ಶ್ರೇಯಸ್ ಅಯ್ಯರ್ ಟಿ20 ತಂಡದ ಕ್ಯಾಪ್ಟನ್ – ಸೂರ್ಯ ತಂಡದಿಂದಲೇ OUT, ವೈಭವ್ ಸೂರ್ಯವಂಶಿ ಆಯ್ಕೆ

ಭಾರತ ಟಿ20 ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ವಿಶ್ವಕಪ್ ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ಇಳಿಸಲಾಗಿದೆ. ಜೊತೆಗೆ ಟೀಮ್ ಇಂಡಿಯಾದಿಂದಲೇ ಸೂರ್ಯಕುಮಾರ್‌ಗೆ ಗೇಟ್‌ಪಾಸ್ ನೀಡಲಾಗಿದೆ. ಶ್ರೇಯಸ್ ಅಯ್ಯರ್ ಟಿ20 ತಂಡದ ಹೊಸ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:ಕೆಎಲ್ ರಾಹುಲ್ UNSOLD.. ₹2 ಲಕ್ಷಕ್ಕೂ ಖರೀದಿಸಲಿಲ್ಲ ಏಕೆ? – ಕರುಣ್ & ಮನೀಶ್ ಪಾಂಡೆಗೆ ಲಾಟರಿ
ಟೀಮ್ ಇಂಡಿಯಾ ಟಿ20 ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ. ಜೊತೆಗೆ ವಂಡರ್ ಕಿಡ್ ವೈಭವ್ ಸೂರ್ಯವಂಶಿಗೆ ಟೀಮ್ ಇಂಡಿಯಾದ ಬಾಗಿಲು ತೆರೆದಿದೆ. ಜೂನ್ 26 ಮತ್ತು 28ರಂದು ಬೆಲ್ಫಾಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳೊಂದಿಗೆ ಪ್ರಾರಂಭವಾಗಲಿದೆ. ನಂತರ ಜುಲೈ 1ರಿಂದ 11ರವರೆಗೆ ಇಂಗ್ಲೆಂಡ್‌ನಲ್ಲಿ ಐದು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಈ ಎರಡೂ ಸರಣಿಗಳಿಗಾಗಿ BCCI ಭಾರತದ 15 ಸದಸ್ಯರ ಟಿ20I ತಂಡಗಳನ್ನು ಪ್ರಕಟಿಸಿದೆ.
2026ರ ಟಿ20 ವಿಶ್ವಕಪ್ ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿದ್ದು, ಶ್ರೇಯಸ್ ಅಯ್ಯರ್ ಎರಡೂ ಪ್ರವಾಸಕ್ಕೂ ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ತಿಲಕ್ ವರ್ಮಾರನ್ನ ಉಪನಾಯಕನಾಗಿ ನೇಮಿಸಲಾಗಿದೆ. ಐಪಿಎಲ್ ಸೆನ್ಷೇಷನ್ ವೈಭವ್ ಸೂರ್ಯವಂಶಿ ಹಾಗೂ ವೇಗದ ಬೌಲರ್ ಪ್ರಿನ್ಸ್ ಯಾದವ್ ಕೂಡ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಅವರು 31 ವರ್ಷದವರಾಗಿದ್ದು, ಕೊನೆಯ ಟಿ20I ಪಂದ್ಯವನ್ನು 2023 ಡಿಸೆಂಬರ್‌ನಲ್ಲಿ ಆಡಿದ್ದರು. ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ ಅವರಿಂದಾಗಿ ಮಧ್ಯಮ ಕ್ರಮಾಂಕದಲ್ಲಿ ಅಯ್ಯರ್ಗೆ ಸ್ಥಾನ ಸಿಕ್ಕಿರಲಿಲ್ಲ. ಆದರೆ ಅಯ್ಯರ್ ಸತತ 3 ಐಪಿಎಲ್‌ನಲ್ಲಿ ಉತ್ತಮ ನಾಯಕತ್ವ ಮತ್ತು ಬ್ಯಾಟಿಂಗ್ ಪ್ರದರ್ಶನ ತೋರಿಸಿದ್ದಾರೆ. 2024ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಅನ್ನು ಚಾಂಪಿಯನ್ ಮಾಡಿದ್ದರು. 2025ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಫೈನಲ್‌ಗೆ ಕೊಂಡೊಯ್ದಿದ್ದರು. 2026ರಲ್ಲೂ ಮೊದಲಾರ್ಧದಲ್ಲಿ ಪಂಜಾಬ್ ಅಯ್ಯರ್ ನಾಯಕತ್ವದಲ್ಲಿ ಪ್ರಾಬಲ್ಯ ಸಾಧಿಸಿತ್ತು. ಶ್ರೇಯಸ್ ಅವರ ನಾಯಕತ್ವದ ಅನುಭವ ಮತ್ತು ಫಾರ್ಮ್ ಅವರನ್ನು ಭಾರತ ತಂಡವನ್ನ ಮುನ್ನಡೆಸಲು ಪ್ರಮುಖ ಆಯ್ಕೆ ಎಂದು ಆಯ್ಕೆ ಸಮಿತಿ ನಿರ್ಧರಿಸಿದೆ.
ಐಪಿಎಲ್ 2026ರಲ್ಲಿ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದ ಬಾಸ್ ಬೇಬಿ ಸೂರ್ಯವಂಶಿಗೆ ಭಾಗ್ಯದ ಬಾಗಿಲು ತೆರೆದಿದೆ. ಸಚಿನ್ ತೆಂಡೂಲ್ಕರ್ ನಂತರ ಅತ್ಯಂತ ಕಿರಿಯ ಆಟಗಾರನಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ ವೈಭವ್. ಇದಕ್ಕೂ ಮುನ್ನ ಅವರು ಶ್ರೀಲಂಕಾದಲ್ಲಿ ಭಾರತ A ತಂಡಕ್ಕಾಗಿ ಆಡಲಿದ್ದಾರೆ. ಇಂಗ್ಲೆಂಡ್ ಮತ್ತು ಐರ್ಲೆಂಡ್ ಎರಡೂ ಪ್ರವಾಸಗಳಿಗೆ ಒಂದೇ ತಂಡವನ್ನು ಆಯ್ಕೆ ಮಾಡಲಾಗಿದೆ.
ಭಾರತದ ಟಿ20I ತಂಡ (ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸ): – ಶ್ರೇಯಸ್ ಅಯ್ಯರ್ (ನಾಯಕ) – ತಿಲಕ್ ವರ್ಮ (ಉಪನಾಯಕ) – ಅಭಿಷೇಕ್ ಶರ್ಮಾ – ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) – ಇಶಾನ್ ಕಿಶನ್ (ವಿಕೆಟ್ ಕೀಪರ್) – ಶಿವಮ್ ದುಬೆ – ನಿತೀಶ್ ಕುಮಾರ್ ರೆಡ್ಡಿ – ಅಕ್ಷರ್ ಪಟೇಲ್ – ವಾಷಿಂಗ್ಟನ್ ಸುಂದರ್ – ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ – ಮೊಹಮ್ಮದ್ ಸಿರಾಜ್ – ಹರ್ಷಿತ್ ರಾಣಾ – ಅರ್ಶ್‌ದೀಪ್ ಸಿಂಗ್ – ಪ್ರಿನ್ಸ್ ಯಾದವ್ – ವೈಭವ್ ಸೂರ್ಯವಂಶಿ

ನೋಡಿರಿ

