ಮೂರೇ ದಿನದಲ್ಲೇ ಗೆದ್ದ ಭಾರತ – ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 300 ರನ್‌ಗಳ ಜಯ

ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿ ನಡೆದ ಭಾರತ vs ಅಫ್ಘಾನಿಸ್ತಾನ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಮೂರೇ ದಿನದೊಳಗೆ ಭಾರತ ಭರ್ಜರಿ ಇನ್ನಿಂಗ್ಸ್ ಜಯ ಗಳಿಸಿದೆ.
ಇದನ್ನೂ ಓದಿ:ಅಫ್ಘಾನ್ಗೆ ಭಾರತ ಫಾಲೋಆನ್ ಅಸ್ತ್ರ – ಡೆಬ್ಯೂ ಮ್ಯಾಚ್ನಲ್ಲೇ ಸುತಾರ್ 6 ವಿಕೆಟ್
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಭಾರತದ ಗೆದ್ದು ಬೀಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 564 ರನ್ ಗಳಿಸಿತು. ಅಫ್ಘಾನಿಸ್ತಾನ ತಂಡವು ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತದ ಮುನ್ನಡೆ ಸಾಧಿಸಿದೆ. ಇಲ್ಲಿ ಗಿಲ್ ನಾಯಕತ್ವದ ಭಾರತೀಯ ಪಡೆ ನಿರೀಕ್ಷಿಸಿದಂತೆ ಏಕಪಕ್ಷೀಯ ಗೆಲುವು ಸಾಧಿಸಿದೆ.
564 ರನ್ಗಳಿಸಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ ಅಫ್ಘಾನಿಸ್ತಾನ 152 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 412 ರನ್‌ಗಳ ಮುನ್ನಡೆ ಸಾಧಿಸಿದ್ದ ಭಾರತ ಫಾಲೋ ಆನ್ ಹೇರಿತು. ಮತ್ತೆ ಬ್ಯಾಟಿಂಗ್‌ಗೆ ಬಂದ ಅಫ್ಘಾನ್, ಕುಲೀಪ್ ಹಾಗೂ ಸುಂದರ್ ಬೌಲಿಂಗ್ ದಾಳಿಗೆ ತತ್ತರಿಸಿತು. ಕುಲೀಪ್ ಯಾದವ್ ಮೂರು ವಿಕೆಟ್ ಪಡೆದ್ರೆ, ವಾಷಿಂಗ್ಟನ್ ಸುಂದರ್ ನಾಲ್ಕು ವಿಕೆಟ್ ಪಡೆದು ಮಿಂಚಿದ್ರು. ಮಾನವ್ ಸುತಾರ್ ಹಾಗೂ ಸಿರಾಜ್ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಅಫ್ಘಾನ್ ಎರಡನೇ ಇನ್ನಿಂಗ್ಸ್‌ನಲ್ಲೂ ಸರ್ವಪತನ ಕಾಯ್ತು. ಮೊದಲ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ 152 ರನ್‌ಗೆ ಆಲೌಟ್ ಆಗಿದ್ದು, ಅಫ್ಘಾನ್ ತನ್ನ 2ನೇ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ 112 ರನ್‌ಗೆ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾ ಅಫ್ಘಾನ್ ವಿರುದ್ಧ 300 ರನ್‌ಗಳ ಅಂತರ ಹಾಗೂ ಒಂದು ಇನ್ನಿಂಗ್ಸ್ ಬಾಕಿ ಇರುವಾಗಲೇ ಗೆಲುವು ದಾಖಲಿಸಿತು.

ನೋಡಿರಿ

