CAPTAINCY ಇಲ್ಲ.. SLOT ಸಿಗಲಿಲ್ಲ – ಸೂರ್ಯನಿಗೆ BCCI ಗೇಟ್ ಪಾಸ್
ಪಾಟಿದಾರ್ ಗೆ T-20I ಕ್ಯಾಪ್ಟನ್ ಪಟ್ಟ?

CAPTAINCY ಇಲ್ಲ.. SLOT ಸಿಗಲಿಲ್ಲ – ಸೂರ್ಯನಿಗೆ BCCI ಗೇಟ್ ಪಾಸ್ಪಾಟಿದಾರ್ ಗೆ T-20I ಕ್ಯಾಪ್ಟನ್ ಪಟ್ಟ?

ಅದೃಷ್ಟದಲ್ಲಿ ಅಧಿಕಾರ ಸಿಕ್ರೂ ಅದನ್ನ ಉಳಿಸಿಕೊಳ್ಳೋಕೂ ಅರ್ಹತೆ ಇರಬೇಕು. ಇಲ್ಲದಿದ್ರೆ ಅವಸರದಲ್ಲಿ ಸಿಕ್ಕ ಯಶಸ್ಸು ಅರ್ಧದಲ್ಲೇ ಕೊನೆಯಾಗಿಬಿಡುತ್ತೆ. ಸದ್ಯ ಸೂರ್ಯಕುಮಾರ್ ಯಾದವ್ ವಿಚಾರದಲ್ಲೂ ಇದೇ ಆಗಿರೋದು. ಟಿ-20ಐ ಫಾರ್ಮೆಟ್​ನಲ್ಲಿ ಪೀಕ್​ನಲ್ಲಿ ಇದ್ದಾಗ್ಲೇ ಅನಿರೀಕ್ಷಿತವಾಗಿ ಕ್ಯಾಪ್ಟನ್ಸಿ ಸಿಕ್ಕಿತ್ತು. ನೆಕ್ಸ್​ಟ್ 2 ವರ್ಷ ಅವ್ರ ಮುಂದಾಳತ್ವದಲ್ಲಿ ಭಾರತ ಒಂದೂ ಸರಣಿ ಸೋಲಲಿಲ್ಲ. ಇನ್ನು 2026ರ ಟಿ-20 ವಿಶ್ವಕಪ್​ನ ಫೈನಲ್ ಮ್ಯಾಚಲ್ಲಿ ಫಸ್ಟ್ ಬಾಲಲ್ಲೇ ಗೋಲ್ಡನ್ ಡಕ್ ಔಟ್ ಆದ್ರೂ ಭಾರತ ಚಾಂಪಿಯನ್ ಪಟ್ಟಕ್ಕೇರಿತ್ತು.  ಆದ್ರೀಗ ಭಾರತ ಚಾಂಪಿಯನ್ ಪಟ್ಟಕ್ಕೇರಿ 3 ತಿಂಗಳು ತುಂಬೋ ಮೊದ್ಲೇ ಸೂರ್ಯಕುಮಾರ್ ಯಾದವ್ ಪಾತಾಳಕ್ಕೆ ಕುಸಿದಿದ್ದಾರೆ. ಟಿ-20ಐ ಕ್ಯಾಪ್ಟನ್ಸಿ ಇರಲಿ ತಂಡದಲ್ಲಿ ಸ್ಲಾಟ್​ನೇ ಕಳ್ಕೊಂಡಿದ್ದಾರೆ.

ಇದನ್ನೂ ಓದಿ : BBK 13 ಪ್ರೋಮೋ ಔಟ್.. ಹೊಸ ಸೀಸನ್‌ ಸ್ಪರ್ಧಿಗಳು ಇವರೇ? – ಬಿಗ್‌ಬಾಸ್ ಬೇಗ ಶುರುವಾಗ್ತಿರೋದ್ಯಾಕೆ? ‌

2026ರ ಮಾರ್ಚ್ 8. ಟೀಂ ಇಂಡಿಯಾ ಪಾಲಿನ ಐತಿಹಾಸಿಕ ದಿನ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಟಿ-20 ಚಾಂಪಿಯನ್ ಪಟ್ಟಕ್ಕೇರಿತ್ತು. ಚುಟುಕು ಮಾದರಿಯಲ್ಲಿ ಬ್ಯಾಕ್ ಟು ಬ್ಯಾಕ್ ಕಪ್ ಮತ್ತು ಒಟ್ಟಾರೆ 3ನೇ ಟ್ರೋಫಿ ಗೆದ್ದು ಬೀಗಿದ್ರು. ಆದ್ರೆ ಈ ಚರಿತ್ರೆ ಬರೆದು ಮೂರು ತಿಂಗಳು ಕಳೆಯೋ ಮೊದ್ಲೇ ಸೂರ್ಯಕುಮಾರ್ ಯಾದವ್ ಕರಿಯರ್​ಗೇ ಟ್ವಿಸ್ಟ್ ಸಿಕ್ಕಿದೆ.

ಸೂರ್ಯನಿಗೆ ಟಿ-20ಐನಲ್ಲಿ ಕ್ಯಾಪ್ಟನ್ಸಿ ಜೊತೆಗೆ ಸ್ಥಾನವೂ ಇಲ್ಲ!

ದಿನಗಟ್ಟಲೆ ಟೆಸ್ಟ್ ಮ್ಯಾಚ್​ಗಳು, ಗಂಟೆಗಟ್ಟಲೆ ಏಕದಿನ ಪಂದ್ಯಗಳನ್ನ ನೋಡ್ತಿದ್ದ ಕ್ರಿಕೆಟ್ ಪ್ರೇಮಿಗಳೆಲ್ಲಾ ಟಿ-20 ಫಾರ್ಮೆಟ್​ಗೆ ಅಡಿಕ್ಟ್ ಆಗ್ತಿದ್ದಾರೆ. ಹೊಡಿಬಡಿ ಆಟವನ್ನ ಎಂಜಾಯ್ ಮಾಡ್ತಿದ್ದಾರೆ. ಹೀಗೆ ಚುಟುಕು ಮಾದರಿಯ ಯಶಸ್ಸಿನ ಹಿಂದೆ ಒನ್ ಆಫ್ ದಿ ರೀಸನ್ ಇದೇಸೂರ್ಯಕುಮಾರ್ ಯಾದವ್. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುತ್ತಿದ್ದ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಜಗತ್ತಿನ ನಂಬರ್ ಒನ್ ಟಿ20  ಬ್ಯಾಟರ್ ಅನ್ನಿಸಿಕೊಂಡವ್ರು. ಅದ್ರಂತೆ ನಿರೀಕ್ಷೆಯೇ ಇಲ್ಲದೆ ಭಾರತದ ನಾಯಕತ್ವವೂ ಸಿಕ್ಕಿತ್ತು. ಆದ್ರೆ ಸಿಕ್ಕ ಪಟ್ಟವನ್ನ ಉಳಿಸಿಕೊಳ್ಳೋಕೆ ಆಗದೆ ಈಗ ಎಲ್ಲವನ್ನೂ ತ್ಯಾಗ ಮಾಡೋ ಸಂದರ್ಭ ಬಂದಿದೆ. ಬಿಸಿಸಿಐ & ಸೆಲೆಕ್ಟರ್ಸ್ ನಡುವಿನ ಸಂವಾದದಲ್ಲಿ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕೆರಿಯರ್ ಮುಗಿಯೋ ಥರ ಕಾಣ್ತಿದೆ. ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ಟಿ20 ತಂಡದ ನಾಯಕತ್ವದಿಂದ ತೆಗೆದುಹಾಕಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಅವರನ್ನು ಭಾರತ ಟಿ20 ತಂಡದಿಂದಲೂ ಕೈಬಿಡಲಾಗುತ್ತಿದೆ ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರನ್ನ ಮೆನ್ಷನ್ ಮಾಡಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕ್ಯಾಪ್ಟನ್ಸಿ ಸಿಕ್ಕ ಮೇಲೆ ಬ್ಯಾಟಿಂಗ್ ನೇ ಮರೆತ್ರಾ ಸೂರ್ಯ?

2021ರಿಂದ 2024ರವರೆಗೆ ಸೂರ್ಯಕುಮಾರ್ ಯಾದವ್ ಟಿ-20 ಫಾರ್ಮೆಟ್​ನಲ್ಲಿ ಮುಟ್ಟಿದ್ದೆಲ್ಲಾ ಚಿನ್ನ. ಭಾರತದ ಪರ ಸ್ಫೋಟಕ ಹಿಟ್ಟರ್ ಆಗಿದ್ದ ಸೂರ್ಯ ಅತೀ ಹೆಚ್ಚು ರೇಟಿಂಗ್ ಪಾಯಿಂಟ್ಸ್ ಹೊಂದಿದ್ರು. ಅವ್ರ ಇದೇ ಪ್ರದರ್ಶನದಿಂದ ಇಂಪ್ರೆಸ್ ಆಗಿದ್ದ ಬಿಸಿಸಿಐ 2024ರ ಟಿ-20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಸೂರ್ಯನನ್ನ ಕೂರಿಸಿದ್ರು. ರೇಸ್​ನಲ್ಲೇ ಇಲ್ಲದ ಸೂರ್ಯ ನಾಯಕನಾಗಿದ್ದು ಹಲವರಿಗೆ ಅಚ್ಚರಿ ಮೂಡಿಸಿತ್ತು. 2024 ರಿಂದ ನಾಯಕನಾಗಿ ಭಾರತವನ್ನು ಸತತ ಟಿ20 ಸರಣಿ ಗೆಲುವುಗಳಿಗೆ ಮುನ್ನಡೆಸಿದ್ದಾರೆ. ಅವರ ನಾಯಕತ್ವದಲ್ಲಿ, ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಆಗಿದೆ. ಆದ್ರೆ ಬ್ಯಾಟಿಂಗ್ ಅಂದ್ರೆ ತೆಗೆದು ನೋಡಿದ್ರೆ ಸೂರ್ಯನಿಗೆ ಗ್ರಹಣ ಹಿಡಿದಿತ್ತು. 2025ರ ಇಡೀ ವರ್ಷ ಒಂದೇ ಒಂದು ಅರ್ಧಶತಕವೂ ಬರಲಿಲ್ಲ. ಟಿ-20 ವಿಶ್ವಕಪ್ ಜರ್ನಿಯಲ್ಲಿ ಒಂದೇ ಪಂದ್ಯದಲ್ಲಿ ಮಾತ್ರವೇ ಅಬ್ಬರಿಸಿದ್ದು. ಯುಎಸ್ಎ ವಿರುದ್ಧದ 84 ರನ್‌ಗಳ ಆ ಇನ್ನಿಂಗ್ಸ್ ಹೊರತುಪಡಿಸಿದರೆ ಉಳಿದೆಲ್ಲವೂ ಹೇಳಿಕೊಳ್ಳುವಂಥ ಸ್ಕೋರ್ ಆಗಿರಲಿಲ್ಲ. ಈಗ ಐಪಿಎಲ್​ನಲ್ಲೂ ಸೂರ್ಯ ಸುಡಲೇ ಇಲ್ಲ. ಆಡಿದ 13 ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕದೊಂದಿಗೆ 270 ರನ್ಸ್ ಮಾತ್ರ ಕಲೆಹಾಕಿದ್ದರು. ಹೀಗಾಗಿ ಸೂರ್ಯ ಅವರ ನಾಯಕತ್ವದಲ್ಲಿ ತಂಡವು ಟಿ20 ವಿಶ್ವಕಪ್ ಗೆದ್ದಿದ್ದರೂ, ಅವರ ಫಾರ್ಮ್ ಮತ್ತು ಫ್ಯೂಚರ್ ಟೀಂ ಗಮನದಲ್ಲಿಟ್ಟುಕೊಂಡು ಈ ಬದಲಾವಣೆಗಳಿಗೆ ನಿರ್ಧರಿಸಲಾಗಿದೆ.

ಸೂರ್ಯನಿಗೆ ಯಾಕೆ ಗೇಟ್ ಪಾಸ್?

ಸೂರ್ಯನಿಗೆ ಪದೇಪದೆ ಚಾನ್ಸ್ ಕೊಟ್ಟು ಮ್ಯಾನೇಜ್ ಮೆಂಟ್ ನಿರಾಸೆ

2028ರ ಟಿ-20 ವಿಶ್ವಕಪ್ ಗೆ ಸ್ಟ್ರಾಂಗ್ ಟೀಂ ಕಟ್ಟಲು ಯುವಪಡೆಗೆ ಮಣೆ

2028ರಲ್ಲಿ ಒಲಿಂಪಿಕ್ಸ್ ಗೆ ಕ್ರಿಕೆಟ್ ಸೇರ್ಪಡೆಯಾಗುತ್ತಿದ್ದು ಭಾರತ ಬಲಿಷ್ಠ ಟೀಂ

35 ವರ್ಷದ ಸೂರ್ಯನನ್ನು ಭವಿಷ್ಯದಲ್ಲಿ ಉಳಿಸಿಕೊಳ್ಳುವುದು ಕಷ್ಟ

ಐಪಿಎಲ್ ನಲ್ಲಿ ಸಾಕಷ್ಟು ಯಂಗ್ ಸ್ಟರ್ಸ್ ಅಬ್ಬರಿಸಿ ಚಾನ್ಸ್ ನೀಡಬೇಕು

ಕ್ಯಾಪ್ಟನ್ಸಿ ರೇಸ್ ನಲ್ಲಿ ಇರುವವರು!

ಶ್ರೇಯಸ್ ಅಯ್ಯರ್

ರಜತ್ ಪಾಟಿದಾರ್

ಹಾರ್ದಿಕ್ ಪಾಂಡ್ಯ

ಶುಭ್ ಮನ್ ಗಿಲ್

ಇಶಾನ್ ಕಿಶನ್

ಟಾಪ್ ಫೈವ್​ನಲ್ಲಿ ಈ ಐವರು ಆಟಗಾರರು ಇದ್ದಾರೆ. ಹಾಗೇ ಅಕ್ಷರ್ ಪಟೇಲ್, ತಿಲಕ್ ವರ್ಮಾ ಹೆಸರೂ ಹೇಳಿ ಬರ್ತಿದೆ. ಆದ್ರೆ ಈಗ ಟ್ರೆಂಡಿಂಗ್​ನಲ್ಲಿರೋ ಮಾಹಿತಿ ಪ್ರಕಾರ ಶ್ರೇಯಸ್ ಅಯ್ಯರ್ ಗೆ ಹೆಚ್ಚಿನ ಒಲವಿದೆ. ಜೂನ್ 26ರಿಂದ ಐರ್ಲೆಂಡ್ ವಿರುದ್ಧದ ಸರಣಿಯೊಂದಿಗೆ ಭಾರತ ಟಿ-20 ಜರ್ನಿ ರೀ ಸ್ಟಾರ್ಟ್ ಆಗುತ್ತೆ. ಈ ಸರಣಿಗೆ ಇನ್ನೇನು ಟೀಂ ಅನೌನ್ಸ್ ಆಗಲಿದೆ. ಈ ವೇಳೆ ಸೂರ್ಯನನ್ನು ಕೈಬಿಟ್ಟಿರೋದು ಅಧಿಕೃತವಾಗುತ್ತೆ ಜೊತೆಗೆ ಹೊಸ ಸಾರಥಿ ಯಾರು ಅನ್ನೋ ಪ್ರಶ್ನೆಗೂ ತೆರೆ ಬೀಳುತ್ತೆ.

Shantha Kumari