T-20Iನಿಂದ ರಜತ್ ಬಿಟ್ಟಿದ್ದೇ ಸರಿ – CSK ಮಾಜಿ ಪ್ಲೇಯರ್​ ಗ್ಯಾಕೆ ಉರಿ?
JUSTICE FOR ಪಾಟಿದಾರ್ ಹೇಗಿದೆ?

T-20Iನಿಂದ ರಜತ್ ಬಿಟ್ಟಿದ್ದೇ ಸರಿ – CSK ಮಾಜಿ ಪ್ಲೇಯರ್​ ಗ್ಯಾಕೆ ಉರಿ?JUSTICE FOR ಪಾಟಿದಾರ್ ಹೇಗಿದೆ?

ಭಾರತ ಟಿ-20ಐ ತಂಡಕ್ಕೆ ಮೇಜರ್ ಸರ್ಜರಿ ಮಾಡಿ ಶ್ರೇಯಸ್ ಅಯ್ಯರ್​ಗೆ ಕ್ಯಾಪ್ಟನ್ಸಿ ಕಟ್ಟಿದ್ದರ ಬಗ್ಗೆ ಪರವಿರೋಧ ಎರಡೂ ಇದೆ. ಕೆಲವ್ರು ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯನ್ನ ವೆಲ್ಕಂ ಮಾಡಿದ್ರೆ ಇನ್ನೊಂದಷ್ಟು ಜನ ಇಲ್ಲ ಸೂರ್ಯಕುಮಾರ್ ಯಾದವ್ ಕಂಟಿನ್ಯೂ ಆಗ್ವೇಕಿತ್ತು ಅಂತಿದ್ದಾರೆ. ಅಟ್ ದಿ ಸೇಮ್ ಟೈಂ ರಜತ್ ಪಾಟಿದಾರ್ ಸೆಲೆಕ್ಟ್ ಆಗದೇ ಇರೋದನ್ನೂ ಕೆಲವ್ರು ಪ್ರಶ್ನೆ ಮಾಡಿದ್ದಾರೆ. ಆದ್ರೆ ಸಿಎಸ್​ಜೆ ಮಾಜಿ ಪ್ಲೇಯರ್ ಮಾತ್ರ ಬಿಸಿಸಿಐ ನಡೆಯನ್ನ ಸಮರ್ಥನೆ ಮಾಡಿಕೊಳ್ತಿದ್ದಾರೆ.

ಇದನ್ನೂ ಓದಿ : ಸಿಡಿದ ಮರಿ ತೆಂಡೂಲ್ಕರ್ – ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅರ್ಜುನ್ ತೆಂಡೂಲ್ಕರ್

ಜೂನ್ 26ರಿಂದ ಐರ್ಲೆಂಡ್ ವಿರುದ್ಧ ಹಾಗೂ ಜು.1ರಿಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಮತ್ತು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಬಿಸಿಸಿಐ  ಬಲಿಷ್ಠ ಭಾರತ ತಂಡವೇ ಅನೌನ್ಸ್ ಆಗಿದೆ. ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ನೀಡಿದ್ದು, ತಿಲಕ್ ವರ್ಮಾಗೆ ಉಪನಾಯಕನ ಜವಾಬ್ದಾರಿ ಕೊಟ್ಟಿದೆ. ಈ ಬಾರಿ ಟಿ20 ವಿಶ್ವಕಪ್ ವಿಜೇತ ತಂಡದ ನಾಯಕನಾಗಿದ್ದ ಸೂರ್ಯಕುಮಾರ್ ಯಾದವ್ ಅವ್ರನ್ನ ತಂಡದಿಂದಲೇ ಕೈಬಿಡಲಾಗಿದೆ. ಆದ್ರೆ ವಾಟ್ ಅಬೌಟ್ ರಜತ್ ಪಾಟಿದಾರ್ ಅನ್ನೋದೇ ಇಲ್ಲಿ ಯಕ್ಷಪ್ರಶ್ನೆಯಾಗಿದೆ.

ರಜತ್ ಪಾಟಿದಾರ್ ಬೆನ್ನಿಗೆ ನಿಂತ ಮಾಜಿ ಕ್ರಿಕೆಟರ್ಸ್!

ಐಪಿಎಲ್​ನಲ್ಲಿ ಕ್ಯಾಪ್ಟನ್ ಪಟ್ಟಕ್ಕೇರಿದ ಮೊದಲ ವರ್ಷವೇ ಬೆಂಗಳೂರು ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದ ರಜತ್ ಪಾಟಿದಾರ್ ಸತತ ಎರಡನೇ ಸೀಸನ್​ನಲ್ಲೂ ಟೈಟಲ್ ವಿನ್ನಿಂಗ್ ಕ್ಯಾಪ್ಟನ್ ಆದ್ರು. ಅಷ್ಟೇ ಯಾಕೆ ಬ್ಯಾಟಿಂಗ್​ನಲ್ಲೂ ಅಬ್ಬರಿಸಿದ್ರು. ಇದೇ ಕಾರಣಕ್ಕೆ ಪಾಟಿದಾರ್ ಟಿ-20ಐ ತಂಡಕ್ಕೆ ಸೆಲೆಕ್ಟ್ ಆಗ್ಬೋದು ಅನ್ನೋದು ಎಲ್ಲರ ನಿರೀಕ್ಷೆ ಆಗಿತ್ತು. ಆದ್ರೆ ಬಿಸಿಸಿಐ ಮಾತ್ರ ಇದಕ್ಕೆ ಸೊಪ್ಪು ಹಾಕದೆ ಪಾಟಿದಾರ್​ರನ್ನ ಹೊರಗಿಟ್ಟು ಟೀಂ ಅನೌನ್ಸ್ ಮಾಡಿತ್ತು. ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಗೌತಮ್ ಗಂಭೀರ್​ರ ನಿರ್ಧಾರವನ್ನ ಸಾಕಷ್ಟು ಮಾಜಿ ಕ್ರಿಕೆಟರ್ಸ್ ಕೂಡ ಟೀಕೆ ಮಾಡಿದ್ರು. ಹರ್ಭಜನ್ ಸಿಂಗ್, ಆರ್.ಅಶ್ವಿನ್ ಸೇರಿದಂತೆ ಬಹುತೇಕರು ಪಾಟಿದಾರ್ ಬೆನ್ನಿಗೆ ನಿಂತಿದ್ರು. ಆದ್ರೆ ಸಿಎಸ್​ಕೆ ಮಾಜಿ ಪ್ಲೇಯರ್ ಮಾತ್ರ ಬಿಸಿಸಿಐ ಮಾಡಿದ್ದೇ ಸರಿ ಎಂದಿದ್ದಾರೆ.

ಬಿಸಿಸಿಐ ಸಮರ್ಥನೆ ಮಾಡಿಕೊಂಡ ಸಿಎಸ್ ಕೆ ಮಾಜಿ ಪ್ಲೇಯರ್!

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲ ಮಾಜಿ ಆಟಗಾರರಿಗೆ ಆರ್​ಸಿಬಿ & ಆರ್​ಸಿಬಿ ಪ್ಲೇಯರ್ಸ್​ ಅಂದ್ರೆ ಉರಿ ಇದ್ದದ್ದೇ. ಈಗ ರಜತ್ ಪಾಟಿದಾರ್​​ರನ್ನ ಟಿ-20ಐ ತಂಡಕ್ಕೆ ಆಯ್ಕೆ ಮಾಡದೇ ಇರೋ ಬಗ್ಗೆ ಬಿಸಿಸಿಐ ನಡೆಯನ್ನ ಸಮರ್ಥನೆ ಮಾಡಿಕೊಂಡಿದ್ದಾರೆ. ಚೆನ್ನೈ ತಂಡದ ಮಾಜಿ ಪ್ಲೇಯರ್ ಹಾಗೇ ತಮಿಳಿನ ಕಾಮೆಂಟೇಟರ್ ಆಗಿರೋ ಸುಬ್ರಮಣ್ಯಂ ಬದ್ರೀನಾಥ್ ಬಿಸಿಸಿಐ ಪರ ಬ್ಯಾಟ್ ಬೀಸಿದ್ದಾರೆ. ತಮ್ಮ ಯೂಟ್ಯೂಬ್ ಚಾನಲ್​ನಲ್ಲಿ ಮಾತನಾಡಿರೋ ಬದ್ರಿನಾಥ್, ರಜತ್ ಪಾಟಿದಾರ್​​ಗೆ ಅವಕಾಶ ನೀಡಬೇಕಿತ್ತು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಪಾಟಿದಾರ್ ಟಾಪ್-4 ನಲ್ಲಿ ಆಡುವ ಬ್ಯಾಟರ್. ಟೀಮ್ ಇಂಡಿಯಾದಲ್ಲಿ ಟಾಪ್ ಆರ್ಡರ್​ನಲ್ಲಿ ಅತ್ಯುತ್ತಮ ಬ್ಯಾಟರ್​ಗಳಿದ್ದಾರೆ. ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ತಿಲಕ್ ವರ್ಮಾ ಇದ್ದಾರೆ. ಒಂದು ವೇಳೆ ಪಾಟಿದಾರ್‌ಗೆ ಅವಕಾಶ ನೀಡಬೇಕೆಂದರೆ ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ ಅಥವಾ ಇಶಾನ್ ಕಿಶನ್ ಅವರಲ್ಲಿ ಒಬ್ಬರನ್ನು ಕೈಬಿಡಬೇಕಾಗುತ್ತದೆ. ಆದರೆ ಅವ್ರೆಲ್ಲಾ ಒಳ್ಳೆ ಫಾರ್ಮ್​ನಲ್ಲಿ ಇದ್ದಾರೆ.  ಹೀಗಾಗಿ ಪಾಟಿದಾರ್ ಸೆಲೆಕ್ಟ್ ಆಗದೇ ಇರೋದು ಸರಿಯಾಗಿದೆ ಎಂದಿದ್ದಾರೆ. ಅಷ್ಟಕ್ಕೂ ಇಲ್ಲಿ ಬದ್ರಿನಾಥ್ ಹೇಳಿಕೆಗೆ ಲಾಜಿಕ್ಕೇ ಇಲ್ಲ. ಯಾಕಂದ್ರೆ ಪಾಟಿದಾರ್ ಐಪಿಎಲ್​ನಲ್ಲಿ ಮಾಡಿರೋದು ಅಂತಿಂಥಾ ಸಾಧನೆಯಲ್ಲ.

ಪಾಟಿದಾರ್ ಗೆ ಯಾಕಿಲ್ಲ ಚಾನ್ಸ್?

ಟೀಂ ಇಂಡಿಯಾಗೆ ಸೆಲೆಕ್ಟ್ ಮಾಡಲು ಐಪಿಎಲ್ ಮಾನದಂಡ ಎನ್ನುವ ವಾದ

2025, 2026ರಲ್ಲಿ ನಾಯಕನಾಗಿ ಚಾಂಪಿಯನ್, ಪ್ಲೇಯರ್ ಆಗಿ ಅದ್ಭುತ ಆಟ

2025ರಲ್ಲಿ ಶ್ರೇಯಸ್ ಅಯ್ಯರ್, 2026ರಲ್ಲಿ ಗಿಲ್ ಕ್ಯಾಪ್ಟನ್ಸಿ ಎದುರು ಗೆಲುವು

ಮಿಡಲ್ ಆರ್ಡರ್ ನಲ್ಲಿ ಸ್ಪಿನ್ನರ್ಸ್ ಎದುರಲ್ಲಿ ಅದ್ಭುತವಾದ ಬ್ಯಾಟಿಂಗ್ ಸ್ಟ್ರೈಕ್

ಇದೆಲ್ಲಾ ಕಾರಣದಿಂದಲೇ ಪಾಟಿದಾರ್​ಗೆ ಟೀಂ ಇಂಡಿಯಾದಲ್ಲಿ ಚಾನ್ಸ್ ನೀಡಬೇಕಿತ್ತು ಅಂತಾ ಎಲ್ರೂ ಕೇಳ್ತಿದ್ದದ್ದು. ಶ್ರೇಯಸ್ ಅಯ್ಯರ್​ರನ್ನ ಸೆಲೆಕ್ಟ್ ಮಾಡಿದ್ದೂ ಕೂಡ ಐಪಿಎಲ್ ಪರ್ಫಾಮೆನ್ಸ್ ನೋಡಿಯೇ. 2024ರಲ್ಲಿ ಕೆಕೆಆರ್ ಚಾಂಪಿಯನ್ ಪಟ್ಟಕ್ಕೇರಿಸಿದ್ರು. 2025ರಲ್ಲಿ ಪಂಜಾಬ್ ತಂಡವನ್ನ ಫೈನಲ್​ಗೆ ಲೀಡ್ ಮಾಡಿದ್ರು. 2026ರಲ್ಲಿ ಫಸ್ಟ್ ಆಫ್​ನಲ್ಲಿ ಸೋಲೇ ಇರ್ಲಿಲ್ಲ ಅಂತಾ. ಆದ್ರೆ ಪಾಟಿದಾರ್ ಕೂಡ ಈ ಲಿಸ್ಟ್​ನಲ್ಲಿ ಚೆನ್ನಾಗೇ ನಿಭಾಯಿಸಿದ್ದಾರೆ. ಆದ್ರೂ ಅವಕಾಶ ನೀಡದೆ ಇರೋದೇ ಎಲ್ಲರ ಪ್ರಶ್ನೆಗೆ ಕಾರಣವಾಗಿದೆ. ಅಟ್​ ದಿ ಸೇಮ್ ಟೈಂ ಆರ್​ಸಿಬಿಯ ಯಾರೊಬ್ಬರಿಗೂ ಚಾನ್ಸ್ ನೀಡಿಲ್ಲ ಅನ್ನೋದ್ರ ಜೊತೆಗೆ ಐಪಿಎಲ್​ನಲ್ಲಿ ಒಂದೇ ಒಂದು ಪಂದ್ಯವಾಡದ ಗಂಭೀರ್ ದತ್ತುಪುತ್ರ ಹರ್ಷಿತ್ ರಾಣಾಗೆ ಚಾನ್ಸ್ ನೀಡಿದ್ದರ ಬಗ್ಗೆಯೂ ಆಕ್ಷೇಪವಿದೆ. ಒಟ್ನಲ್ಲಿ ಬಿಸಿಸಿಐನಲ್ಲೂ ರಾಜಕೀಯ ಇರುತ್ತೆ ಅನ್ನೋದಕ್ಕೆ ಇದು ಬೆಸ್ಟ್ ಎಕ್ಸಾಂಪಲ್ ಅಷ್ಟೇ.

Shantha Kumari

Leave a Reply

Your email address will not be published. Required fields are marked *