RCBಗೆ ಹಾರ್ದಿಕ್ ಪಾಂಡ್ಯ? – ಡಿಕೆ & ಫ್ಲವರ್ ಡೀಲ್ ಫೈನಲ್?
ಬೆಂಗಳೂರಿಂದ ಯಾರಿಗೆ ಗೇಟ್ ಪಾಸ್?

ಐಪಿಎಲ್ನಲ್ಲಿ ಆರ್ಸಿಬಿ ಬ್ಯಾಕ್ ಟು ಬ್ಯಾಕ್ ಕಪ್ ಗೆಲ್ತು ಅಂತಾ ಫುಲ್ ಜೋಶ್ನಲ್ಲಿರೋ ಫ್ಯಾನ್ಸ್ ನಿನ್ನೆಯಿಂದ ಸಿಕ್ಕಾಪಟ್ಟೆ ಕನ್ಫ್ಯೂಸ್ ಆಗಿದ್ದಾರೆ. ಇದೆಂಗ್ ಸಾಧ್ಯ ಗುರು, ಏನಿದು ಲೆಕ್ಕಾಚಾರ ಅಂತಾ ತಲೆಕೆಡಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಈ ಫೋಟೋ. ಆರ್ಸಿಬಿ ಹೆಡ್ ಕೋಚ್ ಌಂಡಿ ಫ್ಲವರ್, ಮೆಂಟರ್ & ಬ್ಯಾಟಿಂಗ್ ಕೋಚ್ ಆಗಿರುವ ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯ ಈ ಮೂವರು ಮೀಟ್ ಮಾಡಿದ್ದಾರೆ. ರೆಸ್ಟೋರೆಂಟ್ವೊಂದ್ರಲ್ಲಿ ಮಾತುಕತೆ ನಡೆಸಿದ್ದಾರೆ ಅನ್ನೋ ಸುದ್ದಿ ಹಲ್ಚಲ್ ಎಬ್ಬಿಸಿದೆ.
ಇದನ್ನೂ ಓದಿ: ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ – ಅಜ್ಜಯ್ಯನ ಹೆಸರಿನಲ್ಲಿ ಡಿಕೆಶಿ ಪದಗ್ರಹಣ
ಟೀಂ ಇಂಡಿಯಾದ ಸ್ಟಾರ್ ಆಲೌಂಡರ್ ಹಾರ್ದಿಕ್ ಪಾಂಡ್ಯಗೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆದ್ಮೇಲೆ ಸಕ್ಸಸ್ ಸಿಕ್ಕಿಲ್ಲ. ಡ್ರೆಸ್ಸಿಂಗ್ ರೂಂ ವಾರ್ ಅವ್ರ ಕ್ಯಾಪ್ಟನ್ಸಿ & ಪರ್ಫಾಮೆನ್ಸ್ ಮೇಲೂ ಎಫೆಕ್ಟ್ ಆಗ್ತಿದೆ. ಅವ್ರಿಂದ ತಂಡಕ್ಕೂ ಲಾಭ ಆಗಿಲ್ಲ. ತಂಡದಿಂದ ಅವ್ರಿಗೂ ಲಾಭ ಇಲ್ಲ. ಹೀಗಾಗಿ ಮುಂಬೈಗೆ ಗುಡ್ ಬೈ ಹೇಳೋ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಪಾಂಡ್ಯ ಅವ್ರ ಆಪ್ತಮೂಲಗಳೇ ಪಿಟಿಐ ಜೊತೆ ಮಾಹಿತಿಯನ್ನ ಶೇರ್ ಮಾಡಿಕೊಂಡಿದ್ದಾರೆ. ಸೋ ಅಲ್ಲಿಗೆ ನೆಕ್ಸ್ಟ್ ಸೀಸನ್ಗೆ ಪಾಂಡ್ಯ ನ್ಯೂ ಜೆರ್ಸಿಯಲ್ಲಿ ಆಡೋದು ಪಕ್ಕಾ. ಮೊನ್ನೆವರೆಗೂ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್ಗೆ ಜಾಯ್ನ್ ಆಗ್ಬೋದು ಅನ್ನೋ ನ್ಯೂಸ್ ಇತ್ತು. ಬಟ್ ಸದ್ಯದ ಬಿಗ್ ಬ್ರೇಕಿಂಗ್ ಅಂದ್ರೆ ಆರ್ಸಿಬಿ ಕ್ಯಾಂಪ್ ಸೇರಿಕೊಳ್ತಾರೆ ಅನ್ನೋ ಟಾಕ್ ಸ್ಟಾರ್ಟ್ ಆಗಿದೆ.
ಡಿಕೆ & ಫ್ಲವರ್ ಜೊತೆ ಪಾಂಡ್ಯ ಮಾತು.. ಆರ್ ಸಿಬಿ ಸೇರ್ತಾರಾ?
ಇದೇ ಫೋಟೋ. ಇದೊಂದು ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಒಂದ್ಕಡೆ ಫ್ಯಾನ್ಸ್, ಮತ್ತೊಂದ್ಕಡೆ ಫ್ರಾಂಚೈಸಿಗಳಲ್ಲಿ ಹತ್ತಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಭೇಟಿ ನಿಜಾನಾ..? ಯಾತಕ್ಕಾಗಿ? ಟ್ರೇಡಿಂಗ್ ಡೀಲ್ ಆಗ್ತಿದ್ಯಾ ಅಂತಾ. ಹೌದು. ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಹಾಗೇ ಌಂಡಿ ಫ್ಲವರ್ ರೆಸ್ಟೋರೆಂಟ್ವೊಂದ್ರಲ್ಲಿ ಭೇಟಿಯಾಗಿದ್ದಾರೆ ಅನ್ನೋದೇ ಬಿಸಿಬಿಸಿ ಸುದ್ದಿ. ಮೇ 31ರಂದು 2ನೇ ಬಾರಿಗೆ ಆರ್ಸಿಬಿ ಚಾಂಪಿಯನ್ ಪಟ್ಟಕ್ಕೇರಿತ್ತು. ಮರುದಿನವೇ ಅಂದ್ರೆ ಜೂನ್ 1ರಂದು ಅಹಮದಾಬಾದ್ನ ರೆಸ್ಟೋರೆಂಟ್ವೊಂದ್ರಲ್ಲಿ ಈ ಮೂವರೂ ಒಂದೇ ಟೇಬಲ್ನಲ್ಲಿ ಕುಳಿತು ಮಾತುಕತೆ ನಡೆಸಿದ್ದಾರೆ. ಹಾಗಂತ ಈ ಭೇಟಿ ಪೂರ್ವನಿಯೋಜಿತವಾ ಅಥವಾ ಆಕಸ್ಮಿಕವಾಗಿ ಭೇಟಿಯಾಗಿದ್ದಾ ಗೊತ್ತಿಲ್ಲ. ಆದ್ರೆ ಮೂವರೂ ಒಟ್ಟಿಗೆ ಇರೋದನ್ನ ನೋಡಿ ಡೀಲ್ ಅನ್ನೋ ಸುದ್ದಿಯಂತೂ ಹರಿದಾಡ್ತಿದೆ. ಅದ್ರಲ್ಲೂ ಹಾರ್ದಿಕ್ ಪಾಂಡ್ಯ ಅವ್ರೇ ನ್ಯೂ ಜರ್ನಿ ಬಗ್ಗೆ ಮಾತನಾಡಿದ್ದಾರೆ ಅನ್ನೋ ವಿಡಿಯೋನೂ ವೈರಲ್ ಆಗಿದೆ.
ಆಕ್ಚುಲಿ ಪಾಂಡ್ಯ ಆರ್ಸಿಬಿ ಜಾಯ್ನಿಂಗ್ ಬಗ್ಗೆ ಮಾತನಾಡಿಲ್ಲ. ಅಟ್ಪ್ರಸೆಂಟ್ ಅವ್ರು ಯಾವ ಸ್ಟೇಟ್ಮೆಂಟ್ನೂ ಪಾಸ್ ಮಾಡಿಲ್ಲ. ಹೀಗಿದ್ರೂ ಪಾಂಡ್ಯ ರಿಯಾಕ್ಟ್ ಮಾಡಿದ್ದಾರೆ ಅನ್ನೋ ವಿಡಿಯೋ ಇದು. ಇನ್ನು ಈ ಫೋಟೋ ಬಗ್ಗೆ ಕರ್ನಾಟಕದ ಮಾಜಿ ಕ್ರಿಕೆಟಿಗ, ಸ್ಟಾರ್ ಸ್ಪೋರ್ಸ್ ಕನ್ನಡ ಕಾಮೆಂಟೇಟರ್ ಕೂಡ ಆಗಿರುವ ಶ್ರೀನಿವಾಸಮೂರ್ತಿ ಅಲಿಯಾಸ್ ಜಾನಿ ಕೂಡ ಮಾತನಾಡಿದ್ದಾರೆ. ಌಂಡ್ ಟ್ರೇಡ್ ವಿಂಡೋ ನಡೆದ್ರೂ ಇರೋ ಚಾಲೆಂಜಸ್ ಬಗ್ಗೆ ಪ್ರಶ್ನೆಗಳನ್ನ ಎತ್ತಿದ್ದಾರೆ.
ಸೋ ಹಾರ್ದಿಕ್ ಪಾಂಡ್ಯ ಬಗ್ಗೆ ಡಿಸ್ಕಷನ್ ಏನೋ ನೆಕ್ಸ್ಟ್ ಲೆವೆಲ್ನಲ್ಲಿ ನಡೀತಿದೆ. ಆದ್ರೆ ಬೆಂಗಳೂರು ತಂಡಕ್ಕೆ ಹಾರ್ದಿಕ್ ಪಾಂಡ್ಯ ಬರ್ತೀನಿ ಅಂದ್ರೂ ಫ್ರಾಂಚೈಸಿ ತಗೊಳ್ಳೋಕೆ ನೂರು ಸಲ ಯೋಚನೆ ಮಾಡ್ಬೇಕಿದೆ. ಅದು ಹೇಗೆ ಅನ್ನೋದನ್ನ ಹೇಳ್ತೇನೆ ನೋಡಿ.
ಪಾಂಡ್ಯ ಆರ್ ಸಿಬಿಗೆ ಬೇಕಾ?
- ವೈಟ್ ಬಾಲ್ ನಲ್ಲಿ ಹಾರ್ದಿಕ್ ಅದ್ಭುತ ಸೀಮ್-ಬೌಲಿಂಗ್ ಆಲ್ರೌಂಡರ್
- ಹಾರ್ದಿಕ್ ರನ್ನು ಸೇರಿಸಿಕೊಳ್ಳೋ ಅನಿವಾರ್ಯತೆ ಬೆಂಗಳೂರು ತಂಡಕ್ಕಿಲ್ಲ
- ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಆರ್ ಸಿಬಿಗೆ ಬಿಗ್ ಸರ್ಜರಿ ಬೇಕಿಲ್ಲ
- ಬ್ಯಾಟಿಂಗ್ & ಬೌಲಿಂಗ್ ನಲ್ಲಿ ದಿ ಬೆಸ್ಟ್ ಆಗಿರೋ ಕೃನಾಲ್ ಇದ್ದಾರೆ
- ಹಾರ್ದಿಕ್ ಬರಲೇಬೇಕು ಅಂದ್ರೆ ಟ್ರೇಡ್ ಮೂಲಕ ಒಬ್ಬರನ್ನ ಬಿಡಬೇಕು
ಹೀಗೆ ಬೆಂಗಳೂರು ತಂಡಕ್ಕೆ ಹಾರ್ದಿಕ್ ಪಾಂಡ್ಯ ಬೇಕೇಬೇಕು ಅನ್ನೋ ಪೊಸೀಷನ್ ಏನು ಇಲ್ಲ. ಌಂಡ್ ಅದೆಲ್ಲಕ್ಕಿಂತ ಮುಖ್ಯವಾಗಿ ಈ ಭೇಟಿಯೇ ಫೇಕ್ ಎನ್ನಲಾಗ್ತಿದೆ. ಒಂದಷ್ಟು ಮಂದಿ ಈ ಮಾತುಕತೆ ನಿಜ ಇರ್ಬೋದು ಅಂದ್ರೆ ಇನ್ನೊಂದಷ್ಟು ಜನ ಇಲ್ಲ ಇದು ಎಐ ರಚಿತ ಫೋಟೋ ಅಂತಿದ್ದಾರೆ. ಅದಕ್ಕೆ ಒಂದಷ್ಟು ಅನುಮಾನಗಳನ್ನೂ ವ್ಯಕ್ತಪಡಿಸಿದ್ದಾರೆ. ಪಾಂಡ್ಯ ಅವ್ರ ಹೇರ್ಸ್ಟೈಲ್ನಲ್ಲಿ ಚೇಂಜಸ್ ಇದೆ. ಇದರ ಜೊತೆಗೆ, ಪಾಂಡ್ಯ ಅವರ ಗೆಳತಿ ಮಹೀಕಾ ಶರ್ಮಾ ಅಹಮದಾಬಾದ್ನಲ್ಲಿ ಭೇಟಿಯಾಗಿದ್ದಾರೆ ಎನ್ನಲಾದ ದಿನವೇ ಫ್ರಾನ್ಸ್ನಲ್ಲಿ ಪಾಂಡ್ಯ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮೇ 24 ರಂದು ಮುಂಬೈನ ಲೀಗ್ ಹಂತದ ಲಾಸ್ಟ್ ಮ್ಯಾಚ್ ಆದ್ಮೇಲೆ ಪಾಂಡ್ಯ ಜೋಡಿ ಫಾರಿನ್ ಟ್ರಿಪ್ನಲ್ಲಿ ಇದ್ದಾರೆ. ಹೀಗಾಗಿ ಭೇಟಿ ನಿಜನಾ ಅನ್ನೋದಕ್ಕೆ ಸ್ಟ್ರಾಂಗ್ ಎವಿಡೆನ್ಸ್ ಇಲ್ಲ. ಒಟ್ನಲ್ಲಿ ಎಐ ಬಂದ್ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಯಾವುದು ಅಸಲಿ ಯಾವುದು ನಕಲಿ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಈಗ ಪಾಂಡ್ಯ ವಿಚಾರದಲ್ಲೂ ಆಗಿರೋದು ಅದೇ.

ನೋಡಿರಿ

