ಕೊಟ್ಟ ಮಾತು ತಪ್ಪಿದ್ರಾ ಡಿಕೆಶಿ? – ರಾಮಲಿಂಗಾರೆಡ್ಡಿ ನಿಷ್ಠೆಗೆ ಬೆಲೆಯಿಲ್ವಾ?
ಸೈಲೆಂಟ್ ನಾಯಕ ವೈಲೆಂಟ್ ಆಗಿದ್ದೇಕೆ?

ರಾಮಲಿಂಗಾ ರೆಡ್ಡಿ ಅಂದ್ರೆ ಸೈಲೆಂಟ್. ಯಾವತ್ತು ಯಾರ ಬಗ್ಗೆ ಕೂಡ ನಿಷ್ಠೂರವಾಗಿ ಮಾತನಾಡಿದ ವ್ಯಕ್ತಿ ಅಲ್ಲ.. ನಗುನಗುತ್ತಲೇ ಟಾಂಗ್ ಕೊಡ್ತಾ, ಎಷ್ಟು ಬೇಕು ಅಷ್ಟೇ ಮಾತನಾಡುವ ವ್ಯಕ್ತಿ.. 8 ಬಾರಿ ಶಾಸಕರಾಗಿರುವ ಇವರು ತಮಗೆ ಕೊಟ್ಟ ಸಚಿವ ಸ್ಥಾನವನ್ನ ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.. ಮುಜರಾಯಿ, ಸಾರಿಗೆ ಇಲಾಖೆಯಲ್ಲಿ ಒಂದು ರೀತಿಯ ಕ್ರಾಂತಿ ಮಾಡಿದ್ದಾರೆ.. 53 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ತೋರಿದ್ದಾರೆ.. ಇವರ ಜೊತೆಯಲ್ಲಿ ಶಾಸಕರಾದವರು ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದವರೇ ಜಾಸ್ತಿ. ಎಲ್ಲೂ ಕೂಡಾ ನನಗೆ ಮಂತ್ರಿಗಿರಿ ಕೊಡಿ, ನನಗೆ ಇದೇ ಖಾತೆ ಕೊಡಿ ಎಂದು ಖ್ಯಾತೆ ತೆಗೆದವರಲ್ಲ. ಆದರೆ, ನಿಮಗೆ ಬೆಂಗಳೂರು ಅಭಿವೃದ್ಧಿ ಖಾತೆ ಕೊಡ್ತೀವಿ ಎಂದು ಮಾತು ಕೊಟ್ಟು ಕೈ ಕೊಟ್ಟವರ ಮೇಲೆ ಈಗ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಡಿಕೆಶಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದ್ರೆ ಈಗ ಡಿಕೆಶಿ ಸಂಪುಟದಲ್ಲಿ ಖಾತೆ ಕ್ಯಾತೆ ಶುರುವಾಗಿದೆ. ಡಿಕೆ ಸರ್ಕಾರದಲ್ಲಿ ಬಿರುಗಾಳಿ ಎದ್ದಿದೆ.. ಪಕ್ಷಕ್ಕಾಗಿ ದುಡಿದವರಿಗೆ ಅನ್ಯಾಯ ಆಗುತ್ತಿದೆ ಅನ್ನೋ ಕೂಗೂ ಜೋರಾಗಿದೆ.. ಅಂದಹಾಗೇ ಡಿಕೆಶಿ ಜೊತೆ ಪ್ರಮಾಣವಚನ ಸ್ವೀಕಾರ ಮಾಡಿದ 13 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಆದ್ರೆ ಖಾತೆ ಹಂಚಿಯಲ್ಲಿ ಡಿಕೆ ಶಿವಕುಮಾರ್ ರಾಮಲಿಂಗಾ ರೆಡ್ಡಿಗೆ ಅನ್ಯಾಯ ಮಾಡಿದ್ರಾ ಅನ್ನೋ ಪ್ರಶ್ನೆ ಎದ್ದಿದೆ.. ತಾನಾಗದ ಅನ್ಯಾಯಕ್ಕೆ ಸೈಲೆಂಟ್ ಆಗಿಯೇ ಆಕ್ರೋಶ ಹೋರ ಹಾಕಿದಡಿಕೆಶಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದ್ರೆ ಈಗ ಡಿಕೆಶಿ ಸಂಪುಟದಲ್ಲಿ ಖಾತೆ ಕ್ಯಾತೆ ಶುರುವಾಗಿದೆ. ಡಿಕೆ ಸರ್ಕಾರದಲ್ಲಿ ಬಿರುಗಾಳಿ ಎದ್ದಿದೆ.. ಪಕ್ಷಕ್ಕಾಗಿ ದುಡಿದವರಿಗೆ ಅನ್ಯಾಯ ಆಗುತ್ತಿದೆ ಅನ್ನೋ ಕೂಗೂ ಜೋರಾಗಿದೆ.. ಅಂದಹಾಗೇ ಡಿಕೆಶಿ ಜೊತೆ ಪ್ರಮಾಣವಚನ ಸ್ವೀಕಾರ ಮಾಡಿದ 13 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಆದ್ರೆ ಖಾತೆ ಹಂಚಿಯಲ್ಲಿ ಡಿಕೆ ಶಿವಕುಮಾರ್ ರಾಮಲಿಂಗಾ ರೆಡ್ಡಿಗೆ ಅನ್ಯಾಯ ಮಾಡಿದ್ರಾ ಅನ್ನೋ ಪ್ರಶ್ನೆ ಎದ್ದಿದೆ.. ತಾನಾಗದ ಅನ್ಯಾಯಕ್ಕೆ ಸೈಲೆಂಟ್ ಆಗಿಯೇ ಆಕ್ರೋಶ ಹೋರ ಹಾಕಿದಡಿಕೆಶಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದ್ರೆ ಈಗ ಡಿಕೆಶಿ ಸಂಪುಟದಲ್ಲಿ ಖಾತೆ ಕ್ಯಾತೆ ಶುರುವಾಗಿದೆ. ಡಿಕೆ ಸರ್ಕಾರದಲ್ಲಿ ಬಿರುಗಾಳಿ ಎದ್ದಿದೆ.. ಪಕ್ಷಕ್ಕಾಗಿ ದುಡಿದವರಿಗೆ ಅನ್ಯಾಯ ಆಗುತ್ತಿದೆ ಅನ್ನೋ ಕೂಗೂ ಜೋರಾಗಿದೆ.. ಅಂದಹಾಗೇ ಡಿಕೆಶಿ ಜೊತೆ ಪ್ರಮಾಣವಚನ ಸ್ವೀಕಾರ ಮಾಡಿದ 13 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಆದ್ರೆ ಖಾತೆ ಹಂಚಿಯಲ್ಲಿ ಡಿಕೆ ಶಿವಕುಮಾರ್ ರಾಮಲಿಂಗಾ ರೆಡ್ಡಿಗೆ ಅನ್ಯಾಯ ಮಾಡಿದ್ರಾ ಅನ್ನೋ ಪ್ರಶ್ನೆ ಎದ್ದಿದೆ.. ತಾನಾಗದ ಅನ್ಯಾಯಕ್ಕೆ ಸೈಲೆಂಟ್ ಆಗಿಯೇ ಆಕ್ರೋಶ ಹೋರ ಹಾಕಿದಡಿಕೆಶಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದ್ರೆ ಈಗ ಡಿಕೆಶಿ ಸಂಪುಟದಲ್ಲಿ ಖಾತೆ ಕ್ಯಾತೆ ಶುರುವಾಗಿದೆ. ಡಿಕೆ ಸರ್ಕಾರದಲ್ಲಿ ಬಿರುಗಾಳಿ ಎದ್ದಿದೆ.. ಪಕ್ಷಕ್ಕಾಗಿ ದುಡಿದವರಿಗೆ ಅನ್ಯಾಯ ಆಗುತ್ತಿದೆ ಅನ್ನೋ ಕೂಗೂ ಜೋರಾಗಿದೆ.. ಅಂದಹಾಗೇ ಡಿಕೆಶಿ ಜೊತೆ ಪ್ರಮಾಣವಚನ ಸ್ವೀಕಾರ ಮಾಡಿದ 13 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಆದ್ರೆ ಖಾತೆ ಹಂಚಿಯಲ್ಲಿ ಡಿಕೆ ಶಿವಕುಮಾರ್ ರಾಮಲಿಂಗಾ ರೆಡ್ಡಿಗೆ ಅನ್ಯಾಯ ಮಾಡಿದ್ರಾ ಅನ್ನೋ ಪ್ರಶ್ನೆ ಎದ್ದಿದೆ.. ತಾನಾಗದ ಅನ್ಯಾಯಕ್ಕೆ ಸೈಲೆಂಟ್ ಆಗಿಯೇ ಆಕ್ರೋಶ ಹೋರ ಹಾಕಿದ್ದಾರೆ.
ಇದನ್ನೂ ಓದಿ: ಮ್ಯಾಂಗೋ ಪಚ್ಚ ಸಿನಿಮಾಗೆ ಸಖತ್ ರೆಸ್ಪಾನ್ಸ್ – ಜೊತೆಯಲ್ಲೇ ಕುಳಿತು ಸಿನಿಮಾ ನೋಡಿದ ಕಿಚ್ಚ ಸುದೀಪ್ ದಂಪತಿ
ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದಿದ್ದಕ್ಕೆ ಬೇಸರಗೊಂಡ ರಾಮಲಿಂಗಾರೆಡ್ಡಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರದಲ್ಲಿ ಏನಿದೆ ಅನ್ನೋದ್ದನ್ನ ಒಮ್ಮೆ ನೋಡೋಣ ಬನ್ನಿ.. Vis Flow..
ನನಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದ್ದಕ್ಕೆ ತಮಗೂ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದಗಳು. ನಾನು ನನ್ನ ಆತ್ಮಸಾಕ್ಷಿ ವಿರುದ್ದವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ. ನಾನು ಶಾಸಕನಾಗಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಹೊಸ ಸಿಎಂ ಡಿಕೆಶಿ ರಾಮಲಿಂಗಾ ರೆಡ್ಡಿರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಮತ್ತು 8 ಬಾರಿ ಶಾಸಕರಾಗಿ, 6 ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ ರಾಮಲಿಂಗಾ ರೆಡ್ಡಿ ಇದೇ ಮೊದಲ ಬಾರಿ ತೀವ್ರ ಅಸಮಾಧಾನಗೊಂಡಿದ್ದು, ಕಚೇರಿಗೆ ಆಗಮಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದರು. ಶುಕ್ರವಾರ ಬೆಳಗ್ಗೆಯೇ ಕಚೇರಿಗೆ ಆಗಮಿಸಿ ಪತ್ರಕ್ಕೆ ಸಹಿ ಹಾಕಿದ್ದು, ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಈ ರಾಮಲಿಂಗಾ ರೆಡ್ಡಿಯನ್ನ ಯಾರು ಸಿಟ್ಟಾಗಿ ನೋಡಿಲ್ಲ. ಆದ್ರೆ ಅವರು ಒಮ್ಮೆ ತಮ್ಮ ತಾವೆಲ್ನಿಂದ ಮುಖ ಒರೆಸಿಕೊಂಡ್ರೆ ಒಂದು ಕಠಿಣ ನಿರ್ಧಾರ ತೆಗೆದುಕೊಂಡ್ರು ಅಂತಾನೇ ಅರ್ಥ.. ಇವತ್ತು ನಡೆದ ಸುದ್ದಿ ಘೋಷ್ಠಿಯಲ್ಲಿ ಬಟ್ಟೆಯಿಂದ ಮುಖವನ್ನ ಒರೆಸಿಕೊಂಡಿದ್ದು, ಮುಂದಿನ ರಾಮಲಿಂಗಾ ರೆಡ್ಡಿ ನಡೆ ಮೇಲೆ ಕುತೂಹಲ ಹೆಚ್ಚಾಗಿದೆ.
ಮಾತು ತಪ್ಪಿದ ಸಿಎಂ ಡಿಕೆ ಶಿವಕುಮಾರ್
ಸುದ್ದಿಗೋಷ್ಠಿಯಲ್ಲಿ ಮಾತಾಡಿದ ರಾಮಲಿಂಗಾರೆಡ್ಡಿ ಅವ್ರು, ನಾನು 1973 ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಬಂದೆ. ವೀರಪ್ಪ ಮೊಯ್ಲಿ ನನಗೆ ಕರೆದು ಟಿಕೆಟ್ ಕೊಟ್ರು. ಆರು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಯಾರ ಬಳಿಯೂ ಇಂಥಹುದೇ ಖಾತೆ ಕೊಡಿ ಅಂತ ಲಾಬಿ ಮಾಡಿಲ್ಲ. ಅವರೇ ಎರಡು ಬಾರಿ ಕರೆದು ಬೆಂಗಳೂರು ಅಭಿವೃದ್ದಿ ಕೊಡ್ತೀವಿ ಅಂತ ಹೇಳಿ ಈಗ ಕೊಡಲಿಲ್ಲ. ಈ ವಿಚಾರಕ್ಕೆ ಬೇಸರವಾಗಿ ಈ ನಿರ್ಧಾರ ತೆಗೆದುಕೊಂಡಿರೋದಾಗಿ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಆಗಿ ಪ್ರಮಾಣವಚನ ಮಾಡುವ ಹಿಂದಿನ ದಿನವೇ ಹೋಗಿ ಭೇಟಿ ಮಾಡಿದ್ದೆ. ನಾನು ಯಾರಿಗೂ ಮಂತ್ರಿ ಮಾಡಿ ಅಂತ ಕೇಳಿಲ್ಲ. ಆದ್ರೆ ಅವರೇ ಕರೆದು ಬೆಂಗಳೂರು ಖಾತೆ ಕೊಡ್ತೀನಿ ಅಂದವರು ಇದೀಗ ಮಾತು ತಪ್ಪಿದ್ದಾರೆ ಎಂದು ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಲ್ಲಿ ಇನ್ನೊಂದು ವಿಚಾರ ಗಮನಿಸಬೇಕು. ಸಿಎಂ ಡಿ.ಕೆ ಶಿವಕುಮಾರ್ ಈ ಬಗ್ಗೆ ಕೇಳಿದರೆ ಇದೆಲ್ಲಾ ಹೈಕಮಾಂಡ್ ನಿರ್ಧಾರ ಅಂತಾ ಹೇಳಿದ್ದರಂತೆ. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಮಲಿಂಗಾ ರೆಡ್ಡಿಯವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಿದ್ದರು. ಆಗ ಡಿಕೆಶಿ ಬ್ರದರ್ಸ್ ಸೀದಾ ಹೋಗಿದ್ದೇ ರಾಮಲಿಂಗಾರೆಡ್ಡಿಯವರ ಮನೆಗೆ. ಬೆಳಗ್ಗೆ ಬಂದವರು ಸಂಜೆ ನಾಲ್ಕು ಗಂಟೆತನಕ ಖಾತೆಗಾಗಿ ರಾಮಲಿಂಗಾ ರೆಡ್ಡಿಯವರ ಮನವೊಲಿಸಿದ್ದರು. ಕೊನೆಗೂ ರಾಮಲಿಂಗಾ ರೆಡ್ಡಿಗೆ ಸಿಕ್ಕಿರುವ ಬೆಂಗಳೂರು ಅಭಿವೃದ್ಧಿಖಾತೆಯನ್ನು ತನಗೆ ಮಾಡಿಸಿಕೊಂಡಿದ್ದರು ಡಿಕೆ ಶಿವಕುಮಾರ್. ಆಗ ಮುಂದೆ ನಾನೇ ಮುಖ್ಯಮಂತ್ರಿ ಆಗುತ್ತೇನೆ. ನಿಮ್ಮಿಂದ ತೆಗೆದುಕೊಂಡ ಖಾತೆಯನ್ನೇ ನಿಮಗೆ ನೀಡುತ್ತೇನೆ ಎಂದು ಡಿಕೆಶಿ ಮಾತುಕೊಟ್ಟಿದ್ದರಂತೆ. ಇನ್ನೊಂದು ವಿಚಾರವೆಂದರೆ, ರಾಮಲಿಂಗಾ ರೆಡ್ಡಿಗೆ ಸಿಕ್ಕ ಖಾತೆಯನ್ನು ಡಿಕೆಶಿ ತನ್ನ ಬುಟ್ಟಿಗೆ ಹಾಕಿಕೊಳ್ಳುವಾಗ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವೇ ಫೈನಲ್ ಆಗಿರಲಿಲ್ವಾ?, ಈಗ ಡಿಕೆಶಿ ಪ್ರಕಾರ ಖಾತೆ ಹಂಚಿಕೆ ಹೈಕಮಾಂಡ್ಗೆ ಬಿಟ್ಟಿರುವುದಂತೆ. ಇದು ಕೂಡಾ ರಾಮಲಿಂಗಾರೆಡ್ಡಿಯವರ ಬೇಸರಕ್ಕೆ ಕಾರಣವಾಗಿದೆ.
ಇನ್ನೂ ರಾಮಲಿಂಗಾ ರೆಡ್ಡಿ ಬೆಂಗಳೂರಿನ ಮೇಲೆ ಹಿಡಿತ ಸಾಧಿಸಿದ್ದಾರೆ. ಯಾಕಂದ್ರೆ ಬೆಂಗಳೂರಿನಿಂದ 8 ಬಾರಿ ಶಾಸಕರಾಗಿ, ಸಚಿವರಾದವರು ಇವರು.. ಆದ್ರೆ ಇವರಿಗೆ ಅದರ ಬಗ್ಗೆ ಗೊತ್ತಿಲ್ಲದ ಜಲಸಂಪನ್ಮೂಲ ಸಚಿವ ಸ್ಥಾನ ಕೊಟ್ರೆ ಇವರಿಗೆ ಅಲ್ಲಿ ಕೆಲಸ ಮಾಡುವುದು ಕಷ್ಟ.. ಅದ್ದನ್ನ ಬೇರೆ ಜಿಲ್ಲೆಯ ಸಚಿವರಿಗೆ ನೀಡಬಹುದಿತ್ತು. ಆದ್ರೆ ಇಲ್ಲಿ ಡಿಕೆಶಿ ರಾಮಲಿಂಗಾ ರೆಡ್ಡಿಯವರು ಬೆಂಗಳೂರಿನ ಮೇಲೆ ಸಾಧಿಸಿದ ಹಿಡಿತವನ್ನ ತಪ್ಪಿಸೋಕೆ ಈ ನಿರ್ಧಾರಕ್ಕೆ ಬಂದಿದ್ದಾರೆ ಅಂತ ಹೇಳಲಾಗ್ತಿದೆ..ಇನ್ನೂ ಡಿಕೆಶಿ ನಾನು ರಾಮಲಿಂಗಾ ರೆಡ್ಡಿ ಒಳ್ಳೆಯ ಸ್ನೇಹಿತರು, ಆದಷ್ಟು ಬೇಗ ನಾನು ಅವರ ಮನವೋಲಿಸುತ್ತೇನೆ ಅಂತ ಹೇಳಿದ್ದಾರೆ.
ರಾಮಲಿಂಗಾ ರೆಡ್ಡಿ ಅಭಿಮಾನಿಗಳಿಂದ ಪ್ರತಿಭಟನೆ
ರಾಮಲಿಂಗಾ ರೆಡ್ಡಿಯವರು ಕ್ಲೀನ್ ಹ್ಯಾಂಡ್ ಸಚಿವರು. ಇಲ್ಲಿ ತನಕ ಇವರ ಮೇಲೆ ಒಂದು ಕಪ್ಪು ಚುಕ್ಕೆ ಇಲ್ಲ.. ಕಾಂಗ್ರೆಸ್ನ ಹಿರಿಯ ಶಾಸಕರು ಬೇರೆ.. ಅಲ್ಲದೇ ಇವರೇ ಬೆಂಗಳೂರು ಅಭಿವೃದ್ಧಿ ಖಾತೆ ಕೊಡ್ತೀನಿ ಅಂತ ಹೇಳಿ ಈಗ ಮೋಸ ಮಾಡುವುದು ಸರಿಯಲ್ಲ ಅಂತ ರಾಮಲಿಂಗಾ ರೆಡ್ಡಿ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಲ್ಲದೇ ರಾಮಲಿಂಗಾ ರೆಡ್ಡಿ ಕಚೇರಿ ಬಳಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಯ್ಯೋಯ್ಯೋ ಅನ್ಯಾಯ ಅಂತ ಆಕ್ರೋಶ ಹೊರ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನೋಡಿರಿ

