RCBಯಲ್ಲಿ ರಜತ್ ವಿಜಯಯಾತ್ರೆ 2 ವರ್ಷ.. ಗೆದ್ದೇ ಇಲ್ಲ CSK, MI, KKR
ರೆಡ್ ಆರ್ಮಿಗೆ ಯಾರೆಲ್ಲಾ ಸರೆಂಡರ್?

ಐಪಿಎಲ್ನಲ್ಲಿರೋ 10 ಫ್ರಾಂಚೈಸಿಗಳ ಪೈಕಿ 7 ತಂಡಗಳು ಟ್ರೋಫಿಗಳನ್ನ ಗೆದ್ದಿವೆ. ಇನ್ನೂ ಮೂರು ತಂಡಗಳು ಚೊಚ್ಚಲ ಕಪ್ ನಿರೀಕ್ಷೆಯಲ್ಲೇ ಇವೆ. ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಹಾಗೇ ಲಕ್ನೋ ಸೂಪರ್ ಜೇಂಟ್ಸ್ ತಂಡಗಳು ಇನ್ನೂ ಚಾಂಪಿಯನ್ ಆಗಿಲ್ಲ. ಅಟ್ ದಿ ಸೇಮ್ ಟೈಂ ಐದೈದು ಟ್ರೋಫಿಗಳನ್ನ ಗೆದ್ದಿರೋ ಮುಂಬೈ ಮತ್ತು ಚೆನ್ನೈ ಹೈಯೆಸ್ಟ್ ಟ್ರೋಫಿ ವಿನ್ನರ್ಸ್.. ಇನ್ನು ಮೂರು ಕಪ್ ಗೆದ್ದಿರೋ ಕೊಲ್ಕತ್ತಾ ಥರ್ಡ್ ಪ್ಲೇಸ್ನಲ್ಲಿ ಇದೆ. ಇಂಟ್ರೆಸ್ಟಿಂಗ್ ವಿಚಾರ ಏನ್ ಗೊತ್ತಾ ಬೆಂಗಳೂರು ತಂಡಕ್ಕೆ ರಜತ್ ಪಾಟಿದಾರ್ ಕ್ಯಾಪ್ಟನ್ ಆದ್ಮೇಲೆ ಈ ಟಾಪ್-3ನಲ್ಲಿರೋ ಯಾವ ತಂಡವೂ ಆರ್ಸಿಬಿ ವಿರುದ್ಧ ಗೆದ್ದೇ ಇಲ್ಲ. ಕಳೆದ 2 ವರ್ಷಗಳಲ್ಲಿ ಬೆಂಗಳೂರು ವಿರುದ್ಧ ಸಿಂಗಲ್ ಮ್ಯಾಚ್ ವಿನ್ ಆಗಿಲ್ಲ. ರಜತ್ ಪಾಟಿದಾರ್ ಕ್ಯಾಪ್ಟನ್ಸಿಯಲ್ಲಿ ರೆಡ್ ಆರ್ಮಿ ಡಾಮಿನೇಷನ್ ಹೇಗಿದೆ ಅನ್ನೋದನ್ನ ನೋಡೋಣ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟ ನಾಯಕ ರಜತ್ ಪಾಟಿದಾರ್. ಕೂಲ್ ಌಂಡ್ ಕಾಮ್ ಆಗಿಯೇ ತಂಡವನ್ನ ಲೀಡ್ ಮಾಡ್ತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿರೋ ಪಾಟಿದಾರ್ ಬೆನ್ನಿಗೆ ದಿಗ್ಗಜ ಕ್ರಿಕೆಟಿರ್ಗಳೇ ನಿಂತಿದ್ದಾರೆ. ಮೆನ್ ಇನ್ ಬ್ಲ್ಯೂ ಜೆರ್ಸಿಯಲ್ಲಿ ಭಾರತದ ಪರ ಟಿ-20ಐನಲ್ಲಿ ಆಡುವಂತೆ ಒತ್ತಾಯವೂ ಕೇಳಿ ಬರ್ತಿದೆ. ಯಾಕಂದ್ರೆ ಐಪಿಎಲ್ನಲ್ಲಿ ಆ ಮಟ್ಟಿಗೆ ಪ್ರದರ್ಶನ ನೀಡಿದ್ದಾರೆ. ರಜತ್ ಕ್ಯಾಪ್ಟನ್ಸಿ ರೆಕಾರ್ಡ್ಸ್ ಹೆಂಗಿದೆ ಅವ್ರ ನಾಯಕತ್ವದಲ್ಲಿ ಮೋಸ್ಟ್ ಸಕ್ಸಸ್ಫುಲ್ ಟೀಂಗಳು ಒಂದೇ ಒಂದು ಪಂದ್ಯ ಗೆದ್ದಿಲ್ಲ.
ಪಾಟಿದಾರ್ ಕ್ಯಾಪ್ಟನ್ಸಿ ಮುಂದೆ ಗೆದ್ದೇ ಇಲ್ಲ ಮುಂಬೈ, ಚೆನ್ನೈ, ಕೊಲ್ಕತ್ತಾ!
ಐಪಿಎಲ್ ನಲ್ಲಿ 19 ಸೀಸನ್ಗಳು ಮುಗಿದಿವೆ. ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ 5 ಕಪ್, ಮುಂಬೈ ಇಂಡಿಯನ್ಸ್ 5 ಕಪ್ ಹಾಗೇ ಕೊಲ್ಕತ್ತಾ ಮೂರು ಕಪ್.. ಹೀಗೆ ಈ ಮೂರೂ ತಂಡಗಳೇ 13 ಕಪ್ ಗೆದ್ದಿವೆ. ಐಪಿಎಲ್ನಲ್ಲಿ ಅತೀ ಹೆಚ್ಚು ಟ್ರೋಫಿಗಳನ್ನ ಗೆದ್ದಿರೋರ ಪೈಕಿ ಟಾಪ್-3ನಲ್ಲಿದ್ದಾರೆ. ಆದ್ರೆ ಕಳೆದ ಎರಡು ವರ್ಷಗಳಿಂದ ಈ ಮೂರೂ ತಂಡಗಳೂ ಬೆಂಗಳೂರು ವಿರುದ್ಧ ಸಿಂಗಲ್ ವಿಕ್ಟರಿ ಬಂದಿಲ್ಲ.
ರಜತ್ ಮುಂದೆ ಗೆಲ್ಲದ ತಂಡಗಳು!
ತಂಡ ಒಟ್ಟು ಪಂದ್ಯ ಗೆಲುವು
ಚೆನ್ನೈ 3 0
ಮುಂಬೈ 3 0
ಕೊಲ್ಕತ್ತಾ 3 0
ಹೀಗೆ ರಜತ್ ಕ್ಯಾಪ್ಟನ್ಸಿಯಲ್ಲಿ ಕಳೆದ ಎರಡು ವರ್ಷಗಳಿಂದ ಡಾಮಿನೇಟಿಂಗ್ ಪರ್ಫಾಮೆನ್ಸ್ ಬರ್ತಿದೆ. ಹಾಗಂತ ಈ ಎರಡು ವರ್ಷಗಳಷ್ಟೇ ಅಲ್ಲ 2020ರಿಂದಲೇ ಬೆಂಗಳೂರು ಪಾರುಪತ್ಯ ಸ್ಟಾರ್ಟ್ ಆಗಿದೆ. 2020ಸ್ ಡಿಕೇಡ್ನಲ್ಲಿ ಮೋಸ್ಟ್ ಸಕ್ಸಸ್ಫುಲ್ ಫ್ರಾಂಚೈಸಿ ಆಗಿದೆ. ಅಂದ್ರೆ 2021-2026ರವರೆಗೆ ಬೆಂಗಳೂರು ತಂಡದ ವಿನ್ನಿಂಗ್ ಪರ್ಸೆಂಟೇಜ್ ನೆಕ್ಸ್ಟ್ ಲೆವೆಲ್ನಲ್ಲಿದೆ. ಹೇಗಿದೆ ಅನ್ನೋದನ್ನ ನೋಡ್ತಾ ಹೋಗೋಣ.
2020ರ ಬಳಿಕ ಆರ್ ಸಿಬಿ ಹವಾ!
ತಂಡ ಒಟ್ಟು ಪಂದ್ಯ ಗೆಲುವಿನ ಪರ್ಸಂಟೇಜ್
ಮುಂಬೈ 11 73%
ರಾಜಸ್ಥಾನ 14 64%
ಲಕ್ನೋ 8 63%
ಗುಜರಾತ್ 10 60%
ಡೆಲ್ಲಿ 12 58%
ಪಂಜಾಬ್ 14 57%
ಚೆನ್ನೈ 12 50%
ಕೊಲ್ಕತ್ತಾ 12 50%
ಹೈದ್ರಾಬಾದ್ 13 46%
ಸೋ ಇಲ್ಲಿ ಹೈದ್ರಾಬಾದ್ ವಿರುದ್ಧ ಮಾತ್ರವೇ ಅರ್ಧಕ್ಕಿಂತ ಕಡಿಮೆ ವಿನ್ನಿಂಗ್ ಪರ್ಸೆಂಟೇಜ್ ಇರೋದು. ಉಳಿದೆಲ್ಲಾ ತಂಡಗಳ ವಿರುದ್ಧ 50 ಅಥವಾ ಅದಕ್ಕಿಂತ ಜಾಸ್ತಿ ಗೆಲುವಿನ ಶೇಕಡಾವಾರು ಹೊಂದಿದ್ದಾರೆ. ಒಟ್ನಲ್ಲಿ ಆರ್ಸಿಬಿ ಜರ್ನಿ ಹೆಂಗಾಗಿದ್ರೆ 2020ಕ್ಕೂ ಮುನ್ನ ಹತ್ತರಲ್ಲಿ ಒಬ್ಬರಾಗಿದ್ರು. ಆದ್ರೆ 2020ರ ಬಳಿಕ ತಾವೇ ಮೊದಲಿಗರಾಗಿ ಮುನ್ನುಗ್ತಿದ್ದಾರೆ. ಅದ್ರಲ್ಲೂ 18 ಮತ್ತು 19ನೇ ಸೀಸನ್ನಲ್ಲಿ ಆರ್ಸಿಬಿ ನಡೆದಿದ್ದೇ ದಾರಿಯಾಗಿದೆ.

ನೋಡಿರಿ

