ಅಫ್ಘಾನಿಸ್ತಾನ ವಿರುದ್ಧ ದಾಖಲೆ ಗೆಲುವು ಗಳಿಸಿದರೂ ಸಿಗಲ್ಲ WTC ಅಂಕ – ಟೀಮ್ ಇಂಡಿಯಾಕ್ಕೆ ಪ್ರಯೋಜನವಿಲ್ಲ ಯಾಕೆ?

ಅಫ್ಘಾನಿಸ್ತಾನ ವಿರುದ್ಧ ದಾಖಲೆ ಗೆಲುವು ಗಳಿಸಿದರೂ ಸಿಗಲ್ಲ WTC ಅಂಕ – ಟೀಮ್ ಇಂಡಿಯಾಕ್ಕೆ ಪ್ರಯೋಜನವಿಲ್ಲ ಯಾಕೆ?

ಮುಲ್ಲನ್‌ಪುರ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 300 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಅತಿದೊಡ್ಡ ಜಯವಾಗಿದೆ. ಟೀಮ್ ಇಂಡಿಯಾ ಭರ್ಜರಿ ಜಯ ಗಳಿಸಿದರು ಕೂಡಾ ಯಾವುದೇ ಪ್ರಯೋಜನವಿಲ್ಲ.

ಇದನ್ನೂ ಓದಿ:ಬುಮ್ರಾ ಕಂಬ್ಯಾಕ್, ವೈಭವ್ಗೆ ಚಾನ್ಸ್! ಏಷ್ಯನ್ ಗೇಮ್ಸ್‌ನಲ್ಲಿ ಗೆಲ್ಲುತ್ತಾ ಟೀಂ IND?

94 ವರ್ಷಗಳ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಯ ಗೆಲುವು ಸಾಧಿಸಿದೆ ಟೀಮ್ ಇಂಡಿಯಾ.  ಇನ್ನಿಂಗ್ಸ್ ಮತ್ತು 300 ರನ್‌ಗಳ ಬೃಹತ್ ಅಂತರದಿಂದ ಗೆದ್ದ ಭಾರತಕ್ಕೆ ನಿರಾಸೆ ಕಾದಿದೆ. ಸಾರ್ವಕಾಲಿಕ ದಾಖಲೆಯ ಗೆಲುವು ಸಾಧಿಸಿದರೂ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಪಾಯಿಂಟ್‌ಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಬದಲಾಗಿಲ್ಲ.

ಭಾರತ ದಾಖಲೆಯ ಅಂತರದಲ್ಲಿ ಗೆದ್ದರೂ ಅಂಕ ಸಿಗಲ್ಲ. ಏಕೆಂದರೆ ಈ ಪಂದ್ಯವು WTC ಲಿಸ್ಟ್ ಗೆ ಸೇರುವುದಿಲ್ಲ. ಇದು ಕೇವಲ ಅಫ್ಘಾನಿಸ್ತಾನ ಕ್ರಿಕೆಟ್ ಅನ್ನು ಬೆಂಬಲಿಸಲು ನಡೆಸಿದ ಟೆಸ್ಟ್ ಪಂದ್ಯವಾಗಿದೆ. ಹೀಗಾಗಿ ಈ ಗೆಲುವು ಭಾರತದ WTC ಟೂರ್ನಿಗೆ ಸೇರುವುದಿಲ್ಲ. WTC ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಆರನೇ ಸ್ಥಾನದಲ್ಲಿದೆ. ಈ ಸರಣಿಯಲ್ಲಿ ಭಾರತ ಇಲ್ಲಿಯವರೆಗೆ ಒಂಬತ್ತು ಪಂದ್ಯಗಳನ್ನು ಆಡಿದ್ದು, ನಾಲ್ಕು ಪಂದ್ಯಗಳನ್ನು ಗೆದ್ದಿದೆ, ನಾಲ್ಕು ಪಂದ್ಯಗಳನ್ನು ಸೋತಿದೆ ಮತ್ತು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ಟೀಮ್ ಇಂಡಿಯಾ ಇನ್ನೂ ಒಂಬತ್ತು ಪಂದ್ಯಗಳನ್ನು ಆಡಬೇಕಾಗಿದೆ. ಶ್ರೀಲಂಕಾದಲ್ಲಿ ಎರಡು ಟೆಸ್ಟ್‌, ನ್ಯೂಜಿಲೆಂಡ್‌ನಲ್ಲಿ ಎರಡು ಮತ್ತು ಆಸ್ಟ್ರೇಲಿಯಾ ವಿರುದ್ಧ ತವರು ನೆಲದಲ್ಲಿ ಐದು ಟೆಸ್ಟ್‌ಗಳಲ್ಲಿ ಎದುರಾಳಿಗಳನ್ನು ಎದುರಿಸಲಿದೆ. ಫೈನಲ್‌ಗೆ ಸ್ಪರ್ಧೆಯಲ್ಲಿ ಉಳಿಯಲು, ಭಾರತ ಈ ಒಂಬತ್ತು ಪಂದ್ಯಗಳಲ್ಲಿ ಕನಿಷ್ಠ ಏಳು ಪಂದ್ಯಗಳನ್ನು ಗೆಲ್ಲಬೇಕಿದೆ.

Sulekha

Leave a Reply

Your email address will not be published. Required fields are marked *