ತೆರೆ ಮೇಲೆ ಪೆದ್ದಿ ಪವರ್ – ರಾಮ್‌ಚರಣ್, ಶಿವಣ್ಣ ಜೋಡಿಗೆ ಅಭಿಮಾನಿಗಳ ಬಹುಪರಾಕ್

ತೆರೆ ಮೇಲೆ ಪೆದ್ದಿ ಪವರ್ – ರಾಮ್‌ಚರಣ್, ಶಿವಣ್ಣ ಜೋಡಿಗೆ ಅಭಿಮಾನಿಗಳ ಬಹುಪರಾಕ್

ತೆಲುಗು ಸೂಪರ್‌ಸ್ಟಾರ್ ರಾಮ್ ಚರಣ್ ಅಭಿನಯದ ಸಿನಿಮಾ ಪೆದ್ದಿ ರಿಲೀಸ್ ಆಗಿದೆ. ರಾಮ್‌ಚರಣ್ ಮತ್ತು ಶಿವಣ್ಣನ ಜೋಡಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಯಾಕೆಂದರೆ, ಇದೇ ಮೊದಲ ಬಾರಿಗೆ ಶಿವಣ್ಣ ತೆಲುಗು ಸಿನಿಮಾದಲ್ಲಿ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ದಿಯಾ ಬೇಬಿ ಪಾತ್ರ ಅಂತ್ಯ –ಮಿಂಚುಗೆ ರಿಯಲ್ ಅಮ್ಮ ಭೂಮಿ ಅನ್ನೋ ಸತ್ಯ ಗೊತ್ತಾಗುತ್ತಾ?

ಟಾಲಿವುಡ್‌ನ ಬಹುನಿರೀಕ್ಷಿತ ಪೆದ್ದಿ ಸಿನಿಮಾ ಇಂದು (ಜೂನ್ 4) ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈಗಾಗಲೇ ಹಲವೆಡೆ ಪ್ರೀಮಿಯರ್ ಶೋಗಳು ನಡೆದಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪೆದ್ದಿ ಚಿತ್ರದಲ್ಲಿ ತೆಲುಗು ಸೂಪರ್‌ಸ್ಟಾರ್ ರಾಮ್ ಚರಣ್ ಜೊತೆಗೆ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್ ಶಿವಣ್ಣ ರಾಮ್‌ಚರಣ್ ಜೊತೆ ನಟಿಸಿರುವುದು ಸಹಜವಾಗಿಯೇ ಕನ್ನಡ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗಿದೆ.

ಸಿನಿಮಾ ಅಧಿಕೃತ ಬಿಡುಗಡೆಯ ಮುನ್ನವೇ ಜೂನ್ 3ರಂದು ಹಲವು ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಅನೇಕ ಪ್ರಮುಖ ಚಿತ್ರಮಂದಿರ ಸೇರಿದಂತೆ ರಾಜ್ಯದ ಹಲವಡೆ ವಿಶೇಷ ಪ್ರದರ್ಶನಗಳು ನಡೆದಿವೆ. ಪ್ರೀಮಿಯರ್ ಪ್ರದರ್ಶನದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ. ಸಿನಿಮಾ ಕಥೆ, ದೃಶ್ಯ ವೈಭವ, ಸಂಗೀತ ಹಾಗೂ ನಟರ ಅಭಿನಯದ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪೆದ್ದಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ಪ್ರೇಕ್ಷಕರ ಮುಂದೆ ಬಂದಿದೆ. ಇನ್ನು ಈ ಸಿನಿಮಾದಲ್ಲಿ ರಾಮ್‌ಚರಣ್ ಕುಸ್ತಿಪಟುವಾಗಿ ಕಾಣಿಸಿಕೊಂಡರೆ, ಇವರಿಗೆ ಕುಸ್ತಿ ತರಬೇತುದಾರರಾಗಿ ಶಿವಣ್ಣ ಮಹತ್ವದ ರೋಲ್ ನಿಭಾಯಿಸಿದ್ದಾರೆ. ರಾಮ್‌ಚರಣ್‌ಗೆ ನಾಯಕಿಯಾಗಿ ಬಾಲಿವುಡ್ ಬೋಲ್ಡ್ ಬ್ಯೂಟಿ ಜಾಹ್ವವಿ ಕಪೂರ್ ಫ್ಯಾನ್ಸ್‌ ಗೆ ಇಷ್ಟವಾಗಿದ್ದಾರೆ. ಚಿತ್ರವನ್ನು ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶಿಸಿದ್ದಾರೆ. ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಸಂಗೀತ ನೀಡಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದು, ಬಿಡುಗಡೆಯ ನಂತರವೂ ಸಂಗೀತಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Sulekha