ಭಾಗ್ಯಲಕ್ಷ್ಮೀ ಧಾರಾವಾಹಿ ಮುಕ್ತಾಯ – ಎಲ್ಲವೂ ಸುಖಾಂತ್ಯ, ತಾಂಡವ್ ಅಡ್ರೆಸ್ ಇಲ್ವೇ ಇಲ್ಲ..!

ಭಾಗ್ಯಲಕ್ಷ್ಮೀ ಧಾರಾವಾಹಿ ಮುಕ್ತಾಯ – ಎಲ್ಲವೂ ಸುಖಾಂತ್ಯ, ತಾಂಡವ್ ಅಡ್ರೆಸ್ ಇಲ್ವೇ ಇಲ್ಲ..!

ಭಾಗ್ಯಲಕ್ಷ್ಮೀ ಸೀರಿಯಲ್ ಮುಕ್ತಾಯವಾಗಿದೆ. ಜೊತೆಗೆ ಸೀರಿಯಲ್ ಸುಖಾಂತ್ಯ ಗೊಂಡಿದೆ. ಆದರೆ, ವೀಕ್ಷಕರ ಒಂದು ಪ್ರಶ್ನೆಗೆ ಉತ್ತರ ಸಿಗಲೇ ಇಲ್ಲ.

ಇದನ್ನೂ ಓದಿ:ಪೆದ್ದಿ ಸಿನಿಮಾದ ಆ ಸೀನ್ ಕಟ್ – ಜಾನ್ವಿ ಕಪೂರ್ ನೋವು ಈಗ ದೂರವಾಯ್ತಾ?

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಎಲ್ಲವೂ ಸರಿಯಾಗಿದೆ. ಸರಿಯಾದ ರೀತಿಯಲ್ಲೇ ಸೀರಿಯಲ್ ಮುಗಿದಿದೆ. ಆದರೆ, ವೀಕ್ಷಕರು ಒಂದೇ ಒಂದು ಪ್ರಶ್ನೆ ಎತ್ತಿದ್ದಾರೆ. ತಾಂಡವ್ ಬಗ್ಗೆ ಯಾಕೆ ಹೇಳಿಲ್ಲ ಅನ್ನೋದು. ಇಲ್ಲಿ ಎಲ್ಲಾ ಪಾತ್ರಗಳಿಗೂ ನ್ಯಾಯ ಸಿಕ್ಕಿದೆ. ಕನ್ನಿಕಾ ಒಂದು ಹುಡುಗನನ್ನು ಪ್ರೀತಿ ಮಾಡಿದ್ದಳು. ಆದರೆ ಆ ಹುಡುಗ ವೈಭವ್‌ಗೆ ಕನ್ನಿಕಾ ಮೇಲೆ ದುಡ್ಡಿನ ಆಸೆ ಕೂಡ ಇತ್ತು. ವೈಭವ್‌ ಕುಟುಂಬದ ಹಿಂದಿನ ಉದ್ದೇಶ ಏನು ಎಂದು ಆದಿ, ಭಾಗ್ಯ ರಿವೀಲ್‌ ಮಾಡಿದ್ದಾರೆ. ಆದ್ರೆ ವೈಭವ್‌ ಕೂಡ ಕನ್ನಿಕಾರನ್ನು ಬಿಟ್ಟುಕೊಡದೆ ಲವ್‌ ಮಾಡ್ತಿರೋದು ಸತ್ಯ ಎಂದು ಹೇಳಿದ್ದಾನೆ. ಕನ್ನಿಕಾ ಸತ್ಯ ಯಾವುದು ಎಂದು ಅರ್ಥ ಆಗಿದೆ, ಅವಳು ಭಾಗ್ಯಗೆ ಕ್ಷಮೆ ಕೇಳಿದ್ದಾಳೆ. ಅಲ್ಲಿಗೆ ಕನ್ನಿಕಾ ಸಮಸ್ಯೆ ಬಗೆಹರಿದಿದೆ.

ಆದೀಶ್ವರ್‌ ಅತ್ತೆ ಮೀನಾಕ್ಷಿಗೆ ಭಾಗ್ಯಳನ್ನು ಕಂಡರೆ ಆಗುತ್ತಿರಲಿಲ್ಲ. ಈಗ ಅತ್ತೆಗೆ ಎಲ್ಲ ಅರಿವಾಗಿದೆ. ಈಗ ಅವಳೇ ಕುಸುಮಾ-ಧರ್ಮರಾಜ್‌ನನ್ನು ಮನೆಗೆ ಕರೆದುಕೊಂಡು ಬಂದಿದ್ದಾಳೆ. ನಮ್ಮತ್ತೆ ಮಾವ ತುಂಬ ಕಷ್ಟಪಡುತ್ತಿದ್ದಾರೆ ಎಂದು ಭಾಗ್ಯ ಮನಸ್ಸಿನಲ್ಲಿ ಬೇಸರ ಮಾಡಿಕೊಂಡಿದ್ದಳು. ಈಗ ಕುಸುಮಾ, ಧರ್ಮರಾಜ್‌ ಕೂಡ ಆದಿ ಮನೆಗೆ ಬಂದು, ಅಲ್ಲಿಯೇ ಇರುತ್ತಾರೆ.

ಅಪ್ಪ ಎರಡನೇ ಮದುವೆ ಆದಾಗ ಕ್ಷಮಿಸಿದ್ದ ತನ್ವಿ ಈಗ ತಾಯಿ ಎರಡನೇ ಮದುವೆ ಆದಾಗ ಒಪ್ಪಿರಲಿಲ್ಲ. ಹೀಗಾಗಿ ಅವಳು ತಾಯಿಯಿಂದ ದೂರ ಇದ್ದಳು. ಈಗ ಅವಳು ಕೂಡ ತಾಯಿಯನ್ನು ಒಪ್ಪಿಕೊಂಡಿದ್ದಾಳೆ, ಆದಿಯನ್ನು ಅಪ್ಪಾ ಎಂದು ಕರೆದಿದ್ದಾಳೆ. ಇದು ಎಲ್ಲರಿಗೂ ಖುಷಿ ಕೊಟ್ಟಿದೆ. ಇಡೀ ಕುಟುಂಬ ಒಂದಾಗಿದೆ, ಅಷ್ಟೇ ಅಲ್ಲದೆ ಶ್ರೇಷ್ಠ ಮಾಡಿದ ತಪ್ಪುಗಳನ್ನು ಕ್ಷಮಿಸಿ, ಅವಳನ್ನು ಕೂಡ ತನ್ನ ಕುಟುಂಬದಲ್ಲಿ ಒಬ್ಬಳು ಎಂದು ಹೇಳಿದ್ದಾರೆ.

ಆದರೆ ಜೈಲಿನಲ್ಲಿರುವ ತಾಂಡವ್‌ ಬಗ್ಗೆ ಏನೂ ಮಾಹಿತಿ ಇಲ್ಲ, ತಾಂಡವ್‌ ಜೈಲಿಗೆ ಹೋದ ಬಳಿಕ ಅವನು ಎಲ್ಲಿಯೂ ಕಾಣಿಸಿಲ್ಲ. ಒಟ್ಟಿನಲ್ಲಿ ತಾಂಡವ್‌ ಜೀವನಪೂರ್ತಿ ಅಲ್ಲಿಯೇ ಇರುತ್ತಾನಾ? ಅಥವಾ ಮತ್ತೆ ಹೊರಗಡೆ ಬರುತ್ತಾನಾ ಎಂಬ ಬಗ್ಗೆ ಮಾತ್ರ ಉತ್ತರ ಸಿಕ್ಕಿಲ್ಲ.

Sulekha