ಔಟಾಗಿದ್ದು ಗೊತ್ತಾದರೂ ಕೆ.ಎಲ್ ರಾಹುಲ್ ಡ್ರಾಮಾ – ಔಟ್ ಕೊಡದ ಅಂಪೈರ್, ಕನ್ನಡಿಗ ಬಚಾವ್..!

ಔಟಾಗಿದ್ದು ಗೊತ್ತಾದರೂ ಕೆ.ಎಲ್ ರಾಹುಲ್ ಡ್ರಾಮಾ – ಔಟ್ ಕೊಡದ ಅಂಪೈರ್, ಕನ್ನಡಿಗ ಬಚಾವ್..!

ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೊದಲ ದಿನದಾಟದಲ್ಲೇ ಟೀಮ್ ಇಂಡಿಯಾ ಬ್ಯಾಟರ್ ಕನ್ನಡಿಗ ಕೆ.ಎಲ್ ರಾಹುಲ್ ಮಾಡಿರುವ ಡ್ರಾಮಾ ಫುಲ್ ವೈರಲ್ ಆಗುತ್ತಿದೆ.

ಇದನ್ನೂ ಓದಿ:ಟೆಸ್ಟ್ ಪಂದ್ಯಕ್ಕೆ ಮಾನವ್ ಸುತಾರ್ ಪಾದಾರ್ಪಣೆ – ಟೆಸ್ಟ್ ಕ್ಯಾಪ್ ಕೊಟ್ಟು ವೆಲ್‌ಕಮ್‌ ಮಾಡಿದ ಕುಲ್ದೀಪ್ ಯಾದವ್

ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಿದ್ದರು. ಈ ಪಂದ್ಯದ 11ನೇ ಓವರ್‌ನಲ್ಲಿ ಒಂದು ಸ್ವಾರಸ್ಯಕರ ಘಟನೆ ನಡೆದಿದೆ. ಇದು ಸ್ವಾರಸ್ಯಕರ ಅನ್ನೋದಕ್ಕಿಂತಲೂ ಕನ್ನಡಿಗ ಕೆ.ಎಲ್ ರಾಹುಲ್ ಅವರ ಡ್ರಾಮ  ಅಫ್ಘಾನಿಸ್ತಾನ ತಂಡದ ಕ್ಯಾಪ್ಟನ್ ದಾರಿ ತಪ್ಪಿಸಿದಂತೂ ಸತ್ಯ. ವಿಚಾರವೇನೆಂದರೆ, 11ನೇ ಓವರ್‌ನಲ್ಲಿ ಅಫ್ಘಾನ್ ವೇಗಿ ಝಿಯಾವುರ್ ರೆಹಮಾನ್ ಎಸೆದ ಚೆಂಡನ್ನು ರಾಹುಲ್ ಕಟ್ ಮಾಡಲು ಯತ್ನಿಸಿದರು. ಈ ವೇಳೆ ಚೆಂಡು ಬ್ಯಾಟ್‌ಗೆ ತಗುಲಿ ವಿಕೆಟ್ ಕೀಪರ್ ಕೈ ಸೇರಿತು, ಬ್ಯಾಟ್‌ಗೆ ಚೆಂಡು ಸವರಿದ ಸ್ಪಷ್ಟ ಶಬ್ದವೂ ಕೇಳಿಸಿತು. ಹೀಗಾಗಿ ಅಫ್ಘಾನ್ ಆಟಗಾರರು ಔಟ್​ಗಾಗಿ ಅಪೀಲ್ ಮಾಡಿದ್ದರು. ಆದರೆ, ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ. ಆದರೆ, ಅಫ್ಘಾನ್ ಕ್ಯಾಪ್ಟನ್ DRS ರಿವ್ಯೂ ತೆಗೆದುಕೊಳ್ಳಬಹುದಿತ್ತು. ಅಫ್ಘಾನ್ ನಾಯಕ ಹಶ್ಮತುಲ್ಲಾ ಶಾಹಿದಿ ಹಾಗೂ ಕೀಪರ್ ಅಫ್ಸರ್ ಜಜಾಯ್ ಅವರು  ರಾಹುಲ್ ಮುಖ ನೋಡಿದರು. ರಾಹುಲ್ ಅತ್ಯಂತ ಶಾಂತವಾಗಿ, ತಮಗೇನೂ ತಿಳಿಯದಂತೆ ತಲೆ ಅಲ್ಲಾಡಿಸಿ ಔಟಾಗಿಲ್ಲ ಎಂಬಂತೆ ಡ್ರಾಮಾ ಮಾಡಿದರು.

ಅಷ್ಟೇ ಅಲ್ಲದೆ ಬ್ಯಾಟ್ ಹ್ಯಾಂಡಲ್​ ಲೂಸ್ ಆಗಿರುವುದರಿಂದ ಶಬ್ದ ಬಂದಿರುವಂತೆ ನಾಟಕವಾಡಿದ ಕೆಎಲ್ ರಾಹುಲ್ ಎದುರಾಳಿ ತಂಡವನ್ನು ನಂಬಿಸಿದ್ದು ಕಾಣಿಸುತ್ತಿತ್ತು. ಕೆಎಲ್ ರಾಹುಲ್ ಅವರನ್ನು ನಂಬಿದ ಅಫ್ಘಾನ್ ನಾಯಕ ಡಿಆರ್​ಎಸ್ ರಿವ್ಯೂ ತೆಗೆದುಕೊಳ್ಳಲಿಲ್ಲ. ಆದರೆ, ಕೆಲವೇ ನಿಮಿಷಗಳಲ್ಲಿ ಬಿಗ್ ಸ್ಕ್ರೀನ್ ಮೇಲೆ  ಅಲ್ಟ್ರಾಎಡ್ಜ್ ತೋರಿಸಿದಾಗ ಬ್ಯಾಟ್‌ಗೆ ಚೆಂಡು ತಗುಲಿರುವುದು ಕಂಡು ಬಂದಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಾಹುಲ್ ಅವರ ನಾಟಕ ವಿರುದ್ಧ ಪರ-ವಿರೋಧ ಚರ್ಚೆಗಳು ನಡೆಯು್ತ್ತಿದೆ.

ಔಟಾಗಲಿ, ಬಿಡಲಿ, ಡಿಆರ್‌ಎಸ್ ತೆಗೆದುಕೊಳ್ಳಬೇಕಾಗಿತ್ತು ಅಫ್ಘಾನ್ ಕ್ಯಾಪ್ಟನ್. ಅವರೇ ತಗೊಳದೇ ಇದ್ದಾಗ ಬ್ಯಾಟ್ಸಮನ್ ದೂರುವುದು ಸರಿಯಲ್ಲ ಎಂಬ ಮಾತು ಕೇಳಿಬಂದಿದೆ.

Sulekha

Leave a Reply

Your email address will not be published. Required fields are marked *