KL ಓಪನರ್.. ಸಿರಾಜ್ ಲೀಡ್ ಬೌಲರ್ – ಸಾಯಿ SLOT ತಗೊಳ್ತಾರಾ ಪಡಿಕ್ಕಲ್?
AFG ಟೆಸ್ಟ್ ಗೆ ಹೀಗಿದ್ಯಾ ಪ್ಲೇಯಿಂಗ್ 11?

KL ಓಪನರ್.. ಸಿರಾಜ್ ಲೀಡ್ ಬೌಲರ್ – ಸಾಯಿ SLOT ತಗೊಳ್ತಾರಾ ಪಡಿಕ್ಕಲ್?AFG ಟೆಸ್ಟ್ ಗೆ ಹೀಗಿದ್ಯಾ ಪ್ಲೇಯಿಂಗ್ 11?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಮ್ಯಾಚ್​್ಗೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ಚಂಡೀಗಢದ ಮುಲ್ಲನ್​ಪುರದಲ್ಲಿ ನಾಳೆ ಬೆಳಗ್ಗೆ 9.30ಕ್ಕೆ ಪಂದ್ಯ ಶುರುವಾಗುತ್ತೆ. ಐಪಿಎಲ್​ನಲ್ಲಿ ಹೊಡಿಬಡಿ ಆಟವಾಡ್ತಿದ್ದ ಪ್ಲೇಯರ್ಸ್ ಎಲ್ರೂ ಈಗ ವೈಟ್ ಜೆರ್ಸಿಯಲ್ಲಿ ಕ್ರೀಸ್ ಕಚ್ಚಿ ನಿಲ್ಲೋದನ್ನ ಪ್ರಾಕ್ಟೀಸ್ ಮಾಡ್ತಿದ್ದಾರೆ.

ಇದನ್ನೂ ಓದಿ : RCBಯಲ್ಲಿ ರಿಲೀಸ್ ಲೆಕ್ಕಾಚಾರ – ಶೆಫರ್ಡ್ & ಸುಯಾಶ್ ಹೊರ ಬೀಳ್ತಾರಾ?

ಶುಭ್​ಮನ್ ಗಿಲ್ ಕ್ಯಾಪ್ಟನ್ಸಿ ಕೆಎಲ್ ರಾಹುಲ್ ವೈಸ್ ಕ್ಯಾಪ್ಟನ್ಸಿಯಲ್ಲಿ ನಾಳೆಯಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. 7 ತಿಂಗಳ ಲಾಂಗ್ ಬ್ರೇಕ್ ಬಳಿಕ ಮತ್ತೊಮ್ಮೆ ರೆಡ್ ಬಾಲ್ ಫಾರ್ಮೆಟ್​ಗಾಗಿ ಮೈದಾನಕ್ಕಿಳಿಯಲಿದ್ದಾರೆ. ಕಳೆದ ನವೆಂಬರ್​ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಎರಡಕ್ಕೆ ಎರಡೂ ಪಂದ್ಯಗಳನ್ನ ಸೋತಿದ್ದ ಭಾರತ ಈಗ ಕಂ ಬ್ಯಾಕ್ ಮಾಡ್ಬೇಕಿದೆ.

ಡಬ್ಲ್ಯೂಟಿಸಿ ಫೈನಲ್ ಗೆ ಅನ್ವಯ ಆಗದೇ ಇದ್ರೂ ಟೀಂ ಫಾರ್ಮ್ ಆಗಬೇಕು!

ಹೌದು. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಕೇವಲ ಔಪಚಾರಿಕ ಪಂದ್ಯ ಅಷ್ಟೇ. ಇಲ್ಲಿ ಯಾರೇ ಗೆದ್ರೂ ಯಾರೇ ಸೋತ್ರೂ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್​ನಲ್ಲಿ ಪರಿಣಾಮ ಬೀರಲ್ಲ. ಅಂದ್ರೆ ಈ ಪಂದ್ಯವನ್ನ ಭಾರತ ಗೆದ್ರೂ ಸೋತ್ರೂ ಡಬ್ಲ್ಯೂಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ವೇರಿಯೇಷನ್ ಆಗಲ್ಲ. ಯಾಕಂದ್ರೆ ಐಸಿಸಿ ನಿಯಮಗಳ ಪ್ರಕಾರ, ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಕೇವಲ 9 ದೇಶಗಳು ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತವೆ. ಅಫ್ಘಾನಿಸ್ತಾನ, ಐರ್ಲೆಂಡ್ ಮತ್ತು ಜಿಂಬಾಬ್ವೆ ತಂಡಗಳು ಪ್ರಸ್ತುತ ಈ ಒಂಬತ್ತು ತಂಡಗಳ ಪಟ್ಟಿಯಿಂದ ಹೊರಗಿವೆ. ಅದೂ ಅಲ್ದೇ WTC ನಿಯಮಾವಳಿಗಳ ಪ್ರಕಾರ, ಚಾಂಪಿಯನ್‌ಶಿಪ್ ಅಡಿಯಲ್ಲಿ ಪರಿಗಣಿಸಲ್ಪಡುವ ಯಾವುದೇ ಟೆಸ್ಟ್ ಸರಣಿಯಲ್ಲಿ ಕನಿಷ್ಠ ಎರಡು ಟೆಸ್ಟ್ ಪಂದ್ಯಗಳಿರಬೇಕು. ಆದರೆ ಈ ಸರಣಿಯಲ್ಲಿ ಕೇವಲ ಒಂದು ಪಂದ್ಯ ಮಾತ್ರ ಇರುವುದರಿಂದ ಇದು ಕೇವಲ ದ್ವಿಪಕ್ಷೀಯ ಸರಣಿಯಾಗಲಿದೆ. ಹೀಗಿದ್ರೂ ಪಂದ್ಯದಲ್ಲಿ ಆಟಗಾರರು ಗಳಿಸುವ ರನ್ ಹಾಗೂ ವಿಕೆಟ್‌ಗಳನ್ನು ಅವರ ಅಧಿಕೃತ ಐಸಿಸಿ ಟೆಸ್ಟ್ ಅಂಕಿ-ಅಂಶಗಳು ಮತ್ತು ವೈಯಕ್ತಿಕ ರ‍್ಯಾಂಕಿಂಗ್‌ಗೆ ಪರಿಗಣಿಸಲಾಗುತ್ತದೆ. ಹೀಗಾಗಿ ಡಬ್ಲ್ಯೂಟಿಸಿಗೆ ಎಫೆಕ್ಟ್ ಆಗದೇ ಇದ್ರೂ ಮುಂಬರುವ ಪಂದ್ಯಗಳನ್ನ ಗಮನದಲ್ಲಿ ಇಟ್ಟುಕೊಂಡು ಬಲಿಷ್ಠ ಪ್ಲೇಯಿಂಗ್ 11ನೇ ಇಲ್ಲಿ ಕಣಕ್ಕಿಳಿಸಬೇಕಾಗುತ್ತೆ.

ಸಂಭಾವ್ಯ ಪ್ಲೇಯಿಂಗ್ 11

ಯಶಸ್ವಿ ಜೈಸ್ವಾಲ್

ಕೆಎಲ್ ರಾಹುಲ್

ಸಾಯಿ ಸುದರ್ಶನ್ / ದೇವದತ್ ಪಡಿಕ್ಕಲ್

ಶುಭ್ ಮನ್ ಗಿಲ್

ನಿತೀಶ್ ಕುಮಾರ್ ರೆಡ್ಡಿ

ವಾಷಿಂಗ್ಟನ್ ಸುಂದರ್

ಮಾನವ್ ಸುತಾರ್

ಹರ್ಷ್ ದುಬೆ

ಕುಲ್ದೀಪ್ ಯಾದವ್

ಪ್ರಸಿದ್ಧ್ ಕೃಷ್ಣ

ಗುರ್ನೂರ್ ಬ್ರಾರ್

ಮೊಹಮ್ಮದ್ ಸಿರಾಜ್

ಇನ್ನು ಅಫ್ಘಾನಿಸ್ತಾನ ಮತ್ತು ಭಾರತ ತಂಡಗಳು ಕೊನೇ ಬಾರಿಗೆ 2018ರಲ್ಲಿ ಟೆಸ್ಟ್ ಪಂದ್ಯ ಆಡಿದ್ದು. ಅಜಿಂಕ್ಯ ರಹಾನೆ ಕ್ಯಾಪ್ಟನ್ಸಿಯಲ್ಲಿ ನಡೆದ ಆ ಮ್ಯಾಚಲ್ಲಿ ಮುರಳಿ ವಿಜಯ್ ಮತ್ತು ಶಿಖರ್ ಧವನ್ ಅವ್ರ ಸೆಂಚುರಿಗಳ ಸಹಾಯದಿಂದ ಭಾರತ ಇನ್ನಿಂಗ್ಸ್ ಜೊತೆಗೆ 262 ರನ್​ಗಳ ಬೃಹತ್ ಅಂತರದಿಂದ ಗೆದ್ದು ಬೀಗಿತ್ತು. ಹೀಗಾಗಿ ಅಫ್ಘನ್ ವಿರುದ್ಧ ಭಾರತವೇ ಗೆಲ್ಲುವಂಥ ಫೇವರೆಟ್ ಟೀಂ ಅನ್ಸಿದ್ರೂ ಕೂಡ ಕಳೆದ 2 ವರ್ಷಗಳ ರೆಕಾರ್ಡ್ಸ್ ನೋಡಿದಾಗ ಭಾರತ ಸಾಕಷ್ಟು ಸ್ಟ್ರಗಲ್ ಪಡ್ತಿರೋದು ಗೊತ್ತಾಗ್ತಿದೆ. ಅದೂ ಅಲ್ದೇ ಭಾರತ ತಂಡದಲ್ಲಿ ಅನುಭವಿಗಳ ಕೊರತೆ ಇದೆ. ರವೀಂದ್ರ ಜಡೇಜಾಗೂ ಈ ಪಂದ್ಯಕ್ಕೆ ರೆಸ್ಟ್ ಕೊಟ್ಟಿರೋದ್ರಿಂದ ಮಿಡಲ್ ಆರ್ಡರ್​ನಲ್ಲಿ ಸ್ವಲ್ಪ ಕಷ್ಟ ಆಗ್ಬೋದು.

ಇನ್ನು ಭಾರತ ಮತ್ತು ಅಫ್ಘಾನಿಸ್ತಾನ 2018ರಲ್ಲಿ ಟೆಸ್ಟ್ ಮ್ಯಾಚ್ ಆಡಿದ ಬಳಿಕ ಜೂನ್ 2026 ರವರೆಗೆ ಆಫ್ಘನ್ನರು  11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಭಾರತ ಅಲ್ಲಿಂದ ಈಚೆಗೆ 67 ಟೆಸ್ಟ್ ಪಂದ್ಯಗಳನ್ನ ಆಡಿದೆ. 67ರ ಪೈಕಿ 49 ಟೆಸ್ಟ್‌ ಪಂದ್ಯಗಳಲ್ಲಿ ರಿಷಭ್ ಪಂತ್ ಆಡಿದ್ದಾರೆ. ಇದು ಅವ್ರಿಗೆ 50ನೇ ಟೆಸ್ಟ್ ಪಂದ್ಯ. ಅಫ್ಘಾನಿಸ್ತಾನ ಕೊನೆಯ ಬಾರಿಗೆ ಭಾರತ ವಿರುದ್ಧ ಆಡಿದಾಗ ಪಂತ್ ಇನ್ನೂ ಟೆಸ್ಟ್‌ಗೆ ಪಾದಾರ್ಪಣೆ ಮಾಡಿರಲಿಲ್ಲ. 2018 ರ ತಂಡದಲ್ಲಿ, ಕೆಎಲ್ ರಾಹುಲ್ ಮಾತ್ರ ಈಗಿರುವ ಭಾರತೀಯ ಟೆಸ್ಟ್ ತಂಡದ ಭಾಗವಾಗಿದ್ರು. ಅಫ್ಘಾನಿಸ್ತಾನ ನಾಯಕ ಹಶ್ಮತುಲ್ಲಾ ಶಾಹಿದಿ ಮತ್ತು ಬ್ಯಾಟ್ಸ್‌ಮನ್ ರಹಮತ್ ಶಾ ಕೂಡ ಆ ಪಂದ್ಯವನ್ನು ಆಡಿದ್ರು. ಅಫ್ಘಾನಿಸ್ತಾನದ ಇಡೀ ಬ್ಯಾಟಿಂಗ್ ಲೈನ್ ಅಪ್ ನಲ್ಲಿ ಒಟ್ಟಾರೆಯಾಗಿ ಒಂಬತ್ತು ಟೆಸ್ಟ್ ಶತಕಗಳನ್ನು ಬಾರಿಸಿದ್ರೆ ಹೊಸ ಭಾರತೀಯ ತಂಡವು 39 ಶತಕಗಳನ್ನ ಬಾರಿಸಿದೆ. ಸೋ ಅಲ್ಲಿಗೆ ಎಲ್ಲಾ ಌಂಗಲ್​ನಲ್ಲೂ ಭಾರತವೇ ಗೆಲ್ಲುವ ಫೇವರೆಟ್ ಟೀಂ ಆಗಿ ಕಾಣ್ತಿದೆ.

Shantha Kumari

Leave a Reply

Your email address will not be published. Required fields are marked *