ಮಲೆನಾಡಿನ ಮೀನುಗಾರರಿಗೆ ಶಾಕ್ ಕೊಟ್ಟ ಸರ್ಕಾರ – ಚಿಕ್ಕಮಗಳೂರಲ್ಲಿ ಮಳೆಗಾಲದಲ್ಲಿ ಮೀನುಗಾರಿಕೆಗೆ ನಿಷೇಧ

ಮಲೆನಾಡಿನ ಮೀನುಪ್ರಿಯರಿಗೆ ಸರ್ಕಾರ ಶಾಕ್ ಕೊಟ್ಟಿದೆ. ಮಳೆಗಾಲದಲ್ಲಿ ಮೀನು ಹಿಡಿಯಲು ನಿಷೇಧ ಹೇರಲಾಗಿದೆ. ಜೂನ್ 1 ರಿಂದ ಜುಲೈ 31, 2026 ರವರೆಗೆ ಎಲ್ಲಾ ಕೆರೆ, ನದಿ, ಜಲಾಶಯಗಳಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ.
ಇದನ್ನೂ ಓದಿ:ಎಬೋಲಾ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ – ಕರ್ನಾಟಕ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎಲ್ಲಾ ಸರ್ವಋತು ಕೆರೆಗಳು, ಜಲಾಶಯಗಳು, ತೊರೆಗಳು ಮತ್ತು ನದಿಗಳಲ್ಲಿ ಮೀನು ಹಿಡಿಯುವುದನ್ನು ಮುಂದಿನ 61 ದಿನಗಳ ಕಾಲ ಪೂರ್ಣವಾಗಿ ನಿಷೇಧಿಸಲಾಗಿದೆ. ಮಳೆಗಾಲದ ಈ ಅವಧಿಯು ಮೀನುಗಳ ವಂಶಾಭಿವೃದ್ಧಿಯ ಸಮಯವಾಗಿದೆ. ಮೀನುಗಳ ಸಂತತಿ ವೃದ್ಧಿಯಾಗಲಿ ಮತ್ತು ಜಲಸಂಪನ್ಮೂಲ ರಕ್ಷಣೆಯಾಗಲಿ ಎಂಬ ಉದ್ದೇಶದಿಂದ ಒಳನಾಡು ಮೀನುಗಾರಿಕೆ ಜಲಸಂಪನ್ಮೂಲಗಳ ವಿಲೇವಾರಿ ಕಾರ್ಯನೀತಿಯ ಅನ್ವಯ ಈ ಕಠಿಣ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
ಇನ್ನೇನು ಮಳೆಗಾಲದ ಅಬ್ಬರ ಶುರುವಾಗಲಿದೆ. ಹೀಗಾಗಿ ಜೂನ್ 1ರಿಂದಲೇ ಅನ್ವಯವಾಗುವಂತೆ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಜುಲೈ 31, 2026ರವರೆಗೆ ನದಿ ಅಥವಾ ಕೆರೆಗಳ ಹತ್ತಿರ ಮೀನು ಹಿಡಿಯದಂತೆ ಆದೇಶ ಮಾಡಲಾಗಿದೆ. ನಿಯಮ ಉಲ್ಲಂಘಿಸಿ ಮೀನುಗಾರಿಕೆಯಲ್ಲಿ ತೊಡಗಿದರೆ, ಸಂಬಂಧಪಟ್ಟ ಅಧಿಕಾರಿಗಳು ದಂಡ ವಿಧಿಸುತ್ತಾರೆ. ಆಗಸ್ಟ್ 2026 ರಿಂದ ಜಲಾಶಯ ಮತ್ತು ನದಿ ಭಾಗಗಳಲ್ಲಿ ಮೀನುಗಾರಿಕೆ ನಡೆಸಲು ಪುನಃ ಪರವಾನಿಗೆ ನೀಡಲಾಗುತ್ತದೆ. ಮೀನುಗಾರರು ಆಗಸ್ಟ್ ತಿಂಗಳಿನಿಂದ ತಮ್ಮ ಆಯಾ ತಾಲ್ಲೂಕುಗಳ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ, ಅಧಿಕೃತ ಪರವಾನಿಗೆ ಪಡೆದುಕೊಳ್ಳಬೇಕು.ಈ ಕುರಿತು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಸ್ಪಷ್ಟನೆ ನೀಡಿದ್ದು, ಜಿಲ್ಲೆಯ ಎಲ್ಲಾ ಮೀನುಗಾರರು ಸರ್ಕಾರದ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ.

ನೋಡಿರಿ

