ವೈಭವ್‌ನಿಂದ RRಗೆ 33 ಕೋಟಿ ಲಾಭ- RCBಯಿಂದ ಅಭಿನಂದನ್ OUT?

ಐಪಿಎಲ್ ಟೂರ್ನಿ ಈಗ ರೋಚಕ ಘಟ್ಟ ತಲುಪಿದೆ. ಈ ಟೂರ್ನಿಯ ಅಂಗಳದಲ್ಲಿ ನಡೆಯುತ್ತಿರುವ ಕೆಲ ಸ್ವಾರಸ್ಯಕರ ಘಟನೆಗಳ ಸಂಕ್ಷಿಪ್ತ ಸುದ್ದಿ ಇಲ್ಲಿದೆ.

ಇದನ್ನೂ ಓದಿ: RCBಗೆ ಹಾರ್ದಿಕ್ ಪಾಂಡ್ಯ? – ಡಿಕೆ & ಫ್ಲವರ್ ಡೀಲ್ ಫೈನಲ್?

2026 ರ ಐಪಿಎಲ್ ಸೀಸನ್ ಮುಗಿದ ತಕ್ಷಣ ವೈಭವ್ ಸೂರ್ಯವಂಶಿಗೆ ಬಿಗ್ 12 ಕೋಟಿ ರೂಪಾಯಿ ಭರ್ಜರಿ ಆಫರ್ ಬಂದಿದೆ. ಪ್ರಮುಖ ಕಾರ್ಪೊರೇಟ್ ಟೈರ್​ ಕಂಪೆನಿಯೊಂದು ತಮ್ಮ ಬ್ರ್ಯಾಂಡ್ ಲೋಗೊವನ್ನು ಬ್ಯಾಟ್ ಮೇಲೆ ಪ್ರದರ್ಶಿಸಲು ವೈಭವ್​ಗೆ ಬರೋಬ್ಬರಿ 12 ಕೋಟಿ ರೂಪಾಯಿಗಳ ವಾರ್ಷಿಕ ಸ್ಪಾನ್ಸರ್​ಶಿಪ್ ಆಫರ್ ನೀಡಿದೆ ಎಂದು ವರದಿಯಾಗಿದೆ. ಸದ್ಯ ವೈಭವ್ ಸರೀನ್ ಸ್ಪೋರ್ಟ್ಸ್​ ಕಂಪನಿಯೊಂದಿಗೆ ವಾರ್ಷಿಕ 50 ಲಕ್ಷ ರೂಪಾಯಿಗಳ ಬ್ಯಾಟ್ ಒಪ್ಪಂದವನ್ನು ಹೊಂದಿದ್ದು ಇದು ಮುಕ್ತಾಯದ ಹಂತದಲ್ಲಿದೆ.

ರಿಟರ್ನ್ ಇಂಪ್ಯಾಕ್ಟ್ ಮಾಡೆಲ್ ಪ್ರಕಾರ, ವೈಭವ್​ನಿಂದ ಆರ್​ಆರ್ ಫ್ರಾಂಚೈಸಿ ಬರೋಬ್ಬರಿ ಶೇ 30ರಷ್ಟು ಲಾಭ ಪಡೆದುಕೊಂಡಿದೆ. ಹರಾಜಿನಲ್ಲಿ 1.10 ಕೋಟಿಗೆ ಆರ್ ಆರ್ ತಂಡಕ್ಕೆ ಸೇರಿದ ವೈಭವ್ ತಂಡಕ್ಕೆ 34.97 ಕೋಟಿ ಲಾಭವನ್ನ ಕೊಟ್ಟಿದ್ದಾರೆ ಪಡೆದಿದ್ದಾರೆ. ಅಂದರೆ ₹30 ಕೋಟಿ ಸಂಭಾವನೆ ಪಡೆಯುವ ಆಟಗಾರನಿಂದ ಸಿಗುವ ಪ್ರದರ್ಶನವನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಕೇವಲ ₹1.10 ಕೋಟಿಯ ಹೂಡಿಕೆಯಲ್ಲೇ ಪಡೆದು ಕೊಂಡಿದೆ. ಇನ್ನು ಅರ್ಥವಾಗುವಂತೆ ಹೇಳಬೇಕಾದ್ರೆ ವೈಭವ್‌ನಿಂದ ಪ್ರತಿ 1 ರೂಪಾಯಿ ಹೂಡಿಕೆಗೆ ₹31.79 ರಷ್ಟು ಮೌಲ್ಯದ ಆಟ ಮರಳಿ ಸಿಕ್ಕಿದೆ.

2027ರ ಐಪಿಎಲ್‌ ಮಿನಿ ಹರಾಜಿನಲ್ಲಿ ಯಾರೆಲ್ಲಾ ಔಟ್ ಆಗ್ತಾರೆ ಅನ್ನೋ ಚರ್ಚೆ ಶುರುವಾಗಿದೆ.  ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಭಿನಂದನ್ ಸಿಂಗ್ ಈ ಬಾರಿ 3 ಪಂದ್ಯಗಳನ್ನಾಡಿದ್ದಾರೆ. ಈ ಮೂರು ಮ್ಯಾಚ್​ಗಳಲ್ಲಿ 58 ಎಸೆತಗಳನ್ನು ಎಸೆದಿರುವ ಅಭಿನಂದನ್ ಪಡೆದಿರುವುದು ಕೇವಲ 3 ವಿಕೆಟ್ ಮಾತ್ರ. ಇದೇ ವೇಳೆ ಅವರು ನೀಡಿರುವುದು ಬರೋಬ್ಬರಿ 122 ರನ್​ಗಳು. ಹೀಗಾಗಿ ಅಭಿನಂದನ್ ಸಿಂಗ್ ಅವರನ್ನು ಮುಂದಿನ ಸೀಸನ್​ಗಾಗಿ ಆರ್​ಸಿಬಿ ಉಳಿಸಿಕೊಳ್ಳುವುದು ಡೌಟ್ ಎನ್ನಲಾಗ್ತಿದೆ.

RCBಯಿಂದ ಯಶ್‌ ದಾಯಾಳ್‌ಗೂ ಗೇಟ್‌ಪಾಸ್ ಸಿಗಲಿದೆ ಎನ್ನಲಾಗ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪರ್ಸ್ ಮೊತ್ತ ಹೆಚ್ಚಿಸಲು ಇರುವ ಏಕೈಕ ಆಯ್ಕೆ ಯಶ್ ದಯಾಳ್ ಬಿಡುಗಡೆ ಮಾಡೋದು. ಈ ಬಾರಿಯ ಐಪಿಎಲ್​ನಿಂದ ಹೊರಗುಳಿದಿದ್ದ ದಯಾಳ್ ಮುಂಬರುವ ಸೀಸನ್​ನಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ತನ್ನ ಮೇಲಿರುವ ದೌರ್ಜನ್ಯ ಪ್ರಕರಣದಿಂದ ಖುಲಾಸೆಗೊಳ್ಳಬೇಕು. ಇಲ್ಲದಿದ್ದರೆ ಆರ್​ಸಿಬಿ 5 ಕೋಟಿ ರೂ. ಬೆಲೆಯ ಯಶ್ ದಯಾಳ್ ಅವರನ್ನು ಬಿಡುಗಡೆ ಮಾಡುವುದು ಪಕ್ಕಾ ಎನ್ನಲಾಗ್ತಿದೆ.

 

RCB ಐಪಿಎಲ್‌ ಗೆದ್ದ ಬೆನ್ನಲ್ಲೇ ವಿರುಷ್ಕಾ ಜೋಡಿ ಪ್ರೇಮಾನಂದ ಸ್ವಾಮೀಜಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.  ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಸೋಮವಾರ ವೃಂದಾವನದಲ್ಲಿರುವ ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದಿದ್ದಾರೆ. ಇವರು ಆಶ್ರಮಕ್ಕೆ ಭೇಟಿ ನೀಡಿರುವ ಫೋಟೋ ಹಾಗೂ ವಿಡಿಯೋ ಸಖತ್ ವೈರಲ್ ಆಗ್ತಿದೆ.

ಒಂದು ಕಾಲದಲ್ಲಿ ಆರ್​ಸಿಬಿ ತಂಡವನ್ನು ಟೀಕಿಸಿದ್ದ ಅಂಬಾಟಿ ರಾಯುಡು ಈಗ ಹಾಡಿ ಹೊಗಳಿದ್ದಾರೆ.  ಐಪಿಎಲ್​ನ ಈ ಯುಗವನ್ನು ಆರ್​ಸಿಬಿ ಈಗಾಗಲೇ ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ಇರುವ ಆರ್‌ಸಿಬಿ ತಂಡವು ತುಂಬಾ ಬಲಿಷ್ಠವಾಗಿದೆ. ತಂಡದಲ್ಲಿ ಸ್ಫೋಟಕ ದಾಂಡಿಗರ ಬಳಗವೇ ಇದೆ. ಇದರ ಜೊತೆಗೆ ವಿಶ್ವದ ಅತ್ಯುತ್ತಮ ಬೌಲರ್​ಗಳಿದ್ದಾರೆ. ಹೀಗಾಗಿ ಬಲಿಷ್ಠತೆಯ ವಿಷಯದಲ್ಲಿ ಬೇರೆ ಯಾವುದೇ ತಂಡ ಆರ್​​ಸಿಬಿ ಹತ್ತಿರಕ್ಕೂ ಬರಲ್ಲ. ಅವರಿಗೆ ಸರಿಸಮಾನವಾಗಿ ನಿಲ್ಲಬಲ್ಲ ಸಾಮರ್ಥ್ಯ ಹೊಂದಿಲ್ಲ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ದೇಶಿಯ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದರೂ ಭಾರತ ತಂಡಕ್ಕೆ ಆಯ್ಕೆಯಾಗದ ಜಮ್ಮು ಮತ್ತು ಕಾಶ್ಮೀರದ ಸ್ಟಾರ್ ವೇಗಿ ಆಖಿಬ್ ನಬಿ ಅವರಿಗೆ ಕೊನೆಗೂ ಟೀಮ್ ಇಂಡಿಯಾದಿಂದ ಬುಲಾವ್ ಬಂದಿದೆ. ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಸಿದ್ಧತೆಗಾಗಿ ಬಿಸಿಸಿಐ ಆಖಿಬ್ ನಬಿ ಅವರನ್ನು ಅಧಿಕೃತ ನೆಟ್ ಬೌಲರ್ ಹಾಗೂ ಸ್ಟ್ಯಾಂಡ್‌ಬೈ ಆಟಗಾರನಾಗಿ ಆಯ್ಕೆ ಮಾಡಿದೆ. ಅದರಂತೆ ಇದೀಗ ಅವರು ಮುಲ್ಲನ್‌ಪುರದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಬೌಲಿಂಗ್ ಅಭ್ಯಾಸ ನಡೆಸಿಕೊಡುತ್ತಿದ್ದಾರೆ.

ಟೌಂಟನ್​ನ ಕೂಪರ್ ಅಸೋಸಿಯೇಟ್ಸ್ ಕೌಂಟಿ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಸೋಲನುಭವಿಸಿದೆ.  ಟೀಮ್ ಇಂಡಿಯಾ 20 ಓವರ್​ಗಳಲ್ಲಿ 180 ರನ್​ ಕಲೆಹಾಕಿತು.ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್  18.4 ಓವರ್​ಗಳಲ್ಲಿ 184 ರನ್​​ ಬಾರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಇಂಗ್ಲೆಂಡ್ ತಂಡವು ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

ನ್ಯೂಝಿಲೆಂಡ್ vs ಭಾರತ ಸರಣಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಹೆಚ್ಚುವರಿಯಾಗಿ ಎರಡು ಏಕದಿನ ಪಂದ್ಯ ನಡೆಯಲಿದೆ. ಈ ಸರಣಿಯು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಕೊನೆಯ ನ್ಯೂಝಿಲೆಂಡ್ ಪ್ರವಾಸವಾಗಿದೆ. ಹೀಗಾಗಿ ಅದರ ಸಂಪೂರ್ಣ ಲಾಭ ಪಡೆಯಲು ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಈ ಇಬ್ಬರು ದಿಗ್ಗಜರು ಕಣಕ್ಕಿಳಿಯುತ್ತಿರುವುದರಿಂದ ಪ್ರಾಯೋಜಕತ್ವ ಮತ್ತು ಪ್ರೇಕ್ಷಕರಿಂದ ಉತ್ತಮ ಆದಾಯ ಗಳಿಸಬಹುದು. ಇದನ್ನೇ ಮನಗಂಡಿರುವ ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್​ ಬಿಸಿಸಿಐ ಜೊತೆ ಮಾತುಕತೆ ನಡೆಸಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.

ICC ಕ್ರಿಕೆಟ್ ಕೆನಡಾ ಮಂಡಳಿಯ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಕೆನಡಾ ಕ್ರಿಕೆಟ್ ಮಂಡಳಿಯ ಆಡಳಿತಾತ್ಮಕ ವೈಫಲ್ಯಗಳು, ಭ್ರಷ್ಟಾಚಾರದ ಆರೋಪಗಳು ಹಾಗೂ ನಿಯಮಾವಳಿಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ.  ಕೆನಡಾ ಕ್ರಿಕೆಟ್ ಆಡಳಿತ ಮಂಡಳಿಯನ್ನು ವಜಾಗೊಳಿಸಿರುವ ಐಸಿಸಿ, ಅಲ್ಲಿನ ಕ್ರಿಕೆಟ್ ವ್ಯವಸ್ಥೆಯನ್ನು ಸುಧಾರಿಸಲು ಶೀಘ್ರದಲ್ಲೇ  ‘ನಾರ್ಮಲೈಸೇಶನ್ ಕಮಿಟಿ’ ಯನ್ನು ನೇಮಿಸಲಿದೆ. ಅದರಂತೆ ನಾರ್ಮಲೈಸೇಶನ್ ಕಮಿಟಿ ನೆರವಿನೊಂದಿಗೆ ಕೆನಡಾದಲ್ಲಿ ಕ್ರಿಕೆಟ್ ಆಡಳಿತ ಮುಂದುವರೆಯಲಿದೆ.

 

Kishor KV

Leave a Reply

Your email address will not be published. Required fields are marked *