BBK 13 ಪ್ರೋಮೋ ಔಟ್.. ಹೊಸ ಸೀಸನ್ ಸ್ಪರ್ಧಿಗಳು ಇವರೇ? – ಬಿಗ್ಬಾಸ್ ಬೇಗ ಶುರುವಾಗ್ತಿರೋದ್ಯಾಕೆ?

ಬಿಗ್ಬಾಸ್.. ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ.. ಬಿಗ್ಬಾಸ್ ಕನ್ನಡ ಸೀಸನ್ 12 ಮುಗಿದು 4 ತಿಂಗಳಷ್ಟೇ ಆಗಿದೆ.. ಇದೀಗ ಕಲರ್ಸ್ ಕನ್ನಡ ವಾಹಿನಿ ವೀಕ್ಷಕರಿಗೆ ಬಿಗ್ಬಾಸ್ ಕನ್ನಡ ಸೀಸನ್ 13ರ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟಿದೆ. ಸೀಸನ್ 13ರ ಪ್ರೋಮೋ ರಿಲೀಸ್ ಆಗಿದೆ.
ಇದನ್ನೂ ಓದಿ: ಮಲೆನಾಡಿನ ಮೀನುಗಾರರಿಗೆ ಶಾಕ್ ಕೊಟ್ಟ ಸರ್ಕಾರ – ಚಿಕ್ಕಮಗಳೂರಲ್ಲಿ ಮಳೆಗಾಲದಲ್ಲಿ ಮೀನುಗಾರಿಕೆಗೆ ನಿಷೇಧ
ಬಿಗ್ಬಾಸ್ ಕನ್ನಡ ಸೀಸನ್ 12 ಮೊನ್ನೆ ಮೊನ್ನೆಯಷ್ಟೇ ಮುಗಿದಂತೆ ಭಾಸವಾಗ್ತಿದೆ. ಸೀಸನ್ 12ರ ಸ್ಪರ್ಧಿಗಳ ಹವಾ ಇನ್ನೂ ಕಡಿಮೆಯಾಗಿಲ್ಲ. ವೀಕ್ಷಕರು ಕೂಡ ಆ ಸೀಸನ್ನ ಗುಂಗಿನಿಂದ ಹೊರಬಂದಿಲ್ಲ. ಇದೀಗ ಬಿಗ್ಬಾಸ್ ಕನ್ನಡ ಸೀಸನ್ 13 ಶುರುವಾಗ್ತಿದೆ. ಇದೀಗ ಕಲರ್ಸ್ ಕನ್ನಡ ವಾಹಿನಿ ಸೀಸನ್ 13ರ ಪ್ರೋಮೋ ರಿಲೀಸ್ ಮಾಡಿ ವೀಕ್ಷಕರಿಗೆ ಸರ್ಪ್ರೈಸ್ ನೀಡಿದೆ. ಈ ಬಾರಿ ಅತಿ ದೊಡ್ಡ ರಿಯಾಲಿಟಿ ಶೋ ಬೇಗನೆ ಶುರುವಾಗ್ತಿದೆ.
ವಿವಾದ ಹಾಗೂ ಮನರಂಜನೆಗಳ ಗೂಡಾಗಿರುವ ಬಿಗ್ ಬಾಸ್ ರಿಯಾಲಿಟಿ ಶೋಗೆ ಅದರದ್ದೇ ಆದ ಫ್ಯಾನ್ ಫಾಲೋವಿಂಗ್ ಇದೆ. ಬಿಗ್ಬಾಸ್ ಶುರುವಾಯ್ತು ಅಂದ್ರೆ ವೀಕ್ಷಕರು ಕೂಡ ಟಿವಿ ಮುಂದೆ ಕೂರ್ತಾರೆ. ಟಿಆರ್ಪಿ ಕೂಡ ಚೆನ್ನಾಗಿ ಬರುತ್ತೆ. ಹೀಗಾಗಿ ಕಲರ್ಸ್ ಕನ್ನಡ ವಾಹಿನಿ ಈ ಬಾರಿ ಬೇಗನೇ ಶೋ ಶುರುಮಾಡ್ತಿದೆ. ಸಾಮಾನ್ಯವಾಗಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಆರಂಭ ಆಗುತ್ತಿದ್ದ ಶೋ ನಿರೀಕ್ಷೆಗೂ ಮೊದಲೇ ಶುರುವಾಗುತ್ತಿದೆ. ನಿನ್ನೆ ಸೀಸನ್ 13ರ ಲೋಗೋ ರಿವೀಲ್ ಮಾಡಲಾಗಿದೆ. ಈ ಪ್ರೋಮೋದಲ್ಲಿಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ ಎಂಬ ಕ್ಯಾಪ್ಶನ್ ನೀಡಲಾಗಿದೆ. ಈ ಬಾರಿಯ ಲೋಗೋದಲ್ಲಿ ಗೋಲ್ಡನ್ ಪ್ರತಿಮೆಗಳು ನಡೆದುಕೊಂಡು ಬರುವಂತೆ ತೋರಿಸಲಾಗಿದೆ. ಬಳಿಕ ಕಣ್ಣು ಮೂಡುವಂತೆ ಮಾಡಿ, ಅದ್ರ ಮೇಲೆ ಸೀಸನ್ 13 ಎಂದು ಬರೆಯಲಾಗಿದೆ. ಇದೀಗ ಈ ಸೀಸನ್ನ ಥೀಮ್ ಏನು ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಈ ಪ್ರೋಮೊದಲ್ಲಿ ಕಿಚ್ಚ ಕಾಣಿಸದೇ ಹೋದರೂ ಗೋಲ್ಡನ್ ಥೀಮ್ನಲ್ಲಿದೆ ಲೋಗೋ ಡಿಸೈನ್ ಮಾಡಲಾಗಿದೆ. ಹೀಗಾಗಿ ಬಿಗ್ ಬಾಸ್ 13ಕ್ಕೂ ಚಿನ್ನದ ಬಣ್ಣಕ್ಕೂ ಏನೋ ಲಿಂಕ್ ಇದೆ ಅಂತ ವೀಕ್ಷಕರು ಗೆಸ್ ಮಾಡುತ್ತಿದ್ದಾರೆ.
ಇನ್ನು ಬಿಗ್ ಬಾಸ್ 13 ಆರಂಭ ಯಾವಾಗ? ಯಾರೆಲ್ಲಾ ಸ್ಪರ್ಧಿಗಳಾಗಿ ಈ ಸೀಸನ್ನಲ್ಲಿ ಕಾಣಿಸಿಕೊಳ್ಬೋದು ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಮೂಡಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಕನ್ನಡ ಸೆಪ್ಟೆಂಬರ್ ಕೊನೆಯಲ್ಲಿ ಆರಂಭ ಆಗುತ್ತೆ. ಸೀಸನ್ 12 ಕೂಡ 2025ರ ಸೆಪ್ಟೆಂಬರ್ 28ರಂದು ಆರಂಭಗೊಂಡಿತ್ತು. ಆದರೆ, ಈ ಬಾರಿ ಅದಕ್ಕೂ ಮುನ್ನ ಬರೋದು ಕನ್ಫರ್ಮ್ ಆಗಿದೆ. ಮೊದಲ ಪ್ರೋಮೋ ರಿಲೀಸ್ ಆಗಿದೆ ಅಂದ್ಮೇಲೆ ಜುಲೈ ಎಂಡ್ ಅಥವಾ ಆಗಸ್ಟ್ ತಿಂಗಳ ಆರಂಭದಲ್ಲಿ ಈ ಸೀಸನ್ ಆರಂಭವಾಗಬಹುದು. ಇಲ್ಲ ಅಂದ್ರೆ ಇದಕ್ಕೂ ಮುನ್ನ ಬರಬಹುದು. ಆದರೆ, ಕಲರ್ಸ್ ಕನ್ನಡ ಈ ರಿಯಾಲಿಟಿ ಶೋ ಆರಂಭದ ದಿನವನ್ನು ಇನ್ನೂ ಗೌಪ್ಯವಾಗಿ ಇಟ್ಟಿದೆ. ಇನ್ನು ಯಾರೆಲ್ಲಾ ಸ್ಪರ್ಧಿಗಳಾಗಿ ಬರ್ಬೋದು ಅನ್ನೋ ಕ್ಲೂ ಕೂಡ ಇಲ್ಲ. ಕಳೆದ ಬಾರಿಯಂತೆ ಈ ಬಾರಿಯೂ ಕಾಮನ್ ಪೀಪಲ್ ಹಾಗೇ ಸೆಲೆಬ್ರಿಟಿಗಳು ಈ ಶೋನಲ್ಲಿ ಸ್ಪರ್ಧಿಸಬಹುದು.

ನೋಡಿರಿ

