ಅಫ್ಘಾನಿಸ್ತಾನ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಔಟ್- ಬ್ಲೂಜೆರ್ಸಿಯಿಂದ ಕೊಹ್ಲಿ ನೋಡಲು ಕಾಯುತ್ತಿದ್ದವರಿಗೆ ನಿರಾಸೆ

ಅಫ್ಘಾನಿಸ್ತಾನ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಔಟ್- ಬ್ಲೂಜೆರ್ಸಿಯಿಂದ ಕೊಹ್ಲಿ ನೋಡಲು ಕಾಯುತ್ತಿದ್ದವರಿಗೆ ನಿರಾಸೆ

ಐಪಿಎಲ್ ಟೂರ್ನಿ ಮುಗಿದ ಮೇಲೆ ಕ್ರಿಕೆಟ್ ಅಭಿಮಾನಿಗಳು ಅಫ್ಟಾನಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಕಣಕ್ಕಿಳಿಯುವುದನ್ನ ಎದುರುನೋಡುತ್ತಿದ್ದಾರೆ. ಆದರೆ, ಕ್ರಿಕೆಟ್ ಫ್ಯಾನ್ಸ್ ಗೆ ಬೇಸರದ ಸುದ್ದಿ ಸಿಕ್ಕಿದೆ. ಕಿಂಗ್ ಕೊಹ್ಲಿ ಈ ಸರಣಿಯಿಂದ ಹೊರಗುಳಿದಿದ್ದಾರೆ.

ಇದನ್ನೂ ಓದಿ:IND Vs NZ ಕದನಕ್ಕೆ ಮುಹೂರ್ತ – RO-KOಗಾಗಿ 5 ಏಕದಿನ ಪಂದ್ಯ!

ಟೀಮ್ ಇಂಡಿಯಾ ಮತ್ತು ಅಫ್ಘಾನಿಸ್ತಾನ ನಡುವೆ ಟೆಸ್ಟ್ ಸರಣಿ ಜೂನ್ 6 ರಿಂದ ಆರಂಭವಾಗಲಿದೆ. ಜೂನ್ 13 ರಂದು ಏಕದಿನ ಸರಣಿ ಆರಂಭವಾಗಲಿದೆ. ಏಕದಿನ ಸರಣಿ ಆರಂಭವಾಗಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ಆಘಾತ ಎದುರಾಗಿದೆ. ಭಾರತದ ಸ್ಟಾರ್ ಆಟಗಾರ ಕಿಂಗ್ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.

ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ. ಪರಿಣಾಮ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ರನ್ ಮಷಿನ್ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಐಪಿಎಲ್ ಬಳಿಕ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಟ ನೋಡಲು ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಇದರಿಂದಾಗಿ ಭಾರೀ ನಿರಾಸೆಯಾಗಿದೆ. ವಿರಾಟ್ ಕೊಹ್ಲಿ ಬಹಳ ದಿನಗಳ ನಂತರ ಟೀಮ್ ಇಂಡಿಯಾ ಪರ ಆಡಲು ತಯಾರಿ ನಡೆಸುತ್ತಿದ್ದರು. ಆದರೆ, ಈಗ ಗಾಯಗೊಂಡಿರುವ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.

ಐಪಿಎಲ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಾಲುನೋವಿನಿಂದ ಬಳಲುತ್ತಿದ್ದರು. ನಂತರ ನಡೆಸಲಾದ ವೈದ್ಯಕೀಯ ಪರೀಕ್ಷೆಯಲ್ಲಿ ಕೊಹ್ಲಿ ಗಾಯದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಗಾಯದ ತೀವ್ರತೆ ಬಗ್ಗೆ ಇನ್ನೂ ಗೊತ್ತಾಗಬೇಕಿದೆ. ಇಂಜುರಿ ಸಮಸ್ಯೆಯಿಂದ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಕೊಹ್ಲಿ ಹೊರಗುಳಿಯಲಿದ್ದಾರೆ. ಗಿಡುವಂತೆ ಮಾಡಿದೆ. ಐಪಿಎಲ್ 2026 ರಲ್ಲಿ ಚಾಂಪಿಯನ್ ಆರ್‌ಸಿಬಿ ಪರ ಆಡುವಾಗ ವಿರಾಟ್ ಕೊಹ್ಲಿ ಸಾಕಷ್ಟು ರನ್ ಗಳಿಸುತ್ತಿದ್ದರು. ಫೈನಲ್ ಪಂದ್ಯದಲ್ಲಿ ಅವರು ಸ್ಮರಣೀಯ ಇನ್ನಿಂಗ್ಸ್ ಆಡುವ ಮೂಲಕ ಆರ್‌ಸಿಬಿ ಎರಡನೇ ಬಾರಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೊಹ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಅವರು 16 ಪಂದ್ಯಗಳಲ್ಲಿ 675 ರನ್‌ಗಳನ್ನು ಗಳಿಸಿದರು. ಸರಾಸರಿ 65.25 ಮತ್ತು 165.85 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದರು.

Sulekha

Leave a Reply

Your email address will not be published. Required fields are marked *