊತೆ ನಾವಿರ್ತೀವಿ ಅಂತಾ ಬಾಂಗ್ಲಾದೇಶಕ್ಕೆ ಕಲರ್ ಕಲರ್ ಕಾಗೆ ಹಾರಿಸಿದ್ದ ಪಾಕಿಸ್ತಾನ ಟೂರ್ನಿ ಸ್ಟಾರ್ಟ್ ಆಗ್ತಿದ್ದಂತೆ ಸೈಲೆಂಟಾಗಿ ಮೈದಾನಕ್ಕಿಳಿದಿತ್ತು. ಅತ್ತ ಪಾಕ್ ನಮ್ ಜೊತೆ ನಿಲ್ತಾರೆ ಅನ್ಕೊಂಡಿದ್ದ ಬಾಂಗ್ಲಾ ಪೆಚ್ಚುಮೋರೆ ಹಾಕ್ಕೊಂಡು ಮನೆಗೆ ಹೋಗಿದ್ರು. ಆದ್ರೆ ವಿಶ್ವಕಪ್ ಮುಗಿದ್ಮೇಲೆ ಪಾಕಿಸ್ತಾನ ಮತ್ತು ಬಾಂಗ್ಲಾ ನಡುವಿನ ಸರಣಿ ವೇಳೆ ಹೈಡ್ರಾಮಾವೇ ನಡೆದು ಯಾವ ದೋಸ್ತಿಯೂ ಇಲ್ಲ ಮಣ್ಣೂ ಇಲ್ಲ ಅನ್ನೋದು ಗೊತ್ತಾಗಿತ್ತು. ಅದಕ್ಕಿಂತ ಮುಖ್ಯವಾಗಿ ಭದ್ರತೆಯ ಭಯ ಎಲ್ಲಿ ಕಾಡೋದು ಅನ್ನೋದನ್ನ ಬಾಂಗ್ಲಾದೇಶದ ಸ್ಟಾರ್ ಪ್ಲೇಯರ್ ಲಿಟ್ಟನ್ ದಾಸ್ ರಿವೀಲ್ ಮಾಡಿದ್ದಾರೆ.
ಭಾರತದ ವಿರುದ್ಧ ಆಡದಿರಲು ಚರ್ಚೆಯನ್ನೇ ಮಾಡಲಿಲ್ಲ ಎಂದ ದಾಸ್!
ಟಿ-20 ವಿಶ್ವಕಪ್ನಲ್ಲಿ ನಮ್ಮ ಪಂದ್ಯಗಳನ್ನ ಲಂಕಾಗೆ ಶಿಫ್ಟ್ ಮಾಡಿ ಎಂದಿದ್ದ ಬಾಂಗ್ಲಾ ಕೊನೆಗೆ ಟೂರ್ನಿಯಿಂದಲೇ ಹಿಂದೆ ಸರಿದು ಅವರ ಬದಲಿಗೆ ಸ್ಕಾಟ್ಲೆಂಡ್ ಆಡಿತ್ತು. ಆದ್ರೆ ಭಾರತಕ್ಕೆ ತೆರಳಿ ಪಂದ್ಯಗಳನ್ನ ಆಡ್ಬೇಕಾ ಅಥವಾ ಬೇಡವಾ ಅನ್ನೋ ಬಗ್ಗೆ ಅಲ್ಲಿನ ಕ್ರಿಕೆಟ್ ಮಂಡಳಿಯ ಸದಸ್ಯರು ಆಟಗಾರರ ಅಭಿಪ್ರಾಯವನ್ನೇ ಕೇಳಿಲ್ಲ ಎನ್ನುವ ಸತ್ಯ ರಿವೀಲ್ ಆಗಿದೆ. ಬಾಂಗ್ಲಾದೇಶದ ಪ್ರಮುಖ ಪತ್ರಿಕೆ ಪ್ರೊಥೊಮ್ ಆಲೋಗೆ ನೀಡಿದ ಇಂಟರ್ವ್ಯೂನಲ್ಲಿ ಈ ವಿಚಾರ ಹೇಳಿದ್ದಾರೆ. ಭದ್ರತಾ ಸಮಸ್ಯೆ ಇದೆ ಎಂಬ ಕಾರಣ ನೀಡಿ ಬಿಸಿಬಿ ಟೂರ್ನಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿತ್ತು. ಆದರೆ ಈ ಕುರಿತು ಯಾವುದೇ ಚರ್ಚೆಯಲ್ಲಿ ಆಟಗಾರರು ಭಾಗಿಯಾಗಿಲ್ಲ ಎಂದಿದ್ದಾರೆ. ಹಾಗೇ ಕೆಲ ಮಹತ್ವದ ಸಂಗತಿಗಳನ್ನೂ ಬಿಚ್ಚಿಟ್ಟಿದ್ದಾರೆ.
ಅಸಲಿ ಭದ್ರತೆ ಸಮಸ್ಯೆ ಇರೋದೆಲ್ಲಿ?
ಸರಣಿಗಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಭಯಾನಕ ಅನುಭವ
ಪಾಕಿಸ್ತಾನದಲ್ಲಿ ರೂಂ ಹೊರಗೆ ಬಂದೂಕು ಹಿಡಿದು ನಿಂತಿರುತ್ತಿದ್ದರು
ಅಲ್ಲಿಯೇ ಆಡಿದ್ದೇವೆ ಎಂದ ಮೇಲೆ ಭಾರತದಲ್ಲಿ ಆಡಲು ಸಮಸ್ಯೆ ಏನು?
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯನ್ನು ಪ್ರಶ್ನಿಸಿದ್ದಾಗಿ ಒಪ್ಪಿಕೊಂಡ ದಾಸ್
ನಾವೇ ಭಾರತಕ್ಕೆ ತೆರಳಲು ಸಿದ್ಧರಿದ್ದೆವು, ಆದ್ರೆ ಬಿಸಿಬಿ ಅಂತಿಮ ನಿರ್ಧಾರ
ಜಗಳ ಬೇಡ, ನಾವು ಸಹಜವಾಗಿಯೇ ಆಡಲು ಬಯಸುತ್ತೇವೆ ಎಂದಿದ್ದೆವು
ಭಾರತದಲ್ಲಿ ಭದ್ರತೆ ಇಲ್ಲ ಎಂದ ಅಧಿಕಾರಿಗಳಿಗೆ ಪಾಕಿಸ್ತಾನ ಬಗ್ಗೆ ಹೇಳಿದ್ದೆವು
ಪಾಕಿಸ್ತಾನದಲ್ಲಿ ಆಡಲು ಸಾಧ್ಯವಾದರೆ ಭಾರತದಲ್ಲಿ ಏಕೆ ಆಡಬಾರದೆಂದು ಪ್ರಶ್ನೆ
ಅಲ್ಲಿಗೆ ಪಾಕಿಸ್ತಾನದಲ್ಲಿ ಪಂದ್ಯಗಳನ್ನ ಆಡುವ ಆಟಗಾರರ ಅನುಭವ ಹೇಗಿರುತ್ತೆ ಅನ್ನೋದನ್ನ ಲಿಟ್ಟನ್ ದಾಸ್ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗೇ ಇತ್ತೀಚಿನ ದಿನಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಆಟಗಾರರ ವೈಮನಸ್ಸಿನ ಬಗ್ಗೆಯೂ ಹೇಳಿದ್ದಾರೆ. ಪಾಕ್ ಮತ್ತು ಬಾಂಗ್ಲಾ ನಡುವಿನ ಇತ್ತೀಚಿನ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾ ಆಟಗಾರರಿಗೂ ಪಾಕಿಸ್ತಾನದ ಬ್ಯಾಟರ್ ಮೊಹಮ್ಮದ್ ರಿಝ್ವಾನ್ ಗೂ ಮೈದಾನದಲ್ಲಿ ಕಿರಿಕ್ ಆಗಿತ್ತು. ಅದರಲ್ಲೂ ಲಿಟ್ಟನ್ ದಾಸ್ ಜೊತೆ ಜಾಸ್ತಿಯೇ ಜಟಾಪಟಿ ನಡೆದಿತ್ತು. ಆದ್ರೆ ಪಂದ್ಯದ ಬಳಿಕ ರಿಜ್ವಾನ್ ಬಾಂಗ್ಲಾ ಆಟಗಾರರ ಜೊತೆ ಹ್ಯಾಂಡ್ ಶೇಕ್ ಕೂಡ ಮಾಡಿರಲಿಲ್ಲ. ಸೋ ಇದನ್ನ ಬಾಂಗ್ಲಾ ಪ್ಲೇಯರ್ಸ್ಗೆ ಪಾಕಿಸ್ತಾನ ಮಾಡಿದ ಅವಮಾನ ಎಂದಿದ್ದಾರೆ. ಒಟ್ನಲ್ಲಿ ಪಾಕಿಸ್ತಾನದ ನರಿಬುದ್ಧಿ ಈಗ ಬಾಂಗ್ಲಾಗೂ ಗೊತ್ತಾಗ್ತಿದೆ. ಭಾರತದ ಜೊತೆ ಪಂದ್ಯಗಳನ್ನ ಆಡೋಕೆ ರೆಡಿ ಇದ್ದೇವೆ ಅನ್ನೋದನ್ನ ಲಿಟ್ಟನ್ದಾರ್ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ನೋಡಿರಿ

