ಸಿಡಿದ ಮರಿ ತೆಂಡೂಲ್ಕರ್ – ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅರ್ಜುನ್ ತೆಂಡೂಲ್ಕರ್

ಅರ್ಜುನ್ ತೆಂಡೂಲ್ಕರ್ ಮತ್ತೊಮ್ಮೆ ಸಿಡಿದಿದ್ದಾರೆ. ತನ್ನ ಪರಾಕ್ರಮ ತೋರಿಸಿದ್ದಾರೆ. ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 13 ಮ್ಯಾಚ್ಗಳಲ್ಲಿ ಬೆಂಚ್ ಕಾದಿದ್ದ ಅರ್ಜುನ್ ತೆಂಡೂಲ್ಕರ್ ಇದೀಗ ಭರ್ಜರಿ ಪ್ರದರ್ಶನ ತೋರುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ:ಅಫ್ಘಾನಿಸ್ತಾನ ವಿರುದ್ಧ ದಾಖಲೆ ಗೆಲುವು ಗಳಿಸಿದರೂ ಸಿಗಲ್ಲ WTC ಅಂಕ – ಟೀಮ್ ಇಂಡಿಯಾಕ್ಕೆ ಪ್ರಯೋಜನವಿಲ್ಲ ಯಾಕೆ?
ಮುಂಬೈ ಟಿ20 ಲೀಗ್ ನಲ್ಲಿ ಅರ್ಜುನ್ ತೆಂಡೂಲ್ಕರ್ ಆರ್ಕ್ಸ್ ಅಂಧೇರಿ ತಂಡದ ಪರ ಕಣಕ್ಕಿಳಿದಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರ್ಕ್ಸ್ ಅಂಧೇರಿ ಹಾಗೂ ನಮೋ ಬಾಂದ್ರಾ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್ಕ್ಸ್ ಅಂಧೇರಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ಪಾತ್ರ ಮಹತ್ವದ್ದಾಗಿತ್ತು. ಪಂದ್ಯದ ಮೊದಲ ಓವರ್ನಲ್ಲೇ ಎರಡು ಪ್ರಮುಖ ವಿಕೆಟ್ ಕಿತ್ತ ಅರ್ಜುನ್ ಬಾಂದ್ರಾ ಬ್ಲಾಸ್ಟರ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಈ ಪಂದ್ಯದಲ್ಲಿ 3 ಓವರ್ಗಳನ್ನು ಎಸೆದ ಅರ್ಜುನ್ ತೆಂಡೂಲ್ಕರ್ ಒಂದು ಓವರ್ ಮೇಡನ್ ಮಾಡಿದ್ದರು. ಅಲ್ಲದೆ ಮೂರು ಓವರ್ಗಳಲ್ಲಿ ನೀಡಿದ್ದು ಕೇವಲ 11 ರನ್ಗಳು ಮಾತ್ರ. ಹಾಗೆಯೇ ಈ 3 ವಿಕೆಟ್ ಕಬಳಿಸುವಲ್ಲಿಯೂ ಯಶಸ್ವಿಯಾಗಿದ್ದರು. ಅರ್ಜುನ್ ಬೌಲಿಂಗ್ ದಾಳಿಗೆ ತತ್ತರಿಸಿದ ಬ್ಲಾಸ್ಟರ್ಸ್ ಪಡೆ 20 ಓವರ್ಗಳಲ್ಲಿ ಕೇವಲ 144 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.
145 ರನ್ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಅಂಧೇರಿ ತಂಡಕ್ಕೆ ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್ನಲ್ಲೂ ನೆರವಾದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅರ್ಜುನ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 34 ಎಸೆತಗಳನ್ನು ಎದುರಿಸಿದ ಅರ್ಜುನ್, 5 ಭರ್ಜರಿ ಸಿಕ್ಸರ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 66 ರನ್ ಬಾರಿಸಿದ್ದರು. ಈ ಭರ್ಜರಿ ಆಲ್ರೌಂಡರ್ ಪ್ರದರ್ಶನಕ್ಕೆ ಅರ್ಜುನ್ ತೆಂಡೂಲ್ಕರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಐಪಿಎಲ್ ಸೀಸನ್-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಅರ್ಜುನ್ ತೆಂಡೂಲ್ಕರ್ ಅವರನ್ನು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಕಣಕ್ಕಿಳಿಸಲಾಗಿತ್ತು. ಕೊನೆಗೂ ಅರ್ಜುನ್ ತೆಂಡೂಲ್ಕರ್ ತನ್ನ ಕ್ರಿಕೆಟ್ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

ನೋಡಿರಿ

