ಕೆಎಲ್ ರಾಹುಲ್ UNSOLD.. ₹2 ಲಕ್ಷಕ್ಕೂ ಖರೀದಿಸಲಿಲ್ಲ ಏಕೆ? – ಕರುಣ್ & ಮನೀಶ್ ಪಾಂಡೆಗೆ ಲಾಟರಿ

ನಿನ್ನೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಕೆಎಲ್ ರಾಹುಲ್ದೇ ಸದ್ದು, ಸುದ್ದಿ. ಹಾಗಂತ ಆಫ್ಘನಿಸ್ತಾನ ವಿರುದ್ಧದ ಟೆಸ್ಟ್ ಮ್ಯಾಚ್ನಲ್ಲಿ ಆಡ್ತಿದ್ದಾರೆ ಅಂತಲ್ಲ. ಅನ್ಸೋಲ್ಡ್ ಆಗಿದ್ದಾರೆ. ಬೇಸ್ ಪ್ರೈಸ್ಗೂ ಅವ್ರನ್ನ ಯಾರೂ ಖರೀದಿ ಮಾಡಲಿಲ್ವಂತೆ ಅಂತಾ. ಮಹಾರಾಜ ಟ್ರೋಫಿ ಟಿ-20 ಲೀಗ್ನಲ್ಲಿ ರಾಹುಲ್ರನ್ನ ಯಾರೂ ಕೂಡ ಖರೀದಿ ಮಾಡಿಲ್ಲ.
ಇದನ್ನೂ ಓದಿ: ಔಟಾಗಿದ್ದು ಗೊತ್ತಾದರೂ ಕೆ.ಎಲ್ ರಾಹುಲ್ ಡ್ರಾಮಾ – ಔಟ್ ಕೊಡದ ಅಂಪೈರ್, ಕನ್ನಡಿಗ ಬಚಾವ್..!
ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್.. ಐಪಿಎಲ್ನ ಹೀರೋ ಕೆಎಲ್ ರಾಹುಲ್ ಮಹರಾಜ ಟ್ರೋಫಿ ಲೀಗ್ನಲ್ಲಿ ಅನ್ಸೋಲ್ಡ್ ಆಗಿದ್ದಾರೆ. ಮೂಲ ಬೆಲೆ ಕೇವಲ 2 ಲಕ್ಷ ರೂಪಾಯಿಗಳಾಗಿದ್ದರೂ, ಅವರನ್ನು ಖರೀದಿಸಲು ಯಾವುದೇ ತಂಡ ಮುಂದೆ ಬರ್ಲಿಲ್ಲ. ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನಿಂದ 14 ಕೋಟಿ ರೂಪಾಯಿಗೆ ಬಿಡ್ ಆದ ರಾಹುಲ್, ಸ್ಥಳೀಯ ಲೀಗ್ನಲ್ಲಿ ಅನ್ಸೋಲ್ಡ್ ಆಗಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಡೆಲ್ಲಿ ಪರ ಮಿಂಚಿದ ರಾಹುಲ್ ಗೆ ಕೈತಪ್ಪಿದ ಮಹಾರಾಜ!
ಡೆಲ್ಲಿ ಕ್ಯಾಪಿಟಲ್ಸ್ (DC) ಪರ ಐಪಿಎಲ್ 2026ನೇ ಆವೃತ್ತಿಯಲ್ಲಿ ಆಡಿರುವ 14 ಪಂದ್ಯಗಳಲ್ಲಿ 593 ರನ್ ಗಳಿಸಿದ ಕನ್ನಡಿಗ ರಾಹುಲ್ ಅವರನ್ನು ಖರೀದಿಸಲು ಮಹಾರಾಜ ಟ್ರೋಫಿ 2026ರ ಹರಾಜಿನಲ್ಲಿ ಯಾವುದೇ ತಂಡ ಆಸಕ್ತಿ ತೋರಿಸಿಲ್ಲ. ಪಂದ್ಯಾವಳಿಗೆ ಅವರ ಲಭ್ಯತೆಯನ್ನು ದೃಢೀಕರಿಸದ ಕಾರಣ, ಯಾವುದೇ ತಂಡಗಳು ಅವರನ್ನು ಖರೀದಿಸಿಲ್ಲ ಎನ್ನಲಾಗಿದೆ. ಕೆಎಲ್ ರಾಹುಲ್ ₹2 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದೇವದತ್ ಪಡಿಕ್ಕಲ್ ಸೇರಿದಂತೆ ಮಯಾಂಕ್ ಅಗರ್ವಾಲ್, ವೈಶಾಕ್ ವಿಜಯ್ಕುಮಾರ್, ಶ್ರೇಯಸ್ ಗೋಪಾಲ್, ಕರುಣ್ ನಾಯರ್ ಮತ್ತು ಮನೀಶ್ ಪಾಂಡೆ ಮಹಾರಾಜ ಟ್ರೋಫಿ ಲೀಗ್ನಲ್ಲಿ ಆಡುವ ಕರ್ನಾಟಕದ ಕೆಲವು ಪ್ರಮುಖ ಭಾರತೀಯ ಆಟಗಾರರಾಗಿದ್ದಾರೆ. ಆದ್ರೆ ಈ ಅನ್ಸೋಲ್ಡ್ಗೆ ಕಾರಣವೂ ಇದೆ.
ರಾಷ್ಟ್ರೀಯ ಪಂದ್ಯಗಳ ಕಾರಣ ಮಹಾರಾಜದಲ್ಲಿ ಆಡಲ್ಲ ರಾಹುಲ್!
ಕೆಎಲ್ ರಾಹುಲ್ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿದ್ವು. ಆದ್ರೆ ಹರಾಜಿನ ವೇಳೆ ಕೆ.ಎಲ್ ರಾಹುಲ್ ಲೀಗ್ ವೇಳೆ ಆಡಲು ಲಭ್ಯರಿರುತ್ತಾರಾ ಅಂತಾ ಪ್ರಶ್ನೆ ಮಾಡಿದ್ರು. ಈ ವೇಳೆ ರಾಹುಲ್ ಮಹಾರಾಜ ಟ್ರೋಫಿ ಲೀಗ್ನಲ್ಲಿ ಆಡುವುದಿಲ್ಲ ಎಂಬ ಸತ್ಯ ಗೊತ್ತಾಗಿದೆ. ಯಾಕಂದ್ರೆ ಜೂನ್ 20 ರಿಂದ ಆರಂಭವಾಗುವ ಈ ಟೂರ್ನಿಗೆ ರಾಹುಲ್ ಅವರ ಅಲಭ್ಯತೆಯೇ ಅವರು ಮಾರಾಟವಾಗದಿರಲು ಮುಖ್ಯ ಕಾರಣ. ತಂಡಗಳಿಗೆ ತಮ್ಮ ಆಟಗಾರ ತಂಡದ ಪರ ಆಡಲ್ಲ ಅಂತಾ ಗೊತ್ತಾದಾಗ ಯಾವ ಫ್ರಾಂಚೈಸಿ ಕೂಡ ಖರೀದಿಗೆ ಮುಂದೆ ಬರಲಿಲ್ಲ. 2026ರ ಮಹಾರಾಜ ಟ್ರೋಫಿ ಆವೃತ್ತಿಯ ಪಂದ್ಯಗಳು ಜೂನ್ 20 ರಿಂದ ಜುಲೈ 12ರವರೆಗೆ ನಡೆಯಲಿವೆ. ಇದೇ ಅವಧಿಯಲ್ಲಿ, ಭಾರತೀಯ ಪುರುಷರ ಕ್ರಿಕೆಟ್ ತಂಡವು ಐರ್ಲೆಂಡ್ನಲ್ಲಿ ಎರಡು T20I (ಜೂನ್ 26 ಮತ್ತು 28) ಮತ್ತು ಇಂಗ್ಲೆಂಡ್ನಲ್ಲಿ ಐದು T20I ಪಂದ್ಯಗಳನ್ನು (ಜುಲೈ 1, 4, 7, 9 ಮತ್ತು 11) ಆಡಲಿದೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ಭಾಗವಹಿಸುತ್ತಿದ್ದು, ಪಂದ್ಯಾವಳಿಯ ಆರಂಭದಲ್ಲಿ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇರುವುದರಿಂದ ಹರಾಜಿನಲ್ಲಿ ಯಾವುದೇ ತಂಡ ಖರೀದಿ ಮಾಡಲಿಲ್ಲ.
ಕರುಣ್ ಮತ್ತು ಮನೀಶ್ ಗೆ ಹರಾಜಿನಲ್ಲಿ ಬಂಪರ್!
ಇನ್ನು ರಾಹುಲ್ ಅನ್ಸೋಲ್ಡ್ ಆದ್ರೂ ಕರ್ನಾಟಕದ ಇತರ ಅನುಭವಿ ಆಟಗಾರರು ದೊಡ್ಡ ಮೊತ್ತಕ್ಕೆ ಬಿಡ್ ಆದರು. ಕರುಣ್ ನಾಯರ್ ಅವರನ್ನು ಮಂಗಳೂರು ಡ್ರಾಗನ್ಸ್ 18 ಲಕ್ಷ ರೂಪಾಯಿಗೆ ಖರೀದಿಸಿದರೆ, ಮನೀಶ್ ಪಾಂಡೆ ಅವರನ್ನು ಗುಲ್ಬರ್ಗ ಮಿಸ್ಟಿಕ್ಸ್ 12.75 ಲಕ್ಷ ರೂಪಾಯಿಗೆ ಪಡೆದಿದೆ. ಒಟ್ಟು ಆರು ಫ್ರಾಂಚೈಸಿಗಳು ತಲಾ ₹60 ಲಕ್ಷದ ಥೈಲಿಯೊಂದಿಗೆ ಬಿಡ್ನಲ್ಲಿದ್ದು 150ಕ್ಕೂ ಹೆಚ್ಚು ಪ್ಲೇಯರ್ಸ್ ಬಿಡ್ನಲ್ಲಿದ್ದಾರೆ. ಪ್ರತಿ ಫ್ರಾಂಚೈಸಿಯೂ ಕನಿಷ್ಠ 16 ಮತ್ತು ಗರಿಷ್ಠ 18 ಆಟಗಾರರನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ. ವೈಶಾಕ್ ವಿಜಯ್ಕುಮಾರ್ ₹8.25 ಲಕ್ಷ, ಪ್ರಸಿದ್ಧ ಕೃಷ್ಣ ₹2.60 ಲಕ್ಷ, ದೇವದತ್ತ ಪಡಿಕ್ಕಲ್ ₹2.60 ಲಕ್ಷ ಹಾಗೂ ಮನೋಜ್ ಬಾಂಡಗೆ ಅವರನ್ನು ₹10 ಲಕ್ಷಕ್ಕೆ ಮೈಸೂರು ಫ್ರಾಂಚೈಸಿ ತಮ್ಮ ತೆಕ್ಕೆಗೆ ಹಾಕಿಕೊಂಡಿದೆ. ರಾಹುಲ್ ಲೀಗ್ನಲ್ಲಿ ಆಡೋದು ಕನ್ಫರ್ಮ್ ಇದ್ದಿದ್ರೆ ಬಹುಶಃ ಅವ್ರೇ ಹೈಯೆಸ್ಟ್ ಬಿಡ್ಗೆ ಹೋಗ್ತಿದ್ರು. ಆದ್ರೆ ನ್ಯಾಷನಲ್ ಡ್ಯೂಟೀಸ್ ಇರೋದ್ರಿಂದ ಯಾವುದೇ ಫ್ರಾಂಚೈಸಿ ಅವ್ರ ಮೇಲೆ ಬಿಡ್ ಮಾಡ್ಲಿಲ್ಲ ಅಷ್ಟೇ.

ನೋಡಿರಿ

