ಬಿಗ್‌ಬಾಸ್ ಖ್ಯಾತಿಯ ಮಲ್ಲಮ್ಮನ ಕನಸು ನನಸು – ಹೊಸ ಕಾರು ಖರೀದಿಸಿದ ಮಲ್ಲಮ್ಮ

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್, ಬಿಗ್‌ಬಾಸ್ ಖ್ಯಾತಿಯ ಮಲ್ಲಮ್ಮ ಹೊಸ ಕಾರು ಖರೀದಿಸಿದ್ದಾರೆ. ತನ್ನ ಶ್ರಮದಿಂದಲೇ ಕಾರು ಖರೀದಿಸಿದ್ದಾರೆ ಮಲ್ಲಮ್ಮ.
ಇದನ್ನೂ ಓದಿ:ಮ್ಯಾಂಗೋ ಪಚ್ಚ ಸಿನಿಮಾಗೆ ಸಖತ್ ರೆಸ್ಪಾನ್ಸ್ – ಜೊತೆಯಲ್ಲೇ ಕುಳಿತು ಸಿನಿಮಾ ನೋಡಿದ ಕಿಚ್ಚ ಸುದೀಪ್ ದಂಪತಿ
ಬಿಗ್ ಬಾಸ್ ಖ್ಯಾತಿಯ ಮಲ್ಲಮ್ಮ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅದು ಕೂಡಾ ಗುಡ್‌ನ್ಯೂಸ್ ಕೊಡುವುದರ ಮೂಲಕ. ಮಲ್ಲಮ್ಮ ಹೊಸ ಮಾರುತಿ ಸುಜುಕಿ ಡಿಸೈರ್ ಕಾರು ಖರೀದಿಸಿದ್ದಾರೆ. ಸಂತಸದ ಕ್ಷಣವನ್ನು ಮಲ್ಲಮ್ಮ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಖರೀದಿ ಮಾಡಿದ್ದು ಮಾರುತಿ ಸುಜುಕಿ ಡಿಸೈರ್ ಟೂರ್ ಕಾರು. ಹೊಸ ಕಾರಿನ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮಲ್ಲಮ್ಮ ಅವರು ತಮ್ಮ ಕುಟುಂಬಸ್ಥರು ಹಾಗೂ ಆಪ್ತರೊಂದಿಗೆ ಸೇರಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸುವ ಮೂಲಕ ಕಾರನ್ನು ಖರೀದಿ ಮಾಡಿದ್ದಾರೆ.
ಬಡ ಕುಟುಂಬದಿಂದ ಬಂದ ಮಲ್ಲಮ್ಮ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ನಂತರ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿಯೂ ಖ್ಯಾತಿ ಗಳಿಸಿದ್ದರು. ಇದರಿಂದಾಗಿಯೇ ಮಲ್ಲಮ್ಮ ಅವರಿಗೆ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿಯೂ ಅವಕಾಶ ಸಿಕ್ಕಿತ್ತು. ತಮ್ಮ ಕಠಿಣ ಪರಿಶ್ರಮ, ಹಾಗೂ ಮುಗ್ಧ ಮನಸಿನಿಂದ ಮಲ್ಲಮ್ಮ ರಾಜ್ಯದ ಜನರ ಮನಗೆದ್ದಿದ್ದರು.
ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೂ ಮಲ್ಲಮ್ಮನ ಹವಾ ಕಡಿಮೆಯಾಗಿರಲಿಲ್ಲ. ಸೋಶಿಯಲ್ ಮೀಡಿಯಾ ಮೂಲಕ ಮಲ್ಲಮ್ಮ ಅನೇಕರಿಗೆ ಇಷ್ಟವಾಗಿದ್ದಾರೆ. ಒಂದೆಡೆ ಕೆಲಸ, ಮತ್ತೊಂದೆಡೆ ರೀಲ್ಸ್‌ಗಳ ಮೂಲಕ ಮಲ್ಲಮ್ಮ ಮನ ಗೆದ್ದಿದ್ದರು. ಇದೀಗ ಮಲ್ಲಮ್ಮ ತನ್ನ ಸಂಪಾದನೆಯಲ್ಲಿಯೇ ಹೊಸ ಕಾರು ಖರೀದಿಸಿದ್ದಾರೆ. ಈ ಮೂಲಕ ಕಷ್ಟಪಟ್ಟು ದುಡಿದರೆ ತಕ್ಕ ಪ್ರತಿಫಲ ಸಿಕ್ಕಿಯೇ ಸಿಗುತ್ತದೆ ಅನ್ನೋದಕ್ಕೆ ಮಲ್ಲಮ್ಮನೇ ಉದಾಹರಣೆ.

ನೋಡಿರಿ

