ಹೆಚ್‌ಡಿ ದೇವೇಗೌಡರಿಗೆ ಕೈಕೊಟ್ಟ ಎನ್‌ಡಿಎ – ಪ್ರೊ ಎಂ ನಾಗರಾಜಗೆ ರಾಜ್ಯಸಭೆ ಟಿಕೆಟ್

ಹೆಚ್‌ಡಿ ದೇವೇಗೌಡರಿಗೆ ಕೈಕೊಟ್ಟ ಎನ್‌ಡಿಎ –  ಪ್ರೊ ಎಂ ನಾಗರಾಜಗೆ ರಾಜ್ಯಸಭೆ ಟಿಕೆಟ್

ರಾಜ್ಯಸಭೆಗೆ ಮತ್ತಮ್ಮೆ ಪ್ರವೇಶ ಮಾಡುವ ಹೆಚ್ ಡಿ ದೇವೇಗೌಡರ ಕನಸಿಗೆ ಎನ್‌ಡಿಎ ತಣ್ಣೀರೆರಚಿದೆ. ಪ್ರೊ. ಎಂ. ನಾಗರಾಜ ಅವರಿಗೆ ರಾಜ್ಯಸಭೆ ಟಿಕೆಟ್ ಘೋಷಿಸಿದೆ.

ಇದನ್ನೂ ಓದಿ:ಕೊಟ್ಟ ಮಾತು ತಪ್ಪಿದ್ರಾ ಡಿಕೆಶಿ? – ರಾಮಲಿಂಗಾರೆಡ್ಡಿ ನಿಷ್ಠೆಗೆ ಬೆಲೆಯಿಲ್ವಾ?

ಕರ್ನಾಟಕ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ 2026ರ ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಎನ್​ಡಿಎ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಭಾರತೀಯ ಜನತಾ ಪಾರ್ಟಿ ಪ್ರಕಟಿಸಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಮರುಆಯ್ಕೆ ಬಯಸಿದ್ದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರಿಗೆ ವಯಸ್ಸಿನ ಕಾರಣದಿಂದ ಟಿಕೆಟ್ ಕೈತಪ್ಪಿದೆ. ಈ ಬೆಳವಣಿಗೆ ಜೆಡಿಎಸ್‌ಗೆ ಭಾರಿ ಆಘಾತ ನೀಡಿದೆ. ಕರ್ನಾಟಕದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಒಬಿಸಿ ನಾಯಕ ಪ್ರೊ. ಎಂ. ನಾಗರಾಜ ಅವರಿಗೆ ಮಣೆ ಹಾಕಲಾಗಿದೆ. ಇನ್ನು ವಿಧಾನ ಪರಿಷತ್  ಚುನಾವಣೆಗೆ ಪಕ್ಷದ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರನ್ನು ಕಣಕ್ಕಿಳಿಸಲಾಗಿದೆ.

ಎನ್‌ಡಿಎ ಈ ನಿರ್ಧಾರ ಮೈತ್ರಿ ಪಕ್ಷವಾದ ಜೆಡಿಎಸ್‌ಗೆ ಭಾರಿ ಆಘಾತ ನೀಡಿದೆ. ರಾಜ್ಯಸಭೆಗೆ ಬಿಜೆಪಿಯಿಂದ ಪ್ರೊ.ಎಂ.ನಾಗರಾಜ ನಾಮನಿರ್ದೇಶನ ಮಾಡಿರುವುದು ದೇವೇಗೌಡರ ರಾಜ್ಯಸಭೆ ಮರುಪ್ರವೇಶದ ಕನಸಿಗೆ ಬ್ರೇಕ್ ಹಾಕಿದೆ. ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಹಿರಿತನದ ಆಧಾರದ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಗೌಡರನ್ನೇ ಜಂಟಿ ಅಭ್ಯರ್ಥಿಯನ್ನಾಗಿ ಮರುಆಯ್ಕೆ ಮಾಡಬಹುದು ಎಂಬ ಬಲವಾದ ಆಸೆ ಜೆಡಿಎಸ್ ಶಾಸಕರಲ್ಲಿತ್ತು. ಆದರೆ, ಬಿಜೆಪಿ ಹೈಕಮಾಂಡ್ ವಯಸ್ಸು ಮತ್ತು ಆರೋಗ್ಯದ ಕಾರಣವನ್ನು ಮುಂದಿಟ್ಟುಕೊಂಡು ದೇವೇಗೌಡರಿಗೆ ಟಿಕೆಟ್ ನಿರಾಕರಿಸಿದೆ. 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಮತದಾನ ನಡೆಯಲಿದೆ.

Sulekha

Leave a Reply

Your email address will not be published. Required fields are marked *