ಶ್ರೇಯಸ್ ಕ್ಯಾಪ್ಟನ್.. ಪಾಟಿದಾರ್ ವೈಸ್ – ಅಯ್ಯರ್ ಗೆ NO LOSS ಬಿಗ್ ಚಾಲೆಂಜ್
THANK YOU ಸೂರ್ಯಕುಮಾರ್

ಶ್ರೇಯಸ್ ಕ್ಯಾಪ್ಟನ್.. ಪಾಟಿದಾರ್ ವೈಸ್ – ಅಯ್ಯರ್ ಗೆ NO LOSS ಬಿಗ್ ಚಾಲೆಂಜ್THANK YOU ಸೂರ್ಯಕುಮಾರ್

ಭಾರತ ಟಿ-20ಐ ತಂಡದಲ್ಲಿ ಮೇಜರ್ ಸರ್ಜರಿ ಆಗ್ತಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್​ರನ್ನ ಕ್ಯಾಪ್ಟನ್ಸಿಯಿಂದ ಇಳಿಸಿ ಶ್ರೇಯಸ್ ಅಯ್ಯರ್​ಗೆ ಪಟ್ಟ ಕಟ್ಟೋದು ಕನ್ಫರ್ಮ್ ಆಗಿದೆ. ಅಲ್ಲಿಗೆ ಟೀಂ ಇಂಡಿಯಾದಲ್ಲಿ ಹೊಸ ನಾಯಕನ ಯುಗಾರಂಭವಾಗಲಿದೆ. ಟಿ-20ಐ ತಂಡದಲ್ಲೇ ಇಲ್ಲದ ಶ್ರೇಯಸ್​ಗೆ ನಾಯಕತ್ವದೊಂದಿಗೆ ಕಂ ಬ್ಯಾಕ್ ಮಾಡೋಕೆ ರೆಡಿಯಾಗ್ತಿದ್ರೆ ಅಟ್ ದಿ ಸೇಮ್ ಟೈಂ ಅವ್ರ ಮುಂಚೆ ಸವಾಲುಗಳ ಸರಮಾಲೆಯೇ ಇದೆ. ಹಾಗೇ ವೈಸ್ ಕ್ಯಾಪ್ಟನ್ ರೇಸ್​ನಲ್ಲಿ ಪಾಟಿದಾರ್ ಫಸ್ಟ್ ಪ್ಲೇಸ್​ನಲ್ಲಿದ್ದಾರೆ.

ಇದನ್ನೂ ಓದಿ : RCBಯಲ್ಲಿ ರಿಲೀಸ್ ಲೆಕ್ಕಾಚಾರ – ಶೆಫರ್ಡ್ & ಸುಯಾಶ್ ಹೊರ ಬೀಳ್ತಾರಾ?

ಕಳೆದೊಂದು ವರ್ಷದಿಂದಲೂ ಟಿ-20ಐನಲ್ಲಿ ಕ್ಯಾಪ್ಟನ್ಸಿ ಬದಲಾವಣೆ ಕೂಗು ಎದ್ದಿತ್ತು. ಗುರುವಾರ ನಡೆದ ಬಿಸಿಸಿಐ ಅಪೆಕ್ಸ್​ ಕೌನ್ಸಿಲ್ ಸಭೆಯಲ್ಲಿ ಕೊನೆಗೂ ಹೊಸ ಸಾರಥಿಯ ನೇಮಕಕ್ಕೆ ಮುಂದಾಗಿದ್ದಾರೆ. ಅದೂ ಕೂಡ ಕಳೆದ ಎರಡೂವರೆ ವರ್ಷಗಳಿಂದ ಭಾರತದ ಪರ ಒಂದೇ ಒಂದು ಟಿ-20ಐ ಪಂದ್ಯ ಆಡದ ಶ್ರೇಯಸ್​ಗೆ ನಾಯಕತ್ವ ಒಲಿದು ಬಂದಿದೆ. ಶ್ರೇಯಸ್ ಅಯ್ಯರ್ ಅವರ ಕ್ಯಾಪ್ಟನ್ಸಿ ಜರ್ನಿ ಜೂನ್ 26 ಮತ್ತು 28ರಂದು ಬೆಲ್ಫಾಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳೊಂದಿಗೆ ಪ್ರಾರಂಭವಾಗಲಿದೆ. ನಂತರ ಜುಲೈ 1ರಿಂದ 11ರವರೆಗೆ ಇಂಗ್ಲೆಂಡ್‌ನಲ್ಲಿ ಐದು ಟಿ20 ಪಂದ್ಯಗಳ ಸರಣಿ ನಡೆಯಲಿದೆ.  ಈ ಸರಣಿಗಳಿಗೆ ಶನಿವಾರ ಟೀಂ ಇಂಡಿಯಾ ಸ್ಕ್ವಾಡ್ ಅನೌನ್ಸ್ ಆಗಲಿದೆ.

ಟಿ-20ಐನಲ್ಲೂ ಜಾದೂ ಮಾಡ್ತಾರಾ ಶ್ರೇಯಸ್ ಅಯ್ಯರ್?

31 ವರ್ಷದ ಶ್ರೇಯಸ್ ಅಯ್ಯರ್ ಕೊನೆಯ ಟಿ20I ಪಂದ್ಯವನ್ನು 2023 ಡಿಸೆಂಬರ್‌ನಲ್ಲಿ ಆಡಿದ್ದರು. ಬಿಸಿಸಿಐ ಮತ್ತು ಅಯ್ಯರ್ ನಡುವಿನ ಕೆಲ ಮಿಸ್ ಕಮ್ಯುನಿಕೇಷನ್​ ಮತ್ತು ಸೂರ್ಯಕುಮಾರ್, ತಿಲಕ್ ವರ್ಮಾ ಕಾರಣದಿಂದ ಶ್ರೇಯಸ್​ಗೆ ಮಿಡಲ್ ಆರ್ಡರ್​ನಲ್ಲಿ ಚಾನ್ಸ್ ಇರಲಿಲ್ಲ. ಇದಾದ ಬಳಿಕ ಸತತ ಮೂರು ಐಪಿಎಲ್ ಸೀಸನ್​ಗಳು ಮುಗಿದು ಮತ್ತೆ ಟಿ-20ಐ ತಂಡಕ್ಕೆ ಕಂ ಬ್ಯಾಕ್ ಮಾಡ್ತಿದ್ದಾರೆ. 2024ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಅನ್ನು ಚಾಂಪಿಯನ್ ಮಾಡಿದ್ದರು. 2025ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಫೈನಲ್‌ಗೆ ಕೊಂಡೊಯ್ದಿದ್ದರು. 2026ರಲ್ಲೂ ಮೊದಲಾರ್ಧದಲ್ಲಿ ಪಂಜಾಬ್ ಅಯ್ಯರ್ ನಾಯಕತ್ವದಲ್ಲಿ ಪ್ರಾಬಲ್ಯ ಸಾಧಿಸಿತ್ತು. ಆ ನಂತ್ರದಲ್ಲಿ ಸತತ ಸೋಲಿನಿಂದ ಪ್ಲೇಆಫ್ ಸ್ಥಾನ ಕಳೆದುಕೊಂಡಿತ್ತು. ಹೀಗಿದ್ರೂ ಪರ್ಫಾಮೆನ್ಸ್ ವೈಸ್ ಶ್ರೇಯಸ್ ಚೆನ್ನಾಗಿ ಆಡಿದ್ದಾರೆ. ಐಪಿಎಲ್ 2025ರಲ್ಲಿ 604 ರನ್ (ಸ್ಟ್ರೈಕ್ ರೇಟ್ 175) ಮತ್ತು 2026ರಲ್ಲಿ 498 ರನ್ (ಸ್ಟ್ರೈಕ್ ರೇಟ್ 168) ಗಳಿಸಿದ್ದಾರೆ.

ಶ್ರೇಯಸ್ ಗೆ ಇರೋ ಸವಾಲುಗಳು!

ಭಾರತ ಟಿ-20ಐನಲ್ಲಿ ಸೆಟ್ ಮಾಡಿರುವ ಸ್ಟಾಂಡರ್ಸ್ ಉಳಿಸಬೇಕು

ಐಸಿಸಿ ಶ್ರೇಯಾಂಕದಲ್ಲಿ ಸತತ ನಂಬರ್ 1 ಸ್ಥಾನ ಮುಂದುವರಿಸಬೇಕು

2024ರಲ್ಲಿ ಚಾಂಪಿಯನ್.. 2026ರಲ್ಲಿ ಚಾಂಪಿಯನ್.. 2028ಕ್ಕೆ?

2024ರ ಬಳಿಕ ಒಂದೇ ಒಂದು ಸರಣಿಯನ್ನೂ ಸೋಲದ ಭಾರತ

ಏಷ್ಯಾಕಪ್ ಮತ್ತು ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟಿರುವ ಸೂರ್ಯ

ಕ್ಯಾಪ್ಟನ್ಸಿ ಜೊತೆಗೆ ಬ್ಯಾಟರ್ ಆಗಿಯೂ ಪ್ರೂ ಮಾಡಬೇಕು ಶ್ರೇಯಸ್

ಕ್ಯಾಪ್ಟನ್ ಆಗಿ ಗೆದ್ರೂ ಬ್ಯಾಟಿಂಗ್ ನಲ್ಲಿ ಫೇಲ್ ಆಗಿದ್ದಕ್ಕೇ ಸೂರ್ಯ ಔಟ್

ಇದನ್ನೆಲ್ಲಾ ನೋಡಿದಾಗ ಸರಪಂಚ್ ಖ್ಯಾತಿಯ ಶ್ರೇಯಸ್ ಅಯ್ಯರ್​ಗೆ ಕ್ಯಾಪ್ಟನ್ಸಿ ಸಿಕ್ಕಿದ್ದು ಎಷ್ಟು ಖುಷಿಯೋ ಅದನ್ನ ಉಳಿಸಿಕೊಳ್ಳಬೇಕಾದ ರೆಸ್ಪಾನ್ಸಿಬಿಲಿಟಿಯೂ ಇದೆ. ಅಟ್ ದಿ ಸೇಮ್ ಟೈಂ ಆಫ್ಟರ್ ಎ ಲಾಂಗ್ ಟೈಂ ಟಿ-20ಐ ತಂಡಕ್ಕೆ ಕಂ ಬ್ಯಾಕ್ ಮಾಡ್ತಿರೋದ್ರಿಂದ ಯಂಗ್ ಪ್ಲೇಯರ್​ಗಳ ಜೊತೆ ಫ್ರೆಂಡ್ಲಿಯಾಗಿಯೂ ಮೂವ್ ಆಗ್ಬೇಕಿದೆ. ಯಾಕಂದ್ರೆ ಏಕದಿನ ತಂಡದಲ್ಲಿ ಶ್ರೇಯಸ್ ಆಡ್ತಿದ್ರೂ ಅಲ್ಲಿರುವ ಪ್ಲೆಯರ್ಸ್ ಟಿ-20ಐನಲ್ಲಿ ಇಲ್ಲ. ಇದು ಒಂದ್ಕಡೆಯಾದ್ರೆ ವೈಸ್ ಕ್ಯಾಪ್ಟನ್ ಯಾರು ಅನ್ನೋ ಚರ್ಚೆ ಸ್ಟಾರ್ಟ್ ಆಗ್ತಿದೆ.

ಐಪಿಎಲ್ ಚಾಂಪಿಯನ್ ಕ್ಯಾಪ್ಟನ್ ಗೆ ಸಿಗುತ್ತಾ ವೈಸ್ ಕ್ಯಾಪ್ಟನ್ಸಿ?

ಪ್ರಸ್ತುತ ಶ್ರೇಯಸ್ ಅಯ್ಯರ್ ಜೊತೆ ಕ್ಯಾಪ್ಟನ್ಸಿ ರೇಸ್​ನಲ್ಲಿ ಸ್ಟ್ರಾಂಗ್ ಆಗಿ ಕೇಳಿ ಬರ್ತಿದ್ದ ಹೆಸ್ರು ಆರ್​ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್. ಆದ್ರೆ ಬಿಸಿಸಿಐ ಶ್ರೇಯಸ್​​ಗೆ ಅಸ್ತು ಅಂದಿರೋದ್ರಿಂದ ಅಟ್​ಲೀಸ್ಟ್ ವೈಸ್ ಕ್ಯಾಪ್ಟನ್ಸಿನಾದ್ರೂ ಪಾಟಿದಾರ್​ಗೆ ಸಿಗ್ಲಿ ಅಂತಿದ್ದಾರೆ ಫ್ಯಾನ್ಸ್. ಯಾಕಂದ್ರೆ ರಜತ್ ಕೂಡ ಕ್ವಾಲಿಟಿ ಪ್ಲೇಯರ್. ಬ್ಯಾಕ್ ಟು ಬ್ಯಾಕ್ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಮಿಡಲ್ ಆರ್ಡರ್​ನಲ್ಲಿ ಅದ್ರಲ್ಲೂ ಸ್ಪಿನ್ನರ್ಸ್ ವಿರುದ್ಧ ಸ್ಫೋಟಕ ಬ್ಯಾಟರ್ ಆಗಿದ್ದಾರೆ. 2024ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಚಾನ್ಸ್ ಪಡೆದ್ರೂ 6 ಇನ್ನಿಂಗ್ಸ್​ಗಳಿಂದ ಕೇವಲ 63 ರನ್ಸ್ ಗಳಿಸಿದ್ರು. ಹೀಗಾಗಿ ಆ ನಂತ್ರ ಭಾರತದ ಪರ ಟೆಸ್ಟ್​ನಲ್ಲಿ ಅವಕಾಶ ಸಿಕ್ಕಿಲ್ಲ. ಇನ್ನು ಭಾರತದ ಪರ ಏಕೈಕ ಏಕದಿನ ಪಂದ್ಯ ಆಡಿದ್ದಾರೆ. 2023ರಲ್ಲಿ ಸೌತ್ ಆಫ್ರಿಕಾ ವಿರುದ್ಧ 22 ರನ್ಸ್ ಹೊಡೆದಿದ್ರು. ಬ್ಯಾಡ್ ಲಕ್ ಅಂದ್ರೆ ನೆಕ್ಸ್​ಟ್ ಮತ್ತೆ ಆಪರ್ಚುನಿಟಿ ಕೊಟ್ಟಿಲ್ಲ. ಇನ್ನು ಭಾರತದ ಪರ ಇದುವರೆಗೆ ಟಿ-20ಐಗೆ ಡೆಬ್ಯೂ ಕೂಡ ಮಾಡಿಲ್ಲ. ಆದ್ರೆ ಡೊಮೆಸ್ಟಿಕ್, ಐಪಿಎಲ್​ನಲ್ಲಿ ಪಾಟಿದಾರ್ ಪವರ್ ಹಿಟ್ಟಿಂಗ್ ಸ್ಕಿಲ್ ನೋಡಿ ವೈಸ್ ಕ್ಯಾಪ್ಟನ್ಸಿ ನೀಡಲಿ ಅಂತಿದ್ದಾರೆ. ಹೀಗೆ ಹೊಸ ನಾಯಕ ಮತ್ತು ಉಪನಾಯಕನ ಸೆಲೆಕ್ಷನ್ ಸದ್ದಿನಲ್ಲಿ ಸೂರ್ಯಕುಮಾರ್​ಗೊಂದು ಸಲಾಂ ಹೇಳಲೇಬೇಕು.

ಸೂರ್ಯನ ನೆರಳಲ್ಲಿ ಸೋಲನ್ನೇ ಕಾಣದ ಭಾರತ!

2024ರಲ್ಲಿ ರೋಹಿತ್ ಶರ್ಮಾ ನಿವೃತ್ತಿಯ ನಂತರ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಂಡ ಸೂರ್ಯಕುಮಾರ್, ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಧಿಕ ಗೆಲುವಿನ ಶೇಕಡಾವಾರು ಹೊಂದಿದ ಕ್ಯಾಪ್ಟನ್​ಗಳಲ್ಲಿ ಒಬ್ರು. ಒಟ್ಟಾರೆಯಾಗಿ ಸೂರ್ಯನ ನಾಯಕತ್ವದಲ್ಲಿ ಭಾರತ 52 ಪಂದ್ಯಗಳನ್ನ ಆಡಿದೆ. ಅದ್ರಲ್ಲಿ 42 ಪಂದ್ಯಗಳನ್ನ ಗೆದ್ರೆ 8ರಲ್ಲಿ ಸೋಲು ಕಂಡಿದ್ದಾರೆ. 2 ಪಂದ್ಯಗಳು ರದ್ದಾಗಿವೆ. ಗೆಲುವಿನ ಶೇಕಡಾವಾರು ಕನಿಷ್ಠ 20 ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡಿರೋರಲ್ಲಿ 80.77 ಇದೆ.  9 ದ್ವಿಪಕ್ಷೀಯ ಸರಣಿಗಳಲ್ಲಿ ಅಜೇಯ ದಾಖಲೆ ಹೊಂದಿದ್ದಾರೆ. ಹೀಗಿದ್ರೂ ಸೂರ್ಯ ಬ್ಯಾಟರ್ ಆಗಿ ಸದ್ದು ಮಾಡ್ಲಿಲ್ಲ. ನಾಯಕತ್ವಕ್ಕೂ ಮುನ್ನ 43.60ರ ಆವರೇಜ್​ನಲ್ಲಿ 4 ಶತಕಗಳು ಮತ್ತು 20 ಅರ್ಧಶತಕಗಳು ಸೇರಿದಂತೆ 2,040 ರನ್ಸ್ ಕಲೆ ಹಾಕಿದ್ರು. ಆದ್ರೆ 2024ರ ಜುಲೈನಲ್ಲಿ ಕ್ಯಾಪ್ಟನ್ ಆದ ಬಳಿಕ 42 ಇನ್ನಿಂಗ್ಸ್‌ಗಳಲ್ಲಿ ಸರಾಸರಿ 25.88 ಸೇರಿದಂತೆ 6 ಅರ್ಧಶತಕಗಳು ಮತ್ತು ಯಾವುದೇ ಶತಕಗಳಿಲ್ಲದೆ 932 ರನ್‌ಗಳನ್ನು ಗಳಿಸಿದ್ದಾರೆ. ಸೋ ಇಲ್ಲಿ ಬ್ಯಾಟರ್ ಆಗಿ ಸೂರ್ಯ ಸಿಡಿಯದೇ ಇದ್ರೂ ಅವ್ರ ನಾಯಕತ್ವದಲ್ಲಿ ಭಾರತ ಸೋಲಿಲ್ಲದ ಸರದಾರನಾಗಿದ್ದಕ್ಕೆ ಥ್ಯಾಂಕ್ಯೂ ಹೇಳಲೇಬೇಕು.

Shantha Kumari

Leave a Reply

Your email address will not be published. Required fields are marked *