ಚರಿತ್ರೆ ಸೃಷ್ಟಿಸೋ ಅವತಾರ! ವೈಭವ್ ಎಂಟ್ರಿ.. ಸೂರ್ಯ ಔಟ್!

ಚರಿತ್ರೆ ಸೃಷ್ಟಿಸೋ ಅವತಾರ!  ವೈಭವ್ ಎಂಟ್ರಿ.. ಸೂರ್ಯ ಔಟ್!

2026ರ ಟಿ20 ವಿಶ್ವಕಪ್ ಗೆಲುವಿನ ನಂತರ ಭಾರತದ ಮೊದಲ ಟಿ20ಐ ತಂಡವನ್ನು BCCI ಘೋಷಣೆ ಮಾಡಿದೆ.. ಹಳೇ ಸೂರ್ಯ ಮುಳುಗಿ ಹೊಸ ಸೂರ್ಯ ಟೀಂ ಇಂಡಿಯಾ ಟಿ20Iನಲ್ಲಿ ಉದಯವಾಗಿದೆ. ಹೊಸ ಕ್ಯಾಪ್ಟನ್ಸ್‌ ಜೊತೆ ಹೊಸ ಜೋಶ್ ಜೊತೆ ಟೀಂ ಇಂಡಿಯಾ ಅಖಾಡಕ್ಕೆ ಇಳಿದಿದೆ.

ಇದನ್ನೂ ಓದಿ: ಬ್ಲೂ ಜರ್ಸಿಗೆ ವಿರಾಟ್‌ Goodbye? ODI ನಿವೃತ್ತಿಗೆ ಮುಹೂರ್ತ ಫಿಕ್ಸ್?

ಐರ್ಲ್ಯಾಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ 2026ಕ್ಕೆ ಭಾರತ ಹೊಸ ಟಿ20I ಪ್ರಕಟಿಸಿದ್ದು, ಕಳಪೆ ಫಾರ್ಮ್‌ನಲ್ಲಿ ಬಳಲಿ ಬೆಂಡಾಗಿ, ಕೇವಲ ಲಕ್‌ ಮೇಲೆ ಗೆಲ್ಲುತ್ತಿದ್ದ  ಸೂರ್ಯಕುಮಾರ್ ಯಾದವ್‌ಗೆ ಗೇಟ್‌ ಪಾಸ್ ನೀಡಲಾಗಿದೆ. ಇವರು ಐಪಿಎಲ್‌ನಲ್ಲೂ ರನ್‌ ಕಲೆ ಹಾಕುವಲ್ಲಿ ಕಂಪ್ಲೀಟ್ ಫೆಲ್ಯೂರ್ ಆಗಿದ್ರು, ಹೀಗಾಗಿ ಇವರ ಕ್ಯಾಪ್ಟನ್ಸಿ ಸ್ಥಾನದ ಮೇಲೆ ಪ್ರಶ್ನೆಗಳು ಎದ್ದಿದ್ದವು. ಈಗ ಇವರ ಸ್ಥಾನವನ್ನು ಭರವಸೆಯ ಬ್ಯಾಟರ್ ಶ್ರೇಯಸ್ ಅಯ್ಯರ್ ತುಂಬಲಿದ್ದಾರೆ. ಈ ಮೂಲಕ ಮುಂದಿನ ವಿಶ್ವಕಪ್‌ಗೆ ಹೊಸ ಯುವ ತಂಡವನ್ನು ಬಿಸಿಸಿಐ ಕಟ್ಟಿದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ, ಐಪಿಎಲ್‌ನಲ್ಲಿ ಘರ್ಜನೆ ಮಾಡಿದ ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಕ್ಕಿದೆ. ಈ ಮೂಲಕ ಟೀಂ ಇಂಡಿಯಾಕ್ಕೆ ಅತೀ ಚಿಕ್ಕ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಡೆಬ್ಯೂ ಮಾಡಿದ ಆಟಗಾರ ಎನಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ 15 ವರ್ಷ 205 ದಿನ ಇರುವಾಗ ಪಾಕ್ ವಿರುದ್ಧ ಮೊದಲ ಅಂತರರಾಷ್ಟ್ರೀಯ ತಂಡಕ್ಕೆ ಕಾಲಿಟ್ಟಿದ್ದರು.. ಆಗ ಆ ದಾಖಲೆಯನ್ನ ವೈಭವ್ ಸೂರ್ಯವಂಶಿ ಮುರಿದಿದ್ದು, ಜಸ್ಟ್ 15 ವರ್ಷ 2 ತಿಂಗಳಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು,  ಅತ್ಯಂತ ಕಿರಿಯ ಅಂತರರಾಷ್ಟ್ರೀಯ ಆಟಗಾರ ಆಗಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್‌ ನಡೆಸಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಸೀಸನ್‌ ಐಪಿಎಲ್‌ನಲ್ಲಿ16 ಇನ್ನಿಂಗ್ಸ್‌ಗಳಲ್ಲಿ 776 ರನ್ ಗಳಿಸಿದರು. ಈಗ ಈ ಯಂಗ್ ಗನ್ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದು, ಸಿಕ್ಸರ್ ಮಷಿನ್‌ನಿಂದ ಸಿಕ್ಸರ್‌ಗಳ ಸುರಿಮಳೆ ಹರಿಯಲಿದೆ. ಇನ್ನೂ ಭಾರತ ಹೊಸ ಟಿ20I ಟೀಂ ನಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಕ್ಕಿದೆ ಅನ್ನೋದ್ದನ್ನ ನೋಡೋದಾದ್ರೆ.

ಭಾರತ T20I ಸ್ಕ್ವಾಡ್ 2026

ಬ್ಯಾಟರ್ಸ್

ಶ್ರೇಯಸ್ ಅಯ್ಯರ್  – ಕ್ಯಾಪ್ಟನ್

ತಿಲಕ್ ವರ್ಮಾ – ಉಪನಾಯಕ

ಅಭಿಷೇಕ್ ಶರ್ಮಾ

ವೈಭವ್ ಸೂರ್ಯವಂಶಿ

ಸಂಜು ಸ್ಯಾಮ್ಸನ್

ಇಶಾನ್ ಕಿಶನ್

ಆಲ್‌ರೌಂಡರ್ಸ್

ಶಿವಂದುಬೆ

ವಾರ್ಷಿಂಗ್ಟನ್ ಸುಂದರ್

ನಿತೀಶ್ ಕುಮಾರ್ ರೆಡ್ಡಿ

ಅಕ್ಷರ್ ಪಟೇಲ್

ಹರ್ಷಿತ್ ರಾಣಾ

ಬೌಲರ್ಸ್

ರವಿ ಬಿಷ್ಣೋಯ್

ವರುಣ್ ಚಕ್ರವರ್ತಿ

ಅರ್ಶದೀಪ್ ಸಿಂಗ್

ಪ್ರಿನ್ಸ್ ಯಾದವ್

ಮೊಹಮ್ಮದ್ ಸಿರಾಜ್

ಈ ಟೀಂ ಐರ್ಲೆಂಡ್‌ನ ವಿರುದ್ಧ ಎರಡು ಟಿ20ಐ ಪಂದ್ಯಗಳನ್ನು ಆಡಲಿದ್ದು, ನಂತರ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾಗವಹಿಸಲಿದೆ. ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಎರಡು ಸರಣಿಗಳಿಗೆ ವಿಶ್ರಾಂತಿ ನೀಡಲಾಗಿದೆ, ಆದರೂ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಭಾರತೀಯ ತಂಡದಲ್ಲಿ ಅವರನ್ನು ಹೆಸರಿಸಲಾಗಿದೆ. ಇನ್ನೂ ಆರ್‌ಸಿಬಿಯನ್ನ ಎರಡು ಸಲ ಕಪ್ ಗೆಲ್ಲಿಸಿದ ರಜತ್ ಪಾಟೀದಾರ್ ಗೆ ಟಿ20Iನಲ್ಲಿ ಚಾನ್ಸ್ ಸಿಗುತ್ತೆ ಅಂತ ಎಲ್ಲಾ ಅಂದ್ಕೊಂಡಿದ್ರು, ಉಪನಾಯಕನ ಪಟ್ಟವನ್ನ ನೀಡ್ತಾರೆ ಎನ್ನಲಾಗಿತ್ತು. ಆದ್ರೆ ರಜತ್‌ಗೆ ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗದೇ ಇರುವುದು ಫಾನ್ಸ್‌ ಬೇಸರಕ್ಕೆ ಕಾರಣವಾಗಿದೆ.

Kishor KV