ಬ್ಲೂ ಜರ್ಸಿಗೆ ವಿರಾಟ್‌ Goodbye? ODI ನಿವೃತ್ತಿಗೆ ಮುಹೂರ್ತ ಫಿಕ್ಸ್?

ಬ್ಲೂ ಜರ್ಸಿಗೆ ವಿರಾಟ್‌ Goodbye?  ODI ನಿವೃತ್ತಿಗೆ ಮುಹೂರ್ತ ಫಿಕ್ಸ್?

 

ಟೀಂ ಇಂಡಿಯಾ ಅಷ್ಟೇ ಅಲ್ಲದೆ ಇಡೀ ಕ್ರಿಕೆಟ್ ಜಗತ್ತಿನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರೋ ಆಟಗಾರ ಅಂದ್ರೆ ಅದು ವಿರಾಟ್ ಕೊಹ್ಲಿ. ಕ್ರಿಕೆಟ್ ಕರಿಯರ್​​ನಲ್ಲಿ ದಾಖಲೆಗಳನ್ನೇ ಮೆಟ್ಟಿಲು ಮಾಡ್ಕೊಂಡು ಬೆಳೆದಿರೋ ವಿರಾಟ್ ಐಪಿಎಲ್‌, ಟಿ20, ಟೆಸ್ಟ್‌, ODIನಲ್ಲಿ ರೆಕಾರ್ಡ್‌ ಮೇಲೆ ರೆಕಾರ್ಡ್ ಬರೆದಿದ್ದಾರೆ.  ಆದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟಿ20 ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರೋ ಕಿಂಗ್ ಕೊಹ್ಲಿ ಈಗ ODI ಮಾತ್ರ ಆಡುತ್ತಿದ್ದಾರೆ. ಅಂದ್ರೆ ವಿರಾಟ್ ಬ್ಲೂ ಜರ್ಸಿಯಲ್ಲಿ ಕಾಣಿಸಿಕೊಳ್ಳುವುದು ಏಕದಿನ ಸರಣಿಯಲ್ಲಿ ಮಾತ್ರ. ಆದ್ರೆ ಈ ಶಾಕಿಂಗ್ ವಿಷ್ಯ ಏನಪ್ಪ ಅಂದ್ರೆ ಇನ್ಮುಂದೆ ವಿರಾಟ್ ಬ್ಲೂ ಜರ್ಸಿಯಲ್ಲಿ ಕಾಣಿಸಿಕೊಳ್ಳುವುದು ಡೌಟ್.

ವಿರಾಟ್ ಕೊಹ್ಲಿ.. ಕ್ರಿಕೆಟ್‌ ಲೋಕದ ಟೈಗರ್‌.. ಚೇಸ್ ಮಾಸ್ಟರ್‌ ಬ್ಲೂ ಜರ್ಸಿಯಲ್ಲಿ ಕಣಕ್ಕಿಳಿದ್ರೆ, ಕೋಟಿ ಕೋಟಿ ಫ್ಯಾನ್ಸ್ ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನ ಬಿಟ್ಟು ಟಿವಿ ಮುಂದೆ ಕೂರುತ್ತಾರೆ.. ವಿರಾಟ್ ಕೂಡ ಎದುರಾಳಿ ವಿರುದ್ಧ ಅಬ್ಬರಿಸುತ್ತಾ, ಘರ್ಜನೆ ಮಾಡುತ್ತಾರೆ. ಕಿಂಗ್ ಕೊಹ್ಲಿಯನ್ನ ಬ್ಲೂ ಜರ್ಸಿಯಲ್ಲಿ ನೋಡೋದೇ ಚೆಂದ, ಕಣ್ಣಿಗೆ ಹಬ್ಬ.. ಆದ್ರೆ ಇನ್ಮುಂದೆ ವಿರಾಟ್ ಬ್ಲೂ ಜರ್ಸಿಯಲ್ಲಿ ಕಾಣಿಸುದೇ ಡೌಟ್‌ ಎನ್ನಲಾಗ್ತಿದೆ.. ODIನಲ್ಲಿ ಕಣಕ್ಕಿಳಿಯದೇ ವಿರಾಟ್ ನಿವೃತ್ತಿ ಷೋಷಣೆ ಮಾಡ್ತಾರೆ ಅನ್ನೋ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿ ಬರ್ತಿದೆ.

ನಮ್ಮ ಬೆಂಗಳೂರಿನ ದತ್ತು ಪುತ್ರ ವಿರಾಟ್ ಕೊಹ್ಲಿ ಆರ್‌ಸಿಬಿ ಮಿಂಚಿನ ಪ್ರದರ್ಶನವನ್ನ ನೀಡಿದ್ದಾರೆ. ಈ ಸಲ ಫೈನಲ್‌ನಲ್ಲಿ ವಿರಾಟ್ ಆರ್‌ಸಿಬಿ ಪರ ಏಕಾಂಗಿ ಹೋರಾಟ ನಡೆಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್‌ನಲ್ಲಿ ಅವರು ಅಜೇಯ 75 ರನ್ ಗಳಿಸುವ ಮೂಲಕ ಆರ್‌ಸಿಬಿ ಸತತ ಎರಡನೇ ಬಾರಿ ಪ್ರಶಸ್ತಿ ಗೆಲ್ಲಲು ಕಾರಣವಾಗಿದ್ರು. ಆದ್ರೆ ಇವರು ಈ ಪಂದ್ಯದ ಕೊನೆಯಲ್ಲಿ ಗಾಯಗೊಂಡಿದ್ದು, ಏಕದಿನ ಸರಣಿ ಮೇಲೆ ಬಿಗ್ ಎಫೆಕ್ಟ್ ಬಿದ್ದಿದೆ.ಅದು ಎಷ್ಟರ ಮಟ್ಟಿದೆ ಅಂದ್ರೆ ವಿರಾಟ್ ಇನ್ಮುಂದೆ ಬ್ಲೂ ಜರ್ಸಿಯಲ್ಲಿ ಕಾಣಲ್ಲ ಅನ್ನೋ ರೀತಿಯಲ್ಲಿ ಚರ್ಚೆ ಆಗ್ತಿದೆ.

ವಿರಾಟ್‌ ಟಿ20Iಯಿಂದ 2024ರಲ್ಲಿ ನಿವೃತ್ತಿ ಹೊಂದಿದ್ರೆ, 2025ರ ಮೇ 12ರಂದು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ರು. ಈಗ ODIಯಲ್ಲಿ  ಮಾತ್ರ ಆಡ್ತಿದ್ದಾರೆ. 2026ರ ಜನವರಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಕೊನೆಯ ODI ಆಡಿದ್ದಾರೆ. ಆದ್ರೆ ಈಗ ODIಗೂ ನಿವೃತ್ತಿ ಹೊಂದಿದ್ರೆ ನಾವು ವಿರಾಟ್‌ನನ್ನ ನಾವು ಹೇಗೆ ಬ್ಲೂ ಜರ್ಸಿಯಲ್ಲಿ ಕಣ್ತುಂಬಿಕೊಳ್ಳುವುದು ಫ್ಯಾನ್ಸ್ ಆತಂಕ ಹೊರ ಹಾಕುತ್ತಿದ್ದಾರೆ.  ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಸರಣಿ ಆಡುವುದಿಲ್ಲ ಅನ್ನೋದು ಈಗ ಘೋಷಣೆ ಮಾಡಲಾಗಿದೆ. ಹಾಗೇ ಕೊಹ್ಲಿ ಗಾಯದಿಂದ ಚೇತರಿಸಿಕೊಳ್ಳಲು ಇನ್ನಷ್ಟು ಸಮಯ ಬೇಕಿದೆ. ಕನಿಷ್ಠ 6 ರಿಂದ 7 ವಾರಗಳಾದರೂ ಅವರು ಚೇತರಿಸಿಕೊಳ್ಳುವುದ್ದಕ್ಕೆ ಬೇಕು.. ಹೀಗಾಗಿಅಪ್ಘಾನಿಸ್ತಾನ ಸರಣಿ ಮಾತ್ರವಲ್ಲದೇ ಇಂಗ್ಲೆಂಡ್‌ ಸರಣಿಯಲ್ಲಿ ಕಣಕ್ಕಿಳಿಯುವುದು ಬಹುತೇಕ ಅನುಮಾನ ಎನ್ನಲಾಗಿದೆ.ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಮುಂಬರುವ ಜುಲೈ 14ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿದೆ. ಈ ಮಹತ್ವದ ಸರಣಿಯಿಂದಲೂ ಕೊಹ್ಲಿ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ವಿರಾಟ್ ಕೊಹ್ಲಿ ಆರೋಗ್ಯ ಇಲ್ಲಿ ಮುಖ್ಯ, ಹೀಗಾಗಿ ಅವರ ಆರೋಗ್ಯದ ದೃಷ್ಟಿಯಿಂದ ಅವರು ಸಂಪೂರ್ಣ ಫಿಟ್ ಆಗೋ ತನಕ ಅವರು ಟೀಂ ಇಂಡಿಯಾ ಪರ ಮೈದಾನಕ್ಕೆ ಇಳಿಯುವುದಿಲ್ಲ. ಹಾಗೇ ವಿರಾಟ್ ಈ ವೇಳೆಯಲ್ಲಿ ODIಗೆ ನಿವೃತ್ತಿ ಘೋಷಣೆ ಮಾಡೋ ಸಾಧ್ಯತೆ ಹೆಚ್ಚಿದೆ ಎನ್ನಲಾಗ್ತಿದೆ. ಒಂದು ವೇಳೆ ಇದು ನಿಜವಾದ್ರೆ, ಇನ್ಮುಂದೆ ವಿರಾಟ್ ಬ್ಲೂ ಜರ್ಸಿಯಲ್ಲಿ ಕಾಣಿಸಿಕೊಳ್ಳುವುದ್ದಿಲ್ಲ.

ವಿರಾಟ್ ಕೊಹ್ಲಿ ಇನ್ನೂ ಕೂಡ ಫಾರ್ಮ್‌ನಲ್ಲಿ ಇದ್ದಾರೆ.. ಅದ್ದನ್ನ ಈ ಸಲದ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ್ದನ್ನ ನೋಡಿದ್ದೇವೆ. ಹೀಗಾಗಿ ಅವರು ODIನಲ್ಲಿ ಆಡದೇ ಇರುವುದು ಟೀಂ ಇಂಡಿಯಾಕ್ಕೆ ಬಿಗ್ ಲಾಸ್‌.. ಒಂದು ವೇಳೆ ಆರಂಭದಲ್ಲೇ ವಿಕೆಟ್ ಪತನವಾದರೆ, ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಅನುಭವ ತಂಡಕ್ಕೆ ಬಹಳ ಉಪಯುಕ್ತವಾಗುತ್ತದೆ. ಅವರು ಪರಿಸ್ಥಿತಿಗೆ ತಕ್ಕಂತೆ ಎಚ್ಚರಿಕೆಯಿಂದ ಬ್ಯಾಟ್‌ ಮಾಡುವುದರ ಜೊತೆಗೆ ದೀರ್ಘ ಇನಿಂಗ್ಸ್ ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ 2027ರ ODI ವಿಶ್ವಕಪ್ ತನಕ ನಿವೃತ್ತಿ ಘೋಷಣೆ ಮಾಡದೆ ಇರುವು ಟೀಂ ಇಂಡಿಯಾಗೆ ಒಳ್ಳೆಯದ್ದು..

ಇನ್ನು ಕೆಲ ಮಾಹಿತಿ ಪ್ರಕಾರ ವಿರಾಟ್ 2027ರ ODI ವಿಶ್ವಕಪ್ ತನಕ ನಿವೃತ್ತಿ ಘೋಷಣೆ ಮಾಡಲ್ಲ. ಆದ್ರೆ ಅದ್ದಕ್ಕೂ ಮುಂಚೆ ನಡೆಯೋ ODI ಪಂದ್ಯಗಳಲ್ಲಿ ಆಡೋದು ಡೌಟ್‌.. ಅಂದ್ರೆ ಇನ್ನೂ ಒಂದರಿಂದ ಒಂದೂವರೆ ವರ್ಷ ಕೊಹ್ಲಿ ಟೀಂ ಇಂಡಿಯಾ ODI ತಂಡಲ್ಲಿ ಇರ್ತಾರೆ. ಯಾಕಂದ್ರೆ 2027 ODI ವಿಶ್ವಕಪ್ ನಡೆಯೋದು 2027ರಅಕ್ಟೋಬರ್‌ನಿಂದ ನವೆಂಬರ್‌ ತನಕ.. ಹೀಗಾಗಿ ಅಲ್ಲಿ ತನಕ ವಿರಾಟ್ ಕೊಹ್ಲಿ ನಿವೃತ್ತಿ ಘೋಷಣೆ ಮಾಡಲ್ಲ. ಆದ್ರೆ ಅದ್ದಕ್ಕೂ ಮುಂಚೆ ನಡೆಯೇ ಎಲ್ಲಾ ODI ಪಂದ್ಯದಲ್ಲಿ ಕಾಣೋದು ಡೌಟ್‌.  ಆದ್ರೆ ಅಲ್ಲಿ ತನಕ ODI ವಿಶ್ವಕಪ್‌2027ಕ್ಕೆ ತಯಾರಿ ನಡೆಸುತ್ತಾರೆ ಎನ್ನಲಾಗ್ತಿದೆ. ಈಗ ಸದ್ಯಕ್ಕೆ ಅಫ್ಘಾನ್ ವಿರುದ್ಧ ಆಡಲ್ಲ. ಇಂಗ್ಲೆಂಡ್ ವಿರುದ್ಧ ಸರಣಿಗೂ ಡೌಟ್‌..   ಹಾಗೇ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ  ಭಾರತ vs ವೆಸ್ಟ್ ಇಂಡೀಸ್ ನಡೆಯೋ ಪಂದ್ಯದಲ್ಲಿ ಆಡೋ ಸಾಧ್ಯತೆ ಹೆಚ್ಚಿದೆ. ಅಕ್ಟೋಬರ್-ನವೆಂಬರ್ 2026ರಲ್ಲಿ ನ್ಯೂಜಿಲೆಂಡ್ vs ಭಾರತ  ಪಂದ್ಯಕ್ಕೆ ಕೊಹ್ಲಿ ಆಡೋದು ಅನುಮಾನವಿದೆ.

ವಿರಾಟ್ ಬೇಕಾದ್ರೆ 2027ರ ವಿಶ್ವಕಪ್ ತನಕ ಬೇಕಾದ್ರೆ ರೆಸ್ಟ್ ಮಾಡ್ಲಿ, ಆದ್ರೆ ನಿವೃತ್ತಿ ಘೋಷಣೆ ಮಾಡೋದು ಬೇಡ. 2027ರ ವಿಶ್ವಕಪ್ ಗೆದ್ದ ನಂತ್ರ ಅವರು ನಿವೃತ್ತಿ ಹೊಂದ್ಲಿ ಅನ್ನೋದು ಪ್ರತಿಯೊಬ್ಬ ಫ್ಯಾನ್ಸ್ ಆಸೆ..

Kishor KV

Leave a Reply

Your email address will not be published. Required fields are marked *