ಟೆಸ್ಟ್ ಪಂದ್ಯಕ್ಕೆ ಮಾನವ್ ಸುತಾರ್ ಪಾದಾರ್ಪಣೆ – ಟೆಸ್ಟ್ ಕ್ಯಾಪ್ ಕೊಟ್ಟು ವೆಲ್‌ಕಮ್ ಮಾಡಿದ ಕುಲ್ದೀಪ್ ಯಾದವ್

ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದೆ. ನ್ಯೂ ಚಂಡೀಗಢದ ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದಿದೆ. ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಈಗಾಗಲೇ ಒಂದು ವಿಕೆಟ್ ಕಳೆದುಕೊಂಡಿದೆ. ಇನ್ನು ಈ ಏಕೈಕ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾಗೆ ಮ್ಯಾಜಿಕ್ ಪ್ಲೇಯರ್ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ:ಶ್ರೇಯಸ್ ಕ್ಯಾಪ್ಟನ್.. ಪಾಟಿದಾರ್ ವೈಸ್ – ಅಯ್ಯರ್ ಗೆ NO LOSS ಬಿಗ್ ಚಾಲೆಂಜ್
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಆರಂಭವಾಗಿದೆ. ಈ ಐತಿಹಾಸಿಕ ಪಂದ್ಯಕ್ಕೆ ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಮಾನವ್ ಸುತಾರ್ ಭಾರತ ತಂಡಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯವಾಡಲಿರುವ ಮಾನವ್ ಅವರಿಗೆ, ಪಂದ್ಯ ಪ್ರಾರಂಭವಾಗುವ ಮೊದಲು, ಭಾರತದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ತಮ್ಮ ಚೊಚ್ಚಲ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದರು. ಈ ಯುವ ಆಟಗಾರನ ಬಹುಕಾಲದ ಕನಸನ್ನು ನನಸಾಗಿಸಿದರು.
23 ವರ್ಷದ ಎಡಗೈ ಸ್ಪಿನ್ನರ್ ಮತ್ತು ಆಲ್‌ರೌಂಡರ್ ಮಾನವ್ ಸುತಾರ್, ಬಹಳ ಸಮಯದಿಂದ ಆಯ್ಕೆದಾರರ ಗಮನದಲ್ಲಿದ್ದರು. 2023 ರ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಭಾರತ ತಂಡ ಬೆಂಗಳೂರಿನಲ್ಲಿ ಕ್ಯಾಂಪ್ ಮಾಡಿದಾಗ, ಮಾನವ್ ಸುತಾರ್ ಅವರನ್ನು ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಆಹ್ವಾನಿಸಲಾಯಿತು. ಅವರು ಶಿಬಿರಕ್ಕೆ ಪ್ರವೇಶಿಸುವ ಮೊದಲೇ, ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿದ್ದರು. ನೆಟ್ ಅಭ್ಯಾಸದ ಸಮಯದಲ್ಲಿ ಮಾನವ್ ಸುತಾರ್ ಮಾರಕ ಬೌಲಿಂಗ್ ದಾಳಿಗೆ ಭಾರತ ತಂಡದ ದಿಗ್ಗದ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯವರಿಗೆ ಬ್ಯಾಟಿಂಗ್ ಮಾಡಲು ಕಷ್ಟವಾಗಿತ್ತಂತೆ. ನಂತರ ಗುಜರಾತ್ ಟೈಟಾನ್ಸ್ ತಂಡದಲ್ಲೂ ಮಾನವ್ ಸುತಾರ್ ಆಲ್‌ರೌಂಡರ್ ಪ್ರದರ್ಶನ ತೋರಿದ್ದಾರೆ. ಇದೀಗ 319ನೇ ಪ್ಲೇಯರ್ ಆಗಿ ಭಾರತ ತಂಡದ ಟೆಸ್ಟ್ ಟೀಮ್‌ಗೆ ಸೇರ್ಪಡೆಯಾಗಿದ್ದಾರೆ.
ಮಾನವ್ ಸುತಾರ್ ಫೆಬ್ರವರಿ 2022 ರಲ್ಲಿ ಆಂಧ್ರಪ್ರದೇಶದ ವಿರುದ್ಧ ರಾಜಸ್ಥಾನ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ಅವರು 29 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 2.94 ರ ಪ್ರಭಾವಶಾಲಿ ಎಕಾನಮಿ ದರದಲ್ಲಿ 129 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2022 ರಲ್ಲಿ ಪುದುಚೇರಿ ವಿರುದ್ಧದ ಪಂದ್ಯವು ಅವರ ವೃತ್ತಿಜೀವನದ ಅತ್ಯುತ್ತಮ ಪಂದ್ಯಗಳಲ್ಲಿ ಒಂದಾಗಿತ್ತು. ಅಲ್ಲಿ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 11 ವಿಕೆಟ್‌ಗಳನ್ನು ಕಬಳಿಸಿದರು. ಈ ವರ್ಷದ ಜನವರಿಯಲ್ಲಿ ಹಿಮಾಚಲ ಪ್ರದೇಶ ವಿರುದ್ಧ ಅವರ ಕೊನೆಯ ಪ್ರಥಮ ದರ್ಜೆ ಪಂದ್ಯವಾಗಿತ್ತು. ಅವರು ಮೊದಲ ಇನ್ನಿಂಗ್ಸ್‌ನಲ್ಲಿ 120 ರನ್‌ಗಳ ಅದ್ಭುತ ಶತಕ ಗಳಿಸಿದರೆ, ಬೌಲಿಂಗ್ನಲ್ಲಿ ಒಟ್ಟು 7 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ಕೆಳ ಕ್ರಮಾಂಕದಲ್ಲಿ ವಿಶ್ವಾಸಾರ್ಹ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಮಾನವ್, ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 25.54 ಸರಾಸರಿಯಲ್ಲಿ 945 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 6 ಅರ್ಧಶತಕಗಳು ಸೇರಿವೆ. ಅವರ ಲಿಸ್ಟ್ ಎ ವೃತ್ತಿಜೀವನದಲ್ಲಿ 34 ವಿಕೆಟ್‌ಗಳು ಮತ್ತು ಟಿ20 ಸ್ವರೂಪದಲ್ಲಿ 25 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ನೋಡಿರಿ

